ಬ್ಲೂ ಫಿಲ್ಮ್ ನೋಡುವ ಮುನ್ನ ಹೀಗೆ ಮಾಡಿ, ತೊಂದರೆಯಿಂದ ತಪ್ಪಿಸಿಕೊಳ್ಳಿ..!

  |

  ಟೆಕ್ನಾಲಜಿಯನ್ನು ಎಷ್ಟು ಬೇಕೋ ಅಷ್ಟು ಬಳಕೆ ಮಾಡಿಕೊಂಡರೆ ಒಳ್ಳೆಯದು ಇಲ್ಲವಾದರೆ ಅಪಾಯ ತಪ್ಪಿದಲ್ಲ ಎನ್ನುವುದಕ್ಕೆ ಬೆಂಗಳೂರು ಮೂಲದ ಟೆಕ್ಕಿಯೇ ಸಾಕ್ಷಿ. ಇಂದು ಹ್ಯಾಕರ್ಸ್ ಗಳು ಎಷ್ಟು ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ನಿಮಗೆ ತಿಳಿಯದೆ ನಿಮ್ಮ ಗ್ಯಾಜೆಟ್ ಗಳನ್ನು ಸುಲಭವಾಗಿ ಹ್ಯಾಕ್ ಮಾಡಿ ನಿಮ್ಮನ್ನು ವಂಚನೆ ಮಾಡುತ್ತಾರೆ. ಇದೇ ಮಾದರಿಯಲ್ಲಿ ಬೆಂಗಳೂರು ಮೂಲದ ಟೆಕ್ಕಿಯ ಲ್ಯಾಪ್‌ಟಾಪ್ ವೆಬ್‌ ಕ್ಯಾಮ್ ಹ್ಯಾಕ್ ಮಾಡಿ ಪ್ರೈವೆಟ್ ಕ್ಷಣಗಳನ್ನು ರೆಕಾರ್ಡ್‌ ಮಾಡಿದ ಹ್ಯಾಕರ್ ಒಬ್ಬ ಲಕ್ಷಾಂತರ ಹಣವನ್ನು ಪೀಕಿಸಿದ್ದಾರೆ.

  ಬ್ಲೂ ಫಿಲ್ಮ್ ನೋಡುವ ಮುನ್ನ ಹೀಗೆ ಮಾಡಿ, ತೊಂದರೆಯಿಂದ ತಪ್ಪಿಸಿಕೊಳ್ಳಿ..!

  ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ MNCಯೊಂದರಲ್ಲಿ ಕೆಲಸ ಮಾಡುತ್ತಿರುವ ರಾಜೇಶ್ ಎನ್ನುವ ವ್ಯಕ್ತಿಯ ಲ್ಯಾಪ್‌ಟಾಪ್‌ನ ವೆಬ್ ಕ್ಯಾಮ್ ಅನ್ನು ಹ್ಯಾಕ್ ಮಾಡಿದ ಹ್ಯಾಕರ್ ಓರ್ವ, ರಾಜೇಶ್‌ಗೆ ತಿಳಿದಂತೆ ಆತ ತನ್ನ ಸ್ನೇಹಿತೆಯೊಂದಿಗೆ ಇದ್ದಂತಹ ಪ್ರೈವೆಟ್ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಇದಾದ ನಂತರದಲ್ಲಿ ರಾಜೇಶ್ ಅನ್ನು ಬ್ಲಾಕ್ ಮೇಲ್ ಮಾಡಿ $2200 ಹಣವನ್ನು ಬಿಟ್ ಕಾಯಿನ್ ರೂಪದಲ್ಲಿ ಪಡೆದುಕೊಂಡಿದ್ದಾನೆ ಎನ್ನಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ:

  ಮೊದಲಿಗೆ ಹ್ಯಾಕರ್, ಲ್ಯಾಪ್‌ಟಾಪ್ ಹ್ಯಾಕ್ ಮಾಡಿದ ನಂತರದಲ್ಲಿ ಅದರಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಇದಾದ ನಂತರದಲ್ಲಿ ರಾಜೇಶ್‌ ಅನ್ನು ಸಂಪರ್ಕಿಸಿ ವಿಡಿಯೋ ತುಣುಕೊಂದನ್ನು ತೋರಿಸಿ ಹಣವನ್ನು ನೀಡಿದರೆ ಹೋದರೆ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡುವುದಾಗಿ ಹೆದರಿಸಿ ಹಣವನ್ನು ಪಡೆದಿದ್ದಾನೆ.

