Subscribe to Gizbot

BSNL ನಿಂದ ಡೇಟಾ ಸುನಾಮಿ: ಕೊಚ್ಚಿ ಹೊಗಲಿದೆ ಜಿಯೋ-ಏರ್‌ಟೆಲ್‌...!

Written By:

ಸರ್ಕಾರಿ ಸ್ವಾಮ್ಯದ BSNL ತನ್ನ ಬಳಕೆದಾರರಿಗೆ ಸಾಕಷ್ಟು ಆಫರ್ ಗಳನ್ನು ಲಾಂಚ್ ಮಾಡುತ್ತಿದ್ದು, ಈ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ನಿರ್ಮಾಣವಾಗಿರುವ ದರ ಸಮರಕ್ಕೆ ತನ್ನದೇ ಕೊಡುಗೆಯನ್ನು ನೀಡುತ್ತಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಮಾರುಕಟ್ಟೆಯಲ್ಲಿ ಲಾಂಚ್ ಮಾಡುತ್ತಿರುವ ಆಫರ್ ಗಳಿಗಿಂತಲೂ ಉತ್ತಮವಾದ ಆಫರ್ ಗಳನ್ನು ನೀಡಲು ಮುಂದಾಗಿದೆ.

BSNL ನಿಂದ ಡೇಟಾ ಸುನಾಮಿ: ಕೊಚ್ಚಿ ಹೊಗಲಿದೆ ಜಿಯೋ-ಏರ್‌ಟೆಲ್‌...!

ಈಗಾಗಲೇ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ನಿತ್ಯ 1GBಗಿಂತಲೂ ಅಧಿಕ ಡೇಟಾವನ್ನು ನೀಡುವ ಆಫರ್ ಗಳನ್ನು ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ BSNL ಸಹ ತನ್ನ ಬಳಕೆದಾರರಿಗೆ ನಿತ್ಯ 1.5GB ಡೇಟಾವನ್ನು ಜಿಯೋ ಮತ್ತು ಏರ್‌ಟೆಲ್ ಗಿಂತಲೂ ಕಡಿಮೆ ಬೆಲೆಗೆ ನೀಡಲಿದೆ. ಇದರಿಂದಾಗಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಈ ಮೂಲಕ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.98 ಪ್ಲಾನ್:

ರೂ.98 ಪ್ಲಾನ್:

ಈಗಾಗಲೇ ಮಾರುಕಟ್ಟೆಯಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆದಾರರನ್ನು ಸೆಳೆಯುತ್ತಿರುವ BSNL ತನ್ನ ಬಳಕೆದಾರರಿಗೆ ರೂ.98 ರ ಪ್ಲಾನ್ ಅನ್ನು ನೀಡಲು ಮುಂದಾಗಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಡೇಟಾ ಬಳಕೆ ಮಾಡುವ ಅವಕಾಶವನ್ನು ನೀಡಲಾಗಿದೆ.

ನಿತ್ಯ 1.5 GB ಡೇಟಾ:

ನಿತ್ಯ 1.5 GB ಡೇಟಾ:

BSNL ತನ್ನ ಬಳಕೆದಾರರಿಗೆ ರೂ.98 ರ ಪ್ಲಾನ್‌ನಲ್ಲಿ ನಿತ್ಯ 1.5GB ಡೇಟಾವನ್ನು ಬಳಕೆಗೆ ನೀಡಲಿದೆ. 26 ದಿನಗಳ ಅವಧಿಯ ಈ ಪ್ಲಾನ್‌ನಲ್ಲಿ ಬಳಕೆದಾರರು ಒಟ್ಟು 39GB ಡೇಟಾವನ್ನು ತಮ್ಮ ಬಳಕೆಗೆ ಪಡೆದುಕೊಳ್ಳಬಹುದಾಗಿದೆ. ಇದರಿಂದ ಹೆಚ್ಚಿನ ಲಾಭವಾಗಲಿದೆ.

