Home
ಸುದ್ದಿಜಾಲ

ಅಗ್ಗದ ಬೆಲೆ! ನಿತ್ಯ 2GB ಡೇಟಾ.. ಎಷ್ಟಾದ್ರೂ ಮಾತಾಡಿ.. ಈ ಮೂರು BSNL ಪ್ಲಾನ್ ಬಿಡಬೇಡಿ

ಬಿಎಸ್‌ಎನ್ಎಲ್ ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರವಾಗಿ ಪೈಪೋಟಿ ನೀಡುತ್ತಿದೆ. ಇದರ ಭಾಗವಾಗಿ ಹಲವು ಯೋಜನೆಗಳನ್ನು ಪರಿಚಯಿಸುತ್ತಾ ಬಂದಿದೆ. ಈಗಾಗಲೇ ಕೆಲವು ಆಕರ್ಷಕ ಪ್ರೀಪೇಯ್ಡ್‌ ಪ್ಲಾನ್‌ಗಳನ್ನು ಬಿಡುಗಡೆ ಮಾಡುವ ಸೈ ಅನಿಸಿಕೊಂಡಿದೆ. ಅದೇ ರೀತಿ, ಬಿಎಸ್‌ಎನ್ಎಲ್ (BSNL) ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸಲು ಅಗ್ಗದ ಬೆಲೆಗಳು ಮತ್ತು ಉತ್ತಮ ಪ್ರಯೋಜನಗಳನ್ನು ನೀಡುವ ಪ್ರಿಪೇಯ್ಡ್ ಯೋಜನೆಗಳನ್ನು ತಂದಿದೆ. ಈ ಯೋಜನೆಗಳು ಅಧಿಕ ಡೇಟಾ ಸೌಲಭ್ಯ ಒಳಗೊಂಡಿದೆ. ಬನ್ನಿ, ಈ ಯೋಜನೆಗಳ ಬೆಲೆ ಮತ್ತು ಪ್ರಯೋಜನಗಳ ಬಗ್ಗೆ ತಿಳಿಯೋಣ.

ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ದೇಶದ ಕೆಲವು ಪ್ರಮುಖ ಸ್ಥಳಗಳಲ್ಲಿ 4G ಸೇವೆಗಳನ್ನು ಪ್ರಾರಂಭಿಸಿದೆ. ಕಂಪನಿಯು ಮುಂದಿನ ಕೆಲವು ತಿಂಗಳುಗಳಲ್ಲಿ ದೇಶಾದ್ಯಂತ 4G ಸೇವೆಗಳನ್ನು ನೀಡಲು ಸಜ್ಜಾಗಿದೆ. ಇದಲ್ಲದೆ, ಬಿಎಸ್ಎನ್ಎಲ್ 5G ಪ್ರಯೋಗಗಳು ಮತ್ತು ಲೈವ್ ಟಿವಿ ಚಾನೆಲ್ ಸೇರಿದಂತೆ ವಿವಿಧ ಉಪಕ್ರಮಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಬಿಎಸ್ಎನ್ಎಲ್ (BSNL) ಮೂರು ಅದ್ಭುತ ಪ್ರಿಪೇಯ್ಡ್ ಯೋಜನೆಗಳನ್ನು ತಂದಿದೆ. ಇವುಗಳು ಕೈಗೆಟುಕುವ ಬೆಲೆಯಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ. ಇವು ಗ್ರಾಹಕರಿಂದ ಮೆಚ್ಚುಗೆ ಪಡೆದಿವೆ.

