ಬಿಎಸ್‌ಎನ್‌ಎಲ್‌ನಿಂದ ಮೆಗಾ ಆಫರ್..! ರೂ. 100ಕ್ಕೆ ಅನ್‌ಲಿಮಿಟೆಡ್ ಡೇಟಾ, ಕರೆ..!
ಮುಖೇಶ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಜಿಯೋ ಬಿರುಗಾಳಿಗೆ ತತ್ತರಿಸಿರುವ ಇತರೆ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯಲು ಆಕರ್ಷಕ ಆಫರ್‌ಗಳನ್ನು ಘೋಷಿಸುತ್ತಿರುವುದು ನಿಮಗೆಲ್ಲಾ ಗೊತ್ತೆ ಇದೆ. ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾ ಲಿಮಿಟೆಡ್ ಮಧ್ಯ ಇದ್ದ ಸ್ಪರ್ಧೆಯಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದು, ಹೊಸ ಹೊಸ ಆಫರ್‌ಗಳನ್ನು ಘೋಷಿಸುತ್ತಿದೆ.

ಭಾರತದಲ್ಲಿ 5G ನೆಟ್‌ವರ್ಕ್‌ನ್ನು ಮೊದಲು ತರಲು ಪ್ರಯತ್ನಿಸುತ್ತಿರುವ ಬಿಎಸ್‌ಎನ್‌ಎಲ್ ಈಗ ತನ್ನ ಹೊಸ ಗ್ರಾಹಕರು ಮತ್ತು ಎಂಎನ್‌ಪಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಡೇಟಾ ಮತ್ತು ಕರೆಗಳ ಮೆಗಾ ಆಫರ್ ನೀಡಿದೆ. ಬಿಎಸ್‌ಎನ್‌ಎಲ್ ಪರಿಚಯಿಸಿದ ಹೊಸ ಪ್ಲಾನ್‌ಗೆ ಜಿಯೋ ಸೇರಿದಂತೆ ಇತರೆ ಟೆಲಿಕಾಂ ಆಪರೇಟರ್‌ಗಳು ಥಂಡಾ ಹೊಡೆದಿವೆ. ಆಗಿದ್ರೇ ಹೊಸ ಆಫರ್ ಹೇಗೆ ಪ್ರಮುಖವಾಗುತ್ತದೆ..? ಏನೆಲ್ಲಾ ಒಳಗೊಂಡಿದೆ..? ಎಂಬುದನ್ನು ಮುಂದೆ ನೋಡಿ.

ಏನೀದು ಮೆಗಾ ಆಫರ್..?
ಬಿಎಸ್‌ಎನ್‌ಎಲ್ ತನ್ನ ಹೊಸ ಪೋರ್ಟ್ ಇನ್ ಗ್ರಾಹಕರಿಗೆ ಮೆಗಾ ಆಫರ್ ಘೋಷಿಸಿದ್ದು, ಈ ಆಫರ್‌ನಡಿಯಲ್ಲಿ ಅನ್‌ಲಿಮಿಟೆಡ್ ಕರೆ, ಎಸ್‌ಎಂಎಸ್, ಡೇಟಾ ಪ್ಲಾನ್‌ಗಳನ್ನು ಪಡೆಯಲಿದ್ದಾರೆ. ಇಲ್ಲಿ ಗ್ರಾಹಕರು ಬಿಎಸ್‌ಎನ್‌ಎಲ್‌ನ ಹೊಸ ಸಿಮ್‌ನೊಂದಿಗೆ ರೂ.399 ಮೌಲ್ಯದ ಸೌಲಭ್ಯಗಳನ್ನು ರೂ.100ಕ್ಕೆ ಪಡೆಯಲಿದ್ದಾರೆ.

ಎಲ್‌ಪಿಜಿ ಗ್ಯಾಸ್ ಕೂಪನ್ ಆಫರ್
ಬಿಎಸ್‌ಎನ್‌ಎಲ್ ತನ್ನ ಪತ್ರಿಕಾ ಹೇಳಿಕೆಯಲ್ಲಿ ಹೇಳಿರುವಂತೆ ಬಿಎಸ್‌ಎನ್‌ಎಲ್‌ನ ಗ್ರಾಹಕ ಸೇವಾಆ ಕೇಂದ್ರಗಳಲ್ಲಿ ಹೊಸ ಆಫರ್ ಲಭ್ಯವಿದ್ದು, ಹೊಸ ಪೋರ್ಟ್‌ಇನ್ ಗ್ರಾಹಕರು ಮಾತ್ರ ಆಕ್ಟಿವೇಟ್ ಮಾಡಿಕೊಳ್ಳಬಹುದು. ಅದಲ್ಲದೇ ಈ ಆಫರ್ ಪಡೆದುಕೊಳ್ಳಲು ಜಿಎಸ್ಎಮ್ ಪ್ರಿಪೇಯ್ಡ್ ಮೊಬೈಲ್ ಸೇವೆಗಳಡಿಯಲ್ಲಿ ಬರುವ IOCL ಮತ್ತು HPCLನ LPG ಗ್ಯಾಸ್ ಬಿಲ್‌ಗಳಲ್ಲಿ ಮುದ್ರಣವಾಗಿರುವ ಬಿಎಸ್‌ಎನ್‌ಎಲ್ ಕೂಪನ್ ತೋರಿಸಸುವ ಅಗತ್ಯವಿದೆ.