ಕರೆ-SMS ಇಲ್ಲ:

ಕರೆ-SMS ಇಲ್ಲ:

BSNL ತನ್ನ ಬಳಕೆದಾರರಿಗೆ ರೂ.98ಕ್ಕೆ ನೀಡಿರುವ ಪ್ಲಾನ್‌ನಲ್ಲಿ ಬಳಕೆದಾರರಿಗೆ ಹೆಚ್ಚಿನ ಡೇಟಾ ಲಾಭವನ್ನು ಮಾಡಿಕೊಟ್ಟಿದೆ. ಆದರೆ ಇದರಲ್ಲಿ ಯಾವುದೇ ಕರೆ ಮಾಡುವ ಆಫರ್ ಆಗಲಿ. ಉಚಿತ SMS ಸೆಂಡ್ ಮಾಡುವ ಅವಕಾಶವನ್ನು ನೀಡಿಲ್ಲ.

ರೂ.2.51ಗೆ 1GB ಡೇಟಾ:

ರೂ.2.51ಗೆ 1GB ಡೇಟಾ:

ಈ ಪ್ಲಾನ್‌ನಲ್ಲಿ BSNL ತನ್ನ ಬಳಕೆದಾರರಿಗೆ ರೂ.2.51ಗೆ 1GB ಡೇಟಾವನ್ನು ನೀಡುತ್ತಿದ್ದು, ಈ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಸುನಾಮಿಯನ್ನು ಎಬ್ಬಿಸಲಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಇದಕ್ಕೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

ಜಿಯೋದಲ್ಲಿಯೂ ಇಲ್ಲ:

ಜಿಯೋದಲ್ಲಿಯೂ ಇಲ್ಲ:

BSNL ತನ್ನ ಬಳಕೆದಾರರಿಗೆ ರೂ.98ಕ್ಕೆ ನೀಡಿರುವ ಪ್ಲಾನ್‌ ಮಾದರಿಯಲ್ಲಿ ಜಿಯೋ ಸಹ ನೀಡುತ್ತಿದೆ. ಆದರೆ ಇದರಲ್ಲಿ BSNL ನೀಡಿದಷ್ಟು ಡೇಟಾ ಇಲ್ಲ ಎನ್ನಲಾಗಿದೆ. ಜಿಯೋ ತನ್ನ ಬಳಕೆದಾರರಿಗೆ ರೂ.98ಕ್ಕೆ ಕೇವಲ 2GB ಡೇಟಾವನ್ನು ಮಾತ್ರವೇ ನೀಡುತ್ತಿದೆ ಎನ್ನಲಾಗಿದೆ.

ಏರ್ಟೆಲ್ ಪ್ಲಾನ್:

ಏರ್ಟೆಲ್ ಪ್ಲಾನ್:

ಏರ್‌ಟೆಲ್ ಸಹ ಇದೇ ಮಾದರಿಯ ಪ್ಲಾನ್‌ ಹೊಂದಿದ್ದು, ರೂ,98ಕ್ಕೆ 6GB ಡೇಟಾವನ್ನು ಬಳಕೆಗೆ ನೀಡಲಿದೆ. ಆದರೆ BSNL ತನ್ನ ಬಳಕೆದಾರರಿಗೆ ರೂ.98ಕ್ಕೆ ನೀಡಿರುವ ಪ್ಲಾನ್‌ನ ಲ್ಲಿ ಇನ್ನು ಹೆಚ್ಚಿನದನ್ನು ನೀಡುತ್ತಿದೆ.

ನಷ್ಟವಿಲ್ಲ:

ನಷ್ಟವಿಲ್ಲ:

BSNL ತನ್ನ ಬಳಕೆದಾರರಿಗೆ ರೂ.98ಕ್ಕೆ ನೀಡಿರುವ ಪ್ಲಾನ್‌ನಲ್ಲಿ ಕರೆ ಮಾಡುವ ಅವಕಾಶ ಇಲ್ಲವಾದರೂ ನಿತ್ಯ ಹೆಚ್ಚಿನ ಡೇಟಾವನ್ನು ಬಳಕೆ ಮಾಡಿಕೊಳ್ಳುವವರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಇದರಿಂದ ಯಾವುದೇ ನಷ್ಟವಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
BSNL's new plan offers 1.5GB data per day at Rs 98. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot