ಬಿಎಸ್‌ಎನ್‌ಎಲ್‌ ಟೆಲಿಕಾಂನಿಂದ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌! ಪ್ರಯೋಜನ ಏನು?

|

ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇದರ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಕೂಡ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ತನ್ನ ವಿಶೇಷ ಪ್ರಿಪೇಯ್ಡ್‌ ಪ್ಲಾನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಾ ಬಂದಿದೆ. ಸದ್ಯ ಇದೀಗ ಬಿಎಸ್‌ಎನ್‌ಎಲ್‌ ಟೆಲಿಕಾಂ 87ರೂ. ಬೆಲೆಯಲ್ಲಿ ಹೊಸ ಪ್ರಿಪೇಯ್ಡ್ ಪ್ಲಾನ್‌ ಪರಿಚಯಿಸಿದೆ. ಈ ಪ್ಲಾನ್‌ 1GB ವೇಗದ ದೈನಂದಿನ ಡೇಟಾ ಪ್ರವೇಶವನ್ನು ನೀಡಲಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಹೊಸ 87ರೂ. ಪ್ರಿಪೇಯ್ಡ್‌ ಪ್ಲಾನ್‌ ಬಿಡುಗಡೆ ಮಾಡಿದೆ. ಈ ಪ್ಲಾನ್‌ 14 ದಿನಗಳ ಮಾನ್ಯತೆಯನ್ನು ಹೊಂದಿದೆ. ಅಗ್ಗದ ಬೆಲೆಯ ಪ್ಲಾನ್‌ ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಪ್ರಿಪೇಯ್ಡ್‌ ಪ್ಲಾನ್‌ ಪರಿಚಯಿಸಿದೆ. ಇದು ಪೇಟಿಎಂ ಮೂಲ ಕಂಪನಿ One97 ಕಮ್ಯುನಿಕೇಷನ್ಸ್ ಒಡೆತನದ ಗೇಮಿಂಗ್ ಸೇವೆಯೊಂದಿಗೆ ಕೂಡಿದೆ. ಇನ್ನುಳಿದಂತೆ ಈ ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ 87ರೂ. ಪ್ರಿಪೇಯ್ಡ್‌ ಪ್ಲಾನ್‌ 14 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ದೈನಂದಿನ 100 SMS ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇದು 1GB ಹೆಚ್ಚಿನ ವೇಗದ ಡೇಟಾ ಪ್ರವೇಶವನ್ನು ನೀಡಲಿದೆ. ಇನ್ನು ಈ ಹೊಸ ಪ್ಲಾನ್‌ ಮುಂಬೈ ಮತ್ತು ದೆಹಲಿಯಲ್ಲಿ MTNL ನೆಟ್‌ವರ್ಕ್ ಸೇರಿದಂತೆ ಮನೆ, ಲೋಕಲ್‌ ಸರ್ವಿಸ್‌ ಏರಿಯಾ ಮತ್ತು ರಾಷ್ಟ್ರೀಯ ರೋಮಿಂಗ್‌ನಲ್ಲಿ ಅನಿಯಮಿತ ಸ್ಥಳೀಯ ಮತ್ತು STD ಧ್ವನಿ ಕರೆ ಪ್ರಯೋಜನವನ್ನು ನೀಡುತ್ತದೆ.

ಪ್ರಿಪೇಯ್ಡ್

ಇನ್ನು ಈ ಹೊಸ ಪ್ರಿಪೇಯ್ಡ್ ಪ್ಲಾನ್‌ ಬಿಎಸ್‌ಎನ್‌ಎಲ್‌ ಟೆಲಿಕಾಂ ಆಪರೇಟರ್‌ನ ಎಲ್ಲಾ ಪ್ರಿಪೇಯ್ಡ್ ಬಳಕೆದಾರರಿಗೆ ಲಭ್ಯವಿದೆ. ಈ ಪ್ಲ್ಯಾನ್‌ನಲ್ಲಿ ನಿಯಮಿತ ಪ್ರಯೋಜನಗಳ ಜೊತೆಗೆ, One97 ಕಮ್ಯುನಿಕೇಷನ್ಸ್‌ನಿಂದ ಹಾರ್ಡಿ ಮೊಬೈಲ್ ಗೇಮ್ಸ್ ಸೇವೆಗೆ ಪ್ರವೇಶವನ್ನು ಕೂಡ ಪಡೆಯಬಹುದಾಗಿದೆ. ಇದು ಬಳಕೆದಾರರಿಗೆ ಕ್ರೀಡೆ, ಕ್ಯಾಶುಯಲ್ ಮತ್ತು ಆರ್ಕೇಡ್‌ನಂತಹ ಗೇಮ್‌ಗಳನ್ನು ಆಡಲು ಅವಕಾಶ ನೀಡುತ್ತದೆ. ಸದ್ಯ ಈ ಪ್ಲಾನ್‌ ಪ್ರಿಪೇಯ್ಡ್ ಚಂದಾದಾರರಿಗೆ ಪ್ಯಾನ್-ಇಂಡಿಯಾ ಆಧಾರದ ಮೇಲೆ ಲಭ್ಯವಿದೆ.

ಬಿಎಸ್‌ಎನ್‌ಎಲ್‌

ಇದಲ್ಲದೆ ಬಿಎಸ್‌ಎನ್‌ಎಲ್‌ ಇತ್ತೀಚಿಗೆ 797ರೂ. ಪ್ರಿಪೇಯ್ಡ್‌ ಪ್ಲಾನ್‌ ಪರಿಚಯಿಸಿತ್ತು. ಈ ಪ್ಲಾನ್‌ ಮೂಲಕ ಬಳಕೆದಾರರು ಮುಖ್ಯವಾಗಿ ತಮ್ಮ ದ್ವಿತೀಯ ಫೋನ್ ಸಂಖ್ಯೆಯನ್ನು ಸಕ್ರಿಯಗೊಳಿಸಬಹುದಾಗಿದೆ. ಇನ್ನು ಈ ಪ್ಲಾನ್‌ 395 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಪ್ಲಾನ್‌ನ ಲಾಂಚ್‌ ಆಫರ್‌ನಲ್ಲಿ ಬಿಎಸ್‌ಎನ್‌ಎಲ್‌ ಹೆಚ್ಚುವರಿ 30ದಿನಗಳ ವ್ಯಾಲಿಡಿಟಿಯನ್ನು ನೀಡುವುದಾಗಿ ಘೋಷಿಸಿದೆ. ಬಳಕೆದಾರರು ಜೂನ್ 12, 2022 ರೊಳಗೆ ಈ ಪ್ಲಾನ್‌ ಆರಿಸಿಕೊಂಡರೆ ಮಾತ್ರ ಈ ಹೆಚ್ಚುವರಿ ಮಾನ್ಯತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದಲ್ಲದೆ ಗ್ರಾಹಕರು ಮೊದಲ 60 ದಿನಗಳವರೆಗೆ ಮಾತ್ರ ಈ ಪ್ಲಾನ್‌ನ ಎಲ್ಲಾ ಪ್ರಯೋಜನಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. 60 ದಿನಗಳ ನಂತರ, ಬಳಕೆದಾರರು ಕರೆ ಮಾಡಲು ಅಥವಾ ಇಂಟರ್ನೆಟ್ ಬ್ರೌಸ್ ಮಾಡಲು ಟಾಕ್‌ಟೈಮ್ ಅಥವಾ ಡೇಟಾ ಯೋಜನೆಗಳನ್ನು ಆರಿಸಬೇಕಾಗುತ್ತದೆ.

ಪ್ರಿಪೇಯ್ಡ್‌

ಇನ್ನು ಈ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ಮೊದಲ 60 ದಿನಗಳವರೆಗೆ ದೈನಂದಿನ 2GB ಡೇಟಾ, ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ಡೈಲಿ 100 SMS ಅನ್ನು ಪಡೆದುಕೊಳ್ಳಬಹುದಾಗಿದೆ. ಆದರೆ 60 ದಿನಗಳ ನಂತರ ಡೇಟಾ ವೇಗವು 80 Kbps ಗೆ ಕಡಿಮೆಯಾಗುತ್ತದೆ. ಅಲ್ಲದೆ ಡೇಟಾ ಮತ್ತು ಕರೆ ಪ್ರಯೋಜನಗಳು 60 ದಿನಗಳ ನಂತರ ಮುಕ್ತಾಯಗೊಳ್ಳುತ್ತವೆ, ಆದರೆ ಸಿಮ್ ಸಕ್ರಿಯವಾಗಿರುತ್ತದೆ. ನಿಮಗೆ ಡೇಟಾದ ಅವಶ್ಯಕತೆಯಿದ್ದರೆ ನೀವು ಡೇಟಾ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

Best Mobiles in India

English summary
BSNL Rs. 87 Prepaid Plan With Unlimited Voice Calls for 14 Days Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X