Home
ಸುದ್ದಿಜಾಲ

ಸ್ವಾತಂತ್ರ್ಯ ಸಂಭ್ರಮಕ್ಕೆ ಬಿಎಸ್‌ಎನ್‌ಎಲ್‌ ಬಿಗ್ ಕೊಡುಗೆ..! ಟಾರ್ಗೇಟ್ ಜಿಯೋ..!

By Avinash

ಭಾರತದ ಟೆಲಿಕಾಂ ಜಗತ್ತಿಗೆ ಜಿಯೋ ಪ್ರವೇಶಿಸಿದ ನಂತರ ಟೆಲಿಕಾಂ ಲೋಕದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಅತಿ ಹೆಚ್ಚು ಡೇಟಾ ಬಳಸುವ ನಂ.1 ಟೆಲಿಕಾಂ ಆಪರೇಟರ್‌ ಆಗಿ ಜಿಯೋ ಮುಂದುವರೆಯುತ್ತಿದೆ. ಇತರೆ ಟೆಲಿಕಾಂ ಆಪರೇಟರ್‌ಗಳು ಜಿಯೋ ಮಣಿಸಲು ರಣತಂತ್ರಗಳನ್ನು ಎಣೆಯುತ್ತಿವೆ. ಅದರಂತೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಹೊಸ ಗ್ರಾಹಕರನ್ನು ಸೆಳೆಯಲು ಪ್ಲಾನ್‌ ಘೋಷಿಸಿದ್ದು, ಜಿಯೋ ಸೇರಿ ಇತರ ಟೆಲಿಕಾಂ ಆಪರೇಟರ್‌ಗಳ ನಿದ್ದೆಗೆಡಿಸಿದೆ.

ಸ್ವಾತಂತ್ರ್ಯ ಸಂಭ್ರಮಕ್ಕೆ ಬಿಎಸ್‌ಎನ್‌ಎಲ್‌ ಬಿಗ್ ಕೊಡುಗೆ..! ಟಾರ್ಗೇಟ್ ಜಿಯೋ..!

ಹೌದು, ಈ ಸಲ ಸ್ವಾತಂತ್ರ್ಯ ಸಂಭ್ರಮವನ್ನು ಇನ್ನಷ್ಟು ಉತ್ತೇಜಿಸಲು ಅತಿ ಕಡಿಮೆ ದರದಲ್ಲಿ ಬಿಎಸ್‌ಎನ್‌ಎಲ್ ಹೊಸ ಪ್ಲಾನ್‌ಗಳನ್ನು ಘೋಷಿಸಿದ್ದು, ಗ್ರಾಹಕರನ್ನು ಸೆಳೆಯುವ ತವಕ ಹೊಂದಿದೆ. ಈ ಪ್ಲಾನ್ ಮೂಲಕ ಜಿಯೋ, ಏರ್‌ಟೆಲ್, ವೊಡಾಫೋನ್‌ಗಳ ಕೆಲವು ಪ್ಲಾನ್‌ಗಳನ್ನು ಹಿಂದಾಕಿದೆ. ₹ 29 ಮತ್ತು ₹9 ಪ್ಲಾನ್‌ಗಳನ್ನು ತಂದಿದ್ದು, ಮಧ್ಯಮ ವರ್ಗದ ಗ್ರಾಹಕರನ್ನು ಟಾರ್ಗೇಟ್‌ ಮಾಡಿದೆ. ಈ ಪ್ಲಾನ್‌ಗಳಲ್ಲಿ ಗ್ರಾಹಕರು ಬೇರೆ ಎಲ್ಲಾ ಆಪರೇಟರ್‌ ಪ್ಲಾನ್‌ಗಳಿಗಿಂತಲೂ ಹೆಚ್ಚಿನದನ್ನೆ ಪಡೆಯುತ್ತಾರೆ.

₹ 29 ಪ್ಲಾನ್‌

₹ 29 ಪ್ಲಾನ್‌

ಬಿಎಸ್‌ಎನ್‌ಎಲ್ ಲಾಂಚ್ ಮಾಡಿರುವ ₹ 29 ಪ್ಲಾನ್‌ನಲ್ಲಿ ಗ್ರಾಹಕರು ಅನಿಯಮಿತ ಉಚಿತ ಕರೆಗಳನ್ನು ಮತ್ತು ಅನಿಯಮಿತ ಡೇಟಾವನ್ನು ಪಡೆಯಲಿದ್ದಾರೆ. ಅದಲ್ಲದೇ ಪ್ರತಿದಿನ 100 ಉಚಿತ SMS ಪಡೆಯಲಿದ್ದು, ವ್ಯಾಲಿಡಿಟಿ 7 ದಿನಗಳಾಗಿದೆ. ದೆಹಲಿ ಮತ್ತು ಮುಂಬೈ ನಗರಗಳ ಗ್ರಾಹಕರಿಗೆ ವಾಯ್ಸ್ ಕರೆಗಳಲ್ಲಿ ವ್ಯತ್ಯಾಸವಿದೆ. ಈ ಪ್ಲಾನ್‌ನಲ್ಲಿ ದಿನಕ್ಕೆ ಕನಿಷ್ಟ FUP 2GB ಡೇಟಾ ಇದ್ದು, ನಂತರ ಇಂಟರ್‌ನೆಟ್‌ ವೇಗ 80Kbpsಗೆ ಇಳಿಯಲಿದೆ. ಅಲ್ಲದೇ ಉಚಿತ Personalised Ringback Tone ಅವಕಾಶವನ್ನು ಬಿಎಸ್‌ಎನ್‌ಎಲ್‌ ನೀಡಿದೆ.

