ಈ ಕಚೇರಿಯಲ್ಲಿ ನಗು ಮುಖದವರಿಗೆ ಮಾತ್ರ ಎಂಟ್ರಿ ಸಿಗುತ್ತೆ!

|

ಟೆಕ್ನಾಲಜಿ ಮುಮದುವರೆದಂತೆ ಏನೆಲ್ಲಾ ನಿಯಮಗಳು ಬರುತ್ತಿವೆ ಅನ್ನೊದಕ್ಕೆ ಈ ಘಟನೆಯೇ ಸಾಕ್ಷಿ. ಚೀನಾದ ಬೀಜಿಂಗ್‌ನಲ್ಲಿರುವ ಸಂಸ್ಥೆಯೊಂದು ಹೊಸ ನಿಯಮವನ್ನು ಜಾರಿ ಮಾಡಿದೆ. ಅದು ಏನಪ್ಪಾ ಅಂದ್ರೆ ಕ್ಯಾನನ್‌ ಎನ್ನುವ ಸಂಸ್ಥೆ ತನ್ನ ಉದ್ಯೋಗಿಗಳ ಯೋಗಕ್ಷೇಮಕ್ಕಾಗಿ ಹೊಸ ಉಪಕ್ರಮದಲ್ಲಿ ಹೊಸ ಎಐ-ಶಕ್ತಗೊಂಡ 'ಸ್ಮೈಲ್ ರೆಕಗ್ನಿಷನ್' ತಂತ್ರಜ್ಞಾನವನ್ನು ತಂದಿದೆ. ಈ ತಂತ್ರಜ್ಞಾನದ ವಿಶೇಷತೆ ಏನೆಂದರೆ ನಗುತ್ತಾ ಬರುವ ನೌಕರರನ್ನು ಮಾತ್ರ ಕಚೇರಿಯ ಒಳಗೆ ಬೀಡುತ್ತೆ, ನಿಮ್ಮ ಮುಖ ಏನಾದ್ರು ಗಂಟಿಹಾಕಿಕೊಂಡು ಬೇಸರದಲ್ಲಿದ್ದರೆ ನೋ ಎಂಟ್ರಿ ಎನ್ನುತ್ತೆ.

ಕ್ಯಾನನ್‌

ಹೌದು, ಚೀನಾದ ಕ್ಯಾನನ್‌ ಸಂಸ್ಥೆ ಉದ್ಯೋಗಿಗಳು ನಗುತ್ತಾ ಇದ್ದರೆ ಮಾತ್ರ ಕಚೇರಿಯೊಳಗೆ ಎಂಟ್ರಿ ನೀಡುವ ಪರಿಪಾಠಕ್ಕೆ ಮುಂದಾಗಿದೆ. ಇದಕ್ಕಾಗಿ ಸ್ಮೈಲ್‌ ರೆಕಗ್ನಿಷನ್‌ ಟೆಕ್ನಾಲಜಿ ಪರಿಚಯಿಸಿದೆ. ಇದರ ಮೂಲಕ ಕ್ಯಾನನ್ ಮಾಹಿತಿ ತಂತ್ರಜ್ಞಾನದ ಕಚೇರಿಗಳಲ್ಲಿನ ಎಐ ಕ್ಯಾಮೆರಾಗಳು ನಗುತ್ತಿರುವ ಕಾರ್ಮಿಕರಿಗೆ ಕೊಠಡಿಗಳಿಗೆ ಪ್ರವೇಶಿಸಲು ಮಾತ್ರ ಅವಕಾಶ ನೀಡುತ್ತದೆ. ಪ್ರತಿ ಉದ್ಯೋಗಿಯು ಸಾರ್ವಕಾಲಿಕ 100% ಸಂತೋಷದಿಂದಿರುವುದನ್ನು ಖಚಿತಪಡಿಸಿಕೊಳ್ಳಲು ಬಯಸಿದೆ ಎಂದು ಕಂಪನಿ ಹೇಳಿದೆ. ಹಾಗಾದ್ರೆ ಸ್ಮೈಲ್‌ ರೆಕಗ್ನಿಷನ್‌ ಟೆಕ್ನಾಲಜಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕ್ಯಾನನ್‌

