Home
ಸುದ್ದಿಜಾಲ

BSNL ಭರ್ಜರಿ ಆಫರ್!..ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ ಜಿಯೋ ಮೀರಿಸುತ್ತಿತ್ತು!

ಇದೇ ಕೆಲಸವನ್ನು ಕೆಲ ತಿಂಗಳುಗಳ ಹಿಂದೆಯೇ ಮಾಡಿದ್ದರೆ ಇಂದು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸಂಸ್ಥೆ ಜಿಯೋವನ್ನು ಸಹ ಮೀರಿಸುತ್ತಿತ್ತು. ಆದರೆ, ಇದೀಗ ನಷ್ಟದಲ್ಲಿರುವ ಸಮಯದಲ್ಲಿ ಬಿಎಸ್‌ಎನ್‌ಎಲ್‌ ಭರ್ಜರಿ ಆಫರ್ ನೀಡಿದೆ. ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಬಿಎಸ್‌ಎನ್‌ಎಲ್‌ ತನ್ನವಾರ್ಷಿಕ ಡೇಟಾ ಆಫರ್ ಒಂದನ್ನು ಪರಿಷ್ಟಕರಿಸಿದ್ದು , ಹೆಚ್ಚಿನ ಡೇಟಾ ಸೌಲಭ್ಯ ಜೊತೆಗೆ ಅಧಿಕ ವ್ಯಾಲಿಡಿಟಿ ಸೌಲಭ್ಯ ಸೇರಿದಂತೆ ಮಹತ್ವದ ಪ್ರೀಪೇಡ್ ಆಫರ್ ಅನ್ನು ಜಾರಿಗೆ ತಂದಿದೆ.

ಪ್ರೀಪೇಯ್ಡ್ ಪ್ಲ್ಯಾನ್

ಹೌದು, ಗ್ರಾಹಕರನ್ನು ಸೆಳೆಯುವ ಸಲುವಾಗಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)ತಮ್ಮ ಹಳೇಯ ಪ್ರೀಪೇಯ್ಡ್ ಪ್ಲ್ಯಾನ್ ​​​ವೊಂದನ್ನು ನವೀಕರಸಿದೆ. ಬಿಎಸ್ಎನ್ಎಲ್‌ 1,699 ರೂ.ವಿನ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಕೆಲವೊಂದು ಬದಲಾವಣೆಯನ್ನು ಮಾಡಿ, ಹೊಸ ಪರಿಷ್ಕೃತ ಪ್ಯಾಕ್ ಬಿಡುಗಡೆ ಮಾಡಿದೆ. 1,699ರೂ.ವಿನ ಪ್ರಿಪೇಯ್ಡ್​ ಪ್ಲಾನ್​ ಈ ಮೊದಲು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿತ್ತು. ಆದರೆ, ಇದೀಗ ಪರಿಷ್ಕರಿಸಿ ಬಿಡುಗಡೆ ಮಾಡಿದ ನಂತರ ಈ ಪ್ಲಾನ್​ನಲ್ಲಿ ಹೆಚ್ಚುವರಿ 60 ದಿನಗಳ ವ್ಯಾಲಿಡಿಟಿ ಮತ್ತು ಡೇಟಾ ನೀಡುತ್ತಿದೆ.

ಬಿಎಸ್ಎನ್ಎಲ್

ಇದೀಗ ಬಿಎಸ್ಎನ್ಎಲ್ ಗ್ರಾಹಕರು 1,699 ರೂಪಾಯಿಗಳ ಪ್ಲಾನ್ ರಿಚಾರ್ಜ್ ಮಾಡಿಸಿದರೆ 425 ದಿನಗಳ ಕಾಲ ದಿನಕ್ಕೆ 2GB ಇದ್ದ ಡೇಟಾವನ್ನು 3ಜಿಬಿ ಡೇಟಾ ಲಭ್ಯವಾಗಲಿದೆ. ಅದರೊಂದಿಗೆ ಅನಿಯಮಿತ ಲೋಕಲ್ ಹಾಗೂ ಎಸ್​​ಟಿಡಿ ಕರೆ ಹಾಗೂ ದಿನಕ್ಕೆ 100 ಎಸ್ಎಮ್ಎಸ್ ಉಚಿತವಾಗಿ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ.ಆದರೆ, ಇದು ಸೀಮಿತ ಕೊಡುಗೆ ನವೆಂಬರ್ 30 ವರೆಗೆ ಮಾತ್ರ ಇರಲಿದ್ದು, ಈ ಅವಧಿಯಲ್ಲಿ ವಾರ್ಷಿಕ ಪ್ಯಾಕ್ ಪಡೆದುಕೊಳ್ಳುವ ಗ್ರಾಹಕರಿಗೆ ಆಫರ್ ಪ್ರಯೋಜನ ದೊರೆಯಲಿದೆ ಎಂದು ಸಂಸ್ಥೆ ಪ್ರಕಟಣೆ ಮೂಲ ತಿಳಿಸಿದೆ.

ಮೊಬೈಲ್ ಗ್ರಾಹಕ

ಇತ್ತಿಚಿಗೆ ಮೊಬೈಲ್ ಗ್ರಾಹಕರು ವಾರ್ಷಿಕ ಅವಧಿಯ ಪ್ಲ್ಯಾನ್‌ಗಳನ್ನು ಹೆಚ್ಚಾಗಿ ಬಯಸುತ್ತಾರೆ. ಹೀಗಾಗಿಯೇ ಇತರೆ ಟೆಲಿಕಾಂಗಳು ಸಹ 1699ರೂ.ಗಳಿಗೆ ವಾರ್ಷಿಕ ಪ್ಲ್ಯಾನ್ ಪರಿಚಯಿಸಿ ಗಮನಸೆಳೆದಿವೆ. ಇದೀಗ ಬಿಎಸ್‌ಎನ್‌ಎಲ್‌ ಅವುಗಳೆಲ್ಲವನ್ನು ಮೀರಿಸಿದೆ. ಏಕೆಂದರೆ, ಖಾಸಗಿ ಟೆಲಿಕಾಂ ಕಂಪೆನಿಗಳ ವಾರ್ಷಿಕ ಪ್ಲ್ಯಾನಿನಲ್ಲಿ 365 ದಿನಗಳ ವ್ಯಾಲಿಡಿಟಿ ಮಾತ್ರ ಲಭ್ಯವಿರುತ್ತದೆ. ಉಳಿದಂತೆ ಪ್ರತಿದಿನ ಉಚಿತ ಡೇಟಾ(ಏರ್‌ಡೆಲ್ 1.4GB, ಜಿಯೋ1.5GB), ಉಚಿತ ಕರೆಗಳ ಸೌಲಭ್ಯ, ಉಚಿತ ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ನೀಡುತ್ತಿವೆ.

ಸರ್ಕಾರಿ ಸ್ವಾಮ್ಯ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ನಷ್ಟದಲ್ಲಿದ್ದರು ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿರುವುದು ಸರಿಯೇ. ಆದರೆ, ಈಗಾಗಲೇ ಕೋಟ್ಯಂತರ ಗ್ರಾಹಕರನ್ನು ಕಳೆದುಕೊಂಡಿರುವ ಸಂಸ್ಥೆಯು ಬಹಳ ತಡವಾಗಿ ಎಚ್ಚೆತ್ತುಕೊಂಡಿದೆ. ತನ್ನ ವಾರ್ಷಿಕ ಪ್ರೀಪೇಡ್ ಯೋಜನೆ ಸಹಾಯದಿಂದ ಮತ್ತೆ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಸಂಸ್ಥೆಯ ಯೋಜನೆ ಯಶಸ್ವಿಯಾಗುವುದೇ ಎಂಬ ಪ್ರಶ್ನೆ ಮೂಡಿದೆ. ಹಾಗೆಯೇ ಆಗಲಿ ಎಂಬುದು ನಮ್ಮ ಬಹುನಿರೀಕ್ಷಿತ ಆಶಯ ಕೂಡ.!

Best Mobiles in India

English summary
BSNL originally offered 365 days of validity with the Rs. 1,699 prepaid plan. However, the telco last month announced a festive offer under which it extended the plan's validity to 455 days until October 31.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+