Home
ಸುದ್ದಿಜಾಲ

Budget 2025: ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ! ಟೆಕ್ ಲೋಕದ ನಿರೀಕ್ಷೆಗಳಿವು.. ಯಾವುದು ಅಗ್ಗ? ಯಾವುದೆಲ್ಲಾ ದುಬಾರಿ?

ನಾಳೆ ಬಹುನಿರೀಕ್ಷಿತ ಕೇಂದ್ರ ಬಜೆಟ್ 2025 ಮಂಡನೆಯಾಗಲಿದೆ. ದೇಶದ ಜನರ ಚಿತ್ತ ಮೋದಿ ಲೆಕ್ಕದತ್ತ ನೆಟ್ಟಿದೆ. ನರೇಂದ್ರ ಮೋದಿ (Narendra Modi) ಸರ್ಕಾರ ಟೆಕ್‌ ವಲಯಕ್ಕೆ ಸಿಹಿಸುದ್ದಿ ಕೊಡುವ ಸಾಧ್ಯತೆಯಿದೆ. ಹೌದು, 2025ರ ಕೇಂದ್ರ ಬಜೆಟ್‌ನಲ್ಲಿ (Budget 2025) ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳ ದರ ಕಡಿಮೆ ಮಾಡುವ ಬಗ್ಗೆ ಸುಳಿವು ಸಿಕ್ಕಿದೆ. ಹಾಗೆಯೇ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಎಲ್‌ಇಡಿ ಟಿವಿ, ಕ್ಯಾಮೆರಾ ಲೆನ್ಸ್‌ಗಳ ಮೇಲಿನ ಸುಂಕ ಕಡಿಮೆ ಮಾಡುವ ಸಾಧ್ಯತೆಯಿದೆ. ಈ ಬಜೆಟ್‌ನಲ್ಲಿಯೂ ನಿರೀಕ್ಷೆಗಳು ಹೆಚ್ಚಾಗಿವೆ. ಈ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಯಾವೆಲ್ಲಾ ಕೊಡುಗೆಗಳು ಸಿಗಬಹುದು ಎಂಬುದನ್ನು ತಿಳಿಯೋಣ ಬನ್ನಿ.

ದೇಶದ ಆರ್ಥಿಕ ವ್ಯವಸ್ಥೆಯನ್ನು ನಿರ್ಧರಿಸುವ ಕೇಂದ್ರ ಬಜೆಟ್ 2025 ರಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಹಲವು ಖುಷಿ ಸುದ್ದಿ ನೀಡಲು ಮೋದಿ ಸಜ್ಜಾಗಿದ್ದಾರೆ. ಮೊಬೈಲ್ ಮಾರುಕಟ್ಟೆಯ ಪುನಶ್ಚೇತನಕ್ಕೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಆದ್ಯತೆ ನೀಡಲಾಗುವುದು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಶಿಕ್ಷಣ, ಪ್ರವಾಸೋದ್ಯಮ ವಲಯ, ಕೃಷಿ ವಲಯ, ಉದ್ಯೋಗ, ಬ್ಯಾಂಕಿಂಗ್ ವಲಯ ಸೇರಿದಂತೆ ತಂತ್ರಜ್ಞಾನ ವಲಯಕ್ಕೂ ಮಹತ್ತರ ಕೊಡುಗೆಗಳನ್ನು ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

Budget 2025: ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ ಸಾಧ್ಯತ! ಟೆಕ್ ಲೋಕದ ನಿರೀಕ್ಷೆಗಳಿವು

ಸ್ಮಾರ್ಟ್‌ಫೋನ್‌ ಬೆಲೆ ಮತ್ತೆ ಇಳಿಕೆ ಸಾಧ್ಯತೆ!

ಕೇಂದ್ರ ಬಜೆಟ್‌ 2025 ನಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಮೊಬೈಲ್‌, ಲ್ಯಾಪ್‌ಟಾಪ್‌, ಎಲ್‌ಇಡಿ ಟಿವಿ, ಕ್ಯಾಮೆರಾ ಲೆನ್ಸ್‌ಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಈ ಎಲ್ಲಾ ಗ್ಯಾಜೆಟ್ ಸಾಧನಗಳ ಸುಂಕದ ದರ ಇಳಿಕೆಯಾದರೆ, ಇದರ ಲಾಭವನ್ನು ಟೆಕ್ ಕಂಪನಿಗಳು ನೇರವಾಗಿ ಜನರಿಗೆ ತಲುಪಿಸಲಿದೆ.

ಈ ಗ್ಯಾಜೆಟ್ ಉತ್ಪನ್ನಗಳ ಸುಂಕ ಏರಿಕೆ

ಕಳೆದ ಬಜೆಟ್‌ನಲ್ಲಿ ಫೋನ್‌ಗಳು, ಮೊಬೈಲ್ ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.15ಕ್ಕೆ ಇಳಿಕೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಈ ಬಾರಿ ಕಡಿಮೆ ಬೆಲೆಯ ಗ್ಯಾಜೆಟ್ ಉತ್ಪನ್ನಗಳಾದ ಹೆಡ್‌ಫೋನ್, ಇಯರ್‌ಫೋನ್ ಮತ್ತು ಸ್ಮಾರ್ಟ್‌ವಾಚ್‌ಗಳ ಸುಂಕಗಳನ್ನು ಏರಿಸುವ ಸಾಧ್ಯತೆ ದಟ್ಟವಾಗಿದೆ. ವೇರಿಯಬಲ್ ಮತ್ತು ಆಡಿಯೊ ಉತ್ಪನ್ನಗಳನ್ನು ಖರೀದಿಸಲು ಇಚ್ಚಿಸುವ ಗ್ರಾಹಕರಿಗೆ ಇದರಿಂದ ಸ್ವಲ್ಪ ಬೇಸರವಾಗಬಹುದು.

ಐಟಿ ತಜ್ಞರ ನಿರೀಕ್ಷೆಗಳಿವು

ಐಟಿ ತಜ್ಞರು ಕೇಂದ್ರ ಬಜೆಟ್‌ 2025 ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ಧಾರೆ. ಈ ಬಾರಿಯ ಬಜೆಟ್‌ನಲ್ಲಿ ಭಾರತದ ಐಟಿ ವಲಯದ ವಿಕಾಸ ಮತ್ತು ವಿಸ್ತರಣೆಗೆ ಪ್ರಮುಖ ಅವಕಾಶವಿದೆ. ಫಿನ್‌ಟೆಕ್, ರಿಟೇಲ್ ಮತ್ತು ಇ-ಕಾಮರ್ಸ್, ಹೆಲ್ತ್ ಮತ್ತು ಫಾರ್ಮಾ, ರಿಯಲ್ ಎಸ್ಟೇಟ್, ಮ್ಯಾನುಫ್ಯಾಕ್ಚರಿಂಗ್ ಮತ್ತು ಲಾಜಿಸ್ಟಿಕ್ಸ್, ಟೆಲಿಕಾಂ ಇತ್ಯಾದಿಗಳಂತಹ ವೈವಿಧ್ಯಮಯ ಉದ್ಯಮಗಳಲ್ಲಿ ಅಗಾಧವಾದ ನಾವೀನ್ಯತೆಗಳನ್ನು ಚಾಲನೆ ಮಾಡುವುದರಿಂದ ಡಿಜಿಟಲೀಕರಣ ಮತ್ತು ತಾಂತ್ರಿಕ ಪ್ರಗತಿಯತ್ತ ಗಮನಹರಿಸಬೇಕಿದೆ.

