ನಿದ್ರಾಹೀನತೆ ತಪ್ಪಿಸಲು ಬಂದಿದೆ ‘ಸ್ಲೀಪ್‌ಬಡ್ಸ್’ ಎಂಬ ಹೊಸ ಇಯರ್‌ಫೋನ್‌!!

Bose, Sleepbuds, gadgets, technology, mobile, smartphone, ಟಿವಿ, ಕಂಪ್ಯೂಟರ್‌, ಮೊಬೈಲ್‌, ಗ್ಯಾಜೆಟ್, ಬೋಸ್‌, ಸ್ಲೀಪ್‌ಬಡ್ಸ್, news

|

ನಿದ್ರಾಹೀನತೆ ಒಂದು ಸಾರ್ವಜನಿಕ ಆರೋಗ್ಯ ಪಿಡುಗು ಎಂದು ಬಹುತೇಕ ಸಂಶೋಧನೆಗಳು ಘೋಷಿಸಿವೆ. ಇತ್ತಿಚಿಗಂತೂ ಟಿವಿ, ಕಂಪ್ಯೂಟರ್‌, ಮೊಬೈಲ್‌ನಂತಹ ಗ್ಯಾಜೆಟ್‌ಗಳಿಂದಲೇ ನಿದ್ರಾಹೀನತೆ ಸಮಸ್ಯೆ ಹೆಚ್ಚಾಗುತ್ತವೆ ಎಂದು ಅದೇ ಸಂಶೋಧನೆಗಳು ಹೇಳಿವೆ. ಹಾಗಾಗಿ, ಮಲಗುವ ವೇಳೆಯಲ್ಲಿ ಗ್ಯಾಜೆಟ್‌ಗಳನ್ನು ಇರಿಸಿಕೊಳ್ಳಬಾರದು ಎನ್ನುವುದು ತಜ್ಞರ ಸಲಹೆ.

ಆದರೆ, ಗ್ಯಾಜೆಟ್‌ಗಳಿಂದಾಗುವ ನಿದ್ರಾಹೀನತೆ ತಡೆಗಟ್ಟಲು ಮತ್ತೊಂದು ಗ್ಯಾಜೆಟ್ ಬಿಡುಗಡೆಯಾದರೆ ಹೇಗಿರುತ್ತದೆ.? ಹೌದು, ಇಂತಹ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸಲು ಆಡಿಯೊ ಉಪಕರಣಗಳ ಪ್ರಸಿದ್ಧ ಬ್ರ್ಯಾಂಡ್ 'ಬೋಸ್‌' ನಿದ್ರೆ ತರಿಸಲೆಂದೇ ಒಂದು ಗ್ಯಾಜೆಟ್ ರೂಪಿಸಿದೆ. ಭವಿಷ್ಯದಲ್ಲಿ ಇವುಗಳ ಬಳಕೆ ಹೆಚ್ಚುವ ಲಕ್ಷಣಗಳೂ ಕೂಡ ಇವೆ.

ನಿದ್ರಾಹೀನತೆ ತಪ್ಪಿಸಲು ಬಂದಿದೆ ‘ಸ್ಲೀಪ್‌ಬಡ್ಸ್’ ಎಂಬ ಹೊಸ ಇಯರ್‌ಫೋನ್‌!!

ನಿದ್ರೆ ಮೇಲೆ ನಿಗಾ ಇಡುವ ರಿಸ್ಟ್ ಬ್ಯಾಂಡ್‌, ಹಾಸಿಗೆ, ವಿಶೇಷ ಬಲ್ಪ್‌ಗಳನ್ನು ನಾವು ಈಗಾಗಲೇ ನೋಡಬಹುದಾಗಿದ್ದು, ಈ ಸಾಲಿಗೆ 'ಸ್ಲೀಪ್‌ಬಡ್ಸ್' ಎಂಬ ಹೊಸ ಗ್ಯಾಜೆಟ್ ಒಂದು ಸೇರಿದೆ. ಹಾಗಾದರೆ, ಯಾವುದಿದು ನಿದ್ರೆ ತರಿಸುವ ಗ್ಯಾಜೆಟ್, ಈ ಗ್ಯಾಜೆಟ್ ನಿದ್ರಾಹೀನತೆ ಸಮಸ್ಯೆಯನ್ನು ಹೇಗೆ ಪರಿಹರಿಸಲಿದೆ ಎಂಬ ವಿಶೇಷ ಮಾಹಿತಿಗಳನ್ನು ಮುಂದೆ ಓದಿ ತಿಳಿಯಿರಿ.

ಸ್ಲೀಪ್ ಬಡ್ಸ್ ಇಯರ್ ಫೋನ್‌!

ಸ್ಲೀಪ್ ಬಡ್ಸ್ ಇಯರ್ ಫೋನ್‌!

ರಾತ್ರಿವೇಳೆ ಕಿವಿಗೆ ಇಯರ್‌ಫೋನ್‌ ಹಾಕಿಕೊಂಡರೆ ನಿದ್ದರೆ ಬರುವುದಿಲ್ಲ ಎನ್ನುವವರಿಗೆ ಈ ಹೊಸ ಇಯರ್‌ಫೋನ್‌ ಖುಷಿ ನೀಡಲಿದೆ. ಈ ಪುಟ್ಟ ವೈರ್‌ಲೆಸ್‌ ಇಯರ್‌ಫೋನ್‌ ‘ಸ್ಲೀಪ್‌ಬಡ್ಸ್' ಮನಸ್ಸಿಗೆ ಮುದನೀಡುವಂತಹ ಸದ್ದುಗಳನ್ನು ನೀಡಲಿದೆ. ಈ ರಾತ್ರಿ ಧ್ವನಿಗಳನ್ನು ಕೇಳುತ್ತಾ ಹಾಯಾಗಿ ನಿದ್ರೆ ಮಾಡಬಹುದು ಎಂದು ಕಂಪೆನಿ ಹೇಳಿದೆ.

ಹೇಗಿದೆ ಸ್ಲೀಪ್‌ಬಡ್ಸ್ ಇಯರ್ಫೋನ್

ಹೇಗಿದೆ ಸ್ಲೀಪ್‌ಬಡ್ಸ್ ಇಯರ್ಫೋನ್

ಸ್ಲೀಪ್‌ಬಡ್ಸ್ ಇಯರ್ಫೋನ್ ಸಂಪೂರ್ಣ ಇಯರ್‌ಫೋನ್‌ನ ಕೇಸ್‌ ಲೋಹದ್ದಾಗಿದ್ದು, ಇಯರ್‌ಪೀಸ್‌ ಇಡುವ ಜಾಗದಲ್ಲಿ ಆಯಸ್ಕಾಂತ ಅಳವಡಿಸಲಾಗಿದೆ. ಇಯರ್‌ಫೋನ್‌ ಕೇಸ್‌ನ ಒಳಗಿದ್ದಾಗ ಆಯಸ್ಕಾಂತದಿಂದ ಬ್ಯಾಟರಿ ಚಾರ್ಜ್‌ ಆಗುತ್ತದೆ. ‘ಸ್ಲೀಪ್‌ಬಡ್ಸ್' ಚಾರ್ಜ್‌ ಆಗುತ್ತಿದೆ ಎನ್ನುವುದನ್ನು ತೋರಿಸಲು, ಕೇಸ್‌ ತೆರೆದ ತಕ್ಷಣ ಎಲ್‌ಇಡಿ ಬೆಳಗುತ್ತದೆ.

ಎರಡು ರೀತಿಯ ಇಯರ್‌ಬಡ್‌ಗಳು

ಎರಡು ರೀತಿಯ ಇಯರ್‌ಬಡ್‌ಗಳು

ಗದ್ದಲದಿಂದ ಗಮನ ಬೇರೆಡೆ ಹರಿಸಲು ನೆರವಾಗುವಂತಹ ಹಾಗೂ ಗದ್ದಲ ಕೇಳಿಸದೆ ಇರುವಂತಹ ಎರಡು ರೀತಿಯ ಇಯರ್‌ಬಡ್‌ಗಳು ಇರುತ್ತವೆ. ಎರಡೂ ರೀತಿಯ ಇಯರ್‌ಫೋನ್ ಗದ್ದಲದಿಂದ ಸಂಪೂರ್ಣ ಮುಕ್ತಿ ನೀಡದೆ, ಬೇಡದ ಸದ್ದುಗಳಿಂದ ಗಮನ ಬೇರೆಡೆ ಹರಿಸಲು ನೆರವಾಗುತ್ತದೆ. ಗಟ್ಟಿಯಾಗಿ ಕಿರಿಚುತ್ತಿದ್ದರೆ ಅಂತಹ ಸದ್ದುಗಳನ್ನು ಇದು ತಡೆಯುವುದಿಲ್ಲ.

ಮೆಲುವಾದ ಸದ್ದುಗಳು!

ಮೆಲುವಾದ ಸದ್ದುಗಳು!

ಮಳೆಹನಿಗಳು, ಜಲಪಾತ ಸೇರಿದಂತೆ ಇಯರ್‌ಬಡ್‌ನಲ್ಲಿ ಮೆಲುವಾದ ಸದ್ದುಗಳನ್ನು ಕೇಳಬಹುದಾಗಿದೆ. ಕೇವಲ 10 ರೀತಿಯ ಸದ್ದುಗಳನ್ನು ಈ ಗ್ಯಾಜೆಟ್‌ನಲ್ಲಿ ಕೇಳುವಂತೆ ನೀಡಿರುವುದು ಇದರ ಮಿತಿಗಳಲ್ಲಿ ಒಂದಾಗಿದೆ. ಸ್ವಲ್ಪ ದುಬಾರಿ ಎನಿಸುವ ಈ ಗ್ಯಾಜೆಟ್‌ನಲ್ಲಿ ಇನ್ನೂ ಹೆಚ್ಚಿನ ಆಯ್ಕೆಗಳು ಇರುವಂತೆ ವಿನ್ಯಾಸಗೊಳಿಸಬಹುದಿತ್ತು ಎಂದು ಹೇಳಬಹುದು.

ಕಿರಿಕಿರಿ ಎನಿಸಿದರೆ ಹಿಂದುರುಗಿಸಿ!

ಕಿರಿಕಿರಿ ಎನಿಸಿದರೆ ಹಿಂದುರುಗಿಸಿ!

ಹೆಚ್ಚು ಜನರಿಗೆ ಕಿವಿಯಲ್ಲಿ ಉಪಕರಣಗಳು ಇದ್ದರೆ ಆರಾಮಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಹಾಗೇನಾದರೂ ಇವುಗಳ ಬಳಕೆ ಕಿರಿಕಿರಿ ಎನಿಸಿದರೆ 30 ದಿನಗಳಲ್ಲಿ ಇವುಗಳನ್ನು ಹಿಂದಿರುಗಿಸುವ ಆಯ್ಕೆ ಇದೆ. ಹಾಗಾಗಿ, ನಿಮಗೂ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಈ ಸ್ಲೀಪ್‌ಬಡ್ಸ್ ಅನ್ನು ಒಮ್ಮೆ ಬಳಸಿ ನೋಡಿ.

Best Mobiles in India

English summary
Do you have a hard time sleeping? Does your partner snore? Think of Bose’s new Sleepbuds as “snore”-cancelling headphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X