Home
ಸುದ್ದಿಜಾಲ

'ಬಿಎಸ್​ಎನ್​ಎಲ್' 5G ಸೇವೆ ಶೀಘ್ರದಲ್ಲೇ ಆರಂಭ!

4ಜಿ ಅಳವಡಿಕೆಯಲ್ಲಿ ಉಳಿದ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಸಿದಲ್ಲಿ ಬಿಎಸ್​ಎನ್​ಎಲ್ ಹಿನ್ನಡೆ ಅನುಭವಿಸಿರುವುದು ನಿಜ. ಆದರೆ, ದೇಶದ ಎಲ್ಲ ಜನರಿಗೂ 4ಜಿ ಮತ್ತು 5ಜಿ ಸೇವೆ ನೀಡುವ ಗುರಿ ಹೊಂದಿದ್ದೇವೆ. ಈ ವರ್ಷಾಂತ್ಯದಲ್ಲಿ ಪ್ರಾಯೋಗಿಕವಾಗಿ 5G ಸೇವೆ ನೀಡಲಾಗುವುದು ಎಂದು ಕೇಂದ್ರ ಸಂವಹನ ಇಲಾಖೆ ಸಹಾಯಕ ಸಚಿವ ಮನೋಜ್ ಸಿನ್ಹಾ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಕೇಂದ್ರ ಸಂವಹನ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನ 'ಟೆಲಿಕಾಂ ಪರೀಕ್ಷೆ ಮತ್ತು ಸುರಕ್ಷತಾ ಪ್ರಮಾಣ ಕೇಂದ್ರ' ಉದ್ಘಾಟಿಸಿದ ಸಚಿವರು, ಬಿಎಸ್​ಎನ್​ಎಲ್ ಮೂಲಕ ಪ್ರಾಯೋಗಿಕವಾಗಿ 5G ಸೇವೆ ನೀಡುವ ನಿಟ್ಟಿನಲ್ಲಿ ವಿವಿಧ ಪರೀಕ್ಷೆ ನಡೆಯುತ್ತಿದ್ದು, ಈ ವರ್ಷಾಂತ್ಯದಲ್ಲಿ ಪ್ರಾಯೋಗಿಕವಾಗಿ 5G ಸೇವೆ ನೀಡಲಾಗುತ್ತದೆ ಎಂದು ತಿಳಿಸಿದರು.

'ಬಿಎಸ್​ಎನ್​ಎಲ್' 5G ಸೇವೆ ಶೀಘ್ರದಲ್ಲೇ ಆರಂಭ!

ಟೆಲಿಫೋನ್ ಎಕ್ಸ್​ಚೆಂಜ್ ಕಚೇರಿಯಲ್ಲಿ ವಿನ್ಯಾಸಗೊಂಡಿರುವ ನೂತನ 'ಸುರಕ್ಷತಾ ಭರವಸೆ ಗುಣಮಟ್ಟ ಸೌಲಭ್ಯ ಕೇಂದ್ರ'ವು ಆಧುನಿಕ ಉಪಕರಣ, ಆಪ್ ಹಾಗೂ ಅವುಗಳ ಕಾರ್ಯಾಚರಣೆಗೆ ಸುರಕ್ಷತೆ ಒದಗಿಸುತ್ತದೆ ಎಂದು ಹೇಳಿದ ಸಚಿವರು, ಭಾರತದಲ್ಲಿ ಅಂತರ್ಜಾಲ ವೇಗ ಹಾಗೂ ಸುರಕ್ಷತೆಗಳ ಬಗ್ಗೆ ಕೈಗೊಂಡಿರುವ ಹೊಸ ಯೋಜನೆಗಳ ಮಾಹಿತಿಗಳನ್ನು ಸಹ ನೀಡಿದ್ದಾರೆ.

2020ರ ವೇಳೆಗೆ ಎಲ್ಲೆಡೆ ಡಿಜಿಟಲ್ ಸೇವೆ

2020ರ ವೇಳೆಗೆ ಎಲ್ಲೆಡೆ ಡಿಜಿಟಲ್ ಸೇವೆ

ಅತ್ಯಧಿಕ ಅಂತರ್ಜಾಲ ಬಳಕೆ ಮಾಡುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ವರ್ಷಾಂತ್ಯದಲ್ಲಿ ಪ್ರಾಯೋಗಿಕವಾಗಿ 5G ಸೇವೆ ನೀಡಲಾಗುವುದು. 5G ಸೇವೆಯಿಂದ ಅತ್ಯಂತ ವೇಗದ ಇಂಟರ್​ನೆಟ್ ಸೌಲಭ್ಯವನ್ನು ಜನರು ಪಡೆದುಕೊಳ್ಳbಹುದಾಗಿದ್ದು, 2020ರ ವೇಳೆಗೆ ಎಲ್ಲೆಡೆ ಡಿಜಿಟಲ್ ಸೇವೆ ಒದಗಿಸುವ ಸಂಕಲ್ಪ ಕೈಗೊಂಡಿದ್ದೇವೆ ಎಂದು ಸಿನ್ಹಾ ಅವರು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಕ್ಕೂ ಅಂತರ್ಜಾಲ ಸೌಲಭ್ಯ

