ಡ್ರೈವಿಂಗ್ ಮಾಡುವಾಗ 'ಮೊಬೈಲ್' ಬಳಸಲು ಹೆದರುವಂತೆ ಮಾಡಿದ ಪೊಲೀಸರು!!

|

ಡ್ರೈವಿಂಗ್ ಮಾಡೋವಾಗ ಮೊಬೈಲ್‌ ಬಳಸಬೇಡಿ ಎಂದರೂ ಕೇಳದ ಸಾರ್ವಜನಿಕರಿಗೆ ಪೊಲೀಸರು ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಮೊಬೈಲ್‌ನಿಂದ ಆಗುತ್ತಿರುವ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಮಹಾರಾಷ್ಟ್ರ ಸಂಚಾರಿ ಪೊಲೀಸರು ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಇನ್ಮುಂದೆ ಜನ ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸಲು ಹೆದರುವಂತೆ ಮಾಡಿದ್ದಾರೆ.

ಹೌದು, ರಸ್ತೆ ಅಪಘಾತ ಮತ್ತು ಸಾವುಗಳನ್ನು ಶೇ.10% ರಷ್ಟು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮಹಾರಾಷ್ಟ್ರ ಸರಕಾರಕ್ಕೆ ನಿವೃತ್ತ ನ್ಯಾಯಾಧೀಶರ ಸಮೀತಿ ಸೂಚಿಸಿದೆ. ಇದಾದ ನಂತರ ಅಲ್ಲಿನ ಪೊಲೀಸರು ಡ್ರೈವಿಂಗ್ ವೇಳೆಯಲ್ಲಿ ಮೊಬೈಲ್ ಬಳಸಿದರೆ 3 ತಿಂಗಳ ಕಾಲ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದ್ದಾರೆ.

ಡ್ರೈವಿಂಗ್ ಮಾಡುವಾಗ 'ಮೊಬೈಲ್' ಬಳಸಲು ಹೆದರುವಂತೆ ಮಾಡಿದ ಪೊಲೀಸರು!!

ವೇಗದ ಚಾಲನೆ, ಕುಡಿದು ಚಾಲನೆ, ಸಿಗ್ನಲ್ ಜಂಪ್ ಮಾಡುವುದು, ವಾಣಿಜ್ಯೋದ್ದೇಶದ ವಾಹನಗಳಲ್ಲಿ ಪ್ರಯಾಣಿಕರ ಸಾಗಣೆ ಮತ್ತು ಓವರ್ ಲೋಡಿಂಗ್ ಕಾರಣಗಳ ಜೊತೆಗೆ ಈಗ ಡ್ರೈವ್ ಮಾಡುವಾಗ ಮೊಬೈನಲ್ಲಿ ಸಂಭಾಷಣೆ ನಡೆಸುತ್ತಿದ್ದರೂ ಸಹ ಲೈಸೆನ್ಸ್ ರದ್ದು ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಇಲಾಖೆ ಸೂಚಿಸಿದೆ.

ಸಾರ್ವಜನಿಕರಿಗೆ ಹೆಚ್ಚಿನ ಮೊತ್ತದ ದಂಡ ವಿಧಿಸಿದರೂ ಸಹ ನಿಯಮ ಉಲ್ಲಂಘನೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಡ್ರೈವಿಂಗ್ ವೇಳೆಯಲ್ಲಿ ಮೊಬೈಲ್ ಬಳಕೆ ಸಾಮಾನ್ಯವಾದಂತಿದೆ. ಹಾಗಾಗಿ, ಮೂರು ತಿಂಗಳ ಕಾಲ ತನ್ನ ಚಾಲನಾ ಪರವಾನಗಿಯನ್ನು ನಿಷೇಧಿಸಿದರೆ ಅದರಿಂದ ತಕ್ಕ ಪಾಠ ಕಲಿಯುತ್ತಾರೆ ಎಂದು ಹೆದ್ದಾರಿ ಎಸ್ಪಿ ವಿಜಯ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಡ್ರೈವಿಂಗ್ ಮಾಡುವಾಗ 'ಮೊಬೈಲ್' ಬಳಸಲು ಹೆದರುವಂತೆ ಮಾಡಿದ ಪೊಲೀಸರು!!

3 ವರ್ಷದ ಹಿಂದೆಯೇ ಇಂತಹದೊಂದು ನಿರ್ಣಯ ತೆಗೆದುಕೊಂಡರೂ ಇದೀಗ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎನ್ನಲಾಗಿದೆ. ಕಳೆದ ವರ್ಷ ಮಹಾರಾಷ್ಟ್ರದಲ್ಲಿ 35,800 ಕ್ಕೂ ಹೆಚ್ಚು ರಸ್ತೆ ಅಪಘಾತಗಳು ವರದಿಯಾಗಿ, 12,200 ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಇದರಲ್ಲಿ ಡ್ರೈವಿಂಗ್ ಮಾಡೋವಾಗ ಮೊಬೈಲ್‌ ಬಳಕೆಯಿಂದ ಆಗಿರುವ ಅಪಘಾತಗಳ ಪಟ್ಟಿಯದ್ದು ಸಿಂಹಪಾಲು .

Best Mobiles in India

English summary
Motorists who use their mobile phones while riding/driving will probably top surveys of the most annoying habits of road users. The problem is a relatively new. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X