ಕ್ಯಾನನ್‌ ಕಂಪೆನಿಯಿಂದ ಹೊಸ ಪ್ರಿಂಟರ್‌ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?

|

ಕ್ಯಾನನ್‌ ಕಂಪೆನಿ ತನ್ನ ಗುಣಮಟ್ಟದ ಪ್ರಿಂಟರ್‌ಗಳಿಗೆ ಹೆಸರುವಾಸಿಯಾಗಿದೆ. ಮಾರುಕಟ್ಟೆಯಲ್ಲಿ ಕ್ಯಾನನ್‌ ಪ್ರಿಂಟರ್‌ಗಳಿಗೆ ಭಾರಿ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಕ್ಯಾನನ್‌ ಕಂಪೆನಿ ಹಲವು ಆಕರ್ಷಕ ಪ್ರಿಂಟರ್‌ಗಳನ್ನು ಪರಿಚಯಿಸುವ ಮೂಲಕ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸಬಲ್ಲ ಡೆಸ್ಕ್‌ಟಾಪ್‌ ಪ್ಲಸ್‌ ಪ್ರಿಂಟರ್‌ TC-20 ಅನ್ನು ಬಿಡುಗಡೆ ಮಾಡಿದೆ. ಇದನ್ನು TC-20 A1 ಎಂದು ಹೆಸರಿಸಲಾಗಿದೆ. ಇನ್ನು ಈ ಪ್ರಿಂಟರ್‌ ಲಾರ್ಜ್‌ ಫಾರ್ಮ್ಯಾಟ್‌ ರೋಲ್‌ ಪೇಪರ್‌ ಅನ್ನು ಸಹ ಬೆಂಬಲಿಸಲಿದೆ.

ಕ್ಯಾನನ್‌ ಕಂಪೆನಿಯಿಂದ ಹೊಸ ಪ್ರಿಂಟರ್‌ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?

ಹೌದು, ಕ್ಯಾನನ್‌ ಕಂಪೆನಿ ಭಾರತದಲ್ಲಿ ಹೊಸ TC-20 A1 ಪ್ರಿಂಟರ್‌ ಅನ್ನು ಬಿಡುಗಡೆ ಮಾಡಿದೆ. ಈ ಪ್ರಿಂಟರ್‌ 4 ಕಲರ್‌ ಪಿಗ್ಮೆಂಟ್ ಅನ್ನು ಹೊಂದಿದೆ. ಇನ್ನು ಈ ಪ್ರಿಂಟರ್‌ ಕಾಂಪ್ಯಾಕ್ಟ್ ಮತ್ತು ಸ್ಲೀಕ್ ಪ್ರಿಂಟರ್ ಆಗಿದ್ದು, ಸ್ಮಾಲ್‌ ವರ್ಕ್‌ಸ್ಪೇಸ್‌ ಮತ್ತು ಹೋಮ್ ಆಫೀಸ್‌ಗಳಿಗೆ ಸೂಕ್ತವಾದ ವಿನ್ಯಾಸವನ್ನು ಪಡೆದಿದೆ. ಇನ್ನು ಈ ಪ್ರಿಂಟರ್‌ ಗುಣಮಟ್ಟದ ಔಟ್‌ಪುಟ್‌ ಅನ್ನು ನೀಡಲಿದೆ ಎಂದು ಕ್ಯಾನನ್‌ ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ ಈ ಪ್ರಿಂಟರ್‌ ಏನೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕ್ಯಾನನ್‌ TC-20 ಮಲ್ಟಿ ಟಾಸ್ಕ್‌ ನಿರ್ವಹಿಸಬಲ್ಲ ಪ್ರಿಂಟರ್‌ ಆಗಿದೆ. ಈ ಪ್ರಿಂಟರ್‌ ಲಾರ್ಜ್‌ ರೋಲ್ ಪೇಪರ್ ಅನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ ನಿರಂತರ A3/A4 ಪ್ರಿಂಟಿಂಗ್‌ ಅನ್ನು ಆಕ್ಟಿವ್‌ ಮಾಡುವ ಇನ್‌ಬಿಲ್ಟ್‌ ಆಟೋ ಶೀಟ್ ಫೀಡರ್ (ASF) ಅನ್ನು ಕೂಡ ಒಳಗೊಂಡಿದೆ. ಇನ್ನು ಈ ಪ್ರಿಂಟರ್‌ ಫ್ರೀ ಸಾಫ್ಟ್‌ವೇರ್ ಮತ್ತು ಪೋಸ್ಟರ್‌ಆರ್ಟಿಸ್ಟ್‌ ಆ್ಯಪ್‌ಗಳಒಂದಿಗೆ ಕೂಡ ಸೆಟ್‌ ಆಗಲಿದೆ ಎಂದು ವರದಿಯಾಗಿದೆ.

ಕ್ಯಾನನ್‌ ಕಂಪೆನಿಯಿಂದ ಹೊಸ ಪ್ರಿಂಟರ್‌ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?

