Subscribe to Gizbot

ಜಿಯೋ ಪ್ರೈಮ್‌ ಆಫರ್‌ಗೆ ಸೆಡ್ಡು ಹೊಡೆಯುವ ಪ್ಲಾನ್‌ ಘೋಷಣೆ ಮಾಡಿದ BSNL

Written By:

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ದರ ಸಮರಕ್ಕೆ ಖಾಸಗಿ ಟೆಲಿಕಾಂ ಕಂಪನಿಗಳ ಸರಿ ಸಮವಾಗ ಸ್ಪರ್ಧಿಸುತ್ತಿರುವ ಸರಕಾರಿ ಸ್ವಾಮ್ಯದ BSNL, ಮಾರುಕಟ್ಟೆಗೆ ಒಮ್ಮೆಗೆ ಹಲವು ಪ್ಲಾನ್‌ಗಳನ್ನು ಪರಿಚಯ ಮಾಡಿದ್ದು, ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಈಗಾಗಲೇ ಬಳಕೆದಾರರ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವಲ್ಲಿ BSNL ಮುಂದಿದ್ದು, ಈ ಹೊಸ ಪ್ಲಾನ್‌ನಿಂದಾಗಿ ಇಷ್ಟು ಬಳಕೆದಾರರು BSNL ಕಡೆಗೆ ಆಕರ್ಷಿತರಾಗುವ ಸಾಧ್ಯತೆ ಇದೆ.

 ಜಿಯೋ ಪ್ರೈಮ್‌ ಆಫರ್‌ಗೆ ಸೆಡ್ಡು ಹೊಡೆಯುವ ಪ್ಲಾನ್‌ ಘೋಷಣೆ ಮಾಡಿದ BSNL

BSNL ರೂ.118 ಪ್ಲಾನ್ ಘೋಷಣೆ ಮಾಡಿದ್ದು, 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಆಫರ್ ನಲ್ಲಿ ಬಳಕೆದಾರರು 1GB 3G/4G ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದರಲ್ಲಿ ಅನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶವನ್ನು BSNL ಮಾಡಿಕೊಟ್ಟಿದೆ. ಇದು ಜಿಯೋ ನೀಡಿರುವ ರೂ.98ರ ಪ್ಲಾನ್‌ಗೆ ಸೆಡ್ಡು ಹೊಡೆಯಲಿದೆ.

ಇದಲ್ಲದೇ ಜಿಯೋ-ಏರ್‌ಟೆಲ್ ಗಿಂತಲೂ ಉತ್ತಮ ಆಫರ್ ಘೋಷಿಸಿರುವ BSNL, ಪ್ರತಿ ನಿತ್ಯ 4GB ಡೇಟಾವನ್ನು 30 ದಿನಗಳ ಕಾಲಕ್ಕೆ ನೀಡುತ್ತಿದ್ದು, ಬಳಕೆದಾರರು ರೂ.378ಕ್ಕೆ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಇದರಲ್ಲಿ BSNL ಟು BSNL ಉಚಿತ ಕೆರೆಗಳನ್ನು ಮಾಡಬಹುದಾಗಿದೆ.

 ಜಿಯೋ ಪ್ರೈಮ್‌ ಆಫರ್‌ಗೆ ಸೆಡ್ಡು ಹೊಡೆಯುವ ಪ್ಲಾನ್‌ ಘೋಷಣೆ ಮಾಡಿದ BSNL

ರೂ.399 ಪ್ಲಾನ್‌ವೊಂದನ್ನು ಘೋಷಣೆ ಮಾಡಿರುವ BSNL, ಪ್ರತಿ ನಿತ್ಯ 1.5GB 4G ಡೇಟಾವನ್ನು ಬಳಕೆಗೆ ನೀಡಲಿದ್ದು, 70 ದಿನಗಳ ವ್ಯಾಲಿಡಿಟಿಯಲ್ಲಿ ಬಳಕೆದಾರರು ಉಚಿತ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?

ಇದೇ ಮಾದರಿಯಲ್ಲಿ BSNL ರೂ.551 ಪ್ಲಾನ್‌ ನಲ್ಲಿ 1.5GB ಡೇಟಾವನ್ನು 4G ವೇಗದಲ್ಲಿ ನೀಡಲಿದ್ದು, ಇದು 84ದಿನಗಳ ವ್ಯಾಲಿಡಿಯನ್ನು ಹೊಂದಿದ ಎನ್ನಲಾಗಿದೆ. ಇದರೊಂದಿಗೆ ರೂ.485 ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ 90 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1GB ಡೇಟಾ ಬಳಕೆಗೆ ದೊರೆಯಲಿದೆ.

English summary
BSNL Unveils Prepaid Packs. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot