ಬ್ಯೊಂಡ್‌ ಮಿ-ಬುಕ್‌ ಮಿ3 ಟ್ಯಾಬ್ಲೆಟ್‌ 6,090 ರೂ.ದರದಲ್ಲಿ ಲಭ್ಯ

Posted By: Vijeth

ಬ್ಯೊಂಡ್‌ ಮಿ-ಬುಕ್‌ ಮಿ3 ಟ್ಯಾಬ್ಲೆಟ್‌ 6,090 ರೂ.ದರದಲ್ಲಿ ಲಭ್ಯ
ಅಗ್ಗದ ಬೆಲೆಯ ಟ್ಯಾಬ್ಲೆಟ್ ತಯಾರಿಕಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ನೂತನ ತಯಾರಕರುಗಳು ಕಡಿಮೆ ಬೆಲೆಯಲ್ಲಿ ಟ್ಯಾಬ್ಲೆಟ್‌ಗಳನ್ನು ಸಾಲುಸಾಲಾಗಿ ಪರಿಚಯಿಸುತ್ತಿದ್ದು ಈ ಸಾಲಿಗೆ ನೂತನವಾಗಿ ಪುಣೆ ಮೂಲದ ತಾಂತ್ರಕ ಸರಕುಗಳ ತಯಾರಕರಾದ ಬ್ಯೋಂಡ್‌ ಟಕ್‌ ಫರ್ಮ್‌ ತನ್ನಯ 'ಮಿ-ಬುಕ್‌' ಸರಣಿಯ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿದೆ. ಅಂದಹಾಗೆ ಸಂಸ್ಥೆಯು ಕಡೆಯದಾಗಿ ಬಿಡುಗಡೆ ಮಾಡಿದಂತಹ ಮಿ-ಬುಕ್‌ ಮಿ3 ಟ್ಯಾಬ್ಲೆಟ್‌ ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ರೂ.6,090 ದರದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು ಖರೀದಿಸಿಕೊಳ್ಳ ಬಹುದಾಗಿದೆ.

ಮಿ-ಬುಕ್‌ ಮಿ3 ಟ್ಯಾಬ್ಲೆಟ್‌ ನಲ್ಲಿ 7-ಇಂಚಿನ ಮಲ್ಟಿಟಚ್‌ಸ್ಕ್ರೀನ್‌ ಹಾಗೂ 800 x 480 ಪಿಕ್ಸೆಲ್‌ ರೆಸೆಲ್ಯೂಷನ್‌. ಆಂಡ್ರಾಯ್ಡ್ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ. 1.2 GHz ಕಾರ್ಟೆಕ್ಸ್‌ A8 ಪ್ರೊಸೆಸರ್‌. 2MP ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ ಮುಂಬದಿಯ VGA ಕ್ಯಾಮೆರಾ ಹೊಂದಿದೆ.

ಇದಲ್ಲದೆ 3ಡಿ ವಿಡಿಯೋ ಹಾಗೂ ಗೇಮಿಂಗ್‌ ಸೌಲಭ್ಯವಿದ್ದು ಉಚಿತವಾಗಿ 3ಡಿ ಗ್ಲಾಸ್‌ ಕೂಡ ನೀಡಲಾಗುತ್ತದೆ. 8GB ಆಂತರಿಕ ಮೆಮೊರಿ,1GB RAM ನೊಂದಿಗೆ 3200 mAh ಸಾಮರ್ತ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಹಾಗೂ 3.5mm ಆಡಿಯೋ ಜ್ಯಾಕ್‌, 3G (ಡಾಂಗಲ್‌ ಮೂಲಕ), ವೈ-ಫೈ, USB 2.0 ಹಾಗೂ HDMI ನಂತಹ ಕನೆಕ್ಟಿವಿಟಿ ಫೀಚರ್ಸ್‌ ಹೋಂದಿದೆ.

ಹೆಚ್ಚುವರಿಯಾಗಿ ಆಪ್‌ಆನ್‌, 3ಡಿ ಗೇಮ್ಸ್‌, ಫೇಸ್‌ಬುಕ್‌, ಟ್ವಿಟ್ಟರ್‌, ಬಹು ಭಾಷಾ ಬೆಂಬಲಿತ, ಇ ರೀಡರ್‌ ಹಾಗೂ 3ಡಿ ವಿಡಿಯೋ ಸಪೋರ್ಟ್‌ ಹೊಮದಿದ್ದು 1 ವರ್ಷದ ವ್ಯಾರಂಟಿ ಯೊಂದಿಗೆ ಲಭ್ಯವಿದೆ.

ಮಿ-ಬುಕ್‌ ಮಿ3 ಟ್ಯಾಬ್ಲೆಟ್‌ನ ವಿಶೇಷತೆ:

  • 2 ಎಂಪಿ ಪ್ರಾಥಮಿಕ ಕ್ಯಾಮೆರಾ.

  • 1.2 GHz ಪ್ರೊಸೆಸರ್.

  • 0.3 MP ಸೆಕೆಂಡರಿ ಕ್ಯಾಮೆರಾ.

  • 1 GB RAM.

  • 8 GB ಆಂತರಿಕ ಮೆಮೊರಿ.

  • ಆಂಡ್ರಾಯ್ಡ್ v4.0.3 (ICS) ಒಎಸ್.

  • 5 ಪಾಯಿಂಟ್ ಮಲ್ಟಿ ಟಚ್ ಕೆಪ್ಯಾಸಿಟಿವ್ ಟಚ್ಸ್ಕ್ರೀನ್.

  • 3200 mAh ಬ್ಯಾಟರಿ.
Read In English...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot