Subscribe to Gizbot

ಬ್ಯೋಂಡ್‌ ಮಿ ಆಂಡ್ರಾಯ್ಡ್‌ ಐಸಿಎಸ್‌ ಟ್ಯಾಬ್ಲೆಟ್‌ ಬಿಡುಗಡೆ

Posted By: Vijeth

ಬ್ಯೋಂಡ್‌ ಮಿ ಆಂಡ್ರಾಯ್ಡ್‌ ಐಸಿಎಸ್‌ ಟ್ಯಾಬ್ಲೆಟ್‌ ಬಿಡುಗಡೆ

ಪೋಣೆ ಮೂಲದ ಅಗ್ಗದ ಬೆಲೆಯ ತಾಂತ್ರಕ ಸಾಮಗ್ರಿಗಳ ತಯಾರಿಕಾ ಸಂಸ್ಥೆಯಾದಂತಹ ಬ್ಯೋಂಡ್‌ ಟೆಕ್‌ ತನ್ನಯ ನೂತನ ಬಜೆಟ್‌ ಸ್ನೇಹಿ ಟ್ಯಾಬ್ಲೆಟ್‌ಗಳಾದಂತಹ ಬ್ಯೋಂಡ್‌ ಮಿ ಸರಣಿಯ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿದೆ. ಈ ನೂತನ ಮಿ ಸರಣಿಯ ಟ್ಯಾಬ್ಲೆಟ್‌ಗಳನ್ನು ಬಾಲಿವುಡ್‌ ನಟಿ ಝರೀನ್‌ ಖಾನ್‌ ಅನಾವರಣ ಗೊಳಿಸಿದರು.

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬ್ಯೋಂಡ್‌ ಟೆಕ್‌ ಸಂಸ್ಥೆಯ ಸಿಇಓ " ಭಾರತೀಯ ಮಾರುಕಟ್ಟೆಗೆ ಮಿ ಸರಣಿಯಲ್ಲಿ ವಿವಿಧ ರೀತಿಯ 10 ಮಿ ಬುಕ್‌ ಟ್ಯಾಬ್ಲೆಟ್‌ಗಳನ್ನು 4,300 ಹಾಗೂ 11,000 ದರದಲ್ಲಿ ಮಾರುಕಟ್ಟೆಗೆ ತಂದಿರುವುದಾಗಿ ತಿಳಿಸಿದ್ದಾರೆ". ಅಲ್ಲದೆ ಎಲ್ಲಾ ಮಿ ಬುಕ್‌ಗಳು 3ಡಿ ಸ್ಕ್ರೀನ್‌ ಹೊಂದಿದ್ದು, ಇದು ನವಾರಾತ್ರಿ ಹಬ್ಬದ ಸಲುವಾಗಿ ಗ್ರಾಹಕರಿಗೆ ಉಡುಗೊರೆಯಾಗಿದೆ ಎಂದು ಇಳಿಸಿದ್ದಾರೆ.

ಅಂದಹಾಗೆ ಬ್ಯೋಂಡ್‌ ಬಿಡುಗಡೆ ಮಾಡಿರುವ ನೂತನ ಮಿ ಸರಣಿಯ ಟ್ಯಾಬ್ಲೆಟ್‌ಗಳಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.

ವಿಶೇಷತೆ

ನೂತನ ಮಿ ಸರಣಿಯ ಟ್ಯಾಬ್ಲೆಟ್‌ಗಳು 7, 9 ಹಾಗೂ 10 ಇಂಚಿನ ದರ್ಶಕಗಳ ಮಾದರಿಗಳಲ್ಲಿ ಲಭ್ಯವಿದ್ದು ಹೋದಿಸ ಬಹುದಾದಂತಹ ಕೀಪ್ಯಾಡ್‌ ಕೂಡ ಬರಲಿದೆ. ಇದಲ್ಲದೆ ಸಿಮ್‌ ಕಾರ್ಡ್‌ ಸ್ಲಾಟ್‌ ಕೂಡ ಲಭ್ಯವಿದ್ದು ವಿಡಿಯೋ ಕರೆ ಮಾಡಬಹುದಾಗಿದೆ.

ಉಳಿದಂತೆ ನೂತನ ಮಿ ಸರಣಿಯ ಟ್ಯಾಬ್ಲೆಟ್‌ಗಳಲ್ಲಿ ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ ಆಪರೇಟಿಂಗ್‌ ಸಿಸ್ಟಂ ಹೊಂದಿದ್ದು. 3D ಗೇಮಿಂಗ್‌ ಹಾಗೂ ಹೆಚ್‌ಡಿ ವಿಡಿಯೋ ಸೇರಿದಂತೆ ಕೈನೆಟಿಕ್‌ ಸ್ಕ್ರಾಲಿಂಗ್‌ ಟಚ್‌ಪ್ಯಾಡ್‌ ಹೊಂದಿದ್ದು 5 ಪಾಯಿಂಟ್‌ ಮಲ್ಟಿಟಚ್‌ಸ್ಕ್ರೀನ್‌ ನೊಂದಿಗೆ 800 x 480 ಪಿಕ್ಸೆಲ್ಸ್‌ ಹೊಂದಿದೆ.

ಬೆ ವಿಚಾರದಲ್ಲಿ ಮಿ ಸರಣಿಯ ಟ್ಯಾಬ್ಲೆಟ್‌ಗಳು ರೂ.4,300 ದಿಂದ ರೂ.11,000 ದರದಲ್ಲಿ ಲಭ್ಯವಿದೆ.

Read In English...

ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಟಾಪ್‌ 10 ಆಂಡ್ರಾಯ್ಡ್‌ ಟ್ಯಾಬ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot