BSNL ಕೊಡುವ ಹೊಡೆತಕ್ಕೆ ಜಿಯೋ ಮಾತ್ರವಲ್ಲ, ಟೆಲಿಕಾಂ ಲೋಕವೇ ಅಲ್ಲೋಲ-ಕಲ್ಲೋಲ..!

|

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಮಾಡಿದ ಕ್ರಾಂತಿಕಾರಿ ಬದಲಾವಣೆಯನ್ನು ಮತ್ತೆ ನೆನಪಿಸುವ ಮಾದರಿಯಲ್ಲಿ ಸರಕಾರಿ ಸ್ವಾಮ್ಯದ BSNL, ಬ್ರಾಡ್ ಬ್ಯಾಂಡ್ ಲೋಕದಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲು ಮುಂದಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಮಾಡಲು ಸಾಧ್ಯವಾಗದಂತಹ ಪ್ರಯೋಗಕ್ಕೆ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (BSNL) ಯೋಜನೆಯನ್ನು ರೂಪಿಸಿದೆ.

BSNL ಕೊಡುವ ಹೊಡೆತಕ್ಕೆ ಜಿಯೋ ಮಾತ್ರವಲ್ಲ, ಟೆಲಿಕಾಂ ಲೋಕವೇ ಅಲ್ಲೋಲ-ಕಲ್ಲೋಲ..!

ಈಗಾಗಲೇ ಟೆಲಿಕಾಂ ಲೋಕದಲ್ಲಿ ಸಾಕಷ್ಟು ಬದಲಾವಣೆಯೂ ಸಾಧ್ಯವಾಗಿದೆ. ಇದೇ ಮಾದರಿಯಲ್ಲಿ ಬ್ರಾಡ್ ಬ್ಯಾಂಡ್ ಲೋಕದಲ್ಲಿ ಮಹತ್ವದ ಬದಲಾವಣೆಗೆ BSNL ಕಾರಣವಾಗಲಿದೆ. ದೇಶದ ಮೂಲೆ ಮೂಲೆಗೂ ಇಂಟರ್ನೆಟ್ ಸೇವೆಯನ್ನು ನೀಡಬೇಕು ಎನ್ನುವ ಕಾರಣಕ್ಕೆ ವಿಶ್ವದಲ್ಲಿಯೇ ಅತೀ ವೇಗವಾಗಿ ಇಂಟರ್ನೆಟ್ ಸೇವೆಯನ್ನು ನೀಡಲು BSNL ಒನ್‌ವೆಬ್ ಸೇವೆಯ ಎರವರಲು ಪಡೆಯಲು ಮುಂದಾಗಿದೆ ಎನ್ನುವ ಸುದ್ದಿ ಲಭ್ಯವಾಗಿದೆ.

ಅಲ್ಲೋಲ-ಕಲ್ಲೋಲ

ಅಲ್ಲೋಲ-ಕಲ್ಲೋಲ

BSNL ಈ ಹೊಸ ಸೇವೆಯನ್ನು ದೇಶದಲ್ಲಿ ಆರಂಭಿಸಲು ಮುಂದಾದರೆ ಇದು ಭಾರತದ ದೂರಸಂಪರ್ಕ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೆ ಎಂದೂ ಕಾಣದ ಅಲ್ಲೋಲ-ಕಲ್ಲೋಲ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ.

ಇಂಟರ್‌ನೆಟ್ ಅವಶ್ಯಕತೆ:

ಇಂಟರ್‌ನೆಟ್ ಅವಶ್ಯಕತೆ:

ಮುನುಕುಲದ ವಿಕಾಸಕ್ಕೆ ಪಂಚಭೂತಗಳಂತೆ ಇಂಟರ್ನೆಟ್ ಸಹ ಅವಶ್ಯವಾಗಿದ್ದು, ಈ ಹಿನ್ನಲೆಯಲ್ಲಿ ಭೂಮಿಯಲ್ಲಿ ಯಾವುದೇ ಮೂಲೆಗೆ ಹೋದರು ಇಂಟರ್ನೆಟ್ ಕನೆಷನ್ ಸಿಗುವಂತೆ ಮಾಡುವು ಉದ್ದೇಶ ಇದಾಗಿದೆ.

ಬಿಲ್‌ಗೇಟ್ಸ್‌ ಕನಸು:

ಬಿಲ್‌ಗೇಟ್ಸ್‌ ಕನಸು:

ಏರ್‌ಬಸ್‌ ಮತ್ತು ಸಾಫ್ಟ್‌ಬ್ಯಾಂಕ್‌ ಕಂಪನಿಗಳು ಹಾಗೂ ಉದ್ಯಮಿ ಬಿಲ್‌ ಗೇಟ್ಸ್‌ ಸೇರಿಕೊಂಡು ಒನ್‌ವೆಬ್‌ ಎಂಬ ಕಂಪನಿಯೊಂದನ್ನು ಆರಂಭಿಸಿದ್ದು, ಇದು ಸ್ಯಾಟಿಲೈಟ್ ಮೂಲಕ ಇಡೀ ವಿಶ್ವಕ್ಕೆ ಇಂಟರ್ನೆಟ್ ಸೇವೆಯನ್ನು ನೀಡುವ ಯೋಜನೆಯಾಗಿದೆ.

