ಚೀನಾ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬೇಕೆ ಅಥವಾ ಬೇಡವೇ?..ಈ ಲೇಖನ ಓದಿ ಹೇಳಿ!!

Written By:

ಚೀನಾ ಕಂಪೆನಿಯ ಯಾವುದೇ ವಸ್ತುಗಳನ್ನು ಖರೀದಿಸದೇ ದೇಶಾಭಿಮಾನವನ್ನು ಮೆರೆಯಿರಿ. ಭಾರತದ ವಿರೋಧಿ ಚೀನಾ ದೇಶದ ವಸ್ತುಗಳನ್ನು ಬಹಿಷ್ಕರಿಸಿ ಎನ್ನುವ ಕೂಗು ಎಲ್ಲೆಡೇ ಕೇಳಿಬರುತ್ತಿದೆ. ಹಾಗಾಗಿ, ಎಲ್ಲರೂ ಒಮ್ಮೆ ಈ ಲೇಖನ ಓದಿದರೆ ಒಳಿತು!!

ಚೀನಾ ಮೊದಲಿನಿಂದಲೂ ಭಾರತದ ವಿರೋಧ ಕಟ್ಟಿಕೊಂಡಿಯೇ ಬಂದಿದೆ. ಅದು ಯಾವಾಗಲೂ ಭಾರತದ ವಿರುದ್ದವಾಗಿಯೇ ನಿಂತಿದೆ.! ಹಾಗಾಗಿ, ಆ ದೇಶದ ಸ್ಮಾರ್ಟ್‌ಫೋನ್ ಸೇರಿ ಯಾವುದೇ ವಸ್ತುಗಳನ್ನು ಖರೀದಿಸಿಬಾರದು ಎಂದು ಎಲ್ಲರೂ ಹೇಳಿದರೆ, ಇದು ಸಾಧ್ಯವೇ ಎನ್ನುವ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ.! ಹೌದು, ಖಂಡಿತವಾಗಿ ಮೂಡುತ್ತದೆ.!!

ಹಾಗಾದರೆ, ಚೀನಾ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಾರದೇ? ಖರೀದಿಸದಿದ್ದರೆ ಏನು ಲಾಭ ಮತ್ತು ಏನು ನಷ್ಟ? ಚೀನಾ ಮೊಬೈಲ್‌ಗಳಿಗೆ ಪರ್ಯಾಯ ಇಂಡಿಯಾದ ಮೊಬೈಲ್‌ಗಳು ಯಾವುವು? ಚೀನಾ ವಸ್ತುಗಳಲ್ಲಿ ಸರ್ಕಾರದ ಪಾತ್ರ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೀವು ಪ್ರಸ್ತುತ ಬಳಕೆ ಮಾಡುತ್ತಿರುವುದು ಚೀನಾ ಫೋನ್‌ಗಳೇ!!

ನೀವು ಪ್ರಸ್ತುತ ಬಳಕೆ ಮಾಡುತ್ತಿರುವುದು ಚೀನಾ ಫೋನ್‌ಗಳೇ!!

ನೀವು ನಂಬುತ್ತಿರೋ ಬಿಡುತ್ತೀರೋ ಗೊತ್ತಿಲ್ಲಾ. ನೀವು ಚೀನಾ ಕಂಪೆನಿಯ ಮೊಬೈಲ್ ಬಳಸದಿದ್ದರೂ ನೀವು ಬಳಕೆ ಮಾಡುತ್ತಿರುವ ಸ್ಮಾರ್ಟ್‌ಫೋನ್‌ ಬಿಡಿಭಾಗಗಳಲ್ಲಿ ಒಂದಾದರೂ ಚೀನಾ ವಸ್ತು ಇದ್ದೇ ಇರುತ್ತದೆ.! ಆಪಲ್‌ನಿಂದ ಹಿಡಿದು ಸ್ಯಾಮ್‌ಸಂಗ್, ನೋಕಿಯಾ ಎಲ್ಲಾ ಕಂಪೆನಿಗಳು ಚೀನಾದಿಂದ ಬಿಡಿಭಾಗಗಳನ್ನು ತರಿಸಿಕೊಳ್ಳುತ್ತದೆ.!!

