BSNL ವಿರುದ್ದ ತಿರುಗಿಬಿದ್ದ ಗ್ರಾಹಕರು...ಇಂಗುತಿಂದ ಮಂಗನಂತಾದ BSNL!!

|

ಟೆಲಿಕಾಂ ಕಂಪೆನಿಗಳ ಕೆಟ್ಟ ಕರೆಗಳು ಮತ್ತು ಎಸ್ಸೆಮ್ಮೆಸ್‌ಗಳು ಸೇರಿದಂತೆ ಬ್ಯಾಂಕ್‌, ಟ್ರಾವೆಲ್ಸ್, ಬ್ರೋಕರ್ಸ್ ಇತ್ಯಾದಿಗಳಿಂದ ಬರುವ ಜಾಹೀರಾತುಗಳು ಮೊಬೈಲ್ ಬಳಕೆದಾರರಿಗೆ ಕಿರಿಕಿರಿಯಾಗಿವೆ. ಆದರೆ, ಇಲ್ಲಿ ಖಾಸಾಗಿ ಕಂಪೆನಿಗಳಿಗೆ ಸೆಡ್ಡುಹೊಡೆಯುವಂತೆ ಇಂತಹ ಸಂದೇಶಗಳನ್ನು ಕಳುಹಿಸುತ್ತಿರುವ BSNL ಸಂಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲೀಗ ಅಪಸ್ವರ ಎದ್ದಿದೆ. ಗ್ರಾಹಕರು ಈಗ BSNL ವಿರುದ್ದ ತಿರುಗಿ ಬಿದ್ದಿದ್ದಾರೆ.

ಹೌದು, ವ್ಯಕ್ತಿಯೋರ್ವರು "ಗ್ರಾಹಕರಿಗೆ ಅಶ್ಲೀಲ ಮತ್ತು ಕೆಟ್ಟ ಸಂದೇಶ ಮತ್ತು ಕರೆಗಳನ್ನು ಕಳುಹಿಸುವುದನ್ನು ನಿಲ್ಲಿಸಿಬಿಡಿ. ಯಾರೂ ಕೂಡ ನಿಮ್ಮ ಅಶ್ಲೀಲ ಮತ್ತು ಕಟ್ಟ ಸಂದೇಶಗಳನ್ನು ಪಡೆಯಲು ಅರ್ಹರಲ್ಲ. ವಿಶೇಷವಾಗಿ ನಮ್ಮ 60 ವರ್ಷ ವಯಸ್ಸಿನ ಪೋಷಕರು" ಎಂದು ಟ್ವಿಟ್ ಮಾಡಿದ್ದಾರೆ. ಇದಕ್ಕೆ ಸರ್ಕಾರಿ ನಿಯಮಿತ ಟೆಲಿಕಾಂ ಸಂಸ್ಥೆಯಾಗಿರುವ BSNL ಜಾಣ ಉತ್ತರವನ್ನು ನೀಡಲುಹೋಗಿ ಈಗ ಇಂಗುತಿಂದ ಮಂಗನಂತಾಗಿದೆ.

BSNL ವಿರುದ್ದ ತಿರುಗಿಬಿದ್ದ ಗ್ರಾಹಕರು...ಇಂಗುತಿಂದ ಮಂಗನಂತಾದ BSNL!!

ಇಂತಹದೊಂದು ಸುದ್ದಿ ಈಗ ವೈರಲ್ ಆಗುತ್ತಿದ್ದು, ಖಾಸಾಗಿ ಟೆಲಿಕಾಂ ಕಂಪೆನಿಗಳಂತೆಯೇ ಸರ್ಕಾರಿ ಟೆಲಿಕಾಂ ಸಂಸ್ಥೆ ಕೂಡ ಮೋಸಗೊಳಿಸುವಂತಹ ಕೆಲಸವನ್ನೇಕೆ ಮಾಡಬೇಕು ಎಂದು ಹಲವು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ. ಇದು BSNL ಸಂಸ್ಥೆಗೆ ನಾಚಿಕೆಗೇಡು ಎಂದು ಹಲವು ಅಭಿಪ್ರಾಯಪಟ್ಟಿದ್ದಾರೆ. ಹಾಗಾದರೆ, ಏನಿದು ವರದಿ? ಗ್ರಾಹಕರು BSNL ಟೆಲಿಕಾಂ ಕಂಪೆನಿ ಮೇಲೆ ಸಿಟ್ಟಾಗಿರುವುದು ಏಕೆ? ಎಂಬೆಲ್ಲಾ ಮಾಹಿತಿಗಳನ್ನು ಮುಂದೆ ಒದಿ ತಿಳಿಯಿರಿ.

ಟ್ವಿಟ್‌ಗೆ BSNL ಹೇಳಿದ್ದೇನು?

ಟ್ವಿಟ್‌ಗೆ BSNL ಹೇಳಿದ್ದೇನು?

ಅಶ್ಲೀಲ ಮತ್ತು ಕೆಟ್ಟ ಸಂದೇಶ ಮತ್ತು ಕರೆಗಳನ್ನು ಕಳುಹಿಸುವುದನ್ನು ನಿಲ್ಲಿಸಿ ಎಂದು ಹೇಳಿದ ವ್ಯಕ್ತಿಗೆ, ಬಿಎಸ್‌ಎನ್‌ಎಲ್ ಸಂಸ್ಥೆ ಟ್ರಾಯ್ ನಿಯಮಗಳಂತೆ ಉತ್ತರ ನೀಡಿದೆ. ಇಂತಹ ಕರೆಗಳನ್ನು ಮತ್ತು ಸಂದೇಶಗಳು ಬಾರದಂತೆ ತಡೆಯಲು " ಡಿಎಸ್‌ಡಿ -ಡು ನಾಟ್ ಡಿಸ್ಟರ್ಬ್" ಆಪ್ ಅನ್ನು ಹಾಕಿಕೊಳ್ಳಿ ಎಂದು ಹೇಳಿದೆ. ಬಿಎಸ್‌ಎನ್‌ಎಲ್ ನಿಯಮಗಳ ಪ್ರಕಾರವೇ ಉತ್ತರ ನಿಡಿದರೂ ಸಹ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ.

ಏನಿದು ಡಿಎನ್‌ಡಿ ಆಪ್?

ಏನಿದು ಡಿಎನ್‌ಡಿ ಆಪ್?

ಟೆಲಿಕಾಂ ಕಂಪೆನಿಗಳಿಂದ ಗ್ರಾಹಕರಿಗೆ ಬರುವಂತಹ ಕರೆಗಳು ಮತ್ತು ಎಸ್ಸೆಮ್ಮೆಸ್‌ಗಳು ಸೇರಿದಂತೆ ಬರುವ ಜಾಹಿರಾತುಗಳು ಬಹುತೇಕ ಗ್ರಾಹಕರಿಂದ ಹಣವನ್ನು ಪೀಕುವುದಾಗಿದೆ. ಹಾಗಾಗಿ, ಇಂತಹವುಗಳಿಗೆ ಬ್ರೇಕ್ ಹಾಕಲು ಟೆಲಿಕಾಂ ನಿಯಂತ್ರಣ ಮಂಡಳಿ ಟ್ರಾಯ್ "ಡಿಎನ್‌ಡಿ" ಎಂಬ ಆಪ್ ಬಿಡುಗಡೆ ಮಾಡಿತ್ತು. ಈ ಆಪ್‌ ಅನ್ನು ಮೊಬೈಲ್‌ನಲ್ಲಿ ಹಾಕಿಕೊಂಡರೆ ಟೆಲಿಕಾಂ ಕಂಪೆನಿಗಳ ವಂಚನೆ ಕರೆಗಳಿಗೆ ಬ್ರೇಕ್ ಬೀಳುತ್ತದೆ.

ಸಾರ್ವಜನಿಕರು ಸಿಟ್ಟಾಗಿರುವು ಏಕೆ?

ಸಾರ್ವಜನಿಕರು ಸಿಟ್ಟಾಗಿರುವು ಏಕೆ?

ಬಿಎಸ್‌ಎನ್‌ಎಲ್ ಸಂಸ್ಥೆ ಟ್ರಾಯ್ ನಿಯಮದಂತೆ "ಡಿಎನ್‌ಡಿ" ಆಪ್ ಹಾಕಿಕೊಳ್ಳಲು ಹೇಳಿದ್ದನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಸರ್ಕಾರಿ ನಿಯಮಿತ ಟೆಲಿಕಾಂ ಸಂಸ್ಥೆ ಕೂಡ ಗ್ರಾಹಕರ ಬಳಿ ಸುಲಿಗೆ ಮಾಡುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಸರ್ಕಾರಿ ಸಂಸ್ಥೆ ನಂಬಿಕೆಗಳನ್ನು ಹುಸಿ ಮಾಡುವುದಿಲ್ಲ ಎಂದು ಹೆಚ್ಚಿ ಜನರು ಬಿಎಸ್‌ಎನ್‌ಎಲ್ ಸೇವೆಯನ್ನು ಬಳಸುತ್ತಿದ್ದಾರೆ. ಅವರಿಗೆ ಸರಿಯಾದ ಮಾರ್ಗ ತೋರಿಸುವುದು ಸಂಸ್ಥೆಯ ಕರ್ತವ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ತನ್ನ ತಪ್ಪನ್ನು ಒಪ್ಪಿಕೊಂಡ BSNL!