7 ರಾಜ್ಯಗಳಲ್ಲಿ ಬಿಎಸ್‌ಎನ್‌ಎಲ್ ಕೂಪನ್
ಬಿಎಸ್‌ಎನ್‌ಎಲ್ ಹೀಗಾಗಲೇ 7 ರಾಜ್ಯಗಳಲ್ಲಿ LPG ಗ್ಯಾಸ್‌ನ ಬಿಎಸ್‌ಎನ್‌ಎಲ್ ಕೂಪನ್‌ಗಳನ್ನು ಜಾರಿ ಮಾಡಿದೆ. ಆ ರಾಜ್ಯಗಳೆಂದರೆ ಉತ್ತರಪ್ರದೇಶ (ಪೂರ್ವ&ಪಶ್ಚಿಮ), ಉತ್ತರಾಂಚಲ, ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು & ಕಾಶ್ಮೀರದಲ್ಲಿ LPG ಡೀಲರ್‌ಗಳೊಂದಿಗೆ ಮೆಗಾ ಆಫರ್‌ನ ಒಪ್ಪಂದವನ್ನು ಬಿಎಸ್‌ಎನ್‌ಎಲ್ ಮಾಡಿಕೊಂಡಿದೆ.

ಭಾರೀ ಆಫರ್
ಬಿಎಸ್‌ಎನ್‌ಎಲ್‌ನ ಹೊಸ ಮೆಗಾ ಆಫರ್ ಭಾರೀ ಉಡುಗೊರೆಯನ್ನೇ ತನ್ನ ಗ್ರಾಹಕರಿಗೆ ನೀಡುತ್ತಿದೆ. ಎಂಎನ್‌ಪಿ ಗ್ರಾಹಕರಿಗೆ ಇದು ಸ್ವಾಗತಾರ್ಹ ಗಿಫ್ಟ್ ಆಫರ್ ಆಗಿದೆ. ರೂ.1.35ಕ್ಕೆ ಪ್ರತಿದಿನ ಅನ್‌ಲಿಮಿಟೆಡ್ ಡೇಟಾ, ಕರೆಗಳನ್ನು 74 ದಿನಗಳವರೆಗೆ ನೀಡುತ್ತಿದ್ದೇವೆ ಎಂದು ಬಿಎಸ್‌ಎನ್‌ಎಲ್‌ನ CMD ಅನುಪಮ್ ಶ್ರೀವಾತ್ಸವ್ ಹೇಳಿದ್ದಾರೆ.

ಆಫರ್‌ನಲ್ಲಿ ಏನೀರಲಿದೆ..?
ಬಿಎಸ್‌ಎನ್‌ಎಲ್ ಮೆಗಾ ಆಫರ್ ರೂ.399 ಮೌಲ್ಯದ ಸೌಲಭ್ಯಗಳನ್ನು ರೂ.100ಕ್ಕೆ ನೀಡುತ್ತಿದ್ದು, ಅನಿಯಮಿತ ಕರೆ, ಎಸ್‌ಎಂಎಸ್ ಮತ್ತು ಪರ್ಸನಾಲೈಸಡ್ ರಿಂಗ್ ಬ್ಯಾಕ್ ಟೋನ್ (PRBT)ನ್ನು ಹೊಂದಿರಲಿದೆ. ಇದು ಕೇವಲ ಹೊಸತಾಗಿ ಪೋರ್ಟ್ ಮಾಡಿಸಿದ ಗ್ರಾಹಕರಿಗೆ ಮಾತ್ರ ಲಭ್ಯ. ದೆಹಲಿ ಮತ್ತು ಮುಂಬೈ ಗ್ರಾಹಕರಿಗೆ ಈ ಆಫರ್ ರಾಷ್ಟ್ರೀಯ ರೋಮಿಂಗ್ ಜತೆ ಅನ್‌ಲಿಮಿಟೆಡ್ ಕರೆಗಳ ಸೌಲಭ್ಯವನ್ನು ನೀಡುತ್ತಿದೆ. ಮತ್ತು ರಿಂಗಿಂಗ್ ಬ್ಯಾಕ್ ಟೋನ್ ಸೌಲಭ್ಯದಲ್ಲಿ ಅನಿಯಮಿತ ಹಾಡುಗಳ ಬದಲಾವಣೆ ಆಯ್ಕೆಯನ್ನು ನೀಡಲಾಗಿದ್ದು, 74 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ.

ಆಗಸ್ಟ್‌ನಲ್ಲಿ ಆಫರ್ ಪರಿಚಯ
ಬಿಎಸ್‌ಎನ್‌ಎಲ್ ರೂ.399ರ ಪ್ಲಾನ್‌ನ್ನು ಆಗಸ್ಟ್‌ನಲ್ಲಿ ರಾಖಿ ಆಫರ್ ಜತೆ ಪರಿಚಯಿಸಿತ್ತು. ಆದರೆ, ಈ ಪ್ಯಾಕ್‌ನಡಿಯಲ್ಲಿ ಡೇಟಾ ಬಳಕೆಗೆ FUP ಲಿಮಿಟ್ ಕುರಿತು ಬಿಎಸ್‌ಎನ್‌ಎಲ್ ಸ್ಪಷ್ಟ ನಿಲುವನ್ನು ತಾಳಿದ್ದಿಲ್ಲ. ಈಗ ಎಂಎನ್‌ಪಿ ಗ್ರಾಹಕರಿಗೆ ಹೊಸ ಆಫರ್ ಘೋಷಿಸಿರುವುದರಿಂದ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಮತ್ತೊಂದು ಸ್ಥರದ ಬೆಲೆ ಇಳಿಯುವುದರಲ್ಲಿ ಅನುಮಾನವಿಲ್ಲ.


Click it and Unblock the Notifications








