Home
ಸುದ್ದಿಜಾಲ

ಸಂಗೀತಾದಲ್ಲಿ ಮೊಬೈಲ್ ಖರೀದಿಸಿದರೆ ಉಚಿತ ಏರ್ ಆಂಬುಲೆನ್ಸ್ ಸೇವೆ!!

ಏವಿಯೇಟರ್ಸ್ ಏರ್‌ ರೆಸ್ಕ್ಯೂ ಸಂಸ್ಥೆ ಸಹಯೋಗದಲ್ಲಿ ಸಂಗೀತಾ ಮೊಬೈಲ್ಸ್ ತನ್ನ ಗ್ರಾಹಕರಿಗೆ ಉಚಿತ ಏರ್‌ ಆಂಬುಲೆನ್ಸ್ ಸೇವೆ ಒದಗಿಸಲಾಗುವುದು ಎಂದು ತಿಳಿಸಿದೆ.!

By Bhaskar N J

ದಕ್ಷಿಣ ಭಾರತದ ಪ್ರಮುಖ ಮೊಬೈಲ್ ಮಾರಟ ಸಂಸ್ಥೆ ಸಂಗೀತಾ ಮೊಬೈಲ್ಸ್ ತನ್ನ ಗ್ರಾಹಕರಿಗೆ ಭಾರೀ ಆಫರ್ ಒಂದನ್ನು ನೀಡಿ ಗಮನಸೆಳೆದಿದೆ.! ಹೌದು, ಸಂಗೀತಾ ಮೊಬೈಲ್ಸ್ ಏವಿಯೇಟರ್ಸ್ ಏರ್‌ ರೆಸ್ಕ್ಯೂ ಸಂಸ್ಥೆ ಸಹಯೋಗದಲ್ಲಿ ತನ್ನ ಗ್ರಾಹಕರಿಗೆ ಉಚಿತ ಏರ್‌ ಆಂಬುಲೆನ್ಸ್ ಸೇವೆ ಒದಗಿಸಲಾಗುವುದು ಎಂದು ತಿಳಿಸಿದೆ.!

ಸಂಗೀತಾ ಮೊಬೈಲ್ಸ್‌ನ ನಿರ್ವಾಹಕ ನಿರ್ದೇಶಕ ಎಲ್‌. ಸುಭಾಷ್‌ ಚಂದ್ರ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸಂಗೀತಾ ಮೊಬೈಲ್ಸ್‌ನಲ್ಲಿ ಫೋನ್‌ ಕೊಳ್ಳುವ ಗ್ರಾಹಕರಿಗೆ ಮೊಬೈಲ್‌ ಮೇಲೆ ಸುರಕ್ಷತೆ ನೀಡುವಂತೆ ಗ್ರಾಹಕರ ಸುರಕ್ಷತೆಯನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ಏರ್‌ ಆಂಬುಲನ್ಸ್ ಸೇವೆ ಒದಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ.!!

ಇದೇ ಮೊದಲು ಬಾರಿ ಮೊಬೈಲ್ ಸಂಸ್ಥೆಯೊಂದು ಏರ್‌ ಆಂಬುಲೆನ್ಸ್ ಸೇವೆಯನ್ನು ಒದಗಿಸುವ ಆಫರ್ ನೀಡಿದ್ದು, ಹಾಗಾದರೆ, ಸಂಗೀತಾ ಮೊಬೈಲ್ಸ್ ಖರೀದಿಸಿದರೆ ಏರ್‌ ಆಂಬುಲನ್ಸ್ ಸೇವೆಯನ್ನು ಉಚಿತವಾಗಿ ಪಡೆಯುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸಂಗೀತದಲ್ಲಿ ಮೊಬೈಲ್ ಖರೀದಿಸಿ.!!

ಸಂಗೀತದಲ್ಲಿ ಮೊಬೈಲ್ ಖರೀದಿಸಿ.!!

ದಕ್ಷಿಣ ಭಾರತದ ಬಹುತೇಕ ಎಲ್ಲಾ ನಗರಗಳಲ್ಲಿ ಸಂಗೀತಾ ಮೊಬೈಲ್ಸ್ ತನ್ನ ಶಾಖೆಗಳನ್ನು ಹೊಂದಿದ್ದು, ಯಾವುದೇ ನಗರದಲ್ಲಿನ ಸಂಗೀತ ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಖರೀದಿಸಿದವರಿಗೆ ಈ ಸೇವೆ ಲಭ್ಯವಿದೆ.!!

₹10,000 ಬೆಲೆಯ ಫೋನ್‌!!

₹10,000 ಬೆಲೆಯ ಫೋನ್‌!!

