ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಿದ ಡೇಟಿಂಗ್‌ ಆಪ್‌ ಬಂಬಲ್‌!

|

ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಮುಂದುವರೆದಂತೆ ಮನುಷ್ಯ ಇನ್ನಷ್ಟು ಸ್ಮಾರ್ಟ್‌ ಆಗುತ್ತಿದ್ದಾನೆ. ತನ್ನ ಭಾವನೆಗಳನ್ನ ಹಂಚಿಕೊಳ್ಳಲು ಯಾರಿಲ್ಲವೆಂದೂ ಕೊರಗುವ ಮಂದಿ ಇಂದು ಆನ್‌ಲೈನ್‌ ಚಾಟಿಂಗ್‌ನಲ್ಲಿ ಡೇಟಿಂಗ್‌ ಮಾಡುವಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರೆದಿದೆ. ನಿಜ ಟೆಕ್ನಾಲಜಿ ಇಂದು ಸಾಕಷ್ಟು ಆಪ್ಡೇಟ್‌ ಆಗಿದೆ. ಎಲ್ಲೋ ಇರುವ ವ್ಯಕ್ತಿ ನಿಮ್ಮ ನೋವುಗಲಿಗೆ ಧ್ವನಿ ಆಗ್ತಾನೆ. ನಿಮ್ಮ ಭಾವನೆಗಳಿಗೆ ಸ್ಪಂದಿಸುತ್ತಾನೆ ಅಲ್ಲದೆ ನಿಮ್ಮ ಜೊತೆ ಡೇಟಿಂಗ್‌ ಕೂಡ ನಡೆಸಬಲ್ಲ ಅಂದರೆ ಇದನೆಲ್ಲಾ ಸಾಧ್ಯವಾಗಿರಿಸಿರೋದು ಡೇಟಿಂಗ್‌ ಆಪ್‌ಗಳು.

ಇಂದು

ಹೌದು, ಇಂದು ಡೆಟಿಂಗ್‌ ಆಪ್‌ಗಳು ಸಾಕಷ್ಟು ಪ್ರಖ್ಯಾತಿಯನ್ನ ಗಳಿಸಿವೆ. ಸದ್ಯ ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ಇಂತಹ ಸಂದರ್ಭದಲ್ಲಿ ಕೂಡ ಡೇಟಿಂಗ್‌ ಆಪ್‌ಗಳು ಸದ್ದು ಮಾಡುತ್ತಿವೆ. ಮೊದಲೆಲ್ಲಾ ನಿವು ವಾಸ್ತವ್ಯ ಇರುವ ಸ್ಥಳದಿಂದ ಕಿಲೋ ಮೀಟರ್‌ಗಳ ಅಂತರದ ವ್ಯಕ್ತಿಗಳ ಜೊತೆ ಮಾತ್ರ ಡೇಟಿಂಗ್‌ ಮಾಡಲು ಅವಕಾಶ ನೀಡಿದ್ದ ಆಪ್‌ಗಳು ಇದೀಗ ಅಂತರವೇ ಇಲ್ಲದೆ ಯಾರೊ ಜೊತೆ ಬೇಕಾದರೂ ಯಾವ ಮೂಲೆಯಲ್ಲಿರುವ ಬಳಕೆದಾರನ ಜೊತೆಗಾದರೂ ಡೇಟ್‌ ಮಾಡಲು ಅವಕಾಶವನ್ನ ನೀಡಿವೆ. ಸದ್ಯ ಇದಕ್ಕಾಗಿ ಡೇಟಿಂಗ್‌ ಆಪ್‌ ಬಂಬಲ್‌ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಅಷ್ಟಕ್ಕೂ ಬಂಬಲ್‌ ಪರಿಚಯಿಸಿರುವ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಂಬಲ್‌

ಡೇಟಿಂಗ್‌ ಆಪ್‌ ಬಂಬಲ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಬಳಕೆದಾರರಿಗೆ ಡೇಟ್‌ ಮಾಡಲು ಕೆಲವು ಹೊಸ ಫೀಚರ್ಸ್‌ಗಳನ್ನ ಪರಿಚಯಸಿದೆ. ಅದುವೇ ಬಳಕೆದಾರ ಡೇಟ್‌ ಮಾಡಲು ದೇಶಾದ್ಯಂತ ದೂರವನ್ನು ವಿಸ್ತರಿಸುವುದು. ಅಂದರೆ ಈಗ, ಬಂಬಲ್ ಬಳಕೆದಾರರು ತಮ್ಮ ದೇಶದ ಯಾರೊಂದಿಗೂ ಬೇಕಾದರೂ ಡೇಟ್‌ ಮಾಡಲು ಹೊಂದಿಕೆಯಾಗಬಹುದು. ಸದ್ಯ ಇತರ ಡೇಟಿಂಗ್ ಅಪ್ಲಿಕೇಶನ್‌ಗಳಂತೆ ಬಂಬಲ್ ದೂರ ಆಧಾರಿತವಾಗಿದೆ. ಆದರೆ ಜಾಗತಿಕವಾಗಿ ಲಾಕ್‌ಡೌನ್ ಕಾರಣ ಜನರು ಮನೆಯಲ್ಲಿಯೇ ಉಳಿದುಕೊಂಡಿರುವುದರಿಂದ, ಬಂಬಲ್ ಇಡೀ ದೇಶಕ್ಕೆ ದೂರ ವ್ಯಾಪ್ತಿಯನ್ನು ಹೆಚ್ಚಿಸಲು ಸಾಧ್ಯವಾಗಿಸಿದೆ. ಈ ಹಿಂದೆ, ಬಳಕೆದಾರರು 100 ಮೈಲಿ ವ್ಯಾಪ್ತಿಯ ಜನರೊಂದಿಗೆ ಮಾತ್ರ ಸಂಪರ್ಕ ಸಾಧಿಸಲು ಅವಕಾಶ ನೀಡಿದ್ದನ್ನ ನಾವಿಲ್ಲಿ ಗಮನಿಸಬಹುದಾಗಿದೆ.

ಡೇಟಿಂಗ್‌

ಇನ್ನು ಡೇಟಿಂಗ್‌ ಆಪ್‌ ಬಂಬಲ್‌ನ ಪ್ರತಿಸ್ಪರ್ಧಿ ಟಿಂಡರ್ ಕೂಡ ಇದೇ ರೀತಿ ಮಾಡಿದೆ. ಅಲ್ಲಿ ಅದು ತನ್ನ ಪಾಸ್‌ಪೋರ್ಟ್ ಫೀಚರ್ಸ್‌ ಅನ್ನು ಎಲ್ಲರಿಗೂ ಉಚಿತವಾಗಿಸಿದೆ. ಇದು ಬಳಕೆದಾರರು ತಮ್ಮ ಸ್ಥಳವನ್ನು ವಿಶ್ವದ ಯಾವುದೇ ನಗರಕ್ಕೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಸದ್ಯ ಬಂಬಲ್‌ನ ಹೊಸ ಫೀಚರ್ಸ್‌ ಅದರ ವರ್ಚುವಲ್ ಡೇಟಿಂಗ್ ಪರಿಕರಗಳ ಭಾಗವಾಗಿ ಬರಲಿದೆ. ಇವುಗಳಲ್ಲಿ ಒಂದು ನಿಮ್ಮ ಪ್ರೊಫೈಲ್‌ಗೆ ‘ವರ್ಚುವಲ್ ಡೇಟಿಂಗ್ ಬ್ಯಾಡ್ಜ್' ಸೇರಿಸುವುದನ್ನು ಒಳಗೊಂಡಿರುತ್ತದೆ, ಇದರಿಂದಾಗಿ ನೀವು ವೀಡಿಯೊ ಚಾಟ್‌ಗೆ ಸಿದ್ಧರಾಗಿರುವಿರಿ ಎಂದು ನಿಮ್ಮ ಡೆಟ್‌ಗಳಿಗೆ ತಿಳಿಯುತ್ತದೆ.

ವರ್ಚುವಲ್

ನೀವು ಸೇರಿಸಲಾದ ಪ್ರತಿ ವರ್ಚುವಲ್ ಡೇಟಿಂಗ್ ಬ್ಯಾಡ್ಜ್‌ಗಾಗಿ, ಬಂಬಲ್ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ -19 ಸಾಲಿಡಾರಿಟಿ ಫಂಡ್‌ಗೆ ದೇಣಿಗೆ ನೀಡುತ್ತಾರೆ. ದಿ ವರ್ಜ್ ಪ್ರಕಾರ, ಬಂಬಲ್ ಪ್ರತಿ ಬ್ಯಾಡ್ಜ್‌ಗೆ 1 ಡಾಲರ್ ಮತ್ತು $ 10,000 ವರೆಗೆ ದಾನ ಮಾಡುತ್ತದೆ. ಬಂಬಲ್ ಈಗ ಬಳಕೆದಾರರಿಗೆ ತಮ್ಮ ಹೊಂದಾಣಿಕೆಗೆ ಆಡಿಯೊ ಟಿಪ್ಪಣಿಯನ್ನು ಸಹ ಆಪ್ಡೇಟ್‌ ಮಾಡಲು ಅವಕಾಶವನ್ನ ಕಲ್ಪಿಸಿದೆ. ನೀವು ನೀಡುವ ನೋಟ್‌ ಪಟ್ಟಿಯ ಪಕ್ಕದಲ್ಲಿ ಮೈಕ್ರೊಫೋನ್ ಬಟನ್ ಇದ್ದು, ಅದು ಬಳಕೆದಾರರು ತಮ್ಮ ಆಡಿಯೊ ಸಂದೇಶವನ್ನು ರೆಕಾರ್ಡ್ ಮಾಡಲು ಒತ್ತಿ ಹಿಡಿಯಬಹುದಾಗಿದೆ. ಈ ಮೂಲಕ ಆಡಿಯೋ ಟಿಪ್ಪಣಿ ಸೇರಿಸಬಹುದಾಗಿದೆ. ಇದು ಬಂಬಲ್ ಈಗಾಗಲೇ ಬೆಂಬಲಿಸುವ ವೀಡಿಯೊ ಮತ್ತು ಧ್ವನಿ ಕರೆಗಳಿಗೆ ಹೆಚ್ಚುವರಿಯಾಗಿರುತ್ತದೆ. ಇದು ಚಾಟ್‌ನಲ್ಲಿ ನಿರ್ದಿಷ್ಟ ಸಂದೇಶಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಕೂಡ ಸೇರಿಸಿದೆ. ಬಳಕೆದಾರರು ಕೇವಲ ಸಂದೇಶವನ್ನು ಹಿಡಿದಿಟ್ಟುಕೊಳ್ಳಬಹುದು ಮತ್ತು ಪಠ್ಯ, ಜಿಐಎಫ್, ಆಡಿಯೋ ಅಥವಾ ಧ್ವನಿ ಟಿಪ್ಪಣಿಯೊಂದಿಗೆ ಪ್ರತಿಕ್ರಿಯಿಸಬಹುದಾಗಿದೆ.

Best Mobiles in India

Read more about:
English summary
Bumble introduced four new features as part of its virtual dating tools for users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X