ನಾಳೆ ಇತಿಹಾಸದ ಪುಟ ಸೇರುತ್ತಿದೆ BSNLನ ಒಂದು ಜನಪ್ರಿಯ ಸೇವೆ!

|

ಹೊಸ ಹೊಸ ತಂತ್ರಜ್ಞಾನಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಸರ್ಕಾರಿ ನಿಯಮಿತ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ ತನ್ನ ಪ್ರಮುಖ ಸೇವೆ ಒಂದನ್ನು ನಾಳೆಯಿಂದ ಕೊನೆಗೊಳಿಸುತ್ತಿದೆ. ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ 'ವೈರ್‌ಲೆಸ್‌ ಲ್ಯಾಂಡ್‌ ಲೈನ್‌' ಸೇವೆಗಳು ಇತಿಹಾಸದ ಪುಟ ಸೇರುವ ಕಾಲ ಇದೀಗ ಬಂದಾಗಿದೆ ಎಂದು BSNL ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹೌದು, ಒಂದು ಕಾಲದಲ್ಲಿ ಸುಧಾರಿತ ತಂತ್ರಜ್ಞಾನವಾಗಿ ಜಾರಿಗೆ ಬಂದಂತಹ ಸೇವೆಯೊಂದು ಈಗ ತನ್ನ ಕೊನೆಯ ದಿನದಲ್ಲಿದೆ. ಸುಧಾರಿತ ಹೊಸ ತಂತ್ರಜ್ಞಾನಕ್ಕೆ ಶರಣಾಗಿ ಬಳಕೆಯಿಂದ ಹಿಂದೆ ಸರಿಯುತ್ತಿರುವ 'ವೈರ್‌ಲೆಸ್‌ ಲ್ಯಾಂಡ್‌ ಲೈನ್‌' ಸೇವೆಯು ಭಾರೀ ನಷ್ಟದಲ್ಲಿ ನಡೆಯುತ್ತಿರುವುದರಿಂದಾಗಿ ಇದರ ಸಂಪರ್ಕ ಸೇವೆಯನ್ನು ಅಂತ್ಯಗೊಳಿಸಲು BSNL ಸಂಸ್ಥೆ ಮುಂದಾಗಿದೆ.

ನಾಳೆ ಇತಿಹಾಸದ ಪುಟ ಸೇರುತ್ತಿದೆ BSNLನ ಒಂದು ಜನಪ್ರಿಯ ಸೇವೆ!

ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ದೂರವಾಣಿ ಸಂಪರ್ಕ ಪಡೆಯಲು ಸಹಾಯ ಮಾಡಿದ್ದ 'ವೈರ್‌ಲೆಸ್‌ ಲ್ಯಾಂಡ್‌ ಲೈನ್‌' ಸೇವೆ 21ನೇ ಶತಮಾನದ ಆರಂಭದಲ್ಲಿ ಭಾರೀ ಹೆಸರಾಗಿತ್ತು. ಇಂತಹ ತಂತ್ರಜ್ಞಾನ ಮತ್ತೊಂದಿಲ್ಲ ಎಂಬಂತೆ ಹೆಸರಾಗಿದ್ದ ಈ ಸೇವೆಗೆ ಈಗ ಅಂತ್ಯ ಹಾಡಲಾಗುತ್ತಿದೆ. ಹಾಗಾದರೆ, ಏನಿದು ಇಂಟ್ರೆಸ್ಟಿಂಗ್ ವರದಿ ಎಂಬುದನ್ನು ಮುಂದೆ ಓದಿರಿ.

ವೈರ್‌ಲೆಸ್‌ ಸೇವೆ

ವೈರ್‌ಲೆಸ್‌ ಸೇವೆ

ಕೆಲವು ಆಯ್ದ ಪ್ರದೇಶಗಳಲ್ಲಿ ನೆಟ್‌ವರ್ಕ್‌ ಗೋಪುರಗಳು ಹಾಗೂ ತಂತಿ ಮಾರ್ಗದಲ್ಲಿ ಸ್ಥಿರ ದೂರವಾಣಿ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಮಯದಲ್ಲಿ ಕೋಡ್‌ ಡಿವಿಷನ್ ಮಲ್ಟಿಪಲ್ ಆಕ್ಸೆಸ್' ಆಧಾರಿತ ವೈರ್‌ಲೆಸ್‌ ಸಂಪರ್ಕ ಸೇವೆ ಕಲ್ಪಿಸಲು ಬಿಎಸ್‌ಎನ್‌ಎಲ್‌ ಮುಂದಾಗಿತ್ತು. ಇದು ಗುಡ್ಡಗಾಡು ಪ್ರದೇಶಗಳ ಜನರಿಗೆ ವರವಾದಂತಿತ್ತು.

