ಸೈಬರ್ ವಂಚಕನ ಖತರ್ನಾಕ್ ಐಡಿಯಾ; ಬೆಚ್ಚಿಬಿದ್ದ ನಗರದ ರಾಯಭಾರಿ ಕಚೇರಿ!!

|

ವಿವಿಧ ರೀತಿಯಲ್ಲಿ ಜನರನ್ನು ವಚಿಸುವ ಸೈಬರ್ ವಂಚಕರು ಇದೀಗ ಜಪಾನ್‌ ರಾಯಭಾರಿ ಹೆಸರು ಹಾಗೂ ಕಚೇರಿ ವಿಳಾಸ ದುರ್ಬಳಕೆ ಮಾಡಿಕೊಂಡು ಅನ್‌ಲೈನ್‌ ವಂಚನೆ ನಡೆಸಲು ಯತ್ನಿಸಿದ್ದಾರೆ ಅದರೆ, ದೊಡ್ಡ ಅಪಾಯವೊಂದನ್ನು ತಪ್ಪಿಸಿಕೊಂಡಿರುವ ನಗರದ ನಿವಾಸಿಯೋರ್ವರು ಕೊನೆಗೂ 20 ಸಾವಿರ ರೂ. ಹಣ ಕಳೆದುಕೊಂಡಿರುವ ಪ್ರಕರಣ ವರದಿಯಾಗಿದೆ.

ಬೆಂಗಳೂರು ನಗರದ ಕಬ್ಬನ್ ರಸ್ತೆಯಲ್ಲಿರುವ ಜಪಾನ್‌ ರಾಯಭಾರಿ ಹೆಸರಿನಲ್ಲಿ ವಂಚನೆ ನಡೆಸಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತ ಹೆಸರುಗಳನ್ನು ಹೊಂದಿರುವ ವಿದೇಶಗಳಿಂದ ಬರುವ ರಾಯಭಾರಿಗಳ ಹೆಸರನ್ನು ಬಳಸಿಕೊಂಡು ವಂಚನೆ ನಡೆಸಲು ಜಾಲ ಬೀಸಲಾಗಿದೆ. ಆದರೆ, ಸ್ವಲ್ಪದರಲ್ಲಿಯೇ ವ್ಯಕ್ತಿಯರ್ವರು ಜಾಲದಿಂದ ತಪ್ಪಿಸಿಕೊಂಡಿದ್ದಾರೆ.

ಸೈಬರ್ ವಂಚಕನ ಖತರ್ನಾಕ್ ಐಡಿಯಾ; ಬೆಚ್ಚಿಬಿದ್ದ ನಗರದ ರಾಯಭಾರಿ ಕಚೇರಿ!!

ಆನ್‌ಲೈನಿನಲ್ಲಿ ಜಪಾನ್‌ ರಾಯಭಾರಿ ಹೆಸರಿನಲ್ಲಿ ನಕಲಿ ಮೇಲ್‌ ವಿಳಾಸ ಬರೆದು, ಹೆಚ್ಚು ಬೆಲೆಬಾಳುವ ಕಾರನ್ನು ಕಡಿಮೆ ಬೆಲೆಗೆ ಮಾರಾಟಕ್ಕಿಟ್ಟಿದ್ದ ವಂಚಕನನ್ನು ಹುಡುಕಲು ಪೊಲೀಸರು ಮುಮದಾಗಿದ್ದಾರೆ. ಹಾಗಾದರೆ, ಏನಿದು ಸೈಬರ್ ವಂಚಕನ ಖತರ್ನಾಕ್ ಐಡಿಯಾ? ಸ್ವಲ್ಪದರಲ್ಲಿಯೇ ವ್ಯಕ್ತಿಯರ್ವರು ಜಾಲದಿಂದ ತಪ್ಪಿಸಿಕೊಂಡಿದ್ದೇಗೆ ಎಂಬುದನ್ನು ಮುಂದೆ ತಿಳಿಯಿರಿ.

ವಂಚಿಸಲು ಯತ್ನಿಸಿದ್ದು ಹೇಗೆ?

ವಂಚಿಸಲು ಯತ್ನಿಸಿದ್ದು ಹೇಗೆ?

ಅಪರಿಚಿತ ವಂಚಕನೊಬ್ಬ, ಟೊಯೋಟಾ ಇನೋವಾ ಕ್ರಿಸ್ಟಾ ಕಾರಿನ ಫೋಟೋ ಹಾಕಿ ಕಾರು ಮಾರಾಟದ ಬಗ್ಗೆ ಜಾಹಿರಾತು ನೀಡಿದ್ದಾನೆ. ನೋ ಸ್ಕ್ರಾಚಸ್, ಟೊಯೋಟಾ ಇನೋವಾ ಕ್ರಿಸ್ಟಾ, ಫಾರ್‌ ಸೇಲ್ ಎಂಬ ಅಡಿಬರಹದಲ್ಲಿದ್ದ ಜಾಹೀರಾತನ್ನು ನೀಡಿದ್ದಾನೆ. ಹಣವಿರುವ ವ್ಯಕ್ತಿಗಳು ಮಾತ್ರ ಪ್ರತಿಕ್ರಿಯೆ ನೀಡುವಂತೆ ದುಬಾರಿ ಕಾರಿನ ಜಾಹಿರಾತು ನೀಡಿದ್ದಾನೆ.

ರಾಯಭಾರಿ ಕಚೇರಿ ವಿಳಾಸ!

ರಾಯಭಾರಿ ಕಚೇರಿ ವಿಳಾಸ!

ಟೊಯೋಟಾ ಇನೋವಾ ಕ್ರಿಸ್ಟಾ ಸೇಲ್ ಫಾರ್‌ 14 ಲಕ್ಷ ರೂ. ಎಂದು ಜಾಹೀರಾತು ಪೋಸ್ಟ್‌ ಹಾಕಿದ್ದ ವ್ಯಕ್ತಿ ಕೊಳ್ಳಲು ಆಸಕ್ತಿ ಇರುವವರು ಸಂಪರ್ಕಿಸಲು ಮೊಬೈಲ್‌ ನಂಬರ್‌ ನೀಡಿದ್ದಾನೆ. ಆದರ ಜೊತೆಗೆ ಕಬ್ಬನ್ ರಸ್ತೆಯಲ್ಲಿರುವ ರಾಯಭಾರಿ ಕಚೇರಿ ವಿಳಾಸವನ್ನೂ ನಮೂದಿಸಿಸುವ ಮೂಲಕ ಜನರನ್ನು ನಂಬಿಸುವ ಕೆಲಸವನ್ನು ಮಾಡಿದ್ದಾನೆ.

ಬಲೆಗೆ ಬಿದ್ದರು ವ್ಯಕ್ತಿ.

ಬಲೆಗೆ ಬಿದ್ದರು ವ್ಯಕ್ತಿ.

ಆನ್‌ಲೈನ್‌ ತಾಣದಲ್ಲಿ ವಂಚಕ ಹಾಕಿದ ಕಾರಿನ ಮಾರಾಟದ ಜಾಹೀರಾತು ಪೋಸ್ಟರ್ ಗಮನಿಸಿದ ವ್ಯಕ್ತಿಯೊಬ್ಬರು ಕಾರನ್ನು ಕೊಳ್ಳುವ ಆಸಕ್ತಿ ವಹಿಸಿದ್ದಾರೆ. ನಂತರ ವಂಚಕನ ಜೊತೆ ದೂರವಾಣಿ ಸಂಭಾಷಣೆ ನಡೆದು, ಆತನ ಮಾತಿಗೆ ಮರುಳಾಗಿ ವಂಚಕ ನೀಡಿದ ಅಕೌಂಟ್ ನಂಬರ್‌ಗೆ 20 ಸಾವಿರ ರೂ. ಹಣವನ್ನು ಸಹ ವರ್ಗಾವಣೆ ಮಾಡಿದ್ದಾರೆ.

ಹೆಚ್ಚಿನ ಹಣಕ್ಕೆ ಬೇಡಿಕೆ.

ಹೆಚ್ಚಿನ ಹಣಕ್ಕೆ ಬೇಡಿಕೆ.

ಆ ವ್ಯಕ್ತಿ ಹಣ ವರ್ಗಾವಣೆ ಮಾಡಿದ ನಂತರ ಮತ್ತೆ ಹೆಚ್ಚಿನ ಹಣಕ್ಕೆ ವಂಚಕ ಬೇಡಿಕೆ ಇಟ್ಟಿದ್ದಾನೆ. ಮೊದಲು ಕಾರನ್ನು ನೋಡಬೇಕು ಎಂದು ಹೇಳಿದಾಗ, ಆತ ಹೇಳಿದಂತೆ ಮಂಗಳವಾರ ಮಧ್ಯಾಹ್ನ ಕಾರು ನೋಡುವ ಸಲುವಾಗಿ ರಾಯಭಾರಿ ಕಚೇರಿಗೆ ಆಗಮಿಸಿದ್ದಾರೆ. ಆದರೆ, ಎಷ್ಟು ಹೊತ್ತು ಕಾದರೂ ವಂಚಕನಿಂದ ಕರೆಯಾಗಲಿ ಮತ್ತು ಪ್ರತಿಕ್ರಿಯೆಯಾಗಲಿ ಇರಲಿಲ್ಲ.

ಬಯಲಾಯಿತು ಸತ್ಯ.

ಬಯಲಾಯಿತು ಸತ್ಯ.

ವಂಚಕನಿಂದ ಪ್ರತಿಕ್ರಿಯೆ ಸಿಗದಿದ್ದರಿಂದ ಜಪಾನ್ ರಾಯಭಾರಿ ಕಚೇರಿಯಲ್ಲಿನ ಅಧಿಕಾರಿಗಳನ್ನು ವಿಚಾರಿಸಿದ್ದಾರೆ.ಈ ಮಾಹಿತಿ ಕೇಳಿ ರಾಯಭಾರಿ ಕಚೇರಿ ಸಿಬ್ಬಂದಿ ಬೆಸ್ತು ಬಿದ್ದಿದ್ದಾರೆ. ಇದಾದ ನಂತರ ರಾಯಭಾರಿ ಟಕಾಯುಕಿ ಕಿಟಗಾವ್ ಅವರ ಸೂಚನೆ ಮೇರೆಗೆ ಅಲ್ಲಿನ ಅಧಿಕಾರಿ ಮಿತ್ಸುಹಿರೋ ಅಮೋ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿದೇಶಿ ಸೈಬರ್ ವಂಚಕರ ಕೃತ್ಯ?

ವಿದೇಶಿ ಸೈಬರ್ ವಂಚಕರ ಕೃತ್ಯ?

ವಂಚಕ ಯಾರದೋ ಫೋಟೋ ಅಪ್ಲೋಡ್‌ ಮಾಡಿ, ಜಪಾನ್‌ ರಾಯಭಾರಿ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ವಿದೇಶಿ ಸೈಬರ್ ವಂಚಕರು ಈ ಕೃತ್ಯ ಎಸಗಿರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ವಂಚಕನ ಕುರಿತು ಸುಳಿವು ಸಿಕ್ಕಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೋರ್ವರು ತಿಳಿಸಿದ್ದಾರೆ.

Best Mobiles in India

English summary
Buying a used car online? Beware of the latest scam in Bangalore. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X