ಬಿಎಸ್‌ಎನ್‌ಎಲ್‌ನಿಂದ 3ಜಿ ಡೇಟಾ ರೂ 50 ಕ್ಕೆ
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಬಳಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದ್ದು ಕಡಿಮೆ ದರದ 3 ಜಿ ಯೋಜನೆಯನ್ನು ಅಂದರೆ 3 ಜಿ ಡೇಟಾದ 20 ಜಿಬಿಯನ್ನು ರೂ 50 ಕ್ಕೆ ಸಾದರ ಪಡಿಡುವ ನಿಟ್ಟಿನಲ್ಲಿದೆ. ಬಳಕೆದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ನೆಟ್ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂಬ ನಿರ್ಧಾರವನ್ನು ಕಂಪೆನಿ ಹಮ್ಮಿಕೊಂಡಿದ್ದು ಅದಕ್ಕಾಗಿ ಈ ಯೋಜನೆಯನ್ನು ರೂಪಿಸಿದೆ.
ಈ ಯೋಜನೆಯನ್ನು ಇನ್ನಷ್ಟು ಬಳಕೆದಾರರು ಹಂಚಿಕೊಳ್ಳುವಂತಹ ಅನುಮತಿಯನ್ನು ಕಂಪೆನಿ ನೀಡಿದೆ. ಭಾರತದ ಯಾವ ಮೂಲೆಯಲ್ಲಿ ಕೂಡ ಬಳಕೆದಾರರು ಈ ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ. ಬಿಎಸ್‌ಎನ್‌ಎಲ್ ಪೋರ್ಟಲ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡ ಪ್ರಾಥಮಿಕ ಬಳಕೆದಾರರು ಸಂಪೂರ್ಣ ಪಾವತಿಯನ್ನು ಮಾಡಬೇಕಾಗುತ್ತದೆ ಅಂತೆಯೇ ಇತರರು ಇಂಟರ್ನೆಟ್ ಸೇವೆಗಳನ್ನು ಬಳಸಲು ಪಾವತಿಸಬೇಕಾಗುತ್ತದೆ.

#1
ನರೇಂದ್ರ ಮೋದಿ ಸರಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ ಬೆಂಬಲವಾಗಿ ಕಂಪೆನಿ ಈ ಯೋಜನೆಯನ್ನು ಬಳಕೆದಾರರಿಗೆ ಪ್ರಸ್ತುತಪಡಿಸಿದೆ. ಅಂತೆಯೇ ಸಾಧ್ಯವಾದಷ್ಟು ಕೈಗೆಟಕುವ ಬೆಲೆಯಲ್ಲಿ ಬಳಕೆದಾರರಿಗೆ ಇಂಟರ್ನೆಟ್ ಸೇವೆಯನ್ನು ಒದಗಿಸುವುದು ಕಂಪೆನಿಯ ಗುರಿಯಾಗಿದೆ.

#2
ಇತರ ಟೆಲಿಕಾಮ್ ಆಪರೇಟರ್‌ಗಳು 1 ಜಿಬಿ ಡೇಟಾಕ್ಕಾಗಿ ರೂ 200 ಅನ್ನು ನಿಗದಿಪಡಿಸಿದ್ದು ಬಿಎಸ್‌ಎನ್‌ಎಲ್ ಅತಿ ಕಡಿಮೆ ದರವನ್ನು ಬಳಕೆದಾರರಿಗೆ ನಿಯೋಜಿಸಿದೆ.

#3
ಬೆಲೆ ಮತ್ತು ಹಂಚಿಕೆ ಸೌಲಭ್ಯಗಳ ಮೂಲಕ ಇದು ಇನ್ನಷ್ಟು ಬಳಕೆದಾರರನ್ನು ತಲುಪಲಿದೆ ಎಂಬುದು ಕಂಪೆನಿಯ ನಿಲುವಾಗಿದೆ.

#4
ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಪಡೆಯಲು ತೊಂದರೆಯುಳ್ಳವರು ಈ ಯೋಜನೆಯ ಫಲವನ್ನು ಬಳಸಿಕೊಳ್ಳಬಹುದಾಗಿದೆ.

#5
ದೇಶದಲ್ಲಿ 100 ಶೇಕಡಾ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಸರಕಾರದ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಸಹಕಾರವನ್ನು ನೀಡುತ್ತಿದ್ದೇವೆ. ನಗರದಲ್ಲಿರುವವರಿಗೂ ಈ ಯೋಜನೆ ಲಭ್ಯವಿದ್ದು ಇಂಟರ್ನೆಟ್ ಪ್ಯಾಕೇಜ್ ಎಲ್ಲಾ ಬಳಕೆದಾರರೂ ಉಪಯೋಗಿಸಬಹುದಾಗಿದೆ ಎಂಬುದಾಗಿ ಬಿಎಸ್‌ಎನ್‌ಎಲ್ ಮ್ಯಾನೇಜರ್ ರಾಮ್ ಶಾಬ್ದ್ ಯಾದವ್ ತಿಳಿಸಿದ್ದಾರೆ.

#6
ಹೆಚ್ಚು ವೇಗದ ಬ್ರ್ಯಾಡ್‌ಬ್ಯಾಂಡ್‌ನೊಂದಿಗೆ 1 ಲಕ್ಷ ಪಂಚಾಯತ್‌ಗಳನ್ನು ಸಂಪರ್ಕಪಡಿಸುವ ಗುರಿಯನ್ನು ಬಿಎಸ್‌ಎನ್‌ಎಲ್ ಈಗಾಗಲೇ ಹಮ್ಮಿಕೊಂಡಿದೆ.

#7
ಸಂಸ್ಥೆಯು ಆದಷ್ಟು ಬೇಗನೇ 14 ವಲಯಗಳಲ್ಲಿ 4 ಜಿ ಸೇವೆಗಳನ್ನು ಆರಂಭಿಸುತ್ತಿದೆ. ದೇಶದಲ್ಲಿ ಹೆಚ್ಚಿನ ರಾಜ್ಯಗಳು ಬಜೆಟ್ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








