ಕ್ಯಾಮೆರಾ ಪ್ರಿಯರ ನಿದ್ದೆಗೆಡಿಸಲಿದೆ ಕ್ಯಾನನ್‌ನ ಈ ಹೊಸ ಕ್ಯಾಮೆರಾ! ಫೀಚರ್ಸ್ ಅಂತೂ ಅದ್ಬುತ!
ಕ್ಯಾಮೆರಾ ಮಾರುಕಟ್ಟೆಯಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿರುವ ಕ್ಯಾನನ್ ಕಂಪೆನಿ ಇದೀಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ರಿಮೋಟ್ ಕ್ಯಾಮೆರಾ ಸರಣಿಯಲ್ಲಿ ಹೊಸದಾಗಿ ಇನ್‌ಡೋರ್ 4K ರಿಮೋಟ್ PTZ ಕ್ಯಾಮರಾ CR-N700 ಅನ್ನು ಪರಿಚಯಿಸಿದೆ. ಈ ಕ್ಯಾಮೆರಾ "ಅಸಾಧಾರಣ" ಸಂಪರ್ಕ ಮತ್ತು "ಕ್ಲಾಸ್-ಲೀಡಿಂಗ್" ಆಟೋಫೋಕಸ್ ನೀಡಲಿದೆ.
ಹೌದು, ಕ್ಯಾನನ್ ಹೊಸ ರಿಮೋಟ್ ಕಂಟ್ರೋಲ್ ಕ್ಯಾಮೆರಾ ಅನಾವರಣಗೊಳಿಸಿದೆ. ಈ ಕ್ಯಾಮೆರಾ ಅಡ್ವಾನ್ಸ್ಡ್ ವೀಡಿಯೋ ಪ್ರೊಡಕ್ಷನ್ ಮತ್ತು ಹೈ ಇಮೇಜ್ ಕ್ವಾಲಿಟಿ ನೀಡಲಿದೆ. ಜೊತೆಗೆ ಎರಡು ನವೀನ ಆಡ್-ಆನ್ ಅಪ್ಲಿಕೇಶನ್‌ಗಳು, ಆಟೋ-ಟ್ರ್ಯಾಕಿಂಗ್ ಅನ್ನು ಸಹ ಒಳಗೊಂಡಿದೆ. ಹಾಗಾದ್ರೆ ಈ ಹೊಸ ಕ್ಯಾಮೆರಾ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ಯಾನನ್ CR-N700 ಇನ್‌ಡೋರ್ ರಿಮೋಟ್ PTZ ಕ್ಯಾಮೆರಾ
ಕ್ಯಾನನ್ CR-N700 ಇನ್‌ಡೋರ್ ರಿಮೋಟ್ PTZ ಕ್ಯಾಮೆರಾ ಉನ್ನತ ಗುಣಮಟ್ಟದ ವೀಡಿಯೊ ರೆಕಾರ್ಡಿಂಗ್ ಅನ್ನು ಹೊಂದಿದೆ. ಇದು ವೀಡಿಯೊ ರೆಕಾರ್ಡಿಂಗ್ ಅನ್ನು 4K/60P/4: 2:2/10-ಬಿಟ್ ಫಾರ್ಮ್ಯಾಟ್‌ನಲ್ಲಿ ಬೆಂಬಲಿಸಲಿದೆ. ಈ ಕ್ಯಾಮೆರಾದಲ್ಲಿ HLG (ಹೈಬ್ರಿಡ್ ಲಾಗ್-ಗಾಮಾ) ಅಥವಾ PQ (ಪರ್ಸೆಪ್ಚುವಲ್ ಕ್ವಾಂಟೈಸೇಶನ್) ಫಾರ್ಮ್ಯಾಟ್‌ಗಳಲ್ಲಿ HDR ರೆಕಾರ್ಡಿಂಗ್ ಅನ್ನು ಸಕ್ರಿಯಗೊಳಿಸಲಿದೆ. ಇದಲ್ಲದೆ ಕ್ಯಾಮೆರಾ CR-N700 15x ಜೂಮ್ ಲೆನ್ಸ್, 1.0-ಇಂಚಿನ CMOS ಸೆನ್ಸಾರ್ ಮತ್ತು DIGIC DV7 ಇಮೇಜ್ ಪ್ರೊಸೆಸಿಂಗ್ ಎಂಜಿನ್ ಅನ್ನು ಒಳಗೊಂಡಿದೆ.
ಇನ್ನು ಈ ಇನ್‌ಡೋರ್ ಕ್ಯಾಮೆರಾ ವೃತ್ತಿಪರ ವೀಡಿಯೊ ಪ್ರೊಡಕ್ಷನ್‌ಗೆ ಸೂಕ್ತವಾಗಿದೆ. ಇದರಲ್ಲಿ ನೀವು ಉತ್ತಮ ಗುಣಮಟ್ಟದ ಮತ್ತು ದೊಡ್ಡ ಪ್ರಮಾಣದ ಲೈವ್ ಈವೆಂಟ್‌ಗಳನ್ನು ಪ್ರಸಾರ ಮಾಡಬಹುದಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಡ್ಯುಯಲ್ ಪಿಕ್ಸೆಲ್ CMOS AF ಆಟೋಫೋಕಸ್, ಐ-ಡಿಟೆಕ್ಟ್ AF ಮತ್ತು ಹೆಡ್-ಡಿಟೆಕ್ಟ್ AF ಸೇರಿದಂತೆ ವರ್ಧಿತ ಮಾನವ ಗುರುತಿಸುವಿಕೆ ಫೀಚರ್ಸ್‌ಗಳನ್ನು ಕೂಡ ಹೊಂದಿದೆ. ಈ ಫೀಚರ್ಸ್‌ಗಳು ಕ್ಯಾಮೆರಾದಲ್ಲಿ ಹೆಚ್ಚಿನ ನಿಖರತೆ ಮತ್ತು ಸ್ಪಷ್ಟತೆಯೊಂದಿಗೆ ವೇಗವಾಗಿ ಮೂವ್ ಆಗುವ ಸಬ್ಜೆಕ್ಟ್‌ಗಳನ್ನು ಗುರುತಿಸಲು ಸಹಾಯ ಮಾಡಲಿದೆ.

ಇದಲ್ಲದೆ, ಈ ಕ್ಯಾಮೆರಾ ಆಟೋ ಟ್ರ್ಯಾಕಿಂಗ್ ಮತ್ತು ಆಟೋ ಲೂಪ್ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ. ಇನ್ನು ಕ್ಯಾಮರಾ ಸ್ವಿಚಿಂಗ್ ಮತ್ತು ವಿಷಯ ವಿತರಣೆಯಂತಹ ಕಾರ್ಯಗಳ ಮೇಲೆ ಪರಿಣಾಮಕಾರಿಯಾಗಿ ಗಮನಹರಿಸಲು ಅವಕಾಶ ನೀಡಲಿದೆ. ಹಾಗೆಯೇ ಈ ಕ್ಯಾಮೆರಾದಲ್ಲಿ ಆಟೋ ಲೂಪ್ ಅಪ್ಲಿಕೇಶನ್‌ನಿಂದ ತಡೆರಹಿತ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸಲಾಗಿದೆ. ಆದರಿಂದ ಸ್ಪೋರ್ಟ್ಸ್ ಮತ್ತು ಸಂದರ್ಶನಗಳಂತಹ ಈವೆಂಟ್‌ಗಳ ಪ್ರಸಾರದ ಸಮಯದಲ್ಲಿ ಸ್ಟೇಜಿಂಗ್ ಚಲನೆಗಳನ್ನು ಆಟೋಮ್ಯಾಟಿಕ್ ಪುನರಾವರ್ತಿಸಲು ಅವಕಾಶ ನೀಡಲಿದೆ.
ಇನ್ನು ಕ್ಯಾನನ್ ಕಂಪೆನಿ ಇತ್ತೀಚಿಗೆ ಹೊಸ ಕ್ಯಾನನ್ ಪವರ್‌ಶಾಟ್ V10 ಕ್ಯಾಮೆರಾ ಪರಿಚಯಿಸಿದೆ. ಈ ಕ್ಯಾಮೆರಾ 2.0 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್ ಹೊಂದಿದ್ದು, ಇದನ್ನು ಫ್ಲಿಪ್ ಮಾಡಬಹುದು. ಜೊತೆಗೆ ಈ ಪವರ್‌ಶಾಟ್ V10 ಉತ್ತಮ ಗುಣಮಟ್ಟದ ಮೈಕ್ರೊಫೋನ್ ಆಯ್ಕೆ ಪಡೆದಿದ್ದು, ಇನ್‌ಬಿಲ್ಟ್ ಸ್ಟ್ಯಾಂಡ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಶೇಕ್-ಫ್ರೀ 4K UHD ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.
ಇನ್ನುಳಿದಂತೆ ಪವರ್‌ಶಾಟ್ V10 ಲಂಬವಾದ ವಿನ್ಯಾಸ ಪಡೆದುಕೊಂಡಿದ್ದು, ಪೋರ್ಟಬಲ್ ಆಗಿದೆ. ಇನ್ನು ಈ ಕ್ಯಾಮೆರಾದ ಮೂಲಕ ಜನನಿಬಿಡ ಪ್ರದೇಶಗಳಲ್ಲಿ ರೆಕಾರ್ಡ್ ಮಾಡುವಾಗ ಬಳಕೆದಾರರಿಗೆ ಹಲವು ಅನುಕೂಲ ಮಾಡಿಕೊಡಲಿದೆ. ಅಂದರೆ ಕೇಂದ್ರೀಕೃತ ರೆಕಾರ್ಡ್ ಬಟನ್ ತ್ವರಿತ ಮತ್ತು ಚುರುಕುಬುದ್ಧಿಯ ಒನ್-ಹ್ಯಾಂಡೆಡ್ ಕ್ಯಾಮೆರಾ ಕಂಟ್ರೋಲ್ ಆಗಿ ಬಳಕೆ ಮಾಡಬಹುದು. ಅಂದರೆ ಈ ಕ್ಯಾಮೆರಾವನ್ನು ಸಂಪೂರ್ಣವಾಗಿ ಒಬ್ಬರೇ ಕಂಟ್ರೋಲ್ ಮಾಡಬಹುದು. ಜೊತೆಗೆ ಕ್ಯಾಮರಾದ ಹೃದಯಭಾಗದಲ್ಲಿ 1 ಇಂಚಿನ CMOS ಸೆನ್ಸರ್ ಆಯ್ಕೆ ನೀಡಲಾಗಿದ್ದು, ಇದು 4K ವಿಡಿಯೋ ಗುಣಮಟ್ಟವನ್ನು ಹೊಂದಿದೆ.


Click it and Unblock the Notifications








