ಬಿಎಸ್ಎನ್ಎಲ್ ಗ್ರಾಹಕರೇ ಕೂಡಲೇ ಪಾಸ್ವರ್ಡ್ ಬದಲಾಯಿಸಿ, ಇಲ್ಲವಾದಲ್ಲಿ ಕಾದಿದೆ ಗಂಡಾಂತರ!!

2000 ಬಿಎಸ್ಎನ್ಎಲ್ ಮೋಡಂಗಳಿಗೆ ತಟ್ಟಿದ ಮಾಲ್ವೇರ್(malware) ವೈರಸ್. ಇದರಿಂದ ಮುಕ್ತಿಯಾಗಲು ಎಲ್ಲಾ ಬಳಕೆದಾರರು ತಮ್ಮ ಪಾಸ್ವರ್ಡ್ ಬದಲಾಯಿಸುವಂತೆ ಸಲಹೆ ನೀಡಿದ ಬಿಎಸ್ಎನ್ಎಲ್.

By Prathap T
|

ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಮೋಡಮ್ಗಳಿಗೆ ಮಾಲ್ವೇರ್ ವೈರಸ್ ದಾಳಿಗೆ ತುತ್ತಾದ ಹಿನ್ನಲೆಯಲ್ಲಿ ಕೂಡಲೇ ಎಲ್ಲಾ ಬಳಕೆದಾರರು ಡಿಫಾಲ್ಟ್ ಸಿಸ್ಟಮ್ ಪಾಸ್ವರ್ಡ್ ಅನ್ನು ಕೂಡಲೇ ಬದಲಾಯಿಸುವಂತೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಸಲಹೆ ಕೊಟ್ಟಿದೆ.

ಪಾಸ್ವರ್ಡ್ ಬದಲಾಯಿಸುವಂತೆ ಸಲಹೆ ನೀಡಿದ ಬಿಎಸ್ಎನ್ಎಲ್

ಸುಮಾರು 2000 ಬ್ರಾಡ್ ಬ್ಯಾಂಡ್ ಮೋಡಮ್ ಬಳಕೆದಾರರು ತಮ್ಮ ಡಿಫಾಲ್ಟ್ 'ಅಡ್ಮಿನ್’ ಪಾಸ್ವರ್ಡ್ ಅನ್ನು ಬದಲಾಯಿಸದೆ ಇದ್ದ ಪರಿಣಾಮ ಮಾಲ್ವೇರ್ ವೈರಸ್ ತಗಲಿಕೆಗೆ ಕಾರಣ ಎಂದು ಪಿಟಿಐ ವರದಿ ಮಾಡಿದೆ.

ಗ್ರಾಹಕರು ತಮ್ಮ ಪಾಸ್ವರ್ಡ್ಗಳನ್ನು ತಕ್ಷಣ ಬದಲಾಯಿಸಬೇಕೆಂದು ನಾವು ಸಲಹೆ ನೀಡುತ್ತೇವೆ. ಪಾಸ್ವರ್ಡ್ ಬದಲಾಯಿಸಿದ ನಂತರ ಗ್ರಾಹಕರು ಚಿಂತಿಸಬೇಕಾದ ಅಗತ್ಯವಿಲ್ಲ. ಯಾವುದೇ ತೊಂದರೆಯಿಲ್ಲದಂತೆ ಬ್ರಾಡ್ಬ್ಯಾಂಡ್ ಬಳಕೆ ಮಾಡಲು ಮುಂದಾಗುವಂತೆ ಬಿಎಸ್ಎನ್ಎಲ್ ಅಧ್ಯಕ್ಷ ಅನುಪಮ್ ಶ್ರೀವಾಸ್ತವ ಹೇಳಿಕೆ ನೀಡುವುದಾಗಿ ಪಿಟಿಐ ವರದಿ ಮಾಡಿದೆ.

