Home
ಸುದ್ದಿಜಾಲ

Jio-Airtelಗೆ BSNL ಶಾಕ್! ಒಂದೇ ರೀಚಾರ್ಜ್.. ವರ್ಷಪೂರ್ತಿ ಫ್ರೀ ಡೇಟಾ.. ಕೇವಲ 1515 ರೂ.!

ಖಾಸಗಿ ಕಂಪನಿಗಳಿಗೆ ದೊಡ್ಡ ಶಾಕ್! 365 ದಿನಗಳ ವ್ಯಾಲಿಡಿಟಿ.. ವರ್ಷಪೂರ್ತಿ 2GB ಡೇಟಾ. ಕೈಗೆಟುಕುವ ಬೆಲೆಯಲ್ಲಿ ಹೊಸ ಜಬರ್ದಸ್ತ್ ಪ್ಲಾನ್ ಬಿಡುಡಗೆ. ಹೌದು, ಈ ಯೋಜನೆಯು ದಿನಕ್ಕೆ ಜಸ್ಟ್ 4 ರೂ.ಗಳ ವೆಚ್ಚದಲ್ಲಿ ಬರುತ್ತದೆ. ಇದು ಅಚ್ಚರಿಯಾದರೂ, ಸತ್ಯ! ಭಾರತದಲ್ಲಿ ಇಷ್ಟು ಕಡಿಮೆ ಬೆಲೆಗೆ ಇಷ್ಟು ದೀರ್ಘಾವಧಿಯ ಡೇಟಾವನ್ನು ನೀಡುವ ಬೇರೆ ಯಾವುದೇ ಯೋಜನೆ ಇಲ್ಲ. ಈ ಯೋಜನೆಯ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಿಯಮಿತವಾಗಿ ಡೇಟಾ ಅಗತ್ಯವಿರುವವರಿಗೆ ಮತ್ತು ಮತ್ತೆ ಮತ್ತೆ ರೀಚಾರ್ಜ್ ಮಾಡುವ ಕಿರಿಕಿರಿ ತಪ್ಪಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಸರ್ಕಾರಿ ಸೌಮ್ಯದ ಟೆಲೆಕಾಂ ಕಂಪನಿ ಬಿಎಸ್ಎನ್ಎಲ್ (BSNL) ಅಗ್ಗದ ರೀಚಾರ್ಜ್ ಪ್ಲಾನ್‌ಗಳಿಗೆ ಹೆಸರುವಾಸಿಯಾಗಿದೆ. ಪ್ರಸ್ತುತ ದಿನಗಳಲ್ಲಿ ದುಬಾರಿ ರೀಚಾರ್ಜ್ ಪ್ಲಾನ್‌ಗಳು ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿ ಹಾಕುತ್ತಿವೆ. ಖಾಸಗಿ ಟೆಲಿಕಾಂ ಕಂಪನಿಗಳ ರೀಚಾರ್ಜ್‌ಗಳು ಸಹ ದುಬಾರಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಒಂದೊಳ್ಳೆ ಪ್ಲಾನ್​ ನೀಡಿದೆ. ಕಂಪನಿಯು ಕೇವಲ 1,515 ರೂ.ಗೆ ಹೊಸ ರಿಚಾರ್ಜ್‌ ಪ್ಲಾನ್ (BSNL Rs. 1515 Recharge Plan) ಬಿಡುಗಡೆ ಮಾಡಿದೆ. ಈ ಯೋಜನೆಯ ಪ್ರಯೋಜನಗಳನ್ನು ತಿಳಿಯಲು ಮುಂದೆ ಓದಿ.

Jio-Airtelಗೆ ಶಾಕ್! ಒಂದೇ ರೀಚಾರ್ಜ್.. ವರ್ಷಪೂರ್ತಿ ಫ್ರೀ ಡೇಟಾ.. ಕಡಿಮೆ ಬೆಲೆ!

