ಒನ್ ಪ್ಲಸ್ 6ಟಿಗೆ ಡಿಸೆಂಬರ್ 10 ರ ವರೆಗೆ 1,500 ರುಪಾಯಿ ರಿಯಾಯಿತಿ
ಒನ್ ಪ್ಲಸ್ 6ಟಿ ಸದ್ಯದ ಜನರೇಷನ್ನಿನ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ನ್ನುಕಂಪೆನಿಯು ಅಕ್ಟೋಬರ್ 30 ರಂದು ಬಿಡುಗಡೆಗೊಳಿಸಿದೆ ಮತ್ತು ನವೆಂಬರ್ 1 ರಿಂದ ಮಾರಾಟ ಪ್ರಕ್ರಿಯೆಯೂ ಕೂಡ ಆರಂಭವಾಗಿದೆ. ಈ ಡಿವೈಸ್ ಮೂರು ವೇರಿಯಂಟ್ ನಲ್ಲಿ ಲಭ್ಯವಿದೆ ಮತ್ತು ಇದರ ಬೆಲೆ 37,999 ಮತ್ತು 45,999 ರುಪಾಯಿಗಳ ನಡುವೆ ಇದೆ. ಹೆಚ್ಚು ಕಡಿಮೆ ಒನ್ ಪ್ಲಸ್ 6 ನ ಎಲ್ಲಾ ವೈಶಿಷ್ಟ್ಯತೆಗಳಿದ್ದು ಹೆಚ್ಚೇನು ಬದಲಾವಣೆಗಳಿಲ್ಲ. ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾತ್ರವೇ ಒನ್ ಪ್ಲಸ್ 6ಟಿ ಹೊಂದಿದೆ.

ಎಂದಿನಂತೆ ಅಮೇಜಾನ್ ಇಂಡಿಯಾದಲ್ಲಿ ಇದು ಎಕ್ಸ್ ಕ್ಲೂಸೀವ್ ಆಗಿ ಲಭ್ಯವಿದೆ ಮತ್ತು ಕೆಲವು ಅಮೇಜಾನ್ ಸಂಬಂಧಿತ ಆಫರ್ ಗಳು ಮತ್ತು ಪಾರ್ಟ್ನರ್ ಡಿಸ್ಕೌಂಟ್ ಗಳನ್ನು ಪಡೆಯಬಹುದು.
ಒಂದು ವೇಳೆ ನೀವು ಒನ್ ಪ್ಲಸ್ 6ಟಿ ಫೋನ್ ನ್ನು ಖರೀದಿಸಬೇಕು ಎಂದು ಇಚ್ಛಿಸುತ್ತಿದ್ದಲ್ಲಿ ಇದೀಗ ಉತ್ತಮ ಸಮಯವಾಗಿದೆ. ಯಾಕೆಂದರೆ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ನೀವು 1,500 ರುಪಾಯಿ ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್ ಡಿಸೆಂಬರ್ 10 ರ ವರೆಗೆ ಮಾತ್ರವೇ ಲಭ್ಯವಿದೆ.

1,500 ರುಪಾಯಿ ರಿಯಾಯಿತಿಯಲ್ಲಿ ಒನ್ ಪ್ಲಸ್ 6ಟಿ ಯನ್ನು ಹೇಗೆ ಖರೀದಿಸಬಹುದು?
ಒನ್ ಪ್ಲಸ್ 6ಟಿ ಗೆ ನೀವು ಕೂಡ 1,500 ರುಪಾಯಿ ಕ್ಯಾಷ್ ಬ್ಯಾಕ್ ಪಡೆಯಬೇಕು ಎಂದಾದಲ್ಲಿ ನೀವು ಸಿಟಿ ಬ್ಯಾಂಕ್ ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನ್ನು ಖರೀದಿಗಾಗಿ ಬಳಸಬೇಕು.ಇದು ಲಿಮಿಟೆಡ್ ಪಿರೇಡ್ ಆಫರ್ ಆಗಿದ್ದು ಅಮೇಜಾನ್ ಇಂಡಿಯಾ ವೆಬ್ ಸೈಟ್ ಮೂಲಕ ಖರೀದಿಸಿದರೆ ಮಾತ್ರವೇ ಇದು ಲಭ್ಯವಾಗುತ್ತದೆ.( ವೆಬ್ ಸೈಟ್ ಅಥವಾ ಆಪ್ ಯಾವುದನ್ನು ಬೇಕಿದ್ದರೂ ಖರೀದಿಗೆ ಬಳಸಬಹುದು).

ಒನ್ ಪ್ಲಸ್ 6ಟಿ ಸಿಟಿಬ್ಯಾಂಕ್ ಆಫರ್
ಒನ್ ಪ್ಲಸ್ 6ಟಿ ಸಿಟಿಬ್ಯಾಂಕ್ ಆಫರ್ ನವೆಂಬರ್ 23 ರಿಂದ ಡಿಸೆಂಬರ್ 10 ರ ವರೆಗೆ ನಡೆಯುತ್ತದೆ. ನೀವು ಈ ರಿಯಾಯಿತಿಯನ್ನು 22,000 ರುಪಾಯಿಯ ಒಂದೇ ಟ್ರಾನ್ಸ್ಯಾಕ್ಷನ್ ಅಥವಾ ಇಎಂಐ ಆಯ್ಕೆ ಯಾವುದನ್ನು ಆಯ್ಕೆ ಮಾಡಿಕೊಂಡರೂ ಕೂಡ ಪಡೆಯಬಹುದು. ಈ ಕ್ಯಾಷ್ ಬ್ಯಾಕ್ ನ್ನು ಮಾರ್ಚ್ 10,2019 ರ ಒಳಗೆ ನಿಮಗೆ ಕ್ರೆಡಿಟ್ ಮಾಡಲಾಗುತ್ತದೆ.

ಒನ್ ಪ್ಲಸ್ 6ಟಿ ಗೆ ಇರುವ ಇತರೆ ಆಫರ್ ಗಳು
ಈ ಫೋನ್ ನ್ನು ಬಿಡುಗಡೆಗೊಳಿಸುವ ಸಂದರ್ಬದಲ್ಲಿ ಕಂಪೆನಿಯು ಕೆಲವು ಬಿಡುಗಡೆಯ ಆಫರ್ ಗಳನ್ನು ನೀಡಿತ್ತು. ವೋಚರ್ ಗಳ ರೂಪದಲ್ಲಿ 6ಟಿ ಫೋನ್ ಖರೀದಿಸಿದವರಿಗೆ 5,400 ರುಪಾಯಿಗಳ ಬೆನಿಫಿಟ್ ಸಿಗುತ್ತದೆ. ಮತ್ತು 3ಟಿಬಿ ವರೆಗೆ ಜಿಯೋ 4ಜಿಬಿ ಡಾಟಾವನ್ನು ನೀಡಲಾಗಿತ್ತು. ಅಷ್ಟೇ ಅಲ್ಲ 6% ದ ವರಗೆ ಕಿಂಡಲ್ ಬುಕ್ಸ್ ಗಳ ಮೇಲೆ ರಿಯಾಯಿತಿಯನ್ನು ಗರಿಷ್ಟ 500 ರುಪಾಯಿ ವರೆಗೆ ನೀಡಲಾಗಿತ್ತು. ಅಪಘಾತ ವಿಮೆ ಮತ್ತು ಲಿಕ್ವಿಡ್ ಡ್ಯಾಮೇಜ್ ಪ್ರೊಟೆಕ್ಷನ್ ವಿಮೆ ಅಂದರೆ 2000 ರುಪಾಯಿ ಬೆಲೆಬಾಳುವ ಇದನ್ನು ಕೋಟಕ್ 811 ಅಕೌಂಟ್ ನಲ್ಲಿ ಮಾಡಲಾಗುತ್ತಿತ್ತಿತ್ತು. ಬಜಾಜ್ ಫಿನ್ ಸರ್ವ್ ಅಥವಾ ಮೇಜರ್ ಕ್ರೆಡಿಟ್ ಕಾರ್ಡ್ ನಲ್ಲಿ ನೋ ಕಾಸ್ಟ್ ಇಎಂಐ ಮೂಲಕ ಖರೀದಿಸುವುದಕ್ಕೂ ಕೂಡ ಅವಕಾಶವಿತ್ತು.


Click it and Unblock the Notifications