ತನ್ನ ತಪ್ಪನ್ನು ಒಪ್ಪಿಕೊಂಡ BSNL!

ಆಶಿಶ್ ಶ್ರೀವಾಸ್ತವ್ ಎಂಬುವವರು ಅಶ್ಲೀಲ ಮತ್ತು ಕೆಟ್ಟ ಸಂದೇಶ ಮತ್ತು ಕರೆಗಳನ್ನು ನಿಲ್ಲಿಸಿ ಎಂದು ಕೇಳಿದಾಗ ಬಿಎಸ್‌ಎನ್‌ಎಲ್‌ ಉತ್ತರಿಸುವ ಮೂಲಕ ತನ್ನ ತಪ್ಪನ್ನು ಒಪ್ಪಿಕೊಂಡತಾಗಿದೆ ಎಂದು ವ್ಯಕ್ತಿಯೋರ್ವರು ಹೇಳಿದ್ದಾರೆ. ಅಶ್ಲೀಲ ಮತ್ತು ಕೆಟ್ಟ ಸಂದೇಶ ಮತ್ತು ಕರೆ ಎಂದು ಟ್ವಿಟ್‌ನಲ್ಲಿ ನಮೂದಿಸಿರುವಾಗ ಬಿಎಸ್‌ಎನ್‌ಎಲ್‌ ಹೇಗೆ ಆ ಟ್ವಿಟ್‌ಗೆ ಹಿಗೆ ಉತ್ತರಿಸಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಡಿಎನ್‌ಡಿ ಆಪ್ ಹಾಕಿಕೊಳ್ಳಿ!

ಡಿಎನ್‌ಡಿ ಆಪ್ ಹಾಕಿಕೊಳ್ಳಿ!

ಯಾರಿಗೇ ಆದರೂ ಬಯಸದ ಕರೆ ಮತ್ತು ಎಸ್ಸೆಮ್ಮೆಸ್‌ಗಳು ಸಾಕಷ್ಟು ಕಿರಿ, ಕಿರಿ ಎನಿಸುತ್ತವೆ. ಹಾಗಾಗಿ, ದೂರಸಂಪರ್ಕ ವಲಯದ ನಿಯಂತ್ರಕ ಟ್ರಾಯ್‌, 'ಡಿಎನ್‌ಡಿ ಮೊಬೈಲ್‌ ಆಪ್‌' ಅನ್ನು ಬಿಡುಗಡೆಗೊಳಿಸಿದೆ. ಈ ಆಪ್‌ನಿಂದ ಕಿರಿಕಿರಿ ಕರೆ, ಎಸ್ಸೆಮ್ಮೆಸ್‌ಗಳನ್ನು ಸುಲಭವಾಗಿ ತಡೆಯಬಹುದಾಗಿದ್ದು, ಹಾಗಾದರೆ, ಈ ಆಪ್‌ನಿಂದ ಏನೆಲ್ಲಾ ಉಪಯೋಗಗಳಿವೆ ಎಂಬದನ್ನು ಮುಂದೆ ತಿಳಿಯಿರಿ.

ಡಿಎನ್‌ಡಿಯಲ್ಲಿ ನಿಮ್ಮ ನಂಬರ್ ಸೇಫ್

ಡಿಎನ್‌ಡಿಯಲ್ಲಿ ನಿಮ್ಮ ನಂಬರ್ ಸೇಫ್

ಟ್ರಾಯ್ ಬಿಡುಗಡೆ ಮಾಡಿರುವ ಡಿಎನ್‌ಡಿ ಆಪ್‌ ಇನ್‌ಸ್ಟಾಲ್ ಮಾಡಿಕೊಂಡರೆ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಆಪ್ ತನ್ನ ರಿಜಿಸ್ಟ್ರಾರ್‌ನಲ್ಲಿ ದಾಖಲಿಸಿಕೊಳ್ಳುತ್ತದೆ. ಹಾಗಾಗಿ, ಟೆಲಿಕಾಂ ಕಂಪೆನಿಗಳ ಮೋಸದ ಕರೆಗಳು ಮತ್ತು ಎಸ್ಸೆಮ್ಮೆಸ್‌ಗಳು ಸೇರಿದಂತೆ ಎಲ್ಲಾ ಜಾಹಿರಾತುಗಳು ನಿಮ್ಮನ್ನು ತಲುಪುವುದಿಲ್ಲ.

ಆಪ್‌ ಕಾರ್ಯನಿರ್ವಹಣೆ ಹೇಗೆ?

ಆಪ್‌ ಕಾರ್ಯನಿರ್ವಹಣೆ ಹೇಗೆ?

ಭಾರತದ ಟೆಲಿಕಾಂ ಕಂಪೆನಿಗಳನ್ನು ನಿಯಂತ್ರಿಸುತ್ತಿರುವ ಸರ್ಕಾರದ ಸಂಸ್ಥೆ ಟ್ರಾಯ್ ಆಗಿರುವುದರಿಂದ ಈ ಡಿಎನ್‌ಡಿ ಆಪ್‌ನಲ್ಲಿ ಎಲ್ಲಾ ಬಳಕೆದಾರರಿಗೂ ಸ್ವಂತ ಹಕ್ಕಿದೆ. ಒಮ್ಮೆ ಈ ಆಪ್‌ನಲ್ಲಿ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿದರೆ ಜಾಹಿರಾತು ಕಳುಹಿಸಬಹುದಾದ ಸಂಖ್ಯೆಗಳ ಪಟ್ಟಿಗೆ ನಿಮ್ಮ ಮೊಬೈಲ್‌ ಸಂಖ್ಯೆ ಸೇರ್ಪಡೆಯಾಗುವುದಿಲ್ಲ.

ದೂರು ದಾಖಲಿಸಬಹುದು.

ದೂರು ದಾಖಲಿಸಬಹುದು.

ಗ್ರಾಹಕರ ಕ್ಷೇಮಕ್ಕಾಗಿ ಬಂದಿರುವ ಈ ಆಪ್‌ ಮೂಲಕ ರಿಜಿಸ್ಟರ್ ಆಗಿದ್ದರೂ ಸಹ ನಿಮಗೆ ಕಿರಿ ಕಿರಿ ಕರೆ ಅಥವಾ ಎಸ್‌ಎಮ್‌ಎಸ್‌fಗಳು ಬಂದರೆ ಆ ಬಗ್ಗೆ ದೂರು ದಾಖಲಿಸಬಹುದು.! ನೀವು ದೂರು ದಾಖಲಿಸಿದ ನಂತರ, ದೂರಿಗೆ ಸಂಬಂಧಿಸಿ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಸಹ ಟ್ರಾಯ್‌ನಿಂದ ಮಾಹಿತಿ ಸಿಗುತ್ತದೆ.

ಎಲ್ಲಾ ಬಳಕೆದಾರರಿಗೂ ಲಭ್ಯ.

ಎಲ್ಲಾ ಬಳಕೆದಾರರಿಗೂ ಲಭ್ಯ.

ಟ್ರಾಯ್ ಬಿಡುಗಡೆ ಮಾಡಿರುವ ಈ ಡಿಎನ್‌ಡಿ ಆಪ್‌ ಎಲ್ಲಾ ಆಂಡ್ರಾಯ್, ಆಪಲ್ ಮತ್ತು ವಿಂಡೋಸ್ ಬಳಕೆದಾರರಿಗೂ ಲಭ್ಯವಿದ್ದು, ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇಸ್ಟೋರ್‌ಗೆ ಭೇಟಿ ನೀಡಿ ' ಡಿಎನ್‌ಡಿ ಸರ್ವಿಸ್' ಎಂದು ಸರ್ಚ್ ಮಾಡಿದರೆ ಈ ಆಪ್ ಸಿಗಲಿದೆ.

Best Mobiles in India

English summary
will you stop sending obscene and dirty msgs and calls to your customers @BSNLCorporate no one deserve to be harassed by a bot asking for hot dirty chat, especially not our 60 year old parents. #shameonyou.to know more visit to kannada.gizbbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X