ಮತ್ತೆ ತಾರಕಕ್ಕೇರಿದ ದರಸಮರ!..ಬಂಪರ್ ಆಫರ್ ಬಿಡುಗಡೆ ಮಾಡಿದ ಏರ್‌ಟೆಲ್ !!ಮತ್ತೆ ತಾರಕಕ್ಕೇರಿದ ದರಸಮರ!..ಬಂಪರ್ ಆಫರ್ ಬಿಡುಗಡೆ ಮಾಡಿದ ಏರ್‌ಟೆಲ್ !!

ಗಮನಿಸಬೇಕಾದ ವಿಷಯವೆಂದರೆ, ಮಾಲ್ವೇರ್ಸ್ ಬಿಎಸ್ಎನ್ಎಲ್ನ ಪ್ರಮುಖ ನೆಟ್ವರ್ಕ್, ಬಿಲ್ಲಿಂಗ್ ಅಥವಾ ಯಾವುದೇ ಇತರೆ ವ್ಯವಸ್ಥೆ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ವೈರಸ್ ದಾಳಿ ಸಮಯದಲ್ಲಿ ಮಾಲ್ವೇರ್ ಬಳಕೆದಾರರ ಪಾಸ್ವರ್ಡ್ಗಳನ್ನು ಬದಲಿಸುತ್ತಿದೆ (ಅಡ್ಮಿನ್ ಪಾಸ್ವರ್ಡ್ ಎಂದು ಬಳಸುತ್ತಿರುವವರು) ಮತ್ತು ಈ ರೀತಿ ತೊಂದರೆಗೊಳಗಾದ ಮೊಡೆಮ್ ಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಾಸ್ವರ್ಡ್ ಬದಲಾಯಿಸಿದರೆ ಎಲ್ಲಾ ಸರಿಯಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ವಾರದ ಹಿಂದೆಯೇ ಈ ರೀತಿ ಮಾಲ್ವೇರ್ ವೈರಸ್ ದಾಳಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಎಸ್ಎನ್ಎಲ್ ಎಲ್ಲಾ ಗ್ರಾಹಕರಿಗೂ ಮುಂಚಿತವಾಗಿ ಮಾಹಿತಿ ನೀಡುವ ಮೂಲಕ ಆಗಬಹುದಾದ ಬಹುದೊಡ್ಡ ತೊಂದರೆಯನ್ನು ತಡೆಗಟ್ಟಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಮಾಲ್ವೇರ್ ವೈರಸ್ ದಾಳಿ ಇದೇ ಮೊದಲೇನಲ್ಲ. ಆಗಾಗ್ಗೆ ಕೆಲವು ಕಂಪನಿಗಳ ಮೇಲೆ ದಾಳಿ ನಡೆಸಿದೆ. ಇತ್ತೀಚೆಗೆ ಕಳೆದ ಮೇ ತಿಂಗಳಲ್ಲಿ ರಿಲಾಯನ್ಸ್ ಜಿಯೋನ ಹ್ಯಾಕಿಂಗ್ ದಾಳಿಗೆ ತುತ್ತಾಗಿ ಚಂದಾದಾರರ ಹೆಸರು, ಮೊಬೈಲ್, ಇಮೇಲ್ ಮತ್ತು ಸಿಮ್ ಸಕ್ರಿಯಗೊಳಿಸುವಿಕೆಯ ವಿವರಗಳನ್ನು ಬಹಿರಂಗಪಡಿಸಿದ್ದನ್ನು ಸ್ಮರಿಸಬಹುದು.

ಏನೇ ಆಗಲಿ, ಈ ಬಗ್ಗೆ ಕಂಪನಿಯು "ಪರಿಶೀಲಿಸದ ಮತ್ತು ದೃಢೀಕರಿಸದ ಹಕ್ಕುಗಳ ಉಲ್ಲಂಘನೆ’ಯಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

Best Mobiles in India

Read more about:
English summary
The company said that reports of a breach of "unverified and unsubstantiated claims".

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X