ಚೀನಾ ಮೊಬೈಲ್ ಖರೀದಿಸದಿದ್ದರೆ ಬೇರೆ ಯಾವ ಮೊಬೈಲ್ ಖರೀದಿಸುತ್ತೀರಾ?

ಚೀನಾ ಮೊಬೈಲ್ ಖರೀದಿಸದಿದ್ದರೆ ಬೇರೆ ಯಾವ ಮೊಬೈಲ್ ಖರೀದಿಸುತ್ತೀರಾ?

ಇಂತಹದೊಂದು ಸಾಮಾನ್ಯ ಪ್ರಶ್ನೆ ನಿಮಗೆ ಮೂಡದಿದ್ದರೆ ಇಲ್ಲಿ ತಿಳಿದುಕೊಳ್ಳಿ. ಭಾರತದ ಯಾವುದೇ ಮೊಬೈಲ್ ಕಂಪೆನಿಯೋ ಸ್ವಂತವಾಗಿ ಮೊಬೈಲ್ ತಯಾರಿಕೆ ಮಾಡುತ್ತಿಲ್ಲ. ಎಲ್ಲಾ ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಂಡು ಅವುಗಳನ್ನು ಸೇರಿಸಿ ನಮಗೆ ಮಾರಾಟಮಾಡುತ್ತವೆ.!! ಅಂದರೆ ಭಾರತದ್ದು ಏನಿದೆ ಇಲ್ಲಿ.!!

ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್ಸ್.!!

ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್ಸ್.!!

ಚೀನಾದ ಮೊಬೈಲ್ ಕಂಪೆನಿಗಳು ನೀಡುವಷ್ಟು ಕಡಿಮೆ ಬೆಲೆಗೆ ಯಾವುದೇ ಬೇರೆ ಮೊಬೈಲ್ ಕಂಪೆನಿ ನೀಡುವುದಿಲ್ಲ. ಒಂದು ಚೀನಾ ಕಂಪೆನಿಯ ಹೈ ಎಂಡ್ ಸ್ಮಾರ್ಟ್‌ಫೋನ್ ಬೆಲೆ 30,000 ಸಾವಿರ ರೂ. ಆಗಿದ್ದರೆ. ಅದೇ ಬೇರೆ ಕಂಪೆನಿಯಲ್ಲಿ ಅವುಗಳ ಬೆಲೆ 60,000 ರೂಪಾಯಿಗಳಾಗಿರುತ್ತವೆ.!!

ಸರ್ಕಾರವೇ ನಿಷೇಧ ಮಾಡಬಹುದು ಅಲ್ವಾ?

ಸರ್ಕಾರವೇ ನಿಷೇಧ ಮಾಡಬಹುದು ಅಲ್ವಾ?

ಒಂದು ವೇಳೆ ಚೀನಾದ ಮೊಬೈಲ್‌ಗಳನ್ನು ಖರೀದಿಸಿದರೆ ಆ ದೇಶಕ್ಕೆ ನಾವು ಹಣ ನೀಡಿದಂತಾಗುವುದು ಎಂದು ನಿಮ್ಮ ಅಭಿಪ್ರಾಯವಾಗಿದ್ದರೆ. ಒಮ್ಮೆ ಯೋಚಿಸಿ ಚೀನಾದ ಮೊಬೈಲ್ ಕಂಪೆನಿಗಳಿಗೆ ಸರ್ಕಾರವೇ ನಿಷೇಧವನ್ನು ಹೇರಬಹುದು ಅಲ್ಲವೇ.? ಯಾವುದೇ ಚೀನಾ ವಸ್ತುಗಳನ್ನು ಆಮದು ಮಾಡಿಕೊಳ್ಳದಿದ್ದರೆ ಖರೀದಿಸುವ ಮಾತಿನೆಲ್ಲಿ.!!

ಲಕ್ಷಾಂತರ ಉದ್ಯೋಗಕ್ಕೆ ಕತ್ತರಿ.!!

ಲಕ್ಷಾಂತರ ಉದ್ಯೋಗಕ್ಕೆ ಕತ್ತರಿ.!!

ನೀವು ಚೀನಾ ಕಂಪೆನಿಗಳನ್ನು ಬ್ಯಾನ್ ಮಾಡಿದರೆ ಭಾರತದಲ್ಲಿ ಲಕ್ಷಾಂತಹ ಉದ್ಯೋಗಗಳಿಗೆ ಕತ್ತರಿ ಬೀಳುತ್ತದೆ. ಬಂಡವಾಳ ಹೂಡಿ ಮತ್ತೆ ಇವರಿಗೆ ನೌಕರಿ ನೀಡುವ ಮೊಬೈಲ್‌ ಕಂಪೆನಿಗಳು ಮತ್ತೆ ಎಲ್ಲಿ ಬರುತ್ತವೆ ಎಂಬುದು ಯಕ್ಷಪ್ರಶ್ನೆಯಾಗಿದೆ.!!

ದೇಶಾಭಿಮಾನ ಇದೆ ಆದರೆ ಅವಕಾಶವಿಲ್ಲಾ.!!

ದೇಶಾಭಿಮಾನ ಇದೆ ಆದರೆ ಅವಕಾಶವಿಲ್ಲಾ.!!

ಎಲ್ಲರಿಗೂ ದೇಶಾಭಿಮಾನ ಇದ್ದೇ ಇರುತ್ತದೆ. ಹಾಗಾಗಿ, ನಾವು ಚೀನಾ ಸ್ಮಾರ್ಟ್‌ಫೋನ್‌ಗಳನ್ನು ವಿರೋಧಿಸಿದರೆ ನಮ್ಮ ಸಮಸ್ಯೆ ತೀರುವುದಿಲ್ಲ ಎನ್ನುವುದು ನಮ್ಮ ಅಭಿಪ್ರಾಯ. ಕಡಿಮೆ ಬೆಲೆಗೆ ಹೆಚ್ಚು ಸೇವೆ ನೀಡುವ ವಸ್ತುಗಳ ಬಳಕೆ ಮಾಡುವುದರಲ್ಲಿ ಅಂತಹ ತಪ್ಪೇನಿದೆ.!!?

ಚೀನಾಕ್ಕೂ ಭಯ ಇದೆ.!!

ಚೀನಾಕ್ಕೂ ಭಯ ಇದೆ.!!

ನಮ್ಮ ಮೇಲೆ ಚೀನಾ ಯುದ್ದ ಮಾಡಲು ನಮ್ಮ ಹಣವನ್ನೇ ಬಳಸಬಹುದು ಎಂದು ನಾವು ಅಂದುಕೊಂಡರೆ, ಭಾರತದಂತಹ ದೇಶದ ವಿರದ್ಧ ಯುದ್ದ ಮಾಡಲು ಚೀನಾಗೂ ಹೆದರಿಕೆ ಇದೆ. ಇನ್ನು ಕೋಟ್ಯಾಂತರ ಬಂಡವಾಳ ಹೂಡಿರುವ ಮೊಬೈಲ್ ಕಂಪೆನಿಗಳು, ದೊಡ್ಡ ಮಾರುಕಟ್ಟೆ ಕಳೆದುಕೊಂಡರೆ ಎನ್ನುವ ಭೀತಿ ಚೀನಾಕ್ಕೂ ಇದೆ.!

ಕೊನೆಯಲ್ಲಿ ಒಂದು ಮಾತು.!!

ಕೊನೆಯಲ್ಲಿ ಒಂದು ಮಾತು.!!

ಚೀನಾ ವಸ್ತುಗಳನ್ನು ಭಹಿಷ್ಕರಿಸಿ ದೇಶಾಭಿಮಾನ ಮೆರೆಯುವುದು ಬಿಡುವುದು ಪ್ರತಿಯೋರ್ವರ ಸ್ವಂತ ಅಭಿಪ್ರಾಯ. ಆದರೆ, ವ್ಯವಹಾರಿಕ ವಿಷಯಕ್ಕೆ ಬಂದರೆ ಇಂತಹ ಲಕ್ಷಣಗಳು ಎರಡೂ ದೇಶಗಳ ಅಭಿವೃದ್ದಿಮೇಲೆ ಪರಿಣಾಮ ಭೀರುವುದರಲ್ಲಿ ಎರಡು ಮಾತಿಲ್ಲ.!!

ಓದಿರಿ:ಜಿಯೋಯಿಂದ ಕಂಗೆಟ್ಟ ಏರ್‌ಟೆಲ್..ಆಗಸ್ಟ್ 1 ರಿಂದ ಹೊಸ ಸೇವೆ!!..ಏನದು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
holesalers can offer lower Minimum Order Quantities. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot