ಮತ್ತೆ ಬದಲಾಯ್ತು ಕೇಬಲ್ ಟಿವಿ ನಿಯಮ!..ಈಗ 130 ರೂ.ಗೆ 150 ಚಾನೆಲ್ ಆಫರ್!

|

ಕೇಬಲ್ ಟಿವಿ ಬೆಲೆ ಹೆಚ್ಚಳದಿಂದ ಬೇಸತ್ತಿದ್ದ ಗ್ರಾಹಕರಿಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್​) ಸಿಹಿಸುದ್ದಿಯೊಂದನ್ನು ನೀಡಿದೆ. ಟ್ರಾಯ್​ ಈ ಹಿಂದೆ ಜಾರಿಗೆ ತಂದಿರುವ ಕೇಬಲ್ ಟಿವಿ ದರದಲ್ಲಿ ಸಣ್ಣದೊಂದು ಬದಲಾವಣೆ ಮಾಡಿದ್ದು, ಈಗ 130 ರೂ. ಗೆ 150 ಚಾನೆಲ್​ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಅಂದರೆ, ಈ ಹಿಂದೆ 100 ಕ್ಕಿಂತ ಹೆಚ್ಚಿನ ಚಾನೆಲ್‌ಗಳು ಬೇಕಿದ್ದಲ್ಲಿ, ಪ್ರತಿ ಹೆಚ್ಚುವರಿ ಚಾನೆಲ್ ಮೇಲೆ 25 ರೂ.ಗಳ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ, ಇದೀಗ ಈ ಶುಲ್ಕವನ್ನು ಪಾವತಿಸದೆ 150 ಚಾನೆಲ್​ಗಳನ್ನು ಪಡೆಯಬಹುದಾಗಿದೆ.

ಕೇಬಲ್ ಟಿವಿ

ಹೌದು, ಕೇಬಲ್ ಟಿವಿ ಬಳಕೆದಾರರು ಪಾವತಿಸಬೇಕಾದ ಮಾಸಿಕ ಚಂದಾದಾರಿಕೆ ವೆಚ್ಚವನ್ನು ಕಡಿಮೆ ಮಾಡಲು ಹೊಸ ಆಡಳಿತವನ್ನು ಜಾರಿಗೆ ತರಲಾಗಿದೆ. ವೆಚ್ಚಗಳ ಹೆಚ್ಚಳದಿಂದಾಗಿ ಹೊಸ ಎದುರಿಸುತ್ತಿರುವ ನ್ಯೂನತೆಗಳನ್ನು ನಿವಾರಿಸಲು ಮತ್ತು ಸರಿಪಡಿಸುವ ಕ್ರಮಗಳನ್ನು ಆಡಳಿತವು ಜಾರಿಗೊಳಿಸುತ್ತಿದೆ. ಅದರಂತೆ ಆಲ್​​ ಇಂಡಿಯಾ ಡಿಜಿಟಲ್​ ಫೆಡರೇಷನ್​ (AIDCF) ಕೇಬಲ್ ಟಿವಿ ಸೇವೆಗಳ ಶುಲ್ಕವನ್ನು ಕಡಿಮೆ ಮಾಡುವ ನಿರ್ಧಾರ ಕೈಗೊಂಡಿದ್ದು, ಗ್ರಾಹಕರಿಗಾಗಿ 150 ಚಾನೆಲ್‌ಗಳ ಸೇವೆಯನ್ನು 130 ರೂ.ಗಳ ಕನಿಷ್ಠ ಮಟ್ಟದ ಶುಲ್ಕದ ದರದಲ್ಲಿ ನೀಡಲು ತಿಳಿಸಿದೆ.

