ಫುಲ್‌-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ ಬಿಡುಗಡೆ ಮಾಡಿದ ಕ್ಯಾನನ್‌!

|

ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾ ಪ್ರಪಂಷ ಸಾಕಷ್ಟು ಕಲರ್‌ಫುಲ್‌ ಆಗಿದೆ. ಟೆಕ್ನಾಲಜಿ ಮುಂದುವರೆದಂತೆ ಹೊಸ ಹೊಸ ಮಾದರಿಯ ಕಲರ್‌ಫುಲ್‌ ಕ್ಯಾಮೆರಾಗಳು ಇಂದು ಮಾರುಕಟ್ಟೆಗೆ ಎಂಟ್ರಿ ನೀಡುತ್ತಲೇ ಇವೆ. ಈಗಾಗಲೇ ಟೆಕ್‌ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಕ್ಯಾಮೆರಾಗಳು ಲಭ್ಯವಿದೆ. ಸದ್ಯ ಇದರಲ್ಲಿ ಕ್ಯಾನನ್‌ ಕಂಪೆನಿ ಕೂಡ ಒಂದಾಗಿದೆ. ಕ್ಯಾನನ್‌ ಕಂಪೆನಿ ತನ್ನ ವಿಭಿನ್ನ ಮಾದರಿಯ ಹಾಗೂ ಗುಣಮಟ್ಟದ ಕ್ಯಾಮೆರಾಗಳಿಗಾಗಿ ಜಾಗತಿಕವಾಗಿ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಮಾದರಿಯ ಎರಡು ಕ್ಯಾಮೆರಾಗಳನ್ನ ಬಿಡುಗಡೆ ಮಾಡಿದೆ.

ಕ್ಯಾನನ್

ಹೌದು, ಕ್ಯಾನನ್ ಕಂಪೆನಿ ಇದೀಗ ತನ್ನ ಹೊಸ ಫುಲ್‌-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾಗಳಾದ EOSR6 ಮತ್ತು EOSR5 ಅನ್ನು ಪರಿಚಯಿಸಿದೆ. ಇನ್ನು ಕ್ಯಾಮೆರಾಗಳು ಕ್ರಮವಾಗಿ 3,39,995 ರೂ ಮತ್ತು 2,15,995 ರೂ,ಬೆಲೆಯನ್ನ ಹೊಂದಿದೆ. ಇದರಲ್ಲಿ ಪ್ರಮುಖವಾದ ಕ್ಯಾಮೆರಾ ಅಂದರೆ EOSR5 ಆಗಿದ್ದು, ಇದು ತನ್ನ 45 ಮೆಗಾಪಿಕ್ಸೆಲ್ ಫುಲ್‌-ಫ್ರೇಮ್ CMOS ಸೆನ್ಸಾರ್‌ ಜೊತೆಗೆ 8K ರೆಸಲ್ಯೂಶನ್ ವೀಡಿಯೊಗಳನ್ನು ಶೂಟ್ ಮಾಡಬಹುದಾಗಿದೆ.ಅಷ್ಟಕ್ಕೂ ಕ್ಯಾನಾನ್‌ ಸಂಸ್ತೆಯ ಎರಡು ಹೊಸ ಕ್ಯಾಮೆರಾಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕ್ಯಾನನ್‌

ಕ್ಯಾನನ್‌ EOSR5 DSLRs ಕ್ಯಾಮೆರಾ 45 ಮೆಗಾಪಿಕ್ಸೆಲ್ ಫುಲ್‌-ಫ್ರೇಮ್ CMOS ಸೆನ್ಸಾರ್‌ ಜೊತೆಗೆ 8K ರೆಸಲ್ಯೂಶನ್ ವಿಡಿಯೋಗಳನ್ನು ಶೂಟ್ ಮಾಡಬಹುದಾಗಿದೆ. ಇನ್ನು EOSR6 ಕ್ಯಾಮೆರಾ 20.1 ಮೆಗಾಪಿಕ್ಸೆಲ್ ಫುಲ್‌-ಫ್ರೇಮ್ CMOs ಸೆನ್ಸಾರ್‌ ಅನ್ನು ಹೊಂದಿದೆ, ಅಲ್ಲದೆ ಇದು ಪ್ರಮುಖ EOS -1 DXಮಾರ್ಕ್ III ನಲ್ಲಿ ಬಳಸಿದ ಸೆನ್ಸಾರ್‌ ಅನ್ನೇ ಹೊಂದಿದೆ. ಇದು EOS-1 DX ಮಾರ್ಕ್ III ನಲ್ಲಿ ಕಂಡುಬರುವ DGIG X ಇಮೇಜ್ ಪ್ರೊಸೆಸರ್ ಎರಡರಲ್ಲೂ ಲಭ್ಯವಿದೆ.ಇದಲ್ಲದೆ ಈ ಕ್ಯಾಮೆರಾದಲ್ಲಿ ಫುಲ್‌ ಎಎಫ್ ಮತ್ತು ಎಇ ​​ಟ್ರ್ಯಾಕಿಂಗ್ ಜೊತೆಗೆ ಎಲೆಕ್ಟ್ರಾನಿಕ್ ಶಟರ್ ಬಳಸಿ ಫುಲ್‌ ರೆಸಲ್ಯೂಶನ್‌ನಲ್ಲಿ 20fps ವರೆಗೆ ಕಂಟಿನ್ಯೂ ಶೂಟಿಂಗ್ ವೇಗವನ್ನು ಹೊಂದಿದೆ.

ಕ್ಯಾಮೆರಾ

ಇನ್ನು ಈ ಕ್ಯಾಮೆರಾ ಮತ್ತು ಇಮೇಜ್ ಸೆನ್ಸಾರ್ 45 ಮೆಗಾಪಿಕ್ಸೆಲ್ ಸೆನ್ಸಾರ್‌ ಜೊತೆಗೆ IOSR5 ಇನ್ನೂ ISO51200 ವರೆಗೆ ISO102400 ವರೆಗೆ ವಿಸ್ತರಿಸುವ ಆಯ್ಕೆಯನ್ನು ಸಹ ಹೊಂದಿದೆ. ಇದನ್ನು ಸೇರಿಸುವುದರಿಂದ ಡ್ಯುಯಲ್ ಪಿಕ್ಸೆಲ್ ಸಿಎಮ್‌ಒಎಸ್ ಎಎಫ್‌ನ ಎರಡನೇ ತಲೆಮಾರಿನ ಡ್ಯುಯಲ್ ಪಿಕ್ಸೆಲ್ ಸಿಎಮ್‌ಒಎಸ್ ಎಂದು ಕರೆಯಲಾಗುತ್ತದೆ. ಎಎಫ್ II ಜೊತೆಗೆ 100% x 100% ಸೆನ್ಸಾರ್‌ ವ್ಯಾಪ್ತಿ ಮತ್ತು 1053 ಆಟೋಫೋಕಸ್ ಪಾಯಿಂಟ್‌ಗಳನ್ನು ಕಾಣಬಹುದಾಗಿದೆ. ಅಲ್ಲದೆ ನೀವು ಆಟೋಫೋಕಸ್ ಪಾಯಿಂಟ್‌ಗಳನ್ನು ನೀವು ಆಯ್ಕೆ ಮಾಡಲು 5940 ಮತ್ತು 6072 ಪಾಯಿಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಕ್ಯಾಮೆರಾ

ಅಲ್ಲದೆ ಈ ಎರಡೂ ಕ್ಯಾಮೆರಾಗಳು ಇನ್-ಬಾಡಿ ಇಮೇಜ್ ಸ್ಟೆಬಿಲೈಸೇಶನ್ ಜೊತೆಗೆ ಲೆನ್ಸ್‌ನ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಒಳಗೊಂಡಿವೆ, ಇದು 8-ಸ್ಟಾಪ್ ಶಟರ್ ವೇಗದವರೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಈ ಎರಡು ಕ್ಯಾಮೆರಾಗಳು ಎಲ್ಲಾ ಇಎಫ್ ಮತ್ತು ಆರ್ಎಫ್ ಸರಣಿ ಲೆನ್ಸ್‌ಗಳನ್ನು ಐಎಸ್ ಅಥವಾ ನಾನ್ ಐಎಸ್ ವರ್ಗದೊಂದಿಗೆ ಬೆಂಬಲಿಸುತ್ತವೆ. EOSR5 CF ಎಕ್ಸ್‌ಪ್ರೆಸ್ ಕಾರ್ಡ್ ಮತ್ತು ಎಸ್‌ಡಿ ಮೆಮೊರಿ ಕಾರ್ಡ್‌ಗಾಗಿ ಎರಡು ಕಾರ್ಡ್ ಸ್ಲಾಟ್‌ಗಳನ್ನು ಹೊಂದಿದ್ದು, EOSR6 ಎರಡು ಕಾರ್ಡ್ ಸ್ಲಾಟ್‌ಗಳನ್ನು ಹೊಂದಿದ್ದು ಅದು ಕೂಡ ಎರಡೂ ಎಸ್‌ಡಿ ಮೆಮೊರಿ ಕಾರ್ಡ್‌ಗಳನ್ನು ಒಳಗೊಂಡಿರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡೂ ಕ್ಯಾಮೆರಾಗಳು ಎಫ್‌ಟಿಪಿ ಮತ್ತು ಎಫ್‌ಟಿಪಿಎಸ್ ಜೊತೆಗೆ 5GHz ಮತ್ತು 2.4GHz ವೈರ್‌ಲೆಸ್ LAN ಅನ್ನು ಹೊಂದಿವೆ. ಅಲ್ಲದೆ ವೇಗವಾಗಿ ಮತ್ತು ಹೆಚ್ಚು ಸ್ಥಿರವಾದ ಕನೆಕ್ಟಿವಿಟಿಗಳಿಗಾಗಿ 2x2 MIMO ಮತ್ತು ವೈರ್ಡ್ LAN ಬೆಂಬಲವೂ ಇದೆ.

Best Mobiles in India

English summary
The key product here is the EOS R5 that can shoot 8K resolution videos with its 45-megapixel full-frame CMOS sensor.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X