ಗ್ರಾಹಕರ ಸುರಕ್ಷತೆಯನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ಏರ್‌ ಆಂಬುಲನ್ಸ್ ಸೇವೆ ಒದಗಿಸುತ್ತಿರುವುದಾಗಿ ತಿಳಿಸಿರುವ ಸಂಗೀತಾ ಮೊಬೈಲ್ಸ್ ‘ಕನಿಷ್ಠ ₹10,000 ಬೆಲೆಯ ಫೋನ್‌ ಖರೀದಿಸುವ ಗ್ರಾಹಕರಿಗೂ ಈ ಸೌಲಭ್ಯ ನೀಡುವುದಾಗಿ ಹೇಳಿದೆ. ಅದಕ್ಕಿಂತ ಕಡಿಮೆ ಬೆಲೆಯ ಫೋನ್ ಖರೀದಿಗೆ ಈ ಸೇವೆ ಲಭ್ಯವಿಲ್ಲ.!!

ಕೂಪನ್ ನೀಡಲಾಗುತ್ತದೆ.!!

ಕೂಪನ್ ನೀಡಲಾಗುತ್ತದೆ.!!

ಸಂಗೀತದಲ್ಲಿ ಮೊಬೈಲ್ ಖರೀದಿಸಿದ ನಂತರ ಯಾವುದೇ ಶುಲ್ಕ ಪಡೆಯದೇ ಉಚಿತವಾಗಿ ಈ ಸೇವೆ ಒದಗಿಸಲಾಗುತ್ತಿದ್ದು, ಮೊಬೈಲ್‌ ಖರೀದಿಸಿದ ಕೂಡಲೇ ಗ್ರಾಹಕರಿಗೆ ಒಂದು ಕೂಪನ್‌ ನೀಡಲಾಗುತ್ತದೆ. ಅದರಲ್ಲಿ ಗ್ರಾಹಕರ ಆರೋಗ್ಯ ಮಾಹಿತಿ, ರಕ್ತದ ಗುಂಪು ಇತ್ಯಾದಿ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ಸುಭಾಷ್‌ ಚಂದ್ರ ತಿಳಿಸಿದ್ದಾರೆ.!!

ಒಂದು ವರ್ಷ ಮಾತ್ರ!!

ಒಂದು ವರ್ಷ ಮಾತ್ರ!!

ಸಂಗೀತಾ ಮೊಬೈಲ್ಸ್ ನಲ್ಲಿ ಕನಿಷ್ಠ 10,000 ಬೆಲೆಯ ಫೋನ್‌ ಖರೀದಿಸುವ ಗ್ರಾಹಕರಿಗೆ ಉಚಿತ ಏರ್‌ ಆಂಬುಲನ್ಸ್ ಸೇವೆ, ಮೊಬೈಲ್ ಖರೀದಿಸಿದ ದಿನದಿಂದ ಒಂದು ವರ್ಷ ಮಾತ್ರ ಲಭ್ಯವಿರುತ್ತದೆ. ಆ ಅವಧಿಯ ಒಳಗಾಗಿ ಗ್ರಾಹಕರಿಗೆ ಏರ್‌ ಆಂಬುಲನ್ಸ್ ಸೇವೆ ನೀಡಲು ಸಂಗೀತ ಮೊಬೈಲ್ಸ್ ಮುಂದಾಗಿದೆ.!!

ಏರ್‌ ಆಂಬುಲನ್ಸ್ ಸೇವೆ ಹೇಗಿರಲಿದೆ?

ಏರ್‌ ಆಂಬುಲನ್ಸ್ ಸೇವೆ ಹೇಗಿರಲಿದೆ?

ಬೆಂಗಳೂರಿನಲ್ಲಿಯೋ ಅಥವಾ ಹಾಸನದಲ್ಲಿಯೋ ಫೋನ್ ಖರೀದಿಸಿದ ಗ್ರಾಹಕ ಚೆನ್ನೈ, ಮೈಸೂರು ಹೀಗೆ ಯಾವುದೇ ಪ್ರದೇಶದಲ್ಲಿ ಅನಾರೋಗ್ಯಕ್ಕೆ ತುತ್ತಾದರೂ, ವೈದ್ಯರು ಬೇರೆಡೆಗೆ ತುರ್ತಾಗಿ ಸ್ಥಳಾಂತರಿಸಲು ಸೂಚಿಸಿದರೆ ಆ ಪ್ರದೇಶಕ್ಕೆ ಏರ್‌ ಆಂಬುಲೆನ್ಸ್‌ ಮೂಲಕ ಕಳುಹಿಸಿಕೊಡಲಾಗುವುದು ಎಂದು ಸಂಗೀತಾ ಮೊಬೈಲ್ಸ್‌ನ ನಿರ್ವಾಹಕ ನಿರ್ದೇಶಕ ತಿಳಿಸಿದ್ದಾರೆ.!!

Best Mobiles in India

English summary
The customers will receive a helicopter air ambulance membership kit which will have step-wise details of the registration process. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+