₹9 ಪ್ಲಾನ್‌

₹9 ಪ್ಲಾನ್‌

₹ 9 ಪ್ಲಾನ್‌ನಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರು ಅನಿಯಮಿತ ಉಚಿತ ಕರೆಗಳನ್ನು ಮತ್ತು ಅನಿಯಮಿತ ಡೇಟಾವನ್ನು ಪಡೆಯಲಿದ್ದಾರೆ. ಅದಲ್ಲದೇ ಪ್ರತಿದಿನ 100 ಉಚಿತ SMS ಪಡೆಯಲಿದ್ದು, ದೆಹಲಿ ಮತ್ತು ಮುಂಬೈ ನಗರಗಳ ಗ್ರಾಹಕರಿಗೆ ವಾಯ್ಸ್ ಕರೆಗಳಲ್ಲಿ ವ್ಯತ್ಯಾಸವಿದೆ. ವ್ಯಾಲಿಡಿಟಿ ಒಂದು ದಿನ. ಈ ಪ್ಲಾನ್‌ನಲ್ಲಿಯೂ ದಿನಕ್ಕೆ ಕನಿಷ್ಟ FUP 2GB ಡೇಟಾ ಇದ್ದು, ನಂತರ ಡೇಟಾ ವೇಗ 80Kbpsಗೆ ಇಳಿಯಲಿದೆ.

ಫ್ರೀಡಂ ಆಫರ್‌

ಫ್ರೀಡಂ ಆಫರ್‌

ಈ ಎರಡು ಆಫರ್‌ಗಳನ್ನು ಬಿಎಸ್‌ಎನ್‌ಎಲ್‌ ಸ್ವಾತಂತ್ರ್ಯ ಸಂಭ್ರಮವನ್ನು ಹೆಚ್ಚಿಸಲು ನೀಡಿದ್ದು, ಆಗಸ್ಟ್‌ 10 ರಿಂದ 25ರವರೆಗೆ ಮಾತ್ರ ಲಭ್ಯವಿರಲಿದೆ. ನಂತರ ಡೇಟಾ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಅವಧಿ ಮುಗಿದ ನಂತರ ₹ 29 ಪ್ಲಾನ್‌ನಲ್ಲಿ ಗ್ರಾಹಕರು ವಾರದ ವ್ಯಾಲಿಡಿಟಿಯಲ್ಲಿ 1GB ಡೇಟಾ ಹಾಗೂ 300 ಉಚಿತ SMSಗಳನ್ನು ಪಡೆಯಲಿದ್ದಾರೆ. ₹9 ಪ್ಲಾನ್‌ನಲ್ಲಿ ಡೇಟಾ ಪ್ರಮಾಣವನ್ನು ಇಳಿಸುವ ಸಾಧ್ಯತೆ ಹೆಚ್ಚಿದೆ. 15 ದಿನದ ಆಫರ್‌ನ್ನು ಹೆಚ್ಚು ಸ್ವಾತಂತ್ರ್ಯದಿಂದಲೇ ಎಂಜಾಯ್ ಮಾಡಿ.

ಗ್ರಾಮೀಣ ಗ್ರಾಹಕರ ಟಾರ್ಗೇಟ್

ಗ್ರಾಮೀಣ ಗ್ರಾಹಕರ ಟಾರ್ಗೇಟ್

ಬಿಎಸ್‌ಎನ್‌ಎಲ್‌ ಹೇಳಿರುವಂತೆ ಈ ಫ್ರೀಡಂ ಆಫರ್‌ಗಳನ್ನು ಗ್ರಾಮೀಣ ಗ್ರಾಹಕರಿಗಾಗಿಯೇ ಹಾಗೂ ದೈನಂದಿನ ಲೆಕ್ಕಾಚಾರದಲ್ಲಿ ಡೇಟಾ ಬಳಸುವವರಿಗಾಗಿ ತಂದಿದೆಯಂತೆ. ಅಲ್ಲದೇ ಈ ಆಫರ್ ಮೂಲಕ ಟೈಯರ್ 2 ಹಾಗೂ ಟೈಯರ್‌ 3 ನಗರಗಳ ಗ್ರಾಹಕರನ್ನು ಸೆಳೆಯಲು ಬಿಎಸ್‌ಎನ್‌ಎಲ್ ಮುಂದಾಗಿದೆ.

