1 ಲೀ.ಹಾಲಿಗಿಂತ ಕಡಿಮೆ ಬೆಲೆಯಲ್ಲಿ BSNL ಡೇಟಾ-ಕರೆ-ವ್ಯಾಲಿಡಿಟಿ ಆಫರ್...!

|

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ BSNL ತನ್ನ ಬಳಕೆದಾರರಿಗೆ ಖಾಸಗಿ ಟೆಲಿಕಾಂ ಕಂಪನಿಗಳಿಗಿಂತೂ ಉತ್ತಮವಾದ ಆಫರ್‌ಗಳನ್ನು ನೀಡುತ್ತಾ ಬಂದಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಸಮರದಲ್ಲಿ ಉಳಿದುಕೊಳ್ಳಲು BSNLಗೆ ಸಾಧ್ಯವಾಗುತ್ತಿದೆ. ಇದರೊಂದಿಗೆ ಸಣ್ಣ ಪ್ರಮಾಣದಲ್ಲಿ ಬಳಕೆದಾರರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯುವ ಆಫರ್ ವೊಂದನ್ನು ಲಾಂಚ್ ಮಾಡಿದೆ.

1 ಲೀ.ಹಾಲಿಗಿಂತ ಕಡಿಮೆ ಬೆಲೆಯಲ್ಲಿ BSNL ಡೇಟಾ-ಕರೆ-ವ್ಯಾಲಿಡಿಟಿ ಆಫರ್...!

ಅದರಲ್ಲಿಯೂ ಜಿಯೋಗೆ ಸೆಡ್ಡು ಹೊಡೆಯುವ ಆಫರ್‌ಗಳನ್ನು ಈ ಹಿಂದೆಯೂ ನೀಡಿದ್ದ BSNL, ಈ ಬಾರಿ ಮತ್ತೊಂದು ಆಫರ್ ಅನ್ನು ನೀಡಿದೆ. ಇದು ಬಳಕೆದಾರರಿಗೆ ಕಡಿಮೆ ವ್ಯಾಲಿಡಿಟಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಈ ಹೊಸ ಪ್ಲಾನ್‌ಗಳು ಬೇರೆ ಕಂಪನಿಗಳಿಗೆ ಸ್ಪೂರ್ತಿಯನ್ನು ನೀಡಲಿದೆ ಎನ್ನಲಾಗಿದೆ.

BSNL ನೂತನ ಪ್ಲಾನ್ ರೂ.27ಕ್ಕೆ:

BSNL ನೂತನ ಪ್ಲಾನ್ ರೂ.27ಕ್ಕೆ:

BSNL ತನ್ನ ಬಳಕೆದಾರರಿಗೆ ನೂತನವಾಗಿ ರೂ.27ರ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಇದರಲ್ಲಿ ಬಳಕೆದಾರರಿಗೆ ಡೇಟಾ, ಉಚಿತ ಕರೆಗಳು ಮತ್ತು ವ್ಯಾಲಿಡಿಟಿಯೂ ದೊರೆಯಲಿದೆ. ಈ ಮಾದರಿಯ ಆಫರ್ ಅನ್ನು ಬೇರೆ ಯಾವುದೇ ಟೆಲಿಕಾಂ ಕಂಪನಿಯಲ್ಲಿ ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ.

1 GB ಡೇಟಾ:

1 GB ಡೇಟಾ:

ರೂ.27 ಪ್ಲಾನ್‌ನಲ್ಲಿ BSNL ತನ್ನ ಬಳಕೆದಾರರಿಗೆ 1 GB ಡೇಟಾವನ್ನು ಬಳಕೆದಾರರಿಗೆ ದೊರೆಯಲಿದೆ. ಕಡಿಮೆ ಬೆಲೆಗೆ ವ್ಯಾಲಿಡಿಟಿಯೊಂದಿಗೆ ದೊರೆಯುತ್ತಿರುವ ಬೆಸ್ಟ್ ಆಫರ್ ಎಂದರೆ ಇದೇ ಎನ್ನಲಾಗಿದೆ. ಸಣ್ಣ ಬೆಲೆಗೆ ದೊರೆಯುವ ಹೆಚ್ಚಿನ ಲಾಭವನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.

ಉಚಿತ ಕರೆಗಳು:

ಉಚಿತ ಕರೆಗಳು:

BSNL ತನ್ನ ಬಳಕೆದಾರರಿಗೆ ರೂ.27 ಪ್ಲಾನ್‌ನಲ್ಲಿ ಉಚಿತವಾಗಿ ವ್ಯಾಲಿಡಿಟಿ ಇರುವವ ವರೆಗೂ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕಾಗಿ ಯಾವುದೇ ಷರತ್ತುಗಳನ್ನು ವಿಧಿಸಿಲ್ಲ ಎನ್ನಲಾಗಿದೆ ಸಂಪೂರ್ಣವಾಗಿ ಉಚಿತ ಕರೆಯ ಲಾಭವನ್ನು ಪಡೆದುಕೊಳ್ಳಬಹುದು.

7 ದಿನಗಳ ವ್ಯಾಲಿಡಿಟಿ:

7 ದಿನಗಳ ವ್ಯಾಲಿಡಿಟಿ:

BSNL ಹೊದಾಗಿ ನೀಡಿರುವ ಹೊಸ ಪ್ಲಾನ್‌ನಲ್ಲಿ ಬಳಕೆದಾರರಿಗೆ ಒಂದು ವಾರಗಳ ವ್ಯಾಲಿಡಿಟಿಯೂ ದೊರೆಯಲಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಇದು ಉತ್ತಮವಾದ ಪ್ಲಾನ್ ಎಂದರೆ ತಪ್ಪಾಗುವುದಿಲ್ಲ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

ಬೇರೆ ಕಡೆಯಲ್ಲಿ ಇಲ್ಲ:

ಬೇರೆ ಕಡೆಯಲ್ಲಿ ಇಲ್ಲ:

ಬೇರೆ ಟೆಲಿಕಾಂ ಕಂಪನಿಗಳು ಇಷ್ಟು ಚಿಕ್ಕ ಪ್ಲಾನ್‌ಗಳಲ್ಲಿ ಕೇಲವ ಡೇಟಾವನ್ನು ಇಲ್ಲವೇ ಕರೆ ಮಾಡುವ ಅವಕಾಶವನ್ನು ಮಾತ್ರವೇ ನೀಡಲಿದೆ. ಆದರೆ BSNL ಮಾತ್ರವೇ ಎಲ್ಲಾ ಮಾದರಿಯ ಅವಕಾಶವನ್ನು ಮಾಡಿಕೊಡುತ್ತಿದೆ. ಇದರಿಂದಾಗಿ ಬೇರೆ ಎಲ್ಲಿಯೂ ಈ ಮಾದರಿಯ ಆಫರ್ ಅನ್ನು ನೋಡಲು ಸಾಧ್ಯವಿಲ್ಲ.

Most Read Articles
Best Mobiles in India

English summary
BSNL Rs. 27 Recharge Offers Unlimited Voice Calls, 1GB Data. to kmow more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X