ಗ್ರಾಮೀಣ ಪ್ರದೇಶಕ್ಕೂ ಅಂತರ್ಜಾಲ ಸೌಲಭ್ಯ

ಬ್ಯಾಂಕಿಂಗ್, ಶಿಕ್ಷಣ, ಸಾರಿಗೆ ಹೀಗೆ ಪ್ರತಿಯೊಂದು ವಲಯ ಡಿಜಿಟಲ್ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದೆ. ಹೀಗಾಗಿ ಡಿಜಿಟಲೀಕರಣದ ಪ್ರಯೋಜನ ಗ್ರಾಮೀಣ ಜನತೆಗೂ ತಲುಪಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗಗಳಿಗೆ ಗ್ರಾಮ ಪಂಚಾಯಿತಿಗಳ ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತಿದೆ. ಬಿಎಸ್​ಎನ್​ಎಲ್ ಕೂಡ ಇದಕ್ಕೆ ಕೈ ಜೋಡಿಸಲಿದೆ ಎಂದು ತಿಳಿಸಿದ್ದಾರೆ.

ಸೈಬರ್ ಸುರಕ್ಷತೆಗೆ ಒತ್ತು!

ಸೈಬರ್ ಸುರಕ್ಷತೆಗೆ ಒತ್ತು!

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯೇ ಆಗುತ್ತಿದ್ದು, ಪ್ರತಿನಿತ್ಯ ಕೋಟ್ಯಾಂತರ ಜನ ಇಂಟರ್​ನೆಟ್ ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ಅಂತರ್ಜಾಲಕ್ಕೆ ಸೂಕ್ತ ಸುರಕ್ಷತೆ ಅತ್ಯವಶ್ಯಕ. ದಶಕದ ಹಿಂದೆಯೇ ಸುರಕ್ಷತಾ ಪರೀಕ್ಷೆ ಲ್ಯಾಬ್ ಆರಂಭಿಸುವ ವಿಚಾರವಾಗಿ ಸಂಶೋಧನೆಗಳು ಆರಂಭವಾಗಿದ್ದವು. ಇದೀಗ ಕೇಂದ್ರ ಸಂವಹನ ಇಲಾಖೆ ಇದನ್ನು ಸಾಕಾರಮಾಡಿದೆ ಎಂದು ಹೇಳಿದರು.

ಆಧುನಿಕ ಉಪಕರಣ, ಆಪ್ ಸುರಕ್ಷತೆ!

ಆಧುನಿಕ ಉಪಕರಣ, ಆಪ್ ಸುರಕ್ಷತೆ!

ಹೆಚ್ಚುತ್ತಿರುವ ಡಿಜಿಟಲೀಕರಣದಿಂದ ಸೈಬರ್ ಸುರಕ್ಷತೆಗೆ ಸಹ ಒತ್ತು ನೀಡಲಾಗುತ್ತಿದೆ. ಟೆಲಿಫೋನ್ ಎಕ್ಸ್​ಚೆಂಜ್ ಕಚೇರಿಯಲ್ಲಿ ವಿನ್ಯಾಸಗೊಂಡಿರುವ ಈ ನೂತನ ‘ಸುರಕ್ಷತಾ ಭರವಸೆ ಗುಣಮಟ್ಟ ಸೌಲಭ್ಯ ಕೇಂದ್ರ'ವು ಆಧುನಿಕ ಉಪಕರಣ, ಆಪ್ ಹಾಗೂ ಅವುಗಳ ಕಾರ್ಯಾಚರಣೆಗೆ ಸುರಕ್ಷತೆ ಒದಗಿಸುತ್ತದೆ. ಇದರಿಂದ ಜನರಿಗೆ ಹೆಚ್ಚು ಸುರಕ್ಷತೆ ಸಿಗಲಿದೆ ಎಂದು ತಿಳಿಸಿದರು.

ದೇಶೀಯ ಬೆಳವಣಿಗೆ!

ದೇಶೀಯ ಬೆಳವಣಿಗೆ!

ಟೆಲಿಕಾಂ ಉಪಕರಣಗಳಿಗೆ ಕಡ್ಡಾಯ ಪರೀಕ್ಷೆ ಮತ್ತು ಪ್ರಮಾಣೀಕರಣ ಖಾತರಿಪಡಿಸುವ ‘ಎಂಟಿಸಿಟಿಇ' ಹಾಗೂ ಆನ್​ಲೈನ್ ಪರವಾನಗಿ ನಿರ್ವಹಣಾ ವ್ಯವಸ್ಥೆ ಒದಗಿಸುವ ‘ಸರಳ ಸಂಚಾರ' ತಾಣಕ್ಕೆ ಚಾಲನೆ ನೀಡಿದ ನಂತರ, ಡಿಜಿಟಲ್ ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ದೇಶೀಯ ಕಂಪನಿಗಳು ಕೈಗೆತ್ತಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

Best Mobiles in India

English summary
Sinha added that the country is on the cusp of a transformational journey that would make a difference in . Can't afford to miss the 5G bus. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+