ಚೀನಾದ ಕ್ಯಾನನ್‌ ಕಂಪೆನಿ ತನ್ನ ಉದ್ಯೋಗಿಗಳ ಸದಾ ನಗುತ್ತಾ ಇರಬೇಕು ಅನ್ನೊದನ್ನ ಬಯಸಿದೆ. ಇದಕ್ಕಾಗಿಯೇ ಹೊಸ ಟೆಕ್ನಾಲಜಿಯನ್ನೇ ಪರಿಚಯಿಸಿದೆ. ಇದು ನಗುವ ನೌಕರರನ್ನು ಮಾತ್ರ ಪ್ರವೇಶಿಸಲು ಅವಕಾಶ ನೀಡುತ್ತೆ. ನೀವು ಸ್ವಲ್ಪ ನಗುವುದನ್ನು ಮರೆತರು ಕಚೇರಿಯೊಳಗೆ ನೋ ಎಂಟ್ರಿ ಇರಲಿದೆ. ಹೀಗೆ ಎಐ ಮತ್ತು ಕ್ರಮಾವಳಿಗಳ ಸಹಾಯದಿಂದ ಚೀನಾದ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಹೇಗೆ ಅಸ್ಥಿರ ಮಟ್ಟಕ್ಕೆ ಸಮೀಕ್ಷೆ ಮಾಡುತ್ತಿವೆ ಅನ್ನೊದು ದಿ ಫೈನಾನ್ಶಿಯಲ್ ಟೈಮ್ಸ್‌ನ ವರದಿಯಾಗಿದೆ.

ಚೀನಾದಲ್ಲಿ

ಚೀನಾದಲ್ಲಿ ಈಗಾಗಲೇ ಉದ್ಯೋಗಿಗಳು ತಮ್ಮ ಕಂಪ್ಯೂಟರ್‌ಗಳಲ್ಲಿ ತಮ್ಮ ಉತ್ಪಾದಕತೆಯನ್ನು ಅಳೆಯಲು ಯಾವ ಕಾರ್ಯಕ್ರಮಗಳನ್ನು ಬಳಸುತ್ತಾರೆ ಎಂಬುದನ್ನು ಸಂಸ್ಥೆಗಳು ಮೇಲ್ವಿಚಾರಣೆ ಮಾಡುತ್ತಿವೆ. ತಮ್ಮ ಊಟದ ವಿರಾಮಕ್ಕೆ ಅವರು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಅಳೆಯಲು ಸಿಸಿಟಿವಿ ಕ್ಯಾಮೆರಾಗಳನ್ನು ಬಳಸುವುದು. ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಕಚೇರಿಯ ಹೊರಗೆ ಅವರ ಚಲನವಲನಗಳನ್ನು ಸಹ ಟ್ರ್ಯಾಕ್ ಮಾಡುತ್ತದೆ. ಹಾಗೆಯೇ ಕ್ಯಾನನ್ ಮಾಹಿತಿ ತಂತ್ರಜ್ಞಾನವು ಕಳೆದ ವರ್ಷ ತನ್ನ ‘ಸ್ಮೈಲ್ ರೆಕಗ್ನಿಷನ್' ಕ್ಯಾಮೆರಾಗಳನ್ನು ಕೆಲಸದ ಸ್ಥಳ ನಿರ್ವಹಣಾ ಸಾಧನಗಳ ಭಾಗವಾಗಿ ಘೋಷಿಸಿತ್ತು, ಆದರೆ ಈ ಟೆಕ್ನಾಲಜಿ ಹೆಚ್ಚಿನ ಗಮನ ಸೆಳೆದಿಲ್ಲ ಎನ್ನಲಾಗಿದೆ.

ಉದ್ಯೋಗಿ

ಉದ್ಯೋಗಿಗಳು ನಗುತ್ತಾ ಇರಬೇಕು ಅನ್ನೊದೇನು ಸರಿ. ಆದರೆ ಕಚೇರಿಯ ಒಳಗೆ ಪ್ರವೇಶಿಸುವುದಕ್ಕೂ ನಗುತ್ತಾ ಇರಬೇಕು ಅನ್ನೊದು ಎಷ್ಟು ಸರಿ ಅನ್ನೊದು ಚೀನಿಯರಿಗೆ ಮಾತ್ರ ಗೊತ್ತು. ವಾಸ್ತವವಾಗಿ, ಈ ರೀತಿಯ ಸಾಮಾನ್ಯ ಕಣ್ಗಾವಲು ಡಿವೈಸ್‌ಗಳು ಹಲವು ವಿಧಗಳಲ್ಲಿ ಕಡಿಮೆ ಅಪಾಯಕಾರಿ ರೀತಿಯ ಟೆಕ್ನಾಲಜಿಯಾಗಿವೆ. ಇತರ ನಿಯಂತ್ರಣ ವ್ಯವಸ್ಥೆಗಳು ಹೆಚ್ಚು ಸೂಕ್ಷ್ಮವಾಗಿದೆ. ಬಹುಶಃ ಚೀನಾದಲ್ಲಿ ‘ಶೀಘ್ರದಲ್ಲೇ ಎಲ್ಲಾ ಕಚೇರಿಗಳಲ್ಲೂ ಈ ರೀತಿಯ ಮಾದರಿಯ ಅನುಷ್ಠಾನಕ್ಕೆ ಬಂದರೂ ಅಚ್ಚರಿಯಿಲ್ಲ.

Most Read Articles
Best Mobiles in India

Read more about:
English summary
In a new initiative for its employees' well-being Canon has come up with a new AI-enabled 'smile recognition' technology.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X