Subscribe to Gizbot

ಆಧಾರ್ ಇದ್ದರೆ 5 ನಿಮಿಷದಲ್ಲಿ ATMನಲ್ಲಿಯೇ ಬ್ಯಾಂಕ್ ಅಕೌಂಟ್ ಓಪನ್, ಡೆಬಿಟ್ ಕಾರ್ಡ್ ಲಭ್ಯ!!

Written By:

ಮೊದಲೆಲ್ಲಾ ಬ್ಯಾಂಕ್‌ನವರು ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿ ಒಂದು ಬ್ಯಾಂಕ್ ಖಾತೆ ತೆರೆಯಲು ಹರಸಾಹಸವೇ ಪಡಬೇಕಿತ್ತು.! ಹಾಗಾಗಿಯೇ, ಬ್ಯಾಂಕ್‌ಗೆ ಹೋಗಿ ಅಕೌಂಟ್ ತೆರೆಯುವುದು ಎಂದರೆ ಎಷ್ಟೋಜನರಿಗೆ ತಲೆಬಿಸಿ.! ಆದರೆ, ಮುಂದಿನ ದಿವಸಗಳಲ್ಲಿ ಇಂತಹ ಪರಿಸ್ಥಿತಿ ಇರುವುದಿಲ್ಲ.!!

ಹೌದು, ಆಧಾರ್‌ ಕಾರ್ಡ್‌ ನೆರವಿನಿಂದ ಗ್ರಾಹಕರು ಕೆಲವೇ ಕ್ಷಣಗಳಲ್ಲಿ ಬ್ಯಾಂಕ್‌ ಖಾತೆ ತೆರೆದು, ಡೆಬಿಟ್‌ ಕಾರ್ಡ್‌ ಪಡೆಯುವ ಸೌಲಭ್ಯವನ್ನು ದೇಶದಲ್ಲಿಯೇ ಮೊಟ್ಟ ಮೊದಲ ಭಾರಿಗೆ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಜಾರಿಗೆ ತಂದಿದೆ.! ನಗದುರಹಿತ ಬ್ಯಾಂಕಿಂಗ್‌ನ ವಿಶಿಷ್ಟ ಅನುಭವ ಪಡೆಯುವ ಕನಸನ್ನು ಕೆನರಾ ಬ್ಯಾಂಕ್ ನನಸು ಮಾಡಿದೆ.!!

ಯಾರ ಸಹಾಯವೂ ಇಲ್ಲದೇ ಅತ್ಯಾಧುನಿಕ ತಂತ್ರಜ್ಞಾನ ಸಜ್ಜಿತ ಬ್ಯಾಂಕ್‌ ಶಾಖೆಯಲ್ಲಿ ಆಧಾರ್‌, ಕಣ್ಣಿನ ಪಾಪೆ ಮೂಲಕ ವ್ಯಕ್ತಿಯನ್ನು ದೃಢಿಕರಿಸುವ ಎಟಿಎಂ ಹೋಲುವ ಯಂತ್ರಗಳು ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಅಕೌಂಟ್ ತೆರೆದು ಡೆಬಿಟ್ ಕಾರ್ಡ್ ನೀಡುತ್ತವೆ.!! ಹಾಗಾದರೆ, ಆ ತಂತ್ರಜ್ಞಾನ ಏನೆಲ್ಲಾ ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಂಗಳೂರಿನಲ್ಲಿಯೇ ಮೊದಲು!!

ಬೆಂಗಳೂರಿನಲ್ಲಿಯೇ ಮೊದಲು!!

ಕೆಲವೇ ಕ್ಷಣಗಳಲ್ಲಿ ಬ್ಯಾಂಕ್‌ ಖಾತೆ ತೆರೆದು, ಡೆಬಿಟ್‌ ಕಾರ್ಡ್‌ ಪಡೆಯುವ ಸೌಲಭ್ಯವನ್ನು ದೇಶದಲ್ಲಿಯೇ ಮೊಟ್ಟ ಮೊದಲ ಭಾರಿಗೆ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಜಾರಿಗೆ ತಂದಿದ್ದು, ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯ ಸ್ಪೆನ್ಸರ್‌ ಟವರ್‌ನಲ್ಲಿ ಸಂಪೂರ್ಣ ಡಿಜಿಟಲ್‌ಮಯ, ಅತ್ಯಾಧುನಿಕ ತಂತ್ರಜ್ಞಾನ ಸಜ್ಜಿತ ಬ್ಯಾಂಕ್‌ ಶಾಖೆಯಲ್ಲಿ ಆರಂಭವಾಗಿದೆ.!!

