Home
ಸುದ್ದಿಜಾಲ

ರೂ.29ರ ಪ್ಲಾನ್ ನಲ್ಲಿ ಶೇ.50 ರಷ್ಟು ಡಾಟಾ ಕಡಿಮೆಗೊಳಿಸಿದ ಬಿಎಸ್ಎನ್ಎಲ್

ಇತರೆ ಟೆಲಿಕಾಂ ಆಪರೇಟರ್ ಗಳಿಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ಇತ್ತೀಚೆಗೆ ಬಹಳ ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸಿದೆ.ಹೊಸ ಪ್ಲಾನ್ ನ್ನು ಪರಿಚಯಿಸುವ ಬದಲಾಗಿ ಹಳೆಯ ಪ್ಲಾನ್ ಗಳನ್ನು ಮರುಪರಿಶೀಲನೆ ಮಾಡಿ ಬಿಡುಗಡೆಗೊಳಿಸಿದೆ. ಅದರಲ್ಲಿ ಎಂಟ್ರಿ ಲೆವೆಲ್ ಪ್ಲಾನ್ ಆಗಿರುವ ರೂ.29 ರ ಪ್ರೀಪೇಯ್ಡ್ ಪ್ಲಾನ್ ಕೂಡ ಸೇರಿದೆ.

ಬದಲಾದ ರೂ.29 ಬಿಎಸ್ಎನ್ಎಲ್ ಪ್ಲಾನ್:

ಬದಲಾದ ರೂ.29 ಬಿಎಸ್ಎನ್ಎಲ್ ಪ್ಲಾನ್:

ಹೊಸದಾಗಿ ಬದಲಾವಣೆ ಮಾಡಿರುವ ಈ ಪ್ಲಾನಿನ ಪ್ರಕಾರ ಬಿಎಸ್ಎನ್ಎಲ್ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ಅನಿಯಮಿತವಾಗಿ ನೀಡುತ್ತಿದ್ದು ಯಾವುದೇ ಎಫ್ ಯುಪಿ ಲಿಮಿಟ್ ಇರುವುದಿಲ್ಲ. ದರೆ ದೆಹಲಿ ಹಾಗೂ ಮುಂಬೈ ಸರ್ಕಲ್ ನಲ್ಲಿರುವವರಿಗೆ ಸಾಮಾನ್ಯ ಶುಲ್ಕಗಳನ್ನು ವಿಧಿಸಲಾಗುತ್ತದೆ. ಈ ಪ್ಲಾನ್ 7 ದಿನಗಳ ಅವಧಿಯನ್ನು ಹೊಂದಿದ್ದು 300 ಎಸ್ಎಂಎಸ್ ಗಳನ್ನು ಉಚಿತವಾಗಿ ನೀಡುತ್ತದೆ. ಈ ಪ್ಲಾನ್ ನ ಅಡಿಯಲ್ಲಿ ಗ್ರಾಹಕರಿಗೆ 1ಜಿಬಿ ಡಾಟಾ ಕೂಡ ಉಚಿತವಾಗಿ ಲಭ್ಯವಾಗುತ್ತದೆ.

ಹಳೆಯ ಪ್ಲಾನ್ ನಲ್ಲಿ ಏನಿತ್ತು?

ಹಳೆಯ ಪ್ಲಾನ್ ನಲ್ಲಿ ಏನಿತ್ತು?

ಈ ಬದಲಾವಣೆಗೂ ಮುನ್ನ 29 ರುಪಾಯಿ ಬಿಎಸ್ಎಲ್ಎಲ್ ಪ್ಲಾನ್ ನಲ್ಲಿ 100ಎಸ್ಎಂಎಸ್ ಪ್ರತಿದಿನ ಉಚಿತವಾಗಿರುತ್ತಿತ್ತು ಮತ್ತು 2ಜಿಬಿ ಡಾಟಾ ಪ್ರತಿ ದಿನ ಬಳಸಲು ಅವಕಾಶವಿತ್ತು, ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳು 7 ದಿನಗಳ ಅವಧಿಗೆ ಈ ಪ್ಲಾನ್ ನ ಅಡಿಯಲ್ಲಿ ಲಭ್ಯವಾಗುತ್ತಿತ್ತು. ಈಗ ಮಾಡಿರುವ ಬದಲಾವಣೆಯ ನಂತರ ಬಿಎಸ್ಎನ್ಎಲ್ ಕಡಿಮೆ ಲಾಭವನ್ನು ಗ್ರಾಹಕರಿಗೆ ನೀಡುತ್ತಿದೆ.

