ಮೈಕ್ರೋಸಾಫ್ಟ್ SMS ಆರ್ಗನೈಸರ್ ಮೂಲಕ ತಿಳಿಯಿರಿ SSLC, ಪಿಯು, CBSE ಪರೀಕ್ಷಾ ಫಲಿತಾಂಶ!

|

ದೇಶಾದ್ಯಂತ ಈಗ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಫಲಿತಾಂಶವನ್ನು ಅಂತರ್ಜಾಲದಲ್ಲಿ ಹುಡುಕಾಡುವ ಸಮಯ. Central Board of Secondary Education (CBSE)ಯ 10 ನೇ ತರಗತಿ ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಕಳೆದ ವಾರವೇ ಬರುವ ನಿರೀಕ್ಷೆ ಇತ್ತು. ಈಗಾಗಲೇ ತಮ್ಮ ಫಲಿತಾಂಶವನ್ನು ತಿಳಿಯಲು ಆನ್ ಲೈನ್ ನಲ್ಲಿ ಹಲವಾರು ವಿಧಾನಗಳಿವೆ.ಅವೆಲ್ಲವೂ ಕೂಡ ಇಂಟರ್ನೆಟ್ ಕನೆಕ್ಷನ್ ನ್ನು ಬೇಡುತ್ತವೆ.ಆದರೆ ಈಗ ಮೈಕ್ರೋಸಾಫ್ಟ್ ಹೊಸ ದಾರಿಯನ್ನು ಕಂಡುಹಿಡಿದಿದ್ದು, ಅಂತರ್ಜಾಲದ ಕನೆಕ್ಷನ್ ಇಲ್ಲದೆಯೂ ಕೂಡ ತಮ್ಮ ಫಲಿತಾಂಶವನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ.

SMS ಮೂಲಕ ತಿಳಿಯಿರಿ SSLC, ಪಿಯು, CBSE ಪರೀಕ್ಷಾ ಫಲಿತಾಂಶ!

ಈ ವರ್ಷ ಮೈಕ್ರೋಸಾಫ್ಟ್ ಕಂಪೆನಿಯು CBSE ಜೊತೆ ