ಕಳ್ಳನಿಗೆ ಚಳ್ಳೆಹಣ್ಣು ತಿನ್ನಿಸುವ ಕ್ರೆಡಿಟ್ ಕಾರ್ಡ್

Posted By: Staff
ಕಳ್ಳನಿಗೆ ಚಳ್ಳೆಹಣ್ಣು ತಿನ್ನಿಸುವ ಕ್ರೆಡಿಟ್ ಕಾರ್ಡ್
 

ಜೇಬಲ್ಲಿ ದುಡ್ಡು ಇಟ್ಟರೂ ಕಷ್ಟ, ಕ್ರೆಡಿಟ್ ಕಾರ್ಡ್ ಇಟ್ಟರೆ ಇನ್ನೂ ಕಷ್ಟ. ಶಾರುಖ್ ಖಾನ್ ನ ಕಾರ್ಡ್ ಅನ್ನೇ ಕದ್ದ ಭೂಪರು ನಮ್ಮಲ್ಲಿ ಇದ್ದಾರೆ ಎಂದಮೇಲೆ ನಮ್ಮ ನಿಮ್ಮೆಲ್ಲರ ಪಾಡೇನು.

ಇದಕ್ಕೆಲ್ಲ ಕಡಿವಾಣ ಹಾಕಲು ಅಮೆರಿಕಾದ ಡೈನಮಿಕ್ ಎಂಬ ಕಂಪನಿಯೊಂದು ಎಲೆಕ್ಟ್ರೋನಿಕ್ ಕ್ರೆಡಿಟ್ ಕಾರ್ಡ್ ಅನ್ನು ಕಂಡುಹಿಡಿದಿದೆ. ಫಿಲಿಪೀನ್ಸ್ ನಲ್ಲಿ ನಡೆದ ಸಿ. ಈ.ಎಸ್ ( ಕನ್ಸ್ಯೂಮರ್ ಎಲೆಕ್ಟ್ರೋನಿಕ್ ಶೋ ) 2012 ದಲ್ಲಿ ಈ ಕಾರ್ಡ್ ಎಲ್ಲರ ಮೆಚ್ಚುಗೆ ಗಳಿಸಿತು.

ಸಣ್ಣ ಬ್ಯಾಟರಿಯಿಂದ ಕೆಲಸ ಮಾಡುವ ಕಾರ್ಡ್ ಅನ್ನು ಉಪಯೋಗಿಸಲು ಕಾರ್ಡ್ ಹೋಲ್ಡರ್, ಆನ್ ಮಾಡಿದ ಮೇಲೆ ತನ್ನ 3 ಅಂಕೆಗಳ ವಿಶಿಷ್ಟ ಕೋಡ್ ಒತ್ತಬೇಕು. ನಂತರ ಕಾರ್ಡ್ ತಾನೇ ಹೊಸದಾದ 3 ಅಂಕೆಯನ್ನು ಡಿಸ್ಪ್ಲೇ ಮಾಡುತ್ತದೆ. ಇದನ್ನು ಉಪಯೋಗಿಸಿ ಆತ ಶಾಪ್ ಮಾಡಬಹುದು.ಈ ರೀತಿಯ ತಂತ್ರಜ್ಞಾನವಿರುವ  ಕಾರ್ಡನ್ನು ಕದ್ದರೂ ಅಥವಾ ನಕಲು ಮಾಡಿದರೂ ಉಪಯೋಗಿಸಲು ಬರುವುದಿಲ್ಲ ಎಂಬುದು ಕಂಪನಿಯ ಅಭಿಪ್ರಾಯ.

ಸದ್ಯಕ್ಕೆ ಸಿಟಿ ಬ್ಯಾಂಕ್ ಪ್ರಾಯೋಗಿಕವಾಗಿ ಇದನ್ನು ಉಪಯೋಗಿಸುತ್ತಿದ್ದು ,ನಿಮ್ಮ ಬ್ಯಾಂಕ್ ಕೂಡ ಇದನ್ನು ಅಳವಡಿಸಿಕೊಳ್ಳುವವರೆಗೂ ಕಾರ್ಡ್ ಜೋಪಾನವಾಗಿ ಇಟ್ಟುಕೊಳ್ಳಿ

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot