ಟೆಲಿಕಾಂ ಲೋಕದಲ್ಲೇ ಯಾರು ನೀಡದ ಆಫರ್: ನಿತ್ಯಕ್ಕೆ 5.2 GB ಡೇಟಾ..!
ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸರ್ಕಾರಿ ಸ್ವಾಮ್ಯದ BSNL ಕಂಪನಿಯೂ ಹೊಸದೊಂದು ದೊಡ್ಡ ಪ್ಲಾನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳು ನೀಡಲು ಸಾಧ್ಯವಾಗದ ಮಾದರಿಯಲ್ಲಿ ನಿತ್ಯ 5.2 GB ಡೇಟಾವನ್ನು ನೀಡುವ ಪ್ಲಾನ್ ವೊಂದನ್ನು ಲಾಂಚ್ ಮಾಡಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ಇದು ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಏರ್‌ಟೆಲ್, ವೊಡಾ ಫೋನ್ ಹಾಗೂ ಜಿಯೋ ಗಳು ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಡೇಟಾ ನೀಡುವ ಪ್ಲಾನ್‌ಗಳನ್ನು ಲಾಂಚ್ ಮಾಡುತ್ತಿವೆ. ಇದೇ ಮಾದರಿಯಲ್ಲಿ BSNL ತನ್ನ ಬಳಕೆದಾರರಿಗೆ ಹೆಚ್ಚಿನ ಡೇಟಾವನ್ನು ನೀಡುವ ಪ್ಲಾನ್ ಲಾಂಚ್ ಮಾಡಿದೆ. ಅಲ್ಲದೇ ಪ್ಲಾನ್ ಬೆಲೆಯೂ ಕಡಿಮೆ ಇದೆ ಎನ್ನಲಾಗಿದೆ. ಇಷ್ಟು ಕಡಿಮೆ ಬೆಲೆಗೆ ಯಾವುದೇ ಕಂಪನಿಗಳು ಇಷ್ಟು ದೊಡ್ಡ ಮಟ್ಟದ ಆಫರ್ ಅನ್ನು ನೀಡಿಲ್ಲ.

ನಿತ್ಯ 5.2 GB ಡೇಟಾ:
BSNL ಹೊಸದಾಗಿ ಲಾಂಚ್ ಮಾಡಿರುವ ಪ್ಲಾನ್ ರೂ.333ಕ್ಕೆ ದೊರೆಯುತ್ತಿದೆ. ಇದರಲ್ಲಿ ಬಳಕೆದಾರರಿಗೆ ನಿತ್ಯ 5.2 GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ. ಈ ಹಿಂದೆ ನಿತ್ಯ 3 GB ಡೇಟಾವನ್ನು ಈ ಪ್ಲಾನ್‌ನಲ್ಲಿ ನೀಡಲಾಗುತ್ತಿತು. ಈಗ ಅದನ್ನು ಅಪ್‌ಗ್ರೇಡ್ ಮಾಡಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

45 ದಿನಗಳು:
BSNL ಹೊಸದಾಗಿ ಲಾಂಚ್ ಮಾಡಿರುವ ರೂ.333 ಪ್ಲಾನ್‌ನಲ್ಲಿ ಬಳಕೆದಾರರಿಗೆ 45 ದಿನಗಳ ಕಾಲ ವ್ಯಾಲಿಡಿಟಿಯನ್ನು ನೀಡಲಿದೆ ಎನ್ನಲಾಗಿದೆ. ಒಟ್ಟು ಬಳಕೆದಾರರಿಗೆ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 234 GB ಡೇಟಾ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ.

ಉಚಿತ ಕರೆಗಳು:
ಇದಲ್ಲದೇ BSNL ಹೊಸದಾಗಿ ಲಾಂಚ್ ಮಾಡಿರುವ ರೂ.333 ಪ್ಲಾನ್‌ನಲ್ಲಿ ಬಳಕೆದಾರರಿಗೆ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಮೊಬೈಲ್ ಮತ್ತು ಲ್ಯಾಂಡ್ ಲೈನ್ ಕರೆಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ಮಾಡಿಕೊಡಲಿದೆ. ರೋಮಿಂಗ್ ಸಹ ಉಚಿತವಾಗಿ ಇರಲಿದೆ.

ಸ್ಪರ್ಧೇ:
ಮಾರುಕಟ್ಟೆಯಲ್ಲಿ BSNL ಹೊಸ ಮಾದರಿಯಲ್ಲಿ ಲಾಂಚ್ ಮಾಡಿರುವ ರೂ.333 ಪ್ಲಾನ್ ಹೊಸ ಸಂಚಲನವನ್ನು ಮೂಡಿಸಲಿದೆ ಎನ್ನಲಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಈ ಮಾದರಿಯ ಆಫರ್ ಅನ್ನು ನೀಡಲು ಸಾಧ್ಯವಾಗಿಲ್ಲ, ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಡೇಟಾವನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ.


Click it and Unblock the Notifications