ಟಾರ್ಗೇಟ್ ಜಿಯೋ

ಟಾರ್ಗೇಟ್ ಜಿಯೋ

ಬಿಎಸ್‌ಎನ್‌ಎಲ್ ಘೋಷಣೆ ಮಾಡಿರುವ ಹೊಸ ಪ್ಲಾನ್‌ನಲ್ಲಿ ಜಿಯೋವನ್ನು ಟಾರ್ಗೇಟ್ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸದ್ಯ ಜಿಯೋ ₹ 52ಕ್ಕೆ ಅನಿಯಮಿತ ಕರೆ, 1.05GB ಡೇಟಾ ಹಾಗೂ 70 ಉಚಿತ SMSಗಳನ್ನು 7 ದಿನದ ಅವಧಿಗೆ ನೀಡುತ್ತಿದೆ. ಅದಲ್ಲದೇ ಜಿಯೋದ ಇನ್ನೊಂದು ಆಫರ್‌ ₹ 49 ಪ್ಲಾನ್‌ನಲ್ಲಿ ಅನಿಯಮಿತ ಕರೆ, 1GB ಡೇಟಾ ಹಾಗೂ 50 ಉಚಿತ SMSಗಳನ್ನು ನೀಡುತ್ತಿತ್ತು. ಈ ಎರಡು ಪ್ಲಾನ್‌ಗಳನ್ನು ಬಿಎಸ್‌ಎನ್‌ಎಲ್ ಒವರ್‌ಟೆಕ್ ಮಾಡಿದೆ. ಇನ್ನೊಂದು ಪ್ಲಾನ್‌ನಲ್ಲಿ ₹ 19ಕ್ಕೆ ಜಿಯೋ ದಿನಕ್ಕೆ 150MB ಡೇಟಾವನ್ನು ನೀಡುತ್ತಿತ್ತು. ಈ ಪ್ಲಾನ್‌ನ್ನು ಬಿಎಸ್‌ಎನ್‌ಎಲ್‌ ತನ್ನ ₹ 9 ಪ್ಲಾನ್‌ ಮೂಲಕ ಸ್ಪಷ್ಟವಾಗಿ ಟಾರ್ಗೇಟ್ ಮಾಡಿದೆ.

ಏರ್‌ಟೆಲ್‌, ವೊಡಾಫೋನ್‌ಗೂ ಪೆಟ್ಟು

ಏರ್‌ಟೆಲ್‌, ವೊಡಾಫೋನ್‌ಗೂ ಪೆಟ್ಟು

ಫ್ರೀಡಂ ಪ್ಲಾನ್‌ಗಳಿಂದ ಬಿಎಸ್‌ಎನ್‌ಎಲ್‌ ಏರ್‌ಟೆಲ್ ಮತ್ತು ವೊಡಾಫೋನ್‌ಗಳಿಗೂ ಬಿಸಿ ಮುಟ್ಟಿಸಿದೆ. ಏರ್‌ಟೆಲ್‌ನ ₹ 47ರ ಪ್ಲಾನ್‌ನಲ್ಲಿ ಗ್ರಾಹಕರಿಗೆ 150 ನಿಮಿಷ ಸ್ಥಳಿಯ, ಎಸ್‌ಟಿಡಿ, ರಾಷ್ಟ್ರೀಯ ಹಾಗೂ ರೋಮಿಂಗ್ ಕರೆಗಳು, 50 ಸ್ಥಳೀಯ ಹಾಗೂ ಎಸ್‌ಟಿಡಿ SMSಗಳು ಹಾಗೂ 500MB 3G/4G ಡೇಟಾ ದೊರೆಯುತ್ತಿತ್ತು. ಇನ್ನು ವೊಡಾಫೋನ್‌ನಲ್ಲಿ ಆರಂಭಿಕ ಪ್ಲಾನ್‌ ಆಗಿರುವ ₹ 47ರ ಪ್ಲಾನ್‌ ಗ್ರಾಹಕರಿಗೆ 7500 ಸೆಕೆಂಡ್‌ಗಳು ಅಥವಾ 125 ನಿಮಿಷ ಸ್ಥಳೀಯ ಹಾಗೂ ಎಸ್‌ಟಿಡಿ ಕರೆಗಳು, 50 ಸ್ಥಳೀಯ ಹಾಗೂ ಎಸ್‌ಟಿಡಿ SMSಗಳು ಹಾಗೂ 500MB 3G/4G ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿತ್ತು. ಈಗ ಬಿಎಸ್‌ಎನ್‌ಎಲ್‌ನ ಫ್ರೀಡಂ ಆಫರ್‌ಗಳು ಈ ಎಲ್ಲಾ ಆಫರ್‌ಗಳನ್ನು ಹಿಂದಾಕಿವೆ.

Best Mobiles in India

English summary
BSNL Rs. 29, Rs. 9 Recharges With Unlimited Calls, Data Launched Ahead of Independence Day. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+