ಕ್ಯಾಸಿಯೋ ಸಂಸ್ಥೆಯಿಂದ ಎರಡು ಹೊಸ ವಾಚ್ ಬಿಡುಗಡೆ: ಇದರ ವಿನ್ಯಾಸವೇ ಅಚ್ಚರಿ
ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಕ್ಯಾಸಿಯೋ ಸಂಸ್ಥೆಯ ಡಿವೈಸ್‌ಗಳಿಗೆ ಉತ್ತಮ ಬೇಡಿಕೆಯಿದೆ. ಇದೀಗ ಕ್ಯಾಸಿಯೊ ಕಂಪೆನಿ ತನ್ನ ಪ್ರೊ ಟ್ರೆಕ್ ಶ್ರೇಣಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ಗಳನ್ನು PRG-340SC-2 ಮತ್ತು PRG-340SC-5 ಎಂದು ಹೆಸರಿಸಲಾಗಿದೆ.
ಹೌದು, ಕ್ಯಾಸಿಯೋ ಸಂಸ್ಥೆ PRG-340SC-2 ಮತ್ತು PRG-340SC-5 ಎನ್ನುವ ಎರಡು ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ಗಳಲ್ಲಿ ಒಂದು ನೌಕಾಪಡೆಯಲ್ಲಿ ಮತ್ತು ಇನ್ನೊಂದು ಬೆಚ್ಚಗಿನ ಬೀಜ್‌ನಲ್ಲಿ ಬಳಕೆದಾರರಿಗೆ ನ್ಯಾವಿಗೇಟ್ ಮಾಡಲು ಸಹಾಯ ಮಾಡುವ ಫೀಚರ್ಸ್ ಹೊಂದಿವೆ. ಹಾಗಾದ್ರೆ ಕ್ಯಾಸಿಯೋದ ಹೊಸ ಸ್ಮಾರ್ಟ್‌ವಾಚ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ಯಾಸಿಯೋದ ಹೊಸ ವಾಚ್‌ಗಳ ವಿಶೇಷತೆ ಏನು?
ಕ್ಯಾಸಿಯೋ ಸಂಸ್ಥೆ ಪರಿಚಯಿಸಿರುವ PRG-340SC-2 ಮತ್ತು PRG-340SC-5 ವಾಚ್‌ಗಳು ವಿಭಿನ್ನ ಮಾದರಿಯ ಫೀಚರ್ಸ್‌ಗಳನ್ನು ಹೊಂದಿವೆ. ಈ ವಾಚ್‌ಗಳು ಡಿಜಿಟಲ್ ದಿಕ್ಸೂಚಿ, ಬ್ಯಾರೋಮೀಟರ್, ಆಲ್ಟಿಮೀಟರ್ ಮತ್ತು ಥರ್ಮಾಮೀಟರ್‌ನಂತಹ ಇನ್‌ಬಿಲ್ಟ್ ಫೀಚರ್ಸ್‌ಗಳನ್ನು ಹೊಂದಿವೆ. ಇವುಗಳು ಪರಿಸರ ಪರಿಸ್ಥಿತಿಗಳನ್ನು ಟ್ರ್ಯಾಕ್ ಮಾಡುವುದಕ್ಕೆ ಸಹಾಯ ಮಾಡಲಿವೆ.
ಇದಲ್ಲದೆ ಒಂದೇ ಸಮಯದಲ್ಲಿ ವಿವಿಧ ರೀತಿಯ ಮಾಹಿತಿಯನ್ನು ತೋರಿಸುವ ವಿಶೇಷ ಡ್ಯುಯಲ್-ಲೇಯರ್ ಎಲ್‌ಸಿಡಿ ಸಾಮರ್ಥ್ಯವನ್ನು ಹೊಂದಿವೆ. ಜೊತೆಗೆ ಕಡಿಮೆ ಬೆಳಕು ಇಲ್ಲವೇ ಕತ್ತಲಿನ ಸಮಯದಲ್ಲಿ ಸುಲಭವಾಗಿ ವೀಕ್ಷಿಸುವುದಕ್ಕೆ ಬ್ರೈಟ್‌ನೆಸ್ ನೀಡುವ ಎಲ್ಇಡಿ ಬ್ಯಾಕ್ಲೈಟ್ ಅನ್ನು ಸಹ ಒಳಗೊಂಡಿವೆ. ಇನ್ನು ಈ ಸ್ಮಾರ್ಟ್‌ವಾಚ್‌ಗಳ ಮತ್ತೊಂದು ವಿಶೇಷತೆ ಎಂದರೆ ಪರಿಸರ ಸ್ನೇಹಿಯಾಗಿರುವುದು. ಈ ಬ್ಯಾಂಡ್‌ಗಳನ್ನು ಕ್ಯಾಸಿಯೊದ ಮರುಬಳಕೆಯ ರಾಳದ ತುಂಡುಗಳಿಂದ ತಯಾರಿಸಲಾಗಿದೆ.