ಅಗ್ರಿಟೆಕ್, ಎಲೆಕ್ಟ್ರಿಕ್ ವಾಹನಗಳು, ಫಿನ್‌ಟೆಕ್, ನವೀಕರಿಸಬಹುದಾದ ಇಂಧನ ಮುಂತಾದ ಕ್ಷೇತ್ರಗಳನ್ನು ಬೆಂಬಲಿಸುವ ಉಪಕ್ರಮಗಳಲ್ಲಿ ಅಪಾರ ನಿರೀಕ್ಷೆ ಇದೆ. ಈ ಡೊಮೇನ್‌ಗಳಲ್ಲಿ ಹೊಸತನವನ್ನು ಮಾಡಲು ಸಹಕಾರಿ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಏಕೆಂದರೆ, ಇದು ವಿದೇಶಿ ಹೂಡಿಕೆಗಳು ಮತ್ತು ಪಾಲುದಾರಿಕೆಗಳನ್ನು ಆಕರ್ಷಿಸುವ ಅವಕಾಶವನ್ನು ಹೊಂದಿದೆ. ಭಾರತೀಯ ಐಟಿ ಕಂಪನಿಗಳ ಅಂತರಾಷ್ಟ್ರೀಯ ವಿಸ್ತರಣೆಗೆ ಅನುಕೂಲವಾಗುತ್ತದೆ.

ಕಳೆದ ಬಾರಿ ಯಾವ ವಸ್ತುಗಳು ಅಗ್ಗ?

  • ಮೊಬೈಲ್​ ಫೋನ್​
  • ಮೊಬೈಲ್​ ಚಾರ್ಜರ್​
  • ಟಿವಿ
  • ಇ-ಕಾಮರ್ಸ್​ ಮೇಲಿನ ಟಿಡಿಎಸ್​ ಶೇ.1ರಿಂದ ಶೇ. 0.1ರಷ್ಟು ಇಳಿಕೆ
  • ಚಿನ್ನ
  • ಬೆಳ್ಳಿ
  • ಪ್ಲಾಟಿನಂ
  • ಚರ್ಮದ ಉತ್ಪನ್ನಗಳು
  • ಸೌರ ವಿದ್ಯುತ್ ಬಿಡಿಭಾಗಗಳು​
  • ಕ್ಯಾನ್ಸರ್ ಔಷಧಿ
  • 20 ಖನಿಜಗಳ ಮೇಲೆ ಅಬಕಾರಿ ಸುಂಕ ಇಳಿಕೆ
  • ತೆರಿಗೆ ಕಡಿತ
  • ಸ್ಟಾರ್ಟ್​ಅಪ್​ನಲ್ಲಿ ಬರುವ ಏಂಜೆಲ್ ಟ್ಯಾಕ್ಸ್​ ರದ್ದು
  • ಸಾಗರ ಆಹಾರ
  • ಚಪ್ಪಲಿ

ಯಾವ ವಸ್ತುಗಳು ದುಬಾರಿ?

  • ಪ್ಲಾಸ್ಟಿಕ್​ ಮತ್ತು ಪ್ಲಾಸ್ಟಿಕ್​ ಉತ್ಪನ್ನಗಳು
  • ಪ್ಲಾಸ್ಟಿಕ್ ಆಮದು ಮೇಲಿನ ಸುಂಕ ಏರಿಕೆ
  • ವಿದ್ಯುತ್​ ಉಪಕರಣಗಳು
  • ಮೊಬೈಲ್​ ಟವರ್
  • ಬ್ರ್ಯಾಂಡೆಡ್ ಬಟ್ಟೆಗಳು
  • ಆಮದು ಆಗುವ ಬಟ್ಟೆಗಳು
  • ಸ್ಟೇಟ್​​ ಸ್ಟ್ಯಾಂಪ್​ ಡ್ಯೂಟಿ ಹೆಚ್ಚಿಸಲು ರಾಜ್ಯಗಳಿಗೆ ಅವಕಾಶ
  • ಪ್ಲೆಕ್ಸ್ ಮತ್ತು ಬ್ಯಾನರ್
Best Mobiles in India

English summary
Budget 2025 Expectations: What we can be expected for the technology sector?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+