ಇನ್ಮುಂದೆ ನೀವು ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುವಹಾಗಿಲ್ಲ!..ಏಕೆ ಗೊತ್ತಾ?
ಮೊಬೈಲ್ ಪೋನ್‌ಗಳಿಂದ ಉತ್ಪತ್ತಿಯಾಗುವ ಎಲೆಕ್ಟ್ರೋಮ್ಯಾಗ್ನಟಿಕ್ ರೇಡಿಯೇಷನ್ಸ್‌ಗಳು ಕಿವಿ ತಮಟೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದ್ದು, ಇದರಿಂದ ಕ್ರಮೇಣ ಕಿವಿ ತನ್ನ ದ್ವನಿಗ್ರಾಹಕ ಶಕ್ತಿಯನ್ನು ಕಳೆದುಕೊಂಡು ಮಂದವಾಗುತ್ತದೆ ಎಂದು ಸಂಶೋಧನೆಯೊಂದು ಎಚ್ಚರಿಸಿದೆ. ಮೊಬೈಲ್‌ನ್ನು ಕಿವಿಗೊತ್ತಿಕೊಂಡು ಧೀರ್ಘ ಕಾಲ ಸಂಭಾಷಣೆ ನಡೆಸುವುದು ಭಾರೀ ಅಪಾಯ ಎಂದು ಆ ಸಂಶೋಧನಾ ತಂಡ ತಿಳಿಸಿದೆ.
ಹೌದು, ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಕಿವಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ನರೇಶ್ ಕೆ. ಪಾಂಡ ತಮ್ಮ ಸಂಶೋಧನೆಯಲ್ಲಿ ಮೊಬೈಲ್‌ನಿಂದಾಗುವ ಈ ಅಪಾಯವನ್ನು ಪತ್ತೆ ಹಚ್ಚಿದ್ದು, ಪ್ರತಿದಿನ ಮೂವತ್ತು ನಿಮಿಷಗಳಿಗಿಂತ ಹೆಚ್ಚು ಕಾಲ ಮೊಬೈಲ್‌ನಲ್ಲಿ ಉಭಯ ಕುಶಲೋಪರಿ ನಡೆಸುತ್ತೀರುವವರು ಕ್ರಮೇಣ ನಿಮ್ಮ ಕಿವಿಗಳು ಕೇಳುವ ಶಕ್ತಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಚಂಡೀಗಡದ ನೂರು ಜನ ಧೀರ್ಘಕಾಲದ ಜಿಎಸ್‌ಎಮ್ ಮೊಬೈಲ್ ಬಳಕೆದಾರರ ಮೇಲೆ ಡಾ. ನರೇಶ್ ಹಾಗೂ ಅವರ ವೈದ್ಯಕೀಯ ತಂಡ ಪರೀಕ್ಷೆ ನಡೆಸಿ ಇಂದತಹದೊಂದು ಎಚ್ಚರಿಕೆಯನ್ನು ನೀಡಿದೆ. ಹಾಗಾದರೆ, ಮೊಬೈಲ್ ಅನ್ನು ಕಿವಿಗೊತ್ತಿಕೊಂಡು ಧೀರ್ಘ ಕಾಲ ಸಂಭಾಷಣೆ ನಡೆಸುವುದು ಎಷ್ಟು ಅಪಾಯಕಾರಿ?, ಮೊಬೈಲ್‌ನಿಂದ ಆಗುತ್ತಿರುವ ಇನ್ನಿತರ ದುಷ್ಪರಿಣಾಮಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುವಹಾಗಿಲ್ಲ!
ವೈದ್ಯಕೀಯ ತಂಡ ಪರೀಕ್ಷೆ ನಡೆಸಿ ರಿಪೋರ್ಟ್ ನೀಡಿರುವಂತೆ, ಮೊಬೈಲ್ ಅನ್ನು ಕಿವಿಗೊತ್ತಿಕೊಂಡು ಧೀರ್ಘ ಕಾಲ ಸಂಭಾಷಣೆ ನಡೆಡುವುದರಿಂದ ಕಿವಿಯಲ್ಲಿ ಮೊರೆತ ಕೇಳುವುದು, ಕಿವಿ ಸೋರುವುದು, ಅಸಾದಾರಣ ಶಬ್ದ ಕೇಳಿದಂತಾಗುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ. ಧೀರ್ಘ ಕಾಲದಿಂದ ಮೊಬೈಲ್ ಫೋನ್ ಬಳಸುತ್ತಿರುವವರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಈ ಸಂಶೋಧನೆಯಿಂದ ಧೃಡಪಟ್ಟಿರುವುದಾಗಿ ಹೇಳಿದ್ದಾರೆ.

ಸಮಸ್ಯೆಗಳು ಹಲವು!
ಮೊಬೈಲ್ ಹಾಗೂ ಅಂತರ್ಜಾಲದ ವ್ಯಸನದಿಂದ ವಯಸ್ಕರು ಮಾನಸಿಕ ಆರೋಗ್ಯ ಕೆಡಿಸಿಕೊಂಡರೆ, ಮಕ್ಕಳು ಇತರೆ ಮಕ್ಕಳೊಂದಿಗೆ ಬೆರೆಯದೆ ಏಕಾಂಗಿಯಾಗಿರುವುದು, ಕಲಿಕೆಯಲ್ಲಿ ಹಿಂದುಳಿಯುವುದು, ಸ್ಥೂಲಕಾಯ, ಏಕಾಗ್ರಹೀನತೆ ಮುಂತಾದ ವಿವಿಧ ಸಮಸ್ಯೆಗಳಿಂದ ಬಳಲುತ್ತಾರೆ. ಈ ದುಷ್ಪರಿಣಾಮಗಳು ಗೋಚರಿಸುವಾಗ ಸಮಯ ಬಹಳ ಮೀರಿರುತ್ತದೆಯಂತೆ.

ಖಿನ್ನತೆ, ಭಯ, ಆತಂಕ!
ಮೊಬೈಲ್‌ನಲ್ಲಿ ಆಡುವ ವ್ಯಸನವನ್ನು 'ಆಡುವ ಅಸ್ವಸ್ಥತೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯು ಗುರಿತಿಸುವ ಮುನ್ನವೇ ಮೊಬೈಲ್ ಗೇಮ್ ಮತ್ತು ಅಂತರ್ಜಾಲದ ವ್ಯಸನವಿರುವವರಲ್ಲಿ ಶೇಕಡಾ 7 ರಷ್ಟು ಮಂದಿ ಖಿನ್ನತೆ, ಭಯ, ಆತಂಕ ಹಾಗು ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೋರ್ಪಡಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಅಂತರ್ಜಾಲ ಆಧುನಿಕ ರೋಗ.
ತಂತ್ರಜ್ಞಾನ ಹೊಸ ಸಮಸ್ಯೆಗಳನ್ನು ತರುತ್ತದೆ, ಮತ್ತೆ ಆ ಸಮಸ್ಯೆಗೆ ಪರಿಹಾರವನ್ನು ಮತ್ತೊಂದು ತಂತ್ರಜ್ಞಾನ ನೀಡುತ್ತದೆ ಎನ್ನುವ ಮಾತಿನಂತೆ ಮೊಬೈಲ್ ಹಾಗೂ ಅಂತರ್ಜಾಲ ಆಧುನಿಕ ರೋಗಗಳಾಗಿವೆ. ಇವು ಮುಂದಿನ ಜನಾಂಗವನ್ನೇ ಮಾನಸಿಕ ರೋಗಿಗಳನ್ನಾಗಿ ಮಾಡುವ ತೀವ್ರತೆಯನ್ನು ಹೊಂದಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸೆಲ್ಫೀಯೂ ಗೀಳೇ!
ಚಾಟ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲೇ ವಿಹರಿಸುತ್ತಿರುವತಂಹ ಮುಂತಾದ ಅನೇಕ ಸಮಸ್ಯೆಗಳು ಇತ್ತೀಚೆಗೆ ಯುವ ಜನತೆಯಲ್ಲಿ ಕಾಣಿಸುತಿದೆ. ಮೊಬೈಲ್ ಅನ್ನು ಆಗಾಗ ಸುಮ್ಮನೇ ಆನ್ ಮಾಡಿ ನೋಡುವುದೂ ಮತ್ತು ಸೆಲ್ಫೀ ತೆಗೆದುಕೊಳ್ಳುವುದು ಗೀಳಾಗಿ ಬದಲಾಗಿದೆ. ಇದು ಎಲ್ಲರ ಸಮಸ್ಯೆಯಾಗಿ ಬದಲಾಗಿದೆ.

ವ್ಯಸನ ಎಂಬುದನ್ನು ಒಪ್ಪಿಕೊಳ್ಳಿ
ಮೊಬೈಲ್ ಹಾಗೂ ಅಂತರ್ಜಾಲದ ಬಳಕೆ ಇತರೆ ಮಾನಸಿಕ ರೋಗಗಳಿಗೆ ಎಡೆಮಾಡಿಕೊಡಬಹುದಾದಂತಹ ವ್ಯಸನ ಎಂಬುದನ್ನು ಒಪ್ಪಿಕೊಳ್ಳಲೇಬೇಕಿದೆ. ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಮಿತಗೊಳಿಸಿ ನಾವೇ ಲಗಾಮು ಹಾಕಿಕೊಂಡರಹಷ್ಟೆ ಇವುಗಳ ವ್ಯಸನದಿಂದ ನಾವು ಪಾರಾಗಬಹುದಾಗಿದೆ.

ಮೊಬೈಲ್ ನಿಯಂತ್ರಿಸಿ.
ಬಹುತೇಕ ಸಂದರ್ಭದಲ್ಲಿ ಮೊಬೈಲ್ ಅನ್ನು ನಿಯಂತ್ರಿಸಿ. ಏಕಾಗ್ರತೆಗೆ ಭಂಗಬರುವಹಾಗೆ ಮೊಬೈಲ್ ಬಳಕೆ ಬೇಡವೇಬೇಡ.ಕೆಲವೊಂದು ಕರೆಗಳನ್ನು ಸ್ವೀಕರಿಸಲಾಗದಿದ್ದರೂ ಚಿಂತೆಯಿಲ್ಲ ಎಂಬ ಮನಸ್ಥಿತಿಯನ್ನು ಮೂಡಿಸಿಕೊಂಡು ಈ ಬಗ್ಗೆ ನಿಮ್ಮ ಆಪ್ತರಿಗೂ ತಿಳಿಸಿ. ಇದರಿಂದ ನಿಮ್ಮ ವ್ಯಸನಕ್ಕೆ ಸ್ವಲ್ಪ ಬ್ರೇಕ್ ಸಿಗಬಹುದು. ಏನಂತಿರಾ?


Click it and Unblock the Notifications