ವೈರ್‌ಲೆಸ್ ನುಂಗಿತು ಮೊಬೈಲ್

ವೈರ್‌ಲೆಸ್ ನುಂಗಿತು ಮೊಬೈಲ್

ಟೆಲಿಕಾಂ ಸೇವೆ ಕಲ್ಪಿಸುವಲ್ಲಿ ಅಡೆತಡೆಗಳಿದ್ದ ಭಾಗದ ಗ್ರಾಹಕರಿಗೆ ಸೌಲಭ್ಯ ಕಲ್ಪಿಸಿದ್ದ ಬಿಎಸ್‌ಎನ್‌ಎಲ್‌, ದೂರವಾಣಿ ಕರೆಗಳು ಮಾತ್ರವಲ್ಲದೆ, ಇಂಟರ್ನೆಟ್ ಡಾಟಾ ಸೇವೆಯನ್ನೂ ಒದಗಿಸಿತ್ತು. ಆದರೆ, ಮೊಬೈಲ್ ಬಳಕೆ ಹೆಚ್ಚಾಗಿ ಕಾಲ ಬದಲಾದಂತೆ 21ನೇ ಶತಮಾನದ ಆರಂಭದಲ್ಲಿ ಬಾರೀ ಹೆಸರಾಗಿದ್ದ 'ವೈರ್‌ಲೆಸ್‌ ಲ್ಯಾಂಡ್‌ ಲೈನ್‌' ಮರೆಯಾಗುತ್ತಾ ಬಂದಿತು.

ನಷ್ಟದಲ್ಲಿದೆ ಸೇವೆ!

ನಷ್ಟದಲ್ಲಿದೆ ಸೇವೆ!

ಸಂವಹನ ಕ್ಷೇತ್ರದಲ್ಲಿನ ಕ್ರಾಂತಿ, ತಂತ್ರಜ್ಞಾನ ಬದಲಾವಣೆ, ಮೊಬೈಲ್ ಆಗಮನದಿಂದಾಗಿ ಇತ್ತೀಚಿಗೆ ಡಬ್ಲ್ಯೂಎಲ್‌ಎಲ್‌ ಸಂಪರ್ಕ ಪಡೆಯುವವರ ಸಂಖ್ಯೆ ಬಾರೀ ಕಡಿಮೆಯಾಗಿದೆ. ಮೊಬೈಲ್‌ ಬಳಕೆ ಹೆಚ್ಚಾದಂತೆ ವೈರ್‌ಲೆಸ್‌ ಲ್ಯಾಂಡ್‌ ಲೂಪ್‌ ಸೇವೆ ಆಕರ್ಷಣೆ ಕಳೆದುಕೊಂಡಿದ್ದು, ಈ ಸೇವೆ ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ.

30,000 ಸಂಪರ್ಕ ಮಾತ್ರ!

30,000 ಸಂಪರ್ಕ ಮಾತ್ರ!

ಗ್ರಾಹಕರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಈ ಸೇವೆ ಸ್ಥಗಿತಗೊಂಡಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ 30,000ಕ್ಕೂ ಹೆಚ್ಚು ಸಂಪರ್ಕ ಬಾಕಿ ಉಳಿದಿವೆ. ಹಾಗಾಗಿ, ಈ ಸೇವೆಯು ಬಹುಪಾಲು ನಷ್ಟದಲ್ಲಿರುವುದರಿಂದ ಸ್ಥಗಿತಗೊಳಿಸಲು ಬಿಎಸ್‌ಎನ್ಎಲ್‌ ನಿರ್ಧರಿಸಿದೆ. ಅದರಂತೆ ಸೆ.6ಕ್ಕೆ ಈ ಸೇವೆ ಸ್ಥಗಿತವಾಗುತ್ತಿದೆ.

ನೋಟಿಸ್ ನೀಡಲಾಗಿದೆ

ನೋಟಿಸ್ ನೀಡಲಾಗಿದೆ

'ವೈರ್‌ಲೆಸ್‌ ಲ್ಯಾಂಡ್‌ ಲೈನ್‌' ಸೇವೆ ಸ್ಥಗಿತ ಸಂಬಂಧ ತಿಂಗಳ ಹಿಂದೆಯೇ ಗ್ರಾಹಕರಿಗೆ ಬಿಎಸ್‌ಎನ್ಎಲ್ ನೋಟಿಸ್ ನೀಡಿದೆ. 'ವೈರ್‌ಲೆಸ್‌ ಲ್ಯಾಂಡ್‌ ಲೈನ್‌' ಸೇವೆ ಬದಲಾಗಿ ಸಂಸ್ಥೆಯ ಬೇರೆ ಸೆವೆಗಳನ್ನು ಬಳಸಲು ಕೋರಿದೆ. ಒಂದೊಮ್ಮೆ ಗ್ರಾಹಕರು ಮೊಬೈಲ್‌ ಸಂಪರ್ಕ ಬಯಸಿದರೆ ಸಿಮ್ ಮತ್ತು ಸ್ಥಿರ ದೂರವಾಣಿ ವಿತರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಶೇ.99ರಷ್ಟು ನಷ್ಟ!

ಶೇ.99ರಷ್ಟು ನಷ್ಟ!

ರಾಜ್ಯದಲ್ಲಿ ಬಳಕೆಯಲ್ಲಿರುವ ಸ್ಥಿರ ದೂರವಾಣಿ ಸಂಪರ್ಕದ ಪೈಕಿ ಶೇ.3ರಷ್ಟು ಮಾತ್ರ 'ವೈರ್‌ಲೆಸ್‌ ಲ್ಯಾಂಡ್‌ ಲೈನ್‌' ಸೇವೆ ಬಳಕೆಯಲ್ಲಿದೆ. ಇದರಲ್ಲೂ ಕೂಡ ಗ್ರಾಹಕರು ಬಳಸದೇ ಇರುವ ಸಮಪರ್ಕಗಳು ಹೆಚ್ಚಿವೆ. ಕೆಲ ಬಳಕೆದಾರರು ಬಳಸಿದರೂ ಸಹ ಶುಲ್ಕ ಪಾವತಿ ಮಾಡುತ್ತಿಲ್ಲ. ಹಾಗಾಗಿ, ವೈರ್‌ಲೆಸ್‌ ಲ್ಯಾಂಡ್‌ ಲೈನ್‌ಸೇವೆ ಶೇ.99ರಷ್ಟು ನಷ್ಟದಲ್ಲಿದೆ.

ಮೂರು ತಿಂಗಳು ಉಚಿತ ಸೇವೆ?

ಮೂರು ತಿಂಗಳು ಉಚಿತ ಸೇವೆ?

'ವೈರ್‌ಲೆಸ್‌ ಲ್ಯಾಂಡ್‌ ಲೈನ್‌' ಸೇವೆಗೆ ಪರ್ಯಾಯವಾಗಿ ಪಡೆಯುವ ಸೇವೆಗಳಿಗೆ ಆರಂಭಿಕ ಮೂರು ತಿಂಗಳ ಕಾಲ ಉಚಿತ ಸೇವೆ ನೀಡಿ ನಂತರ ಶುಲ್ಕ ವಿಧಿಸುವ ಬಗ್ಗೆಯೂ ಬಿಎಸ್‌ಎನ್ಎಲ್ ಸಂಸ್ಥೆಯಲ್ಲಿ ಚರ್ಚೆ ನಡೆದಿದೆ ಎಂದು ಬಿಎಸ್‌ಎನ್‌ಎಲ್‌ ಮೂಲಗಳು ತಿಳಿಸಿವೆ. ಆದರೆ, ಈ ಸುದ್ದಿಯ ಹೆಚ್ಚಿನ ವಿಷಯಗಳು ಇ ವರೆಗೂ ಹೊರಬಿದ್ದಿಲ್ಲ.

Best Mobiles in India

English summary
BSNL's Popular Service will be discountinued from tomorrow.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X