Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಹೊಸ ಹವಾ ಎಬ್ಬಿಸಲಿದೆ BSNLನ 150 ದಿನಗಳ ಭರ್ಜರಿ ಪ್ಲಾನ್....!

By Srinidhi

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿ ನಡೆಯುತ್ತಿದೆ. ಈಗಾಗಲೇ ಖಾಸಗಿ ಟೆಲಿಕಾಂ ಕಂಪನಿಗಳು ತನ್ನ ಬಳಕೆದಾರರಿಗೆ ಹೆಚ್ಚು ಡೇಟಾವನ್ನು ಬಳೆಕೆಗೆ ನೀಡುತ್ತಿದೆ. ಇದೇ ಮಾದರಿಯಲ್ಲಿ ಹೆಚ್ಚು ಬಳಕೆದಾರರನ್ನು ಸೆಳೆಯುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ಹೊಸದೊಂದು ಪ್ಲಾನ್ ಲಾಂಚ್ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದ ಡೇಟಾ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ. ಹೊಸ ಪ್ಲಾನ್ ಕುರಿತು ಮಾಹಿತಿಯೂ ಮುಂದಿನಂತಿದೆ.

ಮಾರುಕಟ್ಟೆಯಲ್ಲಿ ಹೊಸ ಹವಾ ಎಬ್ಬಿಸಲಿದೆ BSNLನ 150 ದಿನಗಳ ಭರ್ಜರಿ ಪ್ಲಾನ್....!

ಈಗಾಗಲೇ ಎಲ್ಲಾ ಟೆಲಿಕಾಂ ಕಂಪನಿಗಳು 2 GB ಡೇಟಾವನ್ನು ನೀಡುವ ಪ್ಲಾನ್ ಗಳನ್ನು ಲಾಂಚ್ ಮಾಡಿವೆ. ಇದೇ ಮಾದರಿಯಲ್ಲಿ BSNL ತನ್ನ ಬಳಕೆದಾರರಿಗೆ ಹೆಚ್ಚಿನ ಡೇಟಾ ಮತ್ತು ವ್ಯಾಲಿಡಿಟಿಯನ್ನು ನೀಡುವಂತಹ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದ್ದು, ಅಧಿಕ ಪ್ರಮಾದಲ್ಲಿ ಡೇಟಾ ಲಾಭವನ್ನು ಹೆಚ್ಚಿನ ವ್ಯಾಲಿಡಿಟಿ ಎರಡನ್ನು ಒಟ್ಟಾಗಿ ಪಡೆದುಕೊಳ್ಳಬಹುದಾಗಿದೆ.

150 ದಿನಗಳ ವ್ಯಾಲಿಡಿಟಿ:

150 ದಿನಗಳ ವ್ಯಾಲಿಡಿಟಿ:

ಸದ್ಯ ಟೆಲಿಕಾಂ ಮಾರುಕಟ್ಟೆಯಲ್ಲಿ 84 ದಿನಗಳ ಪ್ಲಾನ್ ಗಳು ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕುವ ಮಾದರಿಯಲ್ಲಿ, BSNL 150 ದಿನಗಳ ಪ್ಲಾನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಇದು ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ದಿನಕ್ಕೆ 2GB ಡೇಟಾ:

ದಿನಕ್ಕೆ 2GB ಡೇಟಾ:

BSNL ಹೊಸದಾಗಿ ನೀಡಿರುವ ಪ್ಲಾನ್ ನಲ್ಲಿ ಬಳಕೆದಾರರಿಗೆ ನಿತ್ಯ 2GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರಿಂದಾಗಿ ಖಾಸಗಿ ಟೆಲಿಕಾಂ ಕಂಪನಿಗಳು ಸಹ ಬೆಚ್ಚು ಬಿದ್ದಿವೆ. ಇದೇ ಮಾದರಿಯ ಪ್ಲಾನ್ ಖಾಸಗಿ ಟೆಲಿಕಾಂ ಕಂಪನಿಗಳಲ್ಲಿ ಹೆಚ್ಚಿನ ಬೆಲೆಗೆ ಲಭ್ಯವಿದೆ. ಇದರಿಂದಾಗಿ BSNL ತನ್ನ ಬಳಕೆದಾರರಿಗೆ ಹೆಚ್ಚಿನ ಅವಕಾಶವನ್ನು ಇದರಲ್ಲಿ ನೀಡಿದೆ.

ಉಚಿತ ಅನ್ ಲಿಮಿಡೆಟ್ ಕರೆಗಳು:

ಉಚಿತ ಅನ್ ಲಿಮಿಡೆಟ್ ಕರೆಗಳು:

150 ದಿನಗಳ ಪ್ಲಾನ್ ನಲ್ಲಿ ಬಳಕೆದಾರರು ನಿತ್ಯ 2GB ಡೇಟಾವನ್ನು ನೀಡುವುದರೊಂದಿಗೆ, ಇಷ್ಟು ದಿನಗಳ ಕಾಲ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದರಿಂದ ಕರೆಗಳಿಗೆ ಹೆಚ್ಚುವರಿ ಪಾವತಿ ಮಾಡುವ ಅಗತ್ಯವಿಲ್ಲ. ಇದರಿಂದಾಗಿ BSNL ನ ಪ್ಲಾನ್ ಎಲ್ಲಾ ರೀತಿಯಲ್ಲಿಯೂ ಬೆಸ್ಟ್ ಎನ್ನಿಸಿಕೊಂಡಿದೆ.

ಉಚಿತ SMS:

ಉಚಿತ SMS:

BSNL ನ ಈ ಹೊಸ ಪ್ಲಾನ್ ಬಳಕೆದಾರರಿಗೆ ಕೇವಲ ಡೇಟಾ, ಕರೆ ಮಾಡುವ ಅವಕಾಶ ಸೇರಿದಂತೆ ಎಲ್ಲಾ ಅವಕಾಶಗಳನ್ನು ಮಾಡಿಕೊಟ್ಟಿದೆ. ಇದೇ ಮಾದರಿಯಲ್ಲಿ ಬಳಕೆದಾದರಿಗೆ ನಿತ್ಯ 100 ಮೇಸೆಜ್ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದ್ದು, ಹೆಚ್ಚಿನ ಲಾಭವನ್ನು ಮಾಡಿಕೊಟ್ಟಿದೆ.

ಬೆಲೆ ಎಷ್ಟು:

ಬೆಲೆ ಎಷ್ಟು:

ರೂ. 786 ಕ್ಕೆ ಲಭ್ಯವಿರುವ ಈ ಪ್ಲಾನ್ ಬಳಕೆದಾರರಿಗೆ ಜೂನ್ 26 ರ ವರೆಗೂ ರೀಚಾರ್ಜ್ ಮಾಡಿಸಿಕೊಳ್ಳಲು ಲಭ್ಯವಿರಲಿದೆ. ಇದರಿಂದಾಗಿ ನೀವು ಈ ಪ್ಲಾನ್ ಲಾಭವನ್ನು ಪಡೆದುಕೊಳ್ಳಬೇಕಾದಲ್ಲಿ ಶೀಘ್ರವೇ ರೀಚಾರ್ಜ್ ಮಾಡಿಸಿಕೊಳ್ಳುವುದು ಉತ್ತಮ. ಇಲ್ಲವಾದರೆ ಈ ಪ್ಲಾನ್ ಲಾಭ ನಿಮಗೆ ದೊರೆಯುವುದಿಲ್ಲ.

Best Mobiles in India

English summary
BSNL Rs 786 Long-Validity Prepaid Plan Offers 2GB Data Per Day for Five Months. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+