  ಮಾಲ್ವೇರ್ ಮೂಲಕ ಹ್ಯಾಕ್:

  ರಾಜೇಶ್ ಲ್ಯಾಪ್‌ಟಾಪ್‌ನಲ್ಲಿ ಬ್ರೌಸ್ ಮಾಡಿದ ಮಾಲ್ವೇರ್ ಇದ್ದ ವೆಬ್‌ ಸೈಟಿನಿಂದ ಹ್ಯಾಕರ್ ಲ್ಯಾಪ್‌ಟಾಪ್ ಪ್ರವೇಶಿಸಿದ್ದು, ಅಲ್ಲಿಂದಲೇ ವೆಬ್‌ ಕ್ಯಾಮ್ ಅನ್ನು ಹ್ಯಾಕ್ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಆತನ ಸಂಪೂರ್ಣ ಚಲನವಲನ ಆತನ ಬಳಿ ಇತ್ತು ಎನ್ನಲಾಗಿದೆ.

  ಹೇಗೆ ಹ್ಯಾಕ್ ಗೊತ್ತಾ..?

  ರಾಜೇಶ್ ಒಮ್ಮೆ ಪೋರ್ನ್ ವಿಡಿಯೋವನ್ನು ನೋಡುವ ಸಂದರ್ಭದಲ್ಲಿ ಕ್ಲಿಕ್ ಮಾಡಿದ ಒಂದು ತಪ್ಪಿನಿಂದ ಹ್ಯಾಕ್‌ಗೆ ಗುರಿಯಾಗಿದ್ದಾರೆ. ಕಾರಣ ಅಲ್ಲಿ ಬರುವ ಮಾಲ್ವೇರ್ ಮೂಲಕವೇ ಹ್ಯಾಕರ್ ಲ್ಯಾಪ್ ಟಾಪ್ ಅನ್ನು ಪ್ರವೇಶ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

  ಪೋರ್ನ್ ಸೈಟಿನಿಂದ ಆಗಮನ:

  ಸಾಮಾನ್ಯವಾಗಿ ಪೋರ್ನ್ ಸೈಟ್‌ಗಳಲ್ಲಿ ಈ ಮಾದರಿಯ ಮಾಲ್ವೇರ್‌ಗಳು ಇರುತ್ತವೆ. ಈ ಹಿನ್ನಲೆಯಲ್ಲಿ ಪೋರ್ನ್ ನೋಡುವ ವೇಳೆಯಲ್ಲಿ ನೀವು ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿ ಇರಲಿದೆ. ಇದರಿಂದಾಗಿ ನೀವು ಪ್ರೀಮಿಯಮ್ ಸೈಟ್‌ಗಳಲ್ಲಿ ವೀಕ್ಷಣೆ ಮಾಡಿದರೆ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವ ಪ್ರಮಾಣವು ಕಡಿಮೆ ಇರಲಿದೆ.

  ಲೈವ್ ಚಾಟ್ ಮಾಡಬೇಡಿ:

  ಇದಲ್ಲದೇ ಸಾಕಷ್ಟು ಪೋರ್ನ್ ಸೈಟ್‌ಗಳಲ್ಲಿ ಲೈವ್ ವಿಡಿಯೋ ಚಾಟ್ ಮಾಡಿ ಎನ್ನುವ ಆಯ್ಕೆಯನ್ನು ನೀಡುತ್ತವೆ. ಆದರೆ ಅದನ್ನು ಮಾಡಬೇಡಿ. ಹೀಗೆ ಮಾಡಿದಲ್ಲಿ ಹ್ಯಾಕರ್ಸ್‌ಗಳು ನಿಮ್ಮ ಪಿಸಿ ಇಲ್ಲವೇ ಲ್ಯಾಪ್‌ಟಾಪ್‌ನಲ್ಲಿ ಸ್ಥಾನವನ್ನು ಪಡೆದುಕೊಂಡು ನಿಮಗೆ ಅರಿವಿಲ್ಲದಂತೆ ನಿಮ್ಮ ಮಾಹಿತಿಗಳನ್ನು ಕದಿಯುತ್ತಾರೆ.

  ಮೊಬೈಲ್‌ನಲ್ಲಿ ಪೋರ್ನ್ ವೀಕ್ಷಿಸುವವರಿಗೆ ಶಾಕಿಂಗ್ ಸುದ್ದಿ!..ಗಾಬರಿ ಹುಟ್ಟಿಸುತ್ತಿದೆ ವರದಿ!!

  ಮೊಬೈಲ್ ನಲ್ಲಿಯೇ ಪೋರ್ನ್ ನೋಡುವವರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮೊಬೈಲ್‌ನಲ್ಲಿ ಪೋರ್ನ್ ನೋಡಿದ್ರೆ ಅಪಾಯವನ್ನು ನೀವೇ ಆಹ್ವಾನಿಸಿಕೊಂಡಂತೆ. ಪೋರ್ನ್ ಸೈಟ್ ಹ್ಯಾಕರ್ ಗಳ ಫೆವರೆಟ್ ಪ್ಲೇಸ್ ಆಗಿದ್ದು, ಈ ವೆಬ್‌ಸೈಟ್‌ಗಳಲ್ಲಿ ಪೋರ್ನ್ ನೋಡ್ತಿದ್ದಂತೆ ನಿಮಗೆ ಗೊತ್ತಿಲ್ಲದೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್ಸ್ ಕದಿಯುತ್ತಿದ್ದಾರೆ.
  ಹೌದು, ಇದನ್ನು ನಾವು ಹೇಳಿದ್ದಲ್ಲ. ಬದಲಾಗಿ, ಮೊಬೈಲ್ ಸೆಕ್ಯೂರಿಟಿ ಟೆಕ್ನಾಲಜಿ ಕಂಪನಿ Wandera ಪೋರ್ನ್ ಸೈಟ್ ಹಾಗೂ ಮೊಬೈಲ್ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದೆ. ಇದ್ರಲ್ಲಿ ಆಘಾತಕಾರಿ ಸಂಗತಿ ಗೊತ್ತಾಗಿದ್ದು, ಭದ್ರತಾ ಕಂಪೆನಿ ಕ್ಯಾಸ್ಪರ್ಸ್ಕಿ ಲ್ಯಾಬ್ ವರದಿಯ ಪ್ರಕಾರ, ಸುಮಾರು 12 ಮಿಲಿಯನ್ ಫೋನ್ ಬಳಕೆದಾರರು ಮಾಲ್ವೇರ್ ತೊಂದರೆಗೆ ಒಳಗಾಗಿದ್ದಾರಂತೆ.

  ಇದೇ ವೇಳೆಯಲ್ಲಿ ಭಾರತವು ಅಶ್ಲೀಲ ವೆಬ್‌ಸೈಟ್‌ಗಳ ವೀಕ್ಷಣೆಯಲ್ಲಿ ಮೂರನೇ ಸ್ಥಾನದಲ್ಲಿರುವುದು ಸಹ ಗಾಬರಿ ಹುಟ್ಟಿಸುವಂತಿದೆ. ಇಂಟರ್ನೆಟ್ ಬಳಕೆ ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಹೆಚ್ಚಿದಂತೆ ಇಂದು ಅಶ್ಲೀಲ ವೆಬ್‌ಸೈಟ್‌ಗಳ ಬಳಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಅಧ್ಯಯನ ಹೇಳಿರುವ ಎಚ್ಚರಿಕೆ ಮತ್ತು ಕುತೂಹಲ ಮಾಹಿತಿಗಳನ್ನು ತಿಳಿಯಲು ಮುಂದಿನ ಸ್ಲೈಡರ್‌ಗಳನ್ನು ಓದಿ.

  ಹಣ ಪಡೆದು ಸಹಕರಿಸುತ್ತವೆ.

  ಹ್ಯಾಕರ್‌ಗಳಿಗೆ ಪೋರ್ನ್ ವೆಬ್ಸೈಟ್ ಅಥವಾ ಆಪ್ ಮೂಲಕ ಸ್ಮಾರ್ಟ್‌ಫೋನ್‌ಗೆ ಮಾಲ್ವೇರ್ ಕಳಿಸೋದು ಸುಲಭ, ಇದಕ್ಕೆ ಪೋರ್ನ್ ವೆಬ್‌ಸೈಟ್‌ಗಳು ಸಹ ಹಣ ಪಡೆದು ಸಹಕರಿಸುತ್ತವೆ. ಹಾಗಾಗಿಯೇ, ಸ್ಮಾರ್ಟ್‌ಫೋನ್ ಮೂಲಕ ಪೋರ್ನ್ ನೋಡುವವರು ಹೆಚ್ಚಿನ ಪ್ರಮಾಣದಲ್ಲಿ ಹ್ಯಾಕರ್ಸ್ ಗಾಳಕ್ಕೆ ಬೀಳುತ್ತಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

  ಅಶ್ಲೀಲ ವೆಬ್‌ಸೈಟ್‌ ವೀಕ್ಷಣೆಯಲ್ಲಿ ಭಾರತ 3ನೇ ಸ್ಥಾನ

  2015 ನೇ ವರ್ಷದದಿಂದಲೂ ಅಧಿಕವಾಗಿ ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಇನ್ನು ಅಮೆರಿಕಾ ಮೊದಲನೇ ಸ್ಥಾನದಲ್ಲಿ ಹಾಗೂ ಬ್ರಿಟನ್ ಎರಡನೇ ಸ್ಥಾನದಲ್ಲಿದೆ. ಕೆನಡಾ ಮತ್ತು ಜರ್ಮನ್‌ 4 ಮತ್ತು 5 ನೇ ಸ್ಥಾನದಲ್ಲಿವೆ ಅಧ್ಯಯನ ಮಾಹಿತಿಗಳು ತಿಳಿಸಿವೆ.

