10,000 ರುಪಾಯಿ ಒಳಗೆ ಸಿಗುವ ಸ್ಮಾರ್ಟ್ ಟಿವಿಗಳು ಅಥವಾ ಎಲ್ಇಡಿ ಟಿವಿಗಳು
ಸ್ಮಾರ್ಟ್ ಟಿವಿ ಬಹಳ ಪ್ರಮುಖವಾಗಿರುವ ಗೆಜೆಟ್ ಗಳಲ್ಲಿ ಒಂದು. ಸ್ಮಾರ್ಟ್ ಟಿವಿಗಳ ಬೆಲೆಯಲ್ಲಿ ಮತ್ತು ಅದರ ಫೀಚರ್ ಗಳಲ್ಲಿ ಬಹಳ ಬದಲಾವಣೆಗಳು ವೇಗವಾಗಿ ಆಗುತ್ತಿದೆ. ಒಂದು ಲಕ್ಷಕ್ಕೂ ಮೀರಿದ ಬೆಲೆಯ ಸ್ಮಾರ್ಟ್ ಟಿವಿಗಳು ಸಧ್ಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

10,000 ರುಪಾಯಿಯೊಳಗೆ ಕೂಡ ಕೆಲವು ಅಧ್ಬುತ ಸ್ಮಾರ್ಟ್ ಟಿವಿಗಳು ಸಿಗುತ್ತದೆ. ಅವುಗಳ ಬಜೆಟ್ ಬೆಲೆಯಲ್ಲಿ ಲಭ್ಯವಾಗುತ್ತದೆ ಮತ್ತು ಉತ್ತಮ ಫೀಚರ್ ಗಳನ್ನು ಕೂಡ ಒದಗಿಸುತ್ತದೆ. ಪ್ಯಾನಸಾನಿಕ್, ಕೊಡಾಕ್, ಕ್ರೋಮಾ, ಮೈಕ್ರೋ ಮ್ಯಾಕ್ಸ್ ಮತ್ತು ಇತ್ಯಾದಿ ಕಂಪೆನಿಗಳು ಉತ್ತಮ ಎಲ್ ಇಡಿ ಸ್ಮಾರ್ಟ್ ಟಿವಿಗಳನ್ನು ಇದೀಗ ಬಿಡುಗಡೆಗೊಳಿಸಿವೆ.

ಕೊಡಾಕ್ 32ಹೆಚ್ ಡಿ ಎಕ್ಸ್ಎಸ್ ಮಾರ್ಟ್ 32-ಇಂಚಿನ ಎಲ್ಇಡಿ ಹೆಚ್ ಡಿ-ರೆಡಿ ಟಿವಿ
ಕೊಡಾಕ್ 32ಹೆಚ್ ಡಿ ಎಕ್ಸ್ಎಸ್ ಮಾರ್ಟ್ 32-ಇಂಚಿನ ಎಲ್ಇಡಿ ಹೆಚ್ ಡಿ-ರೆಡಿ ಟಿವಿಯು ನೆಟ್ ಫ್ಲಿಕ್ಸ್,ಡಿಸ್ನಿ+ಹಾಟ್ ಸ್ಟಾರ್ ಮತ್ತು ಇತ್ಯಾದಿಗಳನ್ನು ಬೆಂಬಲಿಸುತ್ತದೆ ಮತ್ತು ಕೇವಲ 10,000 ರುಪಾಯಿ ಬೆಲೆಯೊಳಗೆ ಲಭ್ಯವಾಗುತ್ತದೆ. ಈ ಆಂಡ್ರಾಯ್ಡ್ ಆಧಾರಿತ ಟಿವಿಯು ಕೆಲವು ಸ್ಮಾರ್ಟ್ ಆಯ್ಕೆಗಳನ್ನು ನೀಡುತ್ತದೆ ಮತ್ತು 20W ನ ಸೌಂಡ್ ಔಟ್ ಪುಟ್ ನ್ನು ಹೊಂದಿದೆ.

ಸನ್ಯೋ ಎಕ್ಸ್ ಟಿ-24S7000F 24 ಇಂಚಿನ ಎಲ್ಇಡಿ ಫುಲ್ ಹೆಚ್ ಡಿ ಟಿವಿ
ಇದನ್ನು ಹೊರತು ಪಡಿಸಿ ಸನ್ಯೋ ಕೂಡ ಭಾರತದಲ್ಲಿ ಸ್ಮಾರ್ಟ್ ಟಿವಿ ಮಾರಾಟ ಮಾಡುವ ಅತ್ಯುತ್ತಮ ಬ್ರ್ಯಾಂಡ್ ಆಗಿದೆ. ಸನ್ಯೋ XT-24S7000F 24 ಇಂಚಿನ ಎಲ್ಇಡಿ ಫುಲ್ ಹೆಚ್ ಡಿ ಟಿವಿ ಅತ್ಯುತ್ತಮ ಆಯ್ಕೆ. ಗೇಮಿಂಗ್ ಕನ್ಸೋಲ್ ನ್ನು ಇದು ಹೊಂದಿದೆ ಮತ್ತು 10,000 ರುಪಾಯಿ ಒಳಗೆ ಖರೀದಿಸುವುದಕ್ಕೆ ಲಭ್ಯವಿದೆ.

ಕೆವಿನ್ K56U912 32 ಇಂಚಿನ ಎಲ್ಇಡಿ ಹೆಚ್ ಡಿ-ರೆಡಿ ಟಿವಿ
ಕೆವಿನ್ K56U912 32 ಇಂಚಿನ ಎಲ್ಇಡಿ ಹೆಚ್ ಡಿ-ರೆಡಿ ಟಿವಿ ಉತ್ತಮ ಬೆಲೆಯ ಸ್ಮಾರ್ಟ್ ಟಿವಿಯಾಗಿದ್ದು ಬಜೆಟ್ ಸೆಗ್ಮೆಂಟ್ ನಲ್ಲಿಯೇ ಖರೀದಿಸುವುದಕ್ಕೆ ಸಿಗುತ್ತದೆ. ಈ ಸ್ಮಾರ್ಟ್ ಟಿವಿಯಲ್ಲಿ 60Hz ರಿಫ್ರೆಶ್ ರೇಟ್ ಇದೆ ಮತ್ತು 178- ಡಿಗ್ರಿಯ ವ್ಯೂವಿಂಗ್ ಆಂಗಲ್ ಇದೆ. ಹಾಗಾಗಿ ಉತ್ತಮ ವ್ಯೂವಿಂಗ್ ಅನುಭವವನ್ನು ಇದು ಒದಗಿಸುತ್ತದೆ.

ಸನ್ಯೋ XT-32A081H 32 ಇಂಚಿನ ಎಲ್ಇಡಿ ಹೆಚ್ ಡಿ-ರೆಡಿ ಟಿವಿ
ಸನ್ಯೂ ಟಿವಿಯ ಮತ್ತೊಂದು ಎಡಿಷನ್ ಎಂದರೆ ಅದು ಸನ್ಯೂ XT-32A081H 32 ಇಂಚಿನ ಎಲ್ಇಡಿ ಹೆಚ್ ಡಿ-ರೆಡಿ ಟಿವಿ. ಇದೂ ಕೂಡ 10,000 ರುಪಾಯಿಯೊಳಗೆ ಸಿಗುತ್ತದೆ. ಕೈಗೆಟುಕುವ ಬೆಲೆಗೆ ಹೆಚ್ ಡಿ-ರೆಡಿ ಟಿವಿ ಕೂಡ ಉತ್ತಮ ಆಯ್ಕೆಯಾಗಿದೆ.

ಕ್ರೋಮಾ CREL7318 32 ಇಂಚಿನ ಎಲ್ಇಡಿ ಹೆಚ್ ಡಿ-ರೆಡಿ ಟಿವಿ
ಆಸಕ್ತಿ ಇರುವ ಖರೀದಿದಾರರು ಕ್ರೋಮಾ CREL7318 32 ಇಂಚಿನ ಎಲ್ಇಡಿ ಹೆಚ್ ಡಿ-ರೆಡಿ ಟಿವಿಯನ್ನು ಕೂಡ ಖರೀದಿಸಬಹುದು. ಇದರಲ್ಲಿ 20W ಡುಯಲ್ ಸ್ಪೀಕರ್ ವ್ಯವಸ್ಥೆ ಇದೆ. 10,000 ರುಪಾಯಿಯೊಳಗೆ ಸಿಗುವ ಉತ್ತಮ ಸ್ಮಾರ್ಟ್ ಟಿವಿಗಳಲ್ಲಿ ಇದೂ ಕೂಡ ಒಂದು.

ಪ್ಯಾನಸಾನಿಕ್ VIERA TH-22F200DX 22 ಇಂಚಿನ ಎಲ್ಇಡಿ ಫುಲ್ ಹೆಚ್ ಡಿ ಟಿವಿ
ಹೆಚ್ಚುವರಿಯಾಗಿ ಪ್ಯಾನಸಾನಿಕ್ VIERA TH-22F200DX 22 ಇಂಚಿನ ಎಲ್ಇಡಿ ಫುಲ್ ಹೆಚ್ ಡಿ ಟಿವಿ ಕೂಡ ಈ ಲಿಸ್ಟ್ ನಲ್ಲಿದೆ. ಫುಲ್ ಹೆಚ್ ಡಿ ಸ್ಮಾರ್ಟ್ ಟಿವಿ 1920 X 1080 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ ಮತ್ತು ಅತ್ಯುತ್ತಮ ವ್ಯೂವಿಂಗ್ ಅನುಭವ ನೀಡುತ್ತದೆ. ಕೈಗೆಟುಕುವ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಫೋನ್ ಆಗಿದೆ.


Click it and Unblock the Notifications