850 ಉಪಗ್ರಹಗಳು:

850 ಉಪಗ್ರಹಗಳು:

ಕಳೆದ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಜಿಯೋ ಸ್ಟ್ರಾಮ್ ಸಿನಿಮಾದಲ್ಲಿ ಭೂಮಿಗೆ ಸ್ಯಾಟಿಲೈಟ್ ಹೊದಿಕೆಯನ್ನು ಹೊದಿಸುವ ಮಾದರಿಯಲ್ಲಿಯೇ ಇಂಟರ್ ನೆಟ್ ಪಡೆಯುವ ಸಲುವಾಗಿ ಭೂಮಿಯಿಂದ 150-200 ಕಿ.ಮೀ. ಎತ್ತರದಲ್ಲಿ 850 ಉಪಗ್ರಹಗಳ ಗುಚ್ಛವೊಂದನ್ನು ಸ್ಥಾಪಿಸುವ ಯೋಜನೆ ಒನ್‌ವೆಬ್‌ ಎನ್ನಲಾಗಿದ್ದು, ಇವು ಸಂಪರ್ಕ ಉಪಗ್ರಹಗಳಾಗಿದ್ದು, ಭೂಮಂಡಲದ ಮೂಲೆ ಮೂಲೆಗೆ ಅತ್ಯಂತ ವೇಗದ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ನೀಡುತ್ತವೆ.

ಒನ್‌ವೆಬ್‌ನೊಂದಿಗೆ BSNL:

ಒನ್‌ವೆಬ್‌ನೊಂದಿಗೆ BSNL:

ಈ ಒನ್‌ವೆಬ್‌ ನೀಡಲು ಮುಂದಾಗಿರುವ ಸ್ಯಾಟಿಲೈಟ್ ಇಂಟರ್‌ನೆಟ್ ಸೇವೆಯನ್ನು ತಾನು ಬಳಸಿಕೊಳ್ಳಲು BSNL, ಸಾಫ್ಟ್‌ಬ್ಯಾಂಕ್‌ ಜತೆ ಮಾತುಕತೆ ನಡೆಸುತ್ತಿದೆ ಎನ್ನುವ ವಿಚಾರವು ಲಭ್ಯವಾಗಿದೆ. ಕಳೆದ ವಾರವಷ್ಟೇ ಜಪಾನ್‌ನಲ್ಲಿ ಮೊದಲ ಸುತ್ತಿನ ಸಭೆ ನಡೆದಿದ್ದು, ಒಪ್ಪಂದಕ್ಕೆ ಸಹಿ ಸಹ ಬಿದ್ದಿದೆ ಎನ್ನಲಾಗಿದೆ.

ಹೈಸ್ಪೀಡ್‌ ಇಂಟರ್ನೆಟ್‌ ಮಾತ್ರವಲ್ಲ:

ಹೈಸ್ಪೀಡ್‌ ಇಂಟರ್ನೆಟ್‌ ಮಾತ್ರವಲ್ಲ:

ಒನ್‌ವೆಬ್‌ನಿಂದ ಕೇವಲ ಹೈಸ್ಪೀಡ್‌ ಇಂಟರ್ನೆಟ್‌ ಮಾತ್ರವಲ್ಲ, ಸ್ಪಷ್ಟವಾದ ಕರೆಗಳು, TV ಚಾನಲ್‌ಗಳು, FM ಚಾನಲ್‌ಗಳು ಹಾಗೂ ಇನ್ನೂ ಹಲವಾರು ಸೇವೆಗಳು ಸಿಗಲಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಯೂ ಆಗಲಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಫೈಬರ್‌-ಟವರ್‌ ಬೇಡ:

ಫೈಬರ್‌-ಟವರ್‌ ಬೇಡ:

ಇದಲ್ಲದೇ ಒನ್‌ವೆಬ್‌ನ ಇಂಟರ್ನೆಟ್‌ ಬ್ಯಾಂಡ್‌ವಿಡ್ತ್ (ತರಂಗಾಂತರ) ಸ್ವೀಕರಿಸಲು ಮೊಬೈಲ್‌ ಟವರ್‌ಗಳು ಬೇಕಾಗಿಲ್ಲ. ಸಣ್ಣದೊಂದು ಉಪಕರಣ ಸಾಕು. ಅಲ್ಲದೆ, ಆಪ್ಟಿಕಲ್‌ ಫೈಬರ್‌ ಕೇಬಲ್‌ ಹಾಗೂ ಟೆಲಿಫೋನ್‌ ತಂತಿಗಳನ್ನೂ ಬೇಡ ಎನ್ನಲಾಗಿದ್ದು, ಇದು ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ.

Best Mobiles in India

English summary
BSNL in talks with SoftBank for using OneWeb's satellites. to know kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X