ವ್ಯಕ್ತಿಯನ್ನು ದೃಢಿಕರಿಸುವ ಎಟಿಎಂ ಹೋಲುವ ಯಂತ್ರಗಳು!!

ವ್ಯಕ್ತಿಯನ್ನು ದೃಢಿಕರಿಸುವ ಎಟಿಎಂ ಹೋಲುವ ಯಂತ್ರಗಳು!!

ಯಾರ ಸಹಾಯವೂ ಇಲ್ಲದೇ ಅತ್ಯಾಧುನಿಕ ತಂತ್ರಜ್ಞಾನದಿಂದ ಆಧಾರ್, ಕಣ್ಣಿನ ಪಾಪೆ ಮೂಲಕ ವ್ಯಕ್ತಿಯನ್ನು ದೃಢಿಕರಿಸುವ ಎಟಿಎಂ ಹೋಲುವ ಯಂತ್ರಗಳು, ಪಟಪಟನೆ ಮಾಹಿತಿ ಕಲೆಹಾಕಿ ಕ್ಷಣಮಾತ್ರದಲ್ಲಿ ಬ್ಯಾಂಕ್ ಖಾತೆ ತೆರೆಯುತ್ತವೆ.! ಮತ್ತು ಅಲ್ಲಿಯೇ ಡೆಬಿಟ್‌ಕಾರ್ಡ್‌ಗಳನ್ನು ನೀಡುತ್ತವೆ.!!

Link Aadhaar Number !! ಆನ್‌ಲೈನ್‌ನಲ್ಲಿ ಆಧಾರ್ ಅನ್ನು ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಮಾಡುವುದು ಹೇಗೆ?
ಬೇರೆ ಏನೆನೆಲ್ಲಾ ಸೌಲಭ್ಯ?

ಬೇರೆ ಏನೆನೆಲ್ಲಾ ಸೌಲಭ್ಯ?

ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಗ್ರಾಹಕರಿಗೆ ಅದರಲ್ಲೂ ಹೊಸ ತಲೆಮಾರಿನವರಿಗೆ ವಿಶಿಷ್ಟ ಬ್ಯಾಂಕಿಂಗ್‌ ಸೇವೆ ಒದಗಿಸುವುದು ಈ ಶಾಖೆಯ ಉದ್ದೇಶವಾಗಿದೆ. ಡೆಬಿಟ್ ಕಾರ್ಡ್‌, ಚೆಕ್‌ಬುಕ್‌ ಪಡೆಯುವುದರ ಜತೆಗೆ, ಮೊಬೈಲ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೌಲಭ್ಯಕ್ಕೂ ಈ ಯಂತ್ರದ ಮೂಲಕವೇ ನೋಂದಣಿ ಮಾಡಬಹುದು.

ನಗದು ಠೇವಣಿ, ಹಣ ವರ್ಗಾವಣೆ.!!

ನಗದು ಠೇವಣಿ, ಹಣ ವರ್ಗಾವಣೆ.!!

ನಗದು ಠೇವಣಿ, ಹಣ ವರ್ಗಾವಣೆ, ಚೆಕ್‌ ಕ್ಲಿಯರಿಂಗಗ್‌ನಂತಹ ಸೇವೆಗಳನ್ನು ಕೇವಲ ಯಂತ್ರದ ಸಹಾಯದಿಂದಲೇ ಪಡೆಯಬಹುದಾಗಿದೆ.!ಬ್ಯಾಂಕ್‌ ಸಿಬ್ಬಂದಿ ಜತೆ ಭೇಟಿ ನಿಗದಿಪಡಿಸಲು ಕ್ಲೌಡ್ ತಂತ್ರಜ್ಞಾನ ನೆರವಾಗಲಿದೆ. ಕಾಗದರಹಿತ ಸೇವೆಗಳಿಗೆ ಆಧ್ಯತೆ ನೀಡಲಾಗಿದೆ.!!

ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು!!

ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು!!

ಕಾರು, ಶಿಕ್ಷಣ ಮತ್ತು ಸಾಲ ಗೃಹ ಹಾಗೆಯೇ ಮ್ಯೂಚುವಲ್ ಫಂಡ್ ಜೀವ ವಿಮೆ ಬಗ್ಗೆ ಗ್ರಾಹಕರು ರೋಬಾಟ್ ಮೂಲಕವೇ ಮಾಹಿತಿ ಪಡೆಯಬಹುದು. ಜೊತೆಗೆ ಈ ಸೇವೆಗಳನ್ನು ಪಡೆಯಲು ಆನ್‌ಲೈನ್‌ನಲ್ಲಿಯೇ ಅರ್ಜಿಗಳನ್ನೂ ಸಲ್ಲಿಸಬಹುದಾಗಿದೆ.!!

ಬೇರೆ ಖಾತೆಗೆ ಹಣ ಸಂದಾಯ ಸಾಧ್ಯತೆ ಇಲ್ಲ!!

ಬೇರೆ ಖಾತೆಗೆ ಹಣ ಸಂದಾಯ ಸಾಧ್ಯತೆ ಇಲ್ಲ!!

ಅತ್ಯಾಧುನಿಕ ತಂತ್ರಜ್ಞಾನದ ಈ ರೋಬಾಟ್‌ ಯಂತ್ರದಲ್ಲಿ ಖಾತೆ ಸಂಖ್ಯೆ ನಮೂದಿಸುವ ಅಗತ್ಯ ಇಲ್ಲ. ಜೊತೆಗೆ ಈ ತಂತ್ರಜ್ಞಾನದಲ್ಲಿ ಬೇರೆ ಖಾತೆಗೆ ಹಣ ಸಂದಾಯವಾಗುವ ಸಾಧ್ಯತೆಯೂ ಇರುವುದಿಲ್ಲ ಎಂದು ಕೆನರಾ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಟೋಕನ್‌ ನೀಡುತ್ತದೆ.!!

ಟೋಕನ್‌ ನೀಡುತ್ತದೆ.!!

ಭವಿಷ್ಯದ ಮೊದಲ ಬ್ಯಾಂಕಿಂಗ್ ಶಾಖೆಯೂ ಇದಾಗಿದ್ದು, ಗ್ರಾಹಕರನ್ನು ಸಮರ್ಪಕವಾಗಿ ನಿರ್ವಹಿಸುವ ಸೌಲಭ್ಯವೂ ಈ ಯಂತ್ರದಲ್ಲಿದೆ. ಗ್ರಾಹಕರಿಗೆ ಟೋಕನ್‌ ನೀಡಿ, ಸರತಿ ಸಾಲಿನ ಪ್ರಕಾರ ಇದು ಜನರ ಜೊತೆ ಕಾರ್ಯನಿರ್ವಹಿಸುತ್ತದೆ.!! ಎಲ್ಲದಕ್ಕಿಂತ ಹೆಚ್ಚಾಗಿ ಗ್ರಾಹಕರ ಜೊತೆ ಸಂಭಾಷಿಸಿ ಸಂದೇಹಗಳನ್ನು ಪರಿಹರಿಸುತ್ತದೆ.!!

ಓದಿರಿ:ಇನ್ಮುಂದೆ ಮೊಬೈಲ್, ಕಂಪ್ಯೂಟರ್‌ಗೆ ಆಂಟಿವೈರಸ್ ಅವಶ್ಯಕತೆಯೇ ಇಲ್ಲ!!..ಏಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Canara Bank, which has set an ambitious target of moving to ‘paperless’ futuristic banking, launched its first ‘Digital Banking Branch’ at Spencer Towers in MG Road, Bengaluru.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot