Home
ಸುದ್ದಿಜಾಲ

ಭಾರತದಲ್ಲಿ ಈ ವರ್ಷ ಟಿಕ್‌ ಟಾಕ್ ಗಳಿಸಿದ ಆದಾಯ ಎಷ್ಟು ಗೊತ್ತಾ?

ಭಾರತದ ಜನಪ್ರಿಯ ವಿಡಿಯೋ ಜಾಲತಾಣವಾಗಿ ಹೆಸರು ಗಳಿಸಿರುವ ಟಿಕ್‌ ಟಾಕ್ ಇದೇ ಮೊದಲ ಬಾರಿಗೆ ಲಾಭವನ್ನು ಕಂಡಿರುವುದಾಗಿ ಹೇಳಿಕೊಂಡಿದೆ. ಟಿಕ್‌ಟಾಕ್ ಮಾಲಿಕತ್ವದ ಚೀನೀ ಸಂಘಟಿತ ಬೈಟ್‌ಡ್ಯಾನ್ಸ್ ಕಂಪೆನಿಯು ಅಂತಿಮವಾಗಿ ಭಾರತದಲ್ಲಿ ಲಾಭವನ್ನು ಗಳಿಸಲು ಸಾಧ್ಯವಾಗಿದ್ದು, 2019ರ ಹಣಕಾಸು ವರ್ಷದಲ್ಲಿ ಟಿಕ್‌ಟಾಕ್ ಭಾರತದಲ್ಲಿ ಒಟ್ಟು 43 ಕೋಟಿ ರೂ. ಆದಾಯವನ್ನು ದಾಖಲಿಸಿದೆ. ಈ ಪೈಕಿ 3.4 ಕೋಟಿ ರೂ. ನಿವ್ವಳ ಲಾಭವನ್ನು ಕಂಡಿರುವುದಾಗಿ ಬೈಟ್‌ಡ್ಯಾನ್ಸ್ ತಿಳಿಸಿದೆ.

ಬೈಟ್‌ಡ್ಯಾನ್ಸ್

ಇತ್ತೀಚಿಗೆ ಬೈಟ್‌ಡ್ಯಾನ್ಸ್ ತನ್ನದೇ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲು ಮುಂದಾಗಿರುವ ವೇಳೆಗೆ ತಾನು ಭಾರತದಲ್ಲಿ ಲಾಭದಲ್ಲಿರುವುದನ್ನು ತಿಳಿಸಿದೆ. 200 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಭಾರತವು ಟಿಕ್‌ಟಾಕ್ ಜಾಲತಾಣದ ಅತಿದೊಡ್ಡ ಮಾರುಕಟ್ಟೆಯಾಗಿರುವುದು ಲಾಭದ ಹಳಿಗೆ ಬರಲು ಕಾರಣವಾಗಿದ್ದು, ಕಳೆದ ಕೆಲವು ತಿಂಗಳುಗಳಿಂದಲೂ ದೇಶದಲ್ಲಿ ಹಲವಾರು ವಿವಾದಗಳನ್ನು ಎದುರಿಸುತ್ತಿಯಾದರೂ ಸಹ ಭಾರತದಲ್ಲಿ ಲಾಭಗಳಿಸುವಲ್ಲಿ ಕಂಪೆನಿ ಯಶಸ್ವಿಯಾಗಿರುವುದು ಆಶ್ಚರ್ಯ ಮೂಡಿಸಿದೆ.

ಟಿಕ್‌ಟಾಕ್

ಇನ್ನು ಲಾಭವನ್ನು ಘೋಷಿಸಿರಕೊಂಡಿರುವ ಟಿಕ್‌ಟಾಕ್ ಒಡೆತನದ ಬೈಟ್‌ಡ್ಯಾನ್ಸ್ ಸಂಸ್ಥೆ ಮುಂದಿನ 8 ರಿಂದ 10 ತಿಂಗಳಲ್ಲಿ ಭಾರತದಲ್ಲಿ ಸುಮಾರು 10 ಕೋಟಿ ಡಾಲರ್‌ ವೆಚ್ಚದಲ್ಲಿ ಡೇಟಾ ಕೇಂದ್ರವನ್ನು ತೆರೆಯಲಿದೆ. ಭಾರತೀಯ ಬಳಕೆದಾರರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆಯನ್ನು ಒದಗಿಸುವುದಾಗಿ ಟಿಕ್‌ ಟಾಕ್ ಹೇಳಿಕೊಂಡಿತ್ತು. ಅದರಂತೆ, ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 100 ಕೋಟಿ ಡಾಲರ್‌ ಹೂಡಿಕೆ ಮಾಡಲು ಬೈಟ್‌ ಡ್ಯಾನ್ಸ್‌ ನಿರ್ಧರಿಸಿದ್ದು, ಅದರ ಭಾಗವಾಗಿ ಈ ಡೇಟಾ ಸೆಂಟರ್‌ ತೆರೆಯುತ್ತಿದೆ.

 ಸುರಕ್ಷಿತ

ನಾವು ಈಗ ಭಾರತೀಯ ಬಳಕೆದಾರರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆಗಳ ಆಯ್ಕೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇವೆ. ಭಾರತದಲ್ಲಿ ನಮ್ಮ ಪ್ಲಾಟ್‌ಫಾರ್ಮ್‌ಗಳನ್ನು ಪ್ರಾರಂಭಿಸಿದಾಗಿನಿಂದ, ನಾವು ನಮ್ಮ ಭಾರತೀಯ ಬಳಕೆದಾರರ ಡೇಟಾವನ್ನು ಯುಎಸ್ ಮತ್ತು ಸಿಂಗಾಪುರದ ಉದ್ಯಮ-ಪ್ರಮುಖ ತೃತೀಯ ದತ್ತಾಂಶ ಕೇಂದ್ರಗಳಲ್ಲಿ ಸಂಗ್ರಹಿಸಿದ್ದೇವೆ. ಇದೀಗ ಮುಂದಿನ ದೊಡ್ಡ ಹೆಜ್ಜೆಯನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ನಾವು ನಂಬುತ್ತೇವೆ" ಎಂದು ಕಂಪನಿಯು ತಿಳಿಸಿದೆ.

ಸಂರಕ್ಷಣಾ ಶಾಸನ

"ಹೊಸ ದತ್ತಾಂಶ ಸಂರಕ್ಷಣಾ ಶಾಸನವನ್ನು ರೂಪಿಸುವ ಭಾರತದ ಪ್ರಯತ್ನಗಳನ್ನು ಬೈಟ್‌ಡ್ಯಾನ್ಸ್ ಗುರುತಿಸಿದ್ದಕ್ಕೆ ಸಾಕ್ಷಿಯಾಗಿ, ನಾವು ಭಾರತದಲ್ಲಿ ದತ್ತಾಂಶ ಕೇಂದ್ರವನ್ನು ಸ್ಥಾಪಿಸುವತ್ತ ಮಹತ್ವದ ಹೆಜ್ಜೆ ಇಡುತ್ತಿದ್ದೇವೆ" ಎಂದು ಹೇಳಿರುವ ಟಿಕ್‌ಟಾಕ್, ತನ್ನ ಹೊಸ ಅಭಿಯಾನವು ಭಾರತದಲ್ಲಿ ಆತ್ಮಹತ್ಯೆ ಪ್ರಮಾಣವನ್ನು ನಿಗ್ರಹಿಸುವ ಗುರಿಯನ್ನು ಸಹ ಹೊಂದಿರುವುದಾಗಿ ತಿಳಿಸಿದೆ.ಹೊಸ ಅಭಿಯಾನದ ಮೂಲಕ ಭಾರತದಲ್ಲಿ ಆತ್ಮಹತ್ಯೆ ಪ್ರಮಾಣವನ್ನು ನಿಗ್ರಹಿಸಲು ಪ್ರಯತ್ನಿಸುತ್ತೇವೆ ಎಂದು ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
ByteDance, the owner of popular short-video app TikTok revenue of the year ended March 2019. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+