ಕ್ಯಾನನ್‌ TC-20 ಪ್ರಿಂಟರ್‌ ಕಾಂಪ್ಯಾಕ್ಟ್ ಮತ್ತು ಸ್ಲೀಕ್‌ ಪ್ರಿಂಟರ್ ಆಗಿದೆ. ಇದನ್ನು ಹೋಮ್‌ ಆಫೀಸ್‌, ರಿಮೋಟ್‌ ವರ್ಕ್‌ಸೈಟ್‌ಗಳು ಮತ್ತು ಕಾರ್ಪೋರೇಟ್‌ ಕಚೇರಿಗಳಲ್ಲಿ ಬಳಸುವುದಕ್ಕೆ ಸೂಕ್ತವಾಗಲಿದೆ. ಇದರ ಮುಂಭಾಗದ ವಿನ್ಯಾಸವು ಬಳಕೆದಾರರಿಗೆ ಪೇಪರ್ ಅನ್ನು ಲೋಡ್ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ. ಹಾಗೇಯೆ ಕಲರ್‌ ಅನ್ನು ಫಿಲ್‌ ಮಾಡುವ ಮತ್ತು ಮ್ಯಾನೇಜ್‌ ಕಾರ್ಟ್ರಿಡ್ಜ್ ಅನ್ನು ಬದಲಾಯಿಸುವಂತಹ ಅವಕಾಶ ನೀಡಿದೆ. ಇದಲ್ಲದೆ ಈ ಪ್ರಿಂಟರ್‌ ನ್ಯೂ ಶಾಫ್ಟ್‌ಲೆಸ್ ರೋಲ್ ಹೋಲ್ಡರ್‌ ಅನ್ನು ಹೊಂದಿದ್ದು, ಬಿಗ್‌ ಸೈಜ್‌ ರೋಲ್‌ ಪೇಪರ್‌ ಅನ್ನು ಬದಲಾಯಿಸುವುದನ್ನು ಸುಲಭಗೊಳಿಸಿದೆ.

ಇನ್ನು ಕ್ಯಾನನ್‌ TC-20 ಕಟ್ ಶೀಟ್‌ಗಳು ಮತ್ತು ರೋಲ್ ಪೇಪರ್‌ಗಳ ನಡುವೆ ಆಟೋ ಸ್ವಿಚಿಂಗ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದರಿಂದ 50 A3 ಅಥವಾ 100 A4 ಕಟ್ ಶೀಟ್‌ಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಪ್ರಿಂಟರ್‌ನಲ್ಲಿ 100 A4 ಕಟ್ ಶೀಟ್‌ಗಳನ್ನು ಸ್ಟ್ಯಾಂಡರ್ಡ್ ASF ನಲ್ಲಿ ಲೋಡ್ ಮಾಡಬಹುದಾಗಿದ್ದು, ವಿವಿಧ ಅಪ್ಲಿಕೇಶನ್‌ ಮೂಲಕ A1/24 ಇಂಚಿನ ರೋಲ್ ಪೇಪರ್‌ನಲ್ಲಿ ಪ್ರಿಂಟ್‌ ಮಾಡಬಹುದಾಗಿದೆ. ಇದರೊಂದಿಗೆ ಪ್ರಿಂಟ್‌ಗಳ ಸುಲಭ ಸ್ಟೋರೇಜ್‌ಗಾಗಿ ಐಚ್ಛಿಕ ಡೆಸ್ಕ್‌ಟಾಪ್ ಬಾಸ್ಕೆಟ್ ಅನ್ನು ಸಹ ನೀಡಲಾಗಿದೆ.

ಕ್ಯಾನನ್‌ ಕಂಪೆನಿಯಿಂದ ಹೊಸ ಪ್ರಿಂಟರ್‌ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?

ಕ್ಯಾನನ್‌ TC-20 ಪ್ರಿಂಟರ್‌ ಬಳಕೆದಾರರ ಸ್ನೇಹಿಯಾಗಿದ್ದು, ಇದು ಇತರೆ ಆ್ಯಪ್‌ಗಳ ಜೊತೆಗೆ ಸುಲಭವಾಗಿ ಹೊಂದಿಕೊಳ್ಳಿದೆ. ಇದರಿಂದ ನೀವು ಬಳಸಬಹುದಾದ ಸಾಫ್ಟ್‌ವೇರ್‌ ಮತ್ತು ಅಪ್ಲಿಕೇಶನ್‌ಗಳೊಂದಿಗೆ ಕಾರ್ಯನಿರ್ವಹಿಸಲಿದೆ. ಆದರಿಂದ ಪೋಸ್ಟರ್ ಆರ್ಟಿಸ್ಟ್ ವೆಬ್ ಆ್ಯಪ್‌ ಬಳಕೆದಾರರು ಪೋಸ್ಟರ್‌ಗಳು ಮತ್ತು ಟೆಂಪ್ಲೇಟ್‌ಗಳನ್ನು ಕ್ರಿಯೆಟ್‌ ಮಾಡಲು ಸಾಧ್ಯವಾಗಲಿದೆ. ಇನ್ನು ಕ್ಯಾನನ್‌ ಪ್ರಿಂಟ್‌ ಇಂಕ್‌ಜೆಟ್‌/ಸೆಲ್‌ಪೈ ಆ್ಯಪ್ ಬಳಕೆದಾರರು ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳ ಮೂಲಕ ರೋಲ್ ಪೇಪರ್ ಅನ್ನು ಪರಿಶೀಲಿಸುವುದಕ್ಕೆ ಕೂಡ ಸಾಧ್ಯವಿದೆ. ಸದ್ಯ ಭಾರತದಲ್ಲಿ ಬಿಡುಗಡೆಯಾಗಿರುವ ಈ ಪ್ರಿಂಟರ್‌ನ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ.

Best Mobiles in India

English summary
The TC-20 is the company’s first desktop 4-colour pigment large format printer with A1 Plus capability.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X