Home
ಸುದ್ದಿಜಾಲ

ಉಬರ್ ಮತ್ತು ಒಲಾ ಸೊಕ್ಕು ಮುರಿಯಲಿದೆ 'ಬರ್ಡೀ' ಆಪ್!..ಏಕೆ ಗೊತ್ತಾ?

ಆನ್‌ಲೈನ್ ಕ್ಯಾಬ್ ಸೇವೆ ನೀಡುವ ಸಲುವಾಗಿ ಹುಟ್ಟಿದ ಆದೆಷ್ಟೋ ಆಪ್‌ಗಳು ಸುದ್ದಿಗಿಲ್ಲದಂತೆ ಮರೆಯಾಗಿವೆ. ಒಂದೆಡೆ ವಿಶ್ವದೆಲ್ಲೆಡೆ ಮಾನ್ಯತೆ ಪಡೆದು ಹಲವು ಶತಕೋಟಿ ವ್ಯವಹಾರ ಮಾಡುತ್ತಿರುವ ಊಬರ್, ಇನ್ನೊಂದೆಡೆ ದೇಶದಲ್ಲೇ ಹುಟ್ಟಿ ಬೆಳೆದು ನಿಂತಿರುವ ಓಲಾಗೆ ಸೆಡ್ಡು ಹೊಡೆಯಲು ಹಲವು ಆಪ್‌ಗಳು ಹುಟ್ಟಿ, ಪೈಪೋಟಿ ತಡೆಯದೇ ಅಷ್ಟೇ ಬೇಗ ನೆಲಕಚ್ಚಿವೆ.

ಆದರೆ, ಉಬರ್ ಮತ್ತು ಒಲಾ ಎರಡೂ ಕ್ಯಾಬ್ ಸೇವಾ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಭಾರತದ್ದೇ ಮತ್ತೊಂದು ಆಪ್ ಶೀಘ್ರವೇ ದೇಶದೆಲ್ಲೆಡೇ ಕಾಲಿಡಲು ತಯಾರಾಗಿದೆ. ತಾನು ಉಬರ್ ಮತ್ತು ಒಲಾ ಎರಡು ಕಂಪೆನಿಗಳಿಗೆ ಟಫ್ ಫೈಟ್ ನೀಡುತ್ತೇನೆ ಎಂದು ಹೇಳಿಕೊಂಡು ದೆಹಲಿಯಲ್ಲಿ ಸೇವೆ ಪ್ರಾರಂಭಿಸಿರುವ 'ಬರ್ಡೀ ಕ್ಯಾಬ್ಸ್' ಆಪ್‌ ಈಗ ಎಲ್ಲೆಡೆ ಕಾರ್ಯ ಚಾಲನೆಗೆ ಬರುತ್ತಿದೆ.

ಉಬರ್ ಮತ್ತು ಒಲಾ ಸೊಕ್ಕು ಮುರಿಯಲಿದೆ 'ಬರ್ಡೀ' ಆಪ್!..ಏಕೆ ಗೊತ್ತಾ?

ಈ ಆಪ್‌ ದೇಶದೆಲ್ಲೆಡೇ ಕಾರ್ಯ ಚಾಲನೆ ಮಾಡುವುದಕ್ಕೂ ಮೊದಲೇ ನೀಡಿರುವ ಅಭಯದಿಂದ ಈಗ ಆಕ್ಯಾಬ್ ಮಾರುಕಟ್ಟೆಯಲ್ಲಿ ಮತ್ತೊಂದು ಸಂಚಲನ ಮೂಡಿಸಿದೆ. ಕ್ಯಾಬ್ ಡ್ರೈವರ್‌ಗಳು ಹಾಗೂ ಗ್ರಾಹಕರ ನಡುವೆ ಇರುವ ಸಂಕೀರ್ಣ ವ್ಯವಸ್ಥೆಯನ್ನು ತೊಲಗಿಸುವುದಾಗಿ ಹಾಗೂ ಕ್ಯಾಬ್ ಡ್ರೈವರ್‌ಗಳು ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿಕೊಂಡಿದೆ.

'ಬರ್ಡೀ ಕ್ಯಾಬ್ಸ್' ಆಪ್ ಕ್ಯಾಬ್ ಡ್ರೈವರ್‌ಗಳಿಗೆ ಕೇವಲ ಸೇವೆಯನ್ನು ಮಾತ್ರ ನೀಡುತ್ತದೆ. ಅದಕ್ಕಾಗಿ ಪ್ರತಿ ತಿಂಗಳಿಗೆ ತಲಾ 2 ಸಾವಿರ ರೂ. ಮಾತ್ರ ಚಾರ್ಜ್ ಮಾಡುವುದು ಬಿಟ್ಟರೆ ಬೇರೆ ರೀತಿಯ ತಲೆ ತಿನ್ನುವ ಲೆಕ್ಕಾಚಾರಗಳಿರುವುದಿಲ್ಲವಂತೆ. ಇದರಿಂದ ಕ್ಯಾಬ್ ಡ್ರೈವರ್‌ಗಳಿಗೆ ನ್ಯಾಯಯುತ ಆದಾಯ ಹಾಗೂ ಪ್ರಯಾಣಿಕರಿಗೆ ನ್ಯಾಯಯುತ ವೆಚ್ಚ ಆಗಲಿದೆ ಎಂದು ಹೇಳಿದೆ.

ಉಬರ್ ಮತ್ತು ಒಲಾ ಸೊಕ್ಕು ಮುರಿಯಲಿದೆ 'ಬರ್ಡೀ' ಆಪ್!..ಏಕೆ ಗೊತ್ತಾ?

ಒಟ್ಟಿನಲ್ಲಿ ಉಬರ್ ಮತ್ತು ಒಲಾ ವಿರುದ್ಧ ಟ್ರೈವರ್‌ಗಳು ನಡೆಸುತ್ತಿರುವ ಹೋರಾಟದ ಲಾಭವನ್ನು ಪಡೆದುಕೊಳ್ಳಲು 'ಬರ್ಡೀ ಕ್ಯಾಬ್ಸ್' ಆಪ್ ತಯಾರಾಗಿದೆ. ಕಿ.ಮೀಗೆ 6 ರೂಪಾಯಿ ವೆಚ್ಚದಲ್ಲಿ ಸೇವೆಯನ್ನು ಒದಗಿಸುವ ಗುರಿಯನ್ನು ಸಹ ಹೊಂದಿರುವ ಬರ್ಡೀ ಆಪ್ ಎಲ್ಲರ ಹಿತರಕ್ಷಣೆ ಕಾಯಲು ನಿಯಮಿತ ಆದಾಯವನ್ನು ಪಡೆಯಲಿದೆಯಂತೆ. ಇದಕ್ಕಿಂತ ಸಿಹಿಸುದ್ದಿ ಇನ್ನೇನಿದೆ ಅಲ್ಲವೇ.?

Best Mobiles in India

English summary
Tech start-up Burdy Thursday said it will offer cab aggregation services in Delhi-NCR, competing head-on with giants like Ola and Uber in the burgeoning segment. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+