Home
ಸುದ್ದಿಜಾಲ

ನಿಮ್ಮ ಫೋನಿನಲ್ಲಿ 'ಮೆಮೊರಿ ಕಾರ್ಡ್‌' ಹಾಕುವುದು ಎಷ್ಟು ದೊಡ್ಡ ತಪ್ಪು ಗೊತ್ತಾ?

ಮೊಬೈಲ್‌ ಕಂಪೆನಿಗಳು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಬಾಹ್ಯ ಮೆಮೊರಿ ಕಾರ್ಡ್‌ (ಮೈಕ್ರೊ ಎಸ್‌ಡಿ ಕಾರ್ಡ್) ಬಳಸದಂತೆ ಸೂಚಿಸಿದರೂ ಸಹ ಹಲವರು ಸ್ಮಾರ್ಟ್‌ಫೋನ್‌ಗಳಿಗೆ ಬಾಹ್ಯ ಮೆಮೊರಿ ಕಾರ್ಡ್ ಹಾಕಿ ಬಳಸುತ್ತಿರುತ್ತಾರೆ. ಆದರೆ, ನಿಮಗೆ ಗೊತ್ತಾ, ಸ್ಮಾರ್ಟ್‌ಫೋನಿನಲ್ಲಿ ಮೆಮೊರಿ ಕಾರ್ಡ್ ಬಳಸುವ ಕ್ರಮ ನಿಜವಾಗಿಯೂ ಒಳ್ಳೆಯದಲ್ಲ. ಇದರಿಂದ ಹಲವು ಸಮಸ್ಯೆಗಳೇ ಹುಟ್ಟುತ್ತವೆ.

ಹೌದು, ಚಿತ್ರಗಳು, ಆಡಿಯೊ ಮತ್ತು ವಿಡಿಯೋಗಳನ್ನು ಶೇಖರಿಸಿ ಇಡುವ ಸಲುವಾಗಿ ಹಲವರು ತಮ್ಮ ಸ್ಮಾರ್ಟ್‌ಫೋನಿಗೆ ಮೆಮೊರಿ ಕಾರ್ಡ್ ಅಳವಡಿಸಿಕೊಳ್ಳುತ್ತಾರೆ. ಇದು ಅವರ ಶೇಖರಣಾ ತೊಂದರೆಯನ್ನು ಪರಿಹರಿಸುತ್ತದೆ. ಆದರೆ, ಬಾಹ್ಯ ಮೆಮೊರಿ ಕಾರ್ಡ್ ಅಳವಡಿಸಿಕೊಂಡು ಮೊಬೈಲ್ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವುದು ನಿಮ್ಮ ತೊಂದರೆಗಳನ್ನು ಎರಡು ಪಟ್ಟು ಹೆಚ್ಚಿಸುತ್ತದೆ.

ನಿಮ್ಮ ಫೋನಿನಲ್ಲಿ 'ಮೆಮೊರಿ ಕಾರ್ಡ್‌' ಹಾಕುವುದು ಎಷ್ಟು ದೊಡ್ಡ ತಪ್ಪು ಗೊತ್ತಾ?

ಮೆಮೊರಿ ಕಾರ್ಡ್ ಅಳವಡಿಸಿಕೊಳ್ಳುವುದರಿಂದ, ಮೊದಲನೆಯದಾಗಿ ನಿಮ್ಮ ಫೋಟೋ, ವಿಡಿಯೋ, ಹಾಡು ಮೆಮೊರಿ ಕಾರ್ಡ್‌ನಲ್ಲಿದ್ದರೆ ಅದರಲ್ಲಿರುವುದನ್ನು ಪ್ಲೇ ಮಾಡಬೇಕಾದರೆ, ನಿಮ್ಮ ಫೋನ್‌ನ ಕಾರ್ಯಾಚರಣೆ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಫೋನ್‌ ನಿಂದ ಹೊರಗಿರುವ ಮೆಮೊರಿ ಕಾರ್ಡ್‌ ಜೊತೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡದಿರುವುದರಿಂದ ಹೀಗಾಗುತ್ತದೆ.

ನೀವು ಖರೀದಿ ಮಾಡಿರುವ ಮೆಮೊರಿ ಕಾರ್ಡ್‌ನಲ್ಲಿ ಸ್ಪೀಡ್‌ ಇಲ್ಲವಾದರೆ, ಅದು ಉತ್ತಮ ಮೆಮೊರಿ ಕಾರ್ಡ್‌ ಅಲ್ಲವಾದರೆ ನಮಗೆ ಇದರಿಂದ ನಿಮ್ಮ ಫೋನ್‌ ಈ ಎಲ್ಲ ಪ್ರಕ್ರಿಯೆ ಮಾಡಲು ತಡವಾಗುತ್ತದೆ. ಇದರಿಂದ ಸ್ಮಾರ್ಟ್‌ಫೋನ್ ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ, ಮೆಮೊರಿ ಕಾರ್ಡ್‌ ಹಾಕಿ ಮೆಮೊರಿ ಹೆಚ್ಚಿಸಿಕೊಳ್ಳುವುದು ಉತ್ತಮ ಕ್ರಮವೇ ಅಲ್ಲ ಎನ್ನಬಹುದು.

ನಿಮ್ಮ ಫೋನಿನಲ್ಲಿ 'ಮೆಮೊರಿ ಕಾರ್ಡ್‌' ಹಾಕುವುದು ಎಷ್ಟು ದೊಡ್ಡ ತಪ್ಪು ಗೊತ್ತಾ?

ಹಾಗೆಯೇ, ನೀವು ಫೋನಿನಲ್ಲಿ ಅಳವಡಿಸಿರುವ ಮೆಮೊರಿ ಕಾರ್ಡ್‌ನಲ್ಲಿ ದೋಷ ಕಂಡು ಬಂದರೆ, ಅದಕ್ಕೆ ವೈರಸ್‌ ದಾಳಿ ಮಾಡಿದರೆ, ಅದೊಂದು ಮೆಮೊರಿ ಕಾರ್ಡು ನಿಮ್ಮ ಫೋನನ್ನೇ ಹಾಳು ಮಾಡಿಬಿಡುತ್ತದೆ. ಆದ್ದರಿಂದ ಎಸ್‌ಡಿ ಕಾರ್ಡ್‌ ಬಳಸದಿರುವುದು ಸೂಕ್ತ. ಹಾಗಾಗಿಯೇ, ಒನ್‌ಪ್ಲಸ್‌ ಕಂಪೆನಿ ತನ್ನ ಫೋನ್‌ಗಳಲ್ಲಿ ಮೆಮೊರಿ ಕಾರ್ಡ್‌ ಹಾಕಿಕೊಳ್ಳುವ ಸೌಲಭ್ಯವನ್ನೇ ನೀಡಿಲ್ಲ

Best Mobiles in India

English summary
Does using an SD card to increase storage on your Android phone slow it down? .... But the sd cardmay slow down your smartphone if its not of good quality. to know more visit to kannada. gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+