ಗ್ರಾಹಕರಿಗೆ ಸ್ವಲ್ಪ ರಿಲೀಫ್

ಈ ಸೌಲಭ್ಯವು ಸದ್ಯಕ್ಕೆ ಕೇವಲ ಕೇಬಲ್ ಟಿವಿ ಗ್ರಾಹಕರಿಗೆ ಮಾತ್ರವೇ ಲಭ್ಯವಿದ್ದು, 150 ಎಸ್‌ಡಿ ಚಾನೆಲ್‌ಗಳನ್ನು ಪಡೆಯಲು ಬಯಸಿದರೆ ಅವರು ಎನ್‌ಸಿಎಫ್ ಶುಲ್ಕವಾಗಿ 130 + ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಈ ಸಿಹಿಸುದ್ದಿಯಿಂದ ಗ್ರಾಹಕರಿಗೆ ಕೇಬಲ್ ಟಿವಿ ಗ್ರಾಹಕರಿಗೆ ಸ್ವಲ್ಪ ರಿಲೀಫ್ ಸಿಕ್ಕಿದಂತಾಗಿದೆ. ಆದರೆ, ಈಗಲೂ ಪ್ರತಿಯೊಂದು ಪೇಯ್ಡ್ ಚಾನೆಲ್‌ಗಳ ದರ ಅಷ್ಟೇ ಇರುವುದರಿಂದ ಹೆಚ್ಚೇನು ಲಾಭವಿಲ್ಲ. ಒಂದು ವೇಳೆ ಲಾಭವಾದರೂ ಸಹ ಕೇಬಲ್ ಆಪರೇಟರ್‌ಗಳು ಗ್ರಾಹಕರಿಗೆ ಇದನ್ನುವರ್ಗಾಯಿಸುವುದಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಟಿವಿ ನಿಯಮಗಳು

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜಾರಿಗೆ ತಂದಿರುವ ನೂತನ ನಿಯಮ ಕೈಬಿಡುವಂತೆ ಇತ್ತೀಚಿಗೆ ದೇಶದಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೂತನ ಕೇಬಲ್ ಟಿವಿ ನಿಯಮಗಳು ಟಿವಿ ವೀಕ್ಷಕರಿಗೆ ಮಾಸಿಕ ಕೇಬಲ್ ಬಿಲ್​ನಲ್ಲಿ ಅಧಿಕ ಹೊರೆಯಾಗುವುದಲ್ಲದೆ ಕೇಬಲ್ ನಿರ್ವಾಹಕರಿಗೂ ತೊಂದರೆಯಾಗುತ್ತದೆ. ಇದರಿಂದ ಟಿವಿ ವೀಕ್ಷಕರ ಮನರಂಜನೆ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಹೇಳಲಾಗಿದೆ. ಆದರೆ, ಟ್ರಾಯ್ ಕೇವಲ ಹೆಚ್ಚುವರಿ ಉಚಿತ ಚಾನೆಲ್‌ಗಳನ್ನು ನೀಡಿರುವ ಆಯ್ಕೆಯಿಂದ ಹೆಚ್ಚು ಉಪಯೋಗವಿಲ್ಲ ಎಂದು ಹೇಳಲಾಗಿದೆ.

ಹೆಚ್ಚು ಉಪಯೋಗವಾಗುವುದಿಲ್ಲ.

ಕೇಬಲ್ ಆಪರೇಟರ್‌ ಓರ್ವರು ಹೇಳುವಂತೆ, ಟ್ರಾಯ್ ಈಗ ಉಚಿತ ಚಾನಲ್‌ಗಳನ್ನಷ್ಟೇ ಹೆಚ್ಚುವರಿಯಾಗಿ ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಆದರೆ, ಇದು ಟಿವಿ ಗ್ರಾಹಕರಿಗೆ ಹೆಚ್ಚು ಉಪಯೋಗವಾಗುವುದಿಲ್ಲ. ಉಚಿತ ಚಾನಲ್‌ಗಳನ್ನು ವೀಕ್ಷಿಸುವ ಆಸಕ್ತಿಯೇ ಹೆಚ್ಚಿನ ಗ್ರಾಹಕರಿಗೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮೊದಲು ಟಿವಿ ವೀಕ್ಷಕರು ಕೇಬಲ್ ಟಿವಿ ದರದಂತೆ ಮಾಸಿಕ 250 ರೂ.ಗೆ ಎಲ್ಲ ಚಾನಲ್ ವೀಕ್ಷಿಸುತ್ತಿದ್ದರು. ಆದರೆ, ನಿಯಮಾವಳಿ ಬದಲಾದರೂ ಮಾಸಿಕ 800ರಿಂದ 1000 ರೂ. ಪಾವತಿಸುವುದು ತಪ್ಪಲಿಲ್ಲ ಎಂದು ಹೇಳಿದ್ದಾರೆ.

Most Read Articles
Best Mobiles in India

English summary
AIDCF has decided that it will now offer customers 150 Standard Definition (SD) channels to users for the Rs 130 NCF charge, instead of 100 channels. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X