Home
ಸುದ್ದಿಜಾಲ

1.4 ಲಕ್ಷ ಕೋಟಿಯ ಫ್ಲಿಪ್‌ಕಾರ್ಟ್ ಮೇಗಾಡೀಲ್‌ಗೆ ಎದುರಾಯಿತು ಭಾರೀ ಸಂಕಷ್ಟ!!

Walmart, Flipkart, CAIT, ವಾಲ್‌ಮಾರ್ಟ್, ಮೇಗಾಡೀಲ್, ಇಕಾಮರ್ಸ್, news

By Bhaskar N J

ಭಾರತೀಯ ಇ ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಮತ್ತು ಅಮೆರಿಕಾದ ರೀಟೇಲರ್ ಸಂಸ್ಥೆ ವಾಲ್‌ಮಾರ್ಟ್ ನಡುವಿನ ಮೇಗಾಡೀಲ್‌ಗೆ ಮೊದಲ ಸಂಕಷ್ಟ ಎದುರಾಗಿದೆ. ಉದ್ದೇಶಿತ ವಾಲ್‌ಮಾರ್ಟ್ ಮತ್ತು ಫ್ಲಿಪ್‌ಕಾರ್ಟ್ ಒಪ್ಪಂದದ ವಿರುದ್ಧ ಭಾರತದ ಸ್ಪರ್ಧಾತ್ಮಕ ಆಯೋಗಕ್ಕೆ (ಸಿಸಿಐ) ಆಕ್ಷೇಪಗಳನ್ನು ಸಲ್ಲಿಸುವುದಾಗಿ ಅಖಿಲ ಭಾರತ ವರ್ತಕರ ಒಕ್ಕೂಟವು ತಿಳಿಸಿದೆ.

ಫ್ಲಿಪ್‌ಕಾರ್ಟ್ ಸ್ವಾಧೀನದಿಂದ ಭಾರತೀಯ ರಿಟೇಲ್ ಮಾರಾಟ ವಲಯದಲ್ಲಿ ಭಾರೀ ಅಸಮತೋಲನ ಉಂಟಾಗಲಿದೆ ಮತ್ತು ಗಮನಾರ್ಹ ಸಂಖ್ಯೆಯಲ್ಲಿ ಉದ್ಯೋಗ ನಷ್ಟ ಉಂಟಾಗಲಿದೆ ಎಂದು ವರ್ತಕರ ಒಕ್ಕೂಟ ಆರೋಪಿಸಿದೆ. ಹಾಗಾಗಿ, ಈ ಸ್ವಾಧೀನ ಒಪ್ಪಂದವನ್ನು ವಿರೋಧಿಸಿ ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರಿಗೆ 'ಸಿಎಐಟಿ' ಸೋಮವಾರ ಪತ್ರ ಬರೆದಿದೆ.

1.4 ಲಕ್ಷ ಕೋಟಿಯ ಫ್ಲಿಪ್‌ಕಾರ್ಟ್ ಮೇಗಾಡೀಲ್‌ಗೆ ಎದುರಾಯಿತು ಭಾರೀ ಸಂಕಷ್ಟ!!

ವಿದೇಶಿ ನೇರ ಬಂಡವಾಳ (ಎಫ್‌ಡಿಐ) ನೀತಿ, ಸೈಬರ್ ಸುರಕ್ಷತೆ, ರಿಟೇಲ್ ವ್ಯಾಪಾರ ಕ್ಷೇತ್ರಕ್ಕೆ ಧುಮುಕಲು ಇ-ಕಾಮರ್ಸ್‌ನ ಹಿಂಬಾಗಿಲು ಬಳಸಿಕೊಂಡಿರುವುದು, ವ್ಯಾಪಾರಿ ಸಂಘಟನೆಗಳ ತೀವ್ರ ಪ್ರತಿಭಟನೆ ಮತ್ತಿತರ ಕಾರಣಗಳಿಗೆ ಸರ್ಕಾರ ಈ ಒಪ್ಪಂದವನ್ನು ವಿವರವಾಗಿ ಪರಾಮರ್ಶಿಸಿ ನಿರ್ಧಾರಕ್ಕೆ ಬರಬೇಕು ಎಂದು 'ಸಿಎಐಟಿ' ಆಗ್ರಹಿಸಿದೆ.

ರ್ಕಾರದ ಈ ಧೋರಣೆಯು, ಬಹುರಾಷ್ಟ್ರೀಯ ಸಂಸ್ಥೆಗಳ ಪರ ಒಲವು ತಳೆದಿರುವ ಮತ್ತು ದೇಶಿ ಚಿಲ್ಲರೆ ವಹಿವಾಟನ್ನು ನಿರ್ಲಕ್ಷಿಸಿರುವುದರ ಸಂಕೇತವಾಗಿದೆ. ಈ ಎಲ್ಲ ಆಕ್ಷೇಪಗಳ ಹೊರತಾಗಿಯೂ ಕೇಂದ್ರ ಸರ್ಕಾರವು ಇದುವರೆಗೂ ವ್ಯಾಪಾರಿ ಸಂಘಟನೆಗಳನ್ನು ಸಂಪರ್ಕಿಸದಿರುವುದು ವಿಷಾದಕರ ಬೆಳವಣಿಗೆಯಾಗಿದೆ ಎಂದು 'ಸಿಎಐಟಿ' ಆರೋಪಿಸಿದೆ.

1.4 ಲಕ್ಷ ಕೋಟಿಯ ಫ್ಲಿಪ್‌ಕಾರ್ಟ್ ಮೇಗಾಡೀಲ್‌ಗೆ ಎದುರಾಯಿತು ಭಾರೀ ಸಂಕಷ್ಟ!!

ಕಳೆದ ವಾರವೇ ಭಾರತದ ಸ್ಪರ್ಧಾತ್ಮಕ ಆಯೋಗಕ್ಕೆ ವಾಲ್‌ಮಾರ್ಟ್ ಮನವಿ ಮಾಡಿಕೊಂಡಿದೆ. ಫ್ಲಿಪ್‌ಕಾರ್ಟ್‌ನ ಉದ್ದೇಶಿತ ಸ್ವಾಧೀನಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಅಂಗೀಕಾರ ನೀಡಬೇಕೆಂದು, ಈ ಒಪ್ಪಂದದಿಂದಾಗಿ ನ್ಯಾಯಯುತ ವ್ಯಾಪಾರ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಗೊಳ್ಳುವುದಿಲ್ಲ ಎಂದು ವಾಲ್‌ಮಾರ್ಟ್ ಹೇಳಿಕೊಂಡಿದೆ.

ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ

ಓದಿರಿ: ಏಕಾಂಗಿ ಯುವಕ, ಯುವತಿಯರಿಗೆ ಕಿಚ್ಚು ಹಚ್ಚಲಿದೆ 'ಫೇಸ್‌ಬುಕ್‌'ನ ಡೇಟಿಂಗ್ ಆಪ್!!

Best Mobiles in India

English summary
Traders' body CAIT today said it will move fair trade regulator CCI to file objections on the proposed Walmart-Flipkart deal. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+