  ಪೋರ್ನ್‌ ವೆಬ್‌ಸೈಟ್‌ ವೀಕ್ಷಿಸಿದ ಸರಾಸರಿ ಮಾಹಿತಿ

  ಭಾರತದಲ್ಲಿ ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿಯಾಗಿ 9 ನಿಮಿಷ ಮತ್ತು 30ಸೆಕೆಂಡ್ ವೀಕ್ಷಿಸಿದ್ದಾರೆ. ಅಮೇರಿಕಾದಲ್ಲಿ 9 ನಿಮಿಷ ಮತ್ತು 51 ಸೆಕೆಂಡ್‌, ಬ್ರಿಟನ್‌ನಲ್ಲಿ 9 ನಿಮಿಷ ಮತ್ತು 18 ಸೆಕೆಂಡ್‌ಗಳು ಪೋರ್ನ್‌ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದಾರೆ ಎಂದು ಅಧ್ಯಯನ ಹೇಳಿದೆ.

  ಅಶ್ಲೀಲ ವೆಬ್‌ಸೈಟ್‌ ಸರಾಸರಿ ವೀಕ್ಷಣೆ

  ಅಶ್ಲೀಲ ವೆಬ್‌ಸೈಟ್‌ನಿಂದಲೇ ನಡೆದ ಅಧ್ಯಯನದ ಪ್ರಕಾರ, ಭಾರತೀಯ ಪುರುಷರು ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿ 9 ನಿಮಿಷ ಮತ್ತು 22 ಸೆಕೆಂಡ್‌ಗಳು ವೀಕ್ಷಿಸಿದ್ದಾರೆ. ಮಹಿಳೆಯರ ಪ್ರಮಾಣ 9 ನಿಮಿಷ ಮತ್ತು 36 ಸೆಕೆಂಡ್‌ಗಳಿವೆ. ಇನ್ನು ಪ್ರಪಂಚದಾದ್ಯಂತ ಸರಾಸರಿ ಮಹಿಳೆಯರು 10 ನಿಮಿಷ ಮತ್ತು 10 ಸೆಕೆಂಡ್‌ಗಳು ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದಾರೆ.

  ರಜೆ ಇದ್ದರೆ ಟ್ರಾಫಿಕ್‌ ಹೆಚ್ಚು

  ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುವವರ ಸಂಖ್ಯೆ ಪಬ್ಲಿಕ್‌ ರಜೆದಿನಗಳಲ್ಲಿ ಹೆಚ್ಚಾಗಿರುತ್ತದೆ. ಅಲ್ಲದೇ, ರಾತ್ರಿ 10 ಗಂಟೆಯಿಂದ 12 ಗಂಟೆ ವೇಳೆಯಲ್ಲಿ ಅಶ್ಲೀಲ ವೆಬ್‌ಸೈಟ್‌ ವೀಕ್ಷಣಾ ಟ್ರಾಫಿಕ್‌ ಹೆಚ್ಚಾಗಿರುತ್ತದೆ. ವೆಬ್‌ಸೈಟ್‌ಗಳೀಗೆ ಹೆಚ್ಚು ಟ್ರಾಫಿಕ್ ಇರುವ ಸಮಯದಲ್ಲಿ ಪ್ರತಿ ಸೆಕೆಂಡಿಗೆ 1000 GB ಸರ್ಫ್ ಅಗಿರುವ ಬಗ್ಗೆ ಅಧ್ಯಯನದ ಪ್ರಕಾರ ಮಾಹಿತಿ ಬೆಳಕಿಗೆ ಬಂದಿದೆ.

  ಶೇಕಡ 30 ರಷ್ಟು ಮಹಿಳೆಯರು

  ಅಶ್ಲೀಲ ವೆಬ್‌ಸೈಟ್‌ಗಳನ್ನು ಹೆಚ್ಚು ವೀಕ್ಷಿಸುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಅಧ್ಯಯನ ನೀಡಿದ ಡಾಟಾ ಪ್ರಕಾರ 60 ದಶಲಕ್ಕಿಂತ ಹೆಚ್ಚು ಜನರು ಅಶ್ಲೀಲ ವೆಬ್‌ಸೈಟ್‌ ಬಳಕೆದಾರರು ಇದ್ದಾರೆ. ಇಂಟರ್‌ನೆಟ್ ಬಳಕೆದಾರರಲ್ಲಿ ಭಾರತದ ಶೇಕಡ 30 ರಷ್ಟು ಮಹಿಳೆಯರು ಸಹ ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುತ್ತಾರೆ ಎಂದು ಅಧ್ಯಯನ ಹೇಳಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Cam hacker asks techie to send $2,200 in bitcoins. to know more visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more