ಇನ್ನು ಈ ಎರಡೂ ಸ್ಮಾರ್ಟ್‌ವಾಚ್‌ಗಳು ಸೌರಶಕ್ತಿಯಿಂದ ರನ್ ಆಗಲಿದ್ದು, 100 ಮೀಟರ್ ಆಳದವರೆಗೆ ನೀರನ್ನು ತಡೆದುಕೊಳ್ಳುವ ಸಾಮರ್ಥ್ಯ ಪಡೆದಿವೆ. ಇದಲ್ಲದೆ -10 ಡಿಗ್ರಿ ಸೆಲ್ಸಿಯಸ್ ವರೆಗಿನ ಶೀತ ತಾಪಮಾನದಲ್ಲಿ ಕೆಲಸ ಮಾಡಲು ಸಹ ಅವುಗಳನ್ನು ನಿರ್ಮಿಸಲಾಗಿದೆ. ಇವುಗಳ ದೃಢವಾದ ಫೀಚರ್ಸ್‌ಗಳ ಹೊರತಾಗಿಯೂ, ಈ ಕೈಗಡಿಯಾರಗಳು ಕೇವಲ 60 ಗ್ರಾಂಗಳಷ್ಟು ಹಗುರವಾಗಿವೆ. ಆದರಿಂದ ಯಾವುದೇ ಸಾಹಸದ ಸಮಯದಲ್ಲಿ ದಿನವಿಡೀ ಧರಿಸುವುದಕ್ಕೆ ಅನುಕೂಲಕರವಾಗಿವೆ.
ಬೆಲೆ ಮತ್ತು ಲಭ್ಯತೆ
ಕ್ಯಾಸಿನೋ ಪರಿಚಯಿಸಿರುವ ಎರಡು ಸ್ಮಾರ್ಟ್‌ವಾಚ್‌ಗಳ ಬೆಲೆ $250 (ಅಂದಾಜು 20,688ರೂ)ಆಗಿದೆ. ಇದು ಪ್ರಸ್ತುತ Amazon ನಲ್ಲಿ ಮುಂಗಡ-ಕೋರಿಕೆಗೆ ಲಭ್ಯವಿದೆ. ಇದನ್ನು ಏಪ್ರಿಲ್ 1, 2024 ರಿಂದ ಖರೀದಿಸಬಹುದಾಗಿದೆ.
ಇನ್ನು ಇತ್ತಿಚಿನ ದಿನಗಳಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಭಾರಿ ಬೇಡಿಕಯಿರುವುದರಿಂದ ಹಲವು ಬ್ರ್ಯಾಂಡ್‌ನ ವಾಚ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇದರಲ್ಲಿ ಫೈರ್ ಬೋಲ್ಟ್ ಡ್ರೀಮ್ ಸ್ಮಾರ್ಟ್‌ವಾಚ್ ಕೂಡ ಒಂದಾಗಿದೆ. ಈ ಸ್ಮಾರ್ಟ್‌ವಾಚ್ 2.02 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಆಕರ್ಷಕ ಕ್ರೌನ್ ಬಟನ್‌ನೊಂದಿಗೆ ವಿವಿಧ ಕಾರ್ಯಕ್ಕಾಗಿ ಮತ್ತೊಂದು ವಿಶೇಷ ಬಟನ್ ಆಯ್ಕೆ ಪಡೆದಿದೆ. ಇನ್ನು ವಾಚ್ ಕ್ಲೌಡ್ ಆಧಾರಿತ ವಾಚ್ ಫೇಸ್ ಆಯ್ಕೆ ಪಡೆದಿದ್ದು, ಕ್ವಾಡ್-ಕೋರ್ ಕಾರ್ಟೆಕ್ಸ್ A7MP ಚಿಪ್‌ಸೆಟ್ ಮತ್ತು ಮಾಲಿ T820 MP1 ಗ್ರಾಫಿಕ್ಸ್ ಕಾರ್ಡ್‌ನೊಂದಿಗೆ ಬರುತ್ತದೆ.
ಫೈರ್ ಬೋಲ್ಟ್ ಡ್ರೀಮ್ ವಾಚ್ 4G LTE ಮತ್ತು ನ್ಯಾನೋ ಸಿಮ್ ಕಾರ್ಡ್ (Nano SIM card) ಬೆಂಬಲದೊಂದಿಗೆ ಕಾಣಿಸಿಕೊಂಡಿದ್ದು, ನೀವು ಈ ಮೂಲಕ ಕರೆ ಮಾಡಬಹುದಾಗಿದೆ. ಇದರೊಂದಿಗೆ ಜಿಪಿಎಸ್, ಬ್ಲೂಟೂತ್ ಮತ್ತು ವೈ-ಫೈ ನಂತಹ ಸಂಪರ್ಕ ಫೀಚರ್ಸ್ ಅನ್ನು ಹೊಂದಿದ್ದು, ವಿವಿಧ ಕೆಲಸಗಳಿಗೆ ಇದನ್ನು ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಗೂಗಲ್ ಪ್ಲೇ ಸ್ಟೋರ್ (Google Play Store) ಅನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ಬಳಕೆ ಮಾಡಬಹುದು. ಅಂದರೆ ನೀವು ಈ ವಾಚ್‌ನಲ್ಲಿ ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ (WhatsApp, Facebook, Instagram) ಆಪ್‌ಗಳನ್ನು ಬಳಕೆ ಮಾಡಬಹುದಾಗಿದೆ.


Click it and Unblock the Notifications