BSNL: ನಿತ್ಯ 2GB ಡೇಟಾ.. ಎಷ್ಟಾದ್ರೂ ಮಾತಾಡಿ.. ಈ ಮೂರು ಪ್ಲಾನ್ ಬಿಡಬೇಡಿ

ಬಿಎಸ್ಎನ್ಎಲ್ 485 ರೂ. ಪ್ರಿಪೇಯ್ಡ್ ಯೋಜನೆ

ಬಿಎಸ್ಎನ್ಎಲ್ 485 ರೂ.ಗಳ ಯೋಜನೆಯು (BSNL Rs 485 Plan) 80 ದಿನಗಳ ವ್ಯಾಲಿಡಿಟಿ ಹೊಂದಿದೆ. ನೀವು ಪ್ರತಿದಿನ 2GB ಡೇಟಾ ಪಡೆಯಬಹುದು. ನಿಮಗೆ 485 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಒಟ್ಟು 160GB ಡೇಟಾ ಸೌಲಭ್ಯ ಸಿಗುತ್ತದೆ. ಇದಲ್ಲದೆ, ಈ ಯೋಜನೆಯಲ್ಲಿ ವಿವಿಧ ಪ್ರಯೋಜನಗಳು ಲಭ್ಯವಿದೆ. ಈ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ವಾಯ್ಸ್‌ ಕಾಲ್‌ ಸೌಲಭ್ಯ ಒಳಗೊಂಡಿದೆ. ನೀವು ಪ್ರತಿದಿನ 100 ಎಸ್‌ಎಂಎಸ್‌ ಸಹ ಪಡೆಯಬಹುದು. ಕಂಪನಿಯು ಹೊಸದಾಗಿ ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸಿಲ್ಲ.

ಬಿಎಸ್ಎನ್ಎಲ್ 249 ರೂ. ಪ್ರಿಪೇಯ್ಡ್ ಯೋಜನೆ

ಬಿಎಸ್ಎನ್ಎಲ್ 249 ರೂ. ಪ್ರಿಪೇಯ್ಡ್ ಯೋಜನೆಯು (BSNL Rs 249 Plan) 45 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ನೀವು ಪ್ರತಿದಿನ 2GB ಡೇಟಾ ಪಡೆಯಬಹುದು. ಈ ಅದ್ಭುತ ಯೋಜನೆಯು ವಿಶೇಷವಾಗಿ, ಒಟ್ಟು 90GB ಡೇಟಾ ಸೌಲಭ್ಯವನ್ನು ಒಳಗೊಂಡಿದೆ. ನೀವು 249 ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ವಾಯ್ಸ್‌ ಕಾಲ್‌ಗಳ ಸೌಲಭ್ಯವನ್ನು ಸಹ ಹೊಂದಿದೆ. ಅಲ್ಲದೆ, ಈ ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯ ಒದಗಿಸಲಾಗುತ್ತದೆ. ನೀವು ಈ ಯೋಜನೆಯಲ್ಲಿ, ದೈನಂದಿನ 2GB ಡೇಟಾವನ್ನು ಖಾಲಿ ಮಾಡಿದ ನಂತರ, 40 Kbps ವೇಗದಲ್ಲಿ ಇಂಟರ್ನೆಟ್ ಬಳಸಬಹುದು.

ಬಿಎಸ್ಎನ್ಎಲ್ 229 ರೂ. ಪ್ರಿಪೇಯ್ಡ್ ಯೋಜನೆ

ಬಿಎಸ್ಎನ್ಎಲ್ 229 ರೂ. ಪ್ರಿಪೇಯ್ಡ್ ಯೋಜನೆಯು (BSNL Rs 229 Plan) ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಪ್ಲಾನ್‌ನಲ್ಲಿ ದಿನಕ್ಕೆ 2GB ಡೇಟಾ ಲಭ್ಯವಿದೆ. ನೀವು 229 ರೂ.ಗಳ ಪ್ರಿಪೇಯ್ಡ್ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದರೆ, ಒಟ್ಟು 62GB ವರೆಗಿನ ಡೇಟಾ ಪ್ರಯೋಜನ ಪಡೆಯಬಹುದು. ಇದಲ್ಲದೆ, ಈ ಪ್ಲಾನ್‌ನಲ್ಲಿ ಹಲವು ಪ್ರಯೋಜನಗಳು ಲಭ್ಯವಿದೆ.

ಬಿಎಸ್ಎನ್ಎಲ್ 229 ರೂ. ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಧ್ವನಿ ಕರೆಗಳನ್ನು ಒಳಗೊಂಡಿದೆ. ಮತ್ತು ನಿತ್ಯ 100 ಎಸ್‌ಎಂಎಸ್‌ ಸೌಲಭ್ಯವನ್ನು ಸಹ ನೀಡುತ್ತದೆ. ಈ ಯೋಜನೆಯಲ್ಲಿ ದೈನಂದಿನ 2GB ಡೇಟಾ ಮಿತಿ ಮುಗಿದ ನಂತರ, ನೀವು 40 Kbps ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು.

Best Mobiles in India

English summary
BSNL Rs 485, BSNL Rs 249 and BSNL Rs 229 Plans offering long validity and unlimited calls: check details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+