ಜಿಯೋ ಜೊತೆಗೆ ಸ್ಪರ್ಧೆ:

ಜಿಯೋ ಜೊತೆಗೆ ಸ್ಪರ್ಧೆ:

ರೂಪಾಯಿ 29 ರ ಬಿಎಸ್ಎನ್ಎಲ್ ಪ್ಲಾನ್ ರಿಲಯನ್ಸ್ ಜಿಯೋ ನೀಡುವ 52 ರುಪಾಯಿ ಪ್ಲಾನ್ ಗೆ ಸ್ಪರ್ಧೆಯೊಡ್ಡುತ್ತದೆ. ರಿಲಯನ್ಸ್ ಜಿಯೋ 70 ಉಚಿತ ಎಸ್ಎಂಎಸ್,1.05ಜಿಬಿ ಡಾಟಾ ಜೊತೆಗೆ ಪ್ರತಿದಿನ ಎಫ್ ಯುಪಿ ಲಿಮಿಟ್ 150ಎಂಪಿ ಯನ್ನು ನೀಡುತ್ತದೆ.ಜಿಯೋ ಪ್ಲಾನ್ ನ ಅಡಿಯಲ್ಲಿ ಅನಿಯಮಿತ ಕರೆಗಳ ಲಾಭ ಮತ್ತು ಜಿಯೋ ಆಪ್ ಗಳಿಗೆ ಆಕ್ಸಿಸ್ ಉಚಿತವಾಗಿರುತ್ತದೆ. ಬಿಎಸ್ಎನ್ಎಲ್ ಪ್ಲಾನ್ ನಂತೆಯೇ ಜಿಯೋ ಪ್ಲಾನ್ ನ ಅವಧಿ ಕೂಡ 7 ದಿನಗಳೇ ಆಗಿದೆ.

ಹೊಸ ಮೆಗಾ ಪ್ಲಾನ್:

ಹೊಸ ಮೆಗಾ ಪ್ಲಾನ್:

ಇತ್ತೀಚೆಗೆ ಬಿಎಸ್ಎನ್ಎಲ್ ಹೊಸ ಪ್ಲಾನ್ ವೊಂದನ್ನು ಪರಿಚಯಿಸಿದ್ದು ಮೆಗಾ ಆಫರ್ ನ್ನು ನೀಡಿದೆ. ಇದರ ಅಡಿಯಲ್ಲಿ ಸ್ಪೆಷಲ್ ತಾರಿಫ್ ಪ್ಲಾನ್ ಗಳ ವೋಚರ್ ಗಳಿದ್ದು ರೂಪಾಯಿ 399 ಕೇವಲ 100 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಬಿಎಸ್ಎನ್ಎಲ್ ನೀಡುವ ಈ ಮೆಗಾ ಆಫರ್ ಪ್ರೀಪೇಯ್ಡ್ ಗ್ರಾಹಕರಿಗೆ ಕೇವಲ ದಿನಕ್ಕೆ 1.35 ರೂಪಾಯಿಯಲ್ಲಿ 74 ದಿನಗಳ ಅವಧಿಗೆ ಸಿಗುವ ಅತ್ಯುತ್ತಮ ಆಫರ್ ಆಗಿದೆ ಎಂದು ಬಿಎಸ್ಎನ್ಎಲ್ ನ ಸಿಎಂಡಿ ಅನುಪಮ್ ಶ್ರೀವಾತ್ಸವ್ ತಿಳಿಸಿದ್ದಾರೆ. ಇದು ಹೊಸದಾಗಿ ಸಿಮ್ ಕಾರ್ಡ್ ಖರೀದಿಸುವ ಗ್ರಾಹಕರಿಗೆ ಲಭ್ಯವಾಗುವ ಬೆಸ್ಟ್ ಆಫರ್ ಆಗಿರುತ್ತದೆ. ಹತ್ತಿರದ ಯಾವುದೇ ಬಿಎಸ್ಎನ್ಎಲ್ ಸ್ಟೋರ್ ಗಳಲ್ಲಿ ನೀವು ಈ ಸೌಲಭ್ಯದ ಆಫರ್ ನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
BSNL will now give you 50% less data under this plan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+