ಬಿಎಸ್‌ಎನ್‌ಎಲ್‌ 1515 ರೂ.ಗಳ ಪ್ಲಾನ್

ಬಿಎಸ್‌ಎನ್‌ಎಲ್‌ 1515 ರೂ.ಗಳ ಯೋಜನೆ 365 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರ ದೈನಂದಿನ ವೆಚ್ಚ ಸುಮಾರು 4 ರೂ. ಬೀಳಲಿದೆ. ನೀವು ವರ್ಷಪೂರ್ತಿ ದಿನಕ್ಕೆ 2GB ಡೇಟಾವನ್ನು ಬಳಸಬಹುದು. ಇದು ಡೇಟಾ ಮಾತ್ರ ವೋಚರ್ ಆಗಿದೆ. ಬಿಎಸ್ಎನ್ಎಲ್ ತೀವ್ರ ಸ್ಪರ್ಧೆಗೆ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದಂತಹ ಖಾಸಗಿ ಕಂಪನಿಗಳು ನಡುಗುತ್ತಿವೆ. ನೀವು ದಿನಕ್ಕೆ 2GB ಡೇಟಾವನ್ನು ಒಮ್ಮೆ ಬಳಸಿದರೆ, ವೇಗ ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ಇಂಟರ್ನೆಟ್ ನಿಲ್ಲುವುದಿಲ್ಲ. ಇದು 40Kbps ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.

ನೀವು ಕೇವಲ 1515 ರೂ.ಗಳನ್ನು ಪಾವತಿಸಿದರೆ ಇಡೀ ವರ್ಷ ಇಂಟರ್ನೆಟ್ ಬಳಸಬಹುದು. ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಪ್ರತಿದಿನ ಡೇಟಾವನ್ನು ಬ್ರೌಸ್ ಮಾಡುವವರಿಗೆ ಇದು ತುಂಬಾ ಉಪಯುಕ್ತವಾಗಿದೆ ಎಂದು ಬಿಎಸ್ಎನ್ಎಲ್ ಹೇಳಿದೆ. ಈ ಯೋಜನೆಯು ಮುಖ್ಯವಾಗಿ ಡೇಟಾಕ್ಕಾಗಿ ಮಾತ್ರ ವಿನ್ಯಾಸಗೊಳಿಸಲಾಗಿದೆ. ಇದು ಕರೆಗಳು ಅಥವಾ ಎಸ್‌ಎಂಎಸ್‌ (SMS) ಪ್ರಯೋಜನಗಳನ್ನು ಒಳಗೊಂಡಿಲ್ಲ. ಆದರೆ, ಕೇವಲ ಇಂಟರ್ನೆಟ್ ಬಯಸುವವರಿಗೆ, ಇದು ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಪರಿಹಾರವಾಗಿದೆ.

ಈ ಮಧ್ಯೆ ಬಿಎಸ್ಎನ್ಎಲ್ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಮತ್ತು ಹಳೆಯ ಯೋಜನೆಗಳನ್ನು ತೆಗೆದುಹಾಕುತ್ತಿದೆ. ಇತ್ತೀಚೆಗೆ ಮೂರು ಮೊಬೈಲ್ ಪ್ರಿಪೇಯ್ಡ್ ಯೋಜನೆಗಳನ್ನು ತೆಗೆದುಹಾಕುವ ಮೂಲಕ ತನ್ನ ಬಳಕೆದಾರರಿಗೆ ಶಾಕ್ ನೀಡಿದೆ. ಆ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹಳೆಯ ಯೋಜನೆಗಳಿಗೆ ವಿದಾಯ!

ಬಿಎಸ್ಎನ್ಎಲ್ ಹೊಸ ಪ್ಲಾನ್‌ಗಳನ್ನು ಪರಿಚಯಿಸುವುದರ ಜೊತೆಗೆ, ಕೆಲವು ಹಳೆಯ ಯೋಜನೆಗಳನ್ನು ಸಹ ತೆಗೆದುಹಾಕುತ್ತಿದೆ. ವರದಿಯ ಪ್ರಕಾರ, 201 ರೂ., 797 ರೂ. ಮತ್ತು 2,999 ರೂ. ಯೋಜನೆಗಳು ಫೆಬ್ರವರಿ 10 ರಿಂದ ಸ್ಥಗಿತಗೊಳ್ಳುತ್ತವೆ ಎಂದು ಹೇಳಲಾಗಿದೆ. ಈ ಯೋಜನೆಗಳನ್ನು ಆಗಾಗ್ಗೆ ರೀಚಾರ್ಜ್ ಮಾಡುವವರು ಈ ಬದಲಾವಣೆಯನ್ನು ಗಮನಿಸಬೇಕು. ಕಂಪನಿಯು ಕಡಿಮೆ ಯೋಜನೆಗಳೊಂದಿಗೆ ಹೆಚ್ಚಿನ ಮೌಲ್ಯವನ್ನು ನೀಡುವ ಯೋಜನೆಗಳ ಮೇಲೆ ಕೇಂದ್ರೀಕರಿಸಿದೆ.

ಬಿಎಸ್ಎನ್ಎಲ್ ಉಚಿತ ಲೈವ್ ಟಿವಿ ಸೇವೆ

ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಮತ್ತೊಂದು ಒಳ್ಳೆಯ ಸುದ್ದಿ ನೀಡಿದೆ. ಏನೆಂದರೆ ಬಿಎಸ್ಎನ್ಎಲ್ ಉಚಿತ ಲೈವ್ ಟಿವಿ ಸೇವೆಯಾದ BiTV ಸಹ ಪ್ರಾರಂಭಿಸಿದೆ. ಇದರ ಮೂಲಕ, ನೀವು 450ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು. ಈ ಸೇವೆಯು ಎಲ್ಲಾ ಬಿಎಸ್ಎನ್ಎಲ್ ಮೊಬೈಲ್ ಬಳಕೆದಾರರಿಗೆ ಉಚಿತವಾಗಿ ಲಭ್ಯವಿದೆ. ಒಂದು ರೂಪಾಯಿ ಹೆಚ್ಚುವರಿ ಪಾವತಿಸುವ ಅಗತ್ಯವಿಲ್ಲ. ನೀವು ಯಾವುದೇ ಯೋಜನೆಯನ್ನು ಆರಿಸಿಕೊಂಡರೂ, ನೀವು ಲೈವ್ ಟಿವಿಗೆ ಉಚಿತ ಪ್ರವೇಶವನ್ನು ಪಡೆಯಬಹುದು.

450+ ಉಚಿತ ಚಾನೆಲ್‌ ಲಭ್ಯ

ಬಿಎಸ್ಎನ್ಎಲ್ BiTV ಯೊಂದಿಗೆ ತನ್ನ ಬಳಕೆದಾರರಿಗೆ ಉಚಿತ ಮನರಂಜನೆಯನ್ನು ಒದಗಿಸುತ್ತಿದೆ. ತಿಂಗಳಿಗೆ 99 ರೂ. ಯೋಜನೆಗೆ ಚಂದಾದಾರರಾಗಿರುವವರು ಸಹ ಹೆಚ್ಚುವರಿ ಹಣವನ್ನು ಪಾವತಿಸದೆ, ಲೈವ್ ಟಿವಿ ವೀಕ್ಷಿಸಬಹುದು ಎಂದು ಬಿಎಸ್ಎನ್ಎಲ್ ತಿಳಿಸಿದೆ. BiTV ಅಪ್ಲಿಕೇಶನ್ ಎಲ್ಲಾ ಬಿಎಸ್ಎನ್ಎಲ್ ಮೊಬೈಲ್ ಬಳಕೆದಾರರಿಗೆ ಲಭ್ಯವಿದೆ. ಬಳಕೆದಾರರು ತಮ್ಮ ಫೋನ್‌ಗಳಲ್ಲಿ ನೇರವಾಗಿ ಲೈವ್ ಟಿವಿ, ವೆಬ್ ಸರಣಿಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಬಹುದು. ಕಂಪನಿಯು ಪ್ರಾಯೋಗಿಕ ಹಂತದಲ್ಲಿ 300 ಉಚಿತ ಚಾನೆಲ್‌ಗಳನ್ನು ನೀಡಿತು. ಆದರೆ, ಪ್ರಸ್ತುತ, 450+ ಚಾನೆಲ್‌ಗಳಿಗೆ ಹೆಚ್ಚಿಸಿದೆ.

ಒಟ್ಟಾರೆ, ಬಿಎಸ್ಎನ್ಎಲ್ ಕಡಿಮೆ ವೆಚ್ಚದ ಯೋಜನೆಗಳು ಮತ್ತು ಉಚಿತ ಮನರಂಜನಾ ಸೇವೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲು ದೊಡ್ಡ ಪ್ರಯತ್ನ ಮಾಡುತ್ತಿದೆ. ಇದೀಗ, ಕಂಪನಿಯು 365 ದಿನಗಳ ವ್ಯಾಲಿಡಿಟಿಯೊಂದಿಗೆ 1515 ರೂ.ಗಳ ಯೋಜನೆಯು ಪರಿಚಯಿಸಿದೆ.

Best Mobiles in India

English summary
BSNL Rs. 1515 Recharge plan offers 2 GB of data per day for 365 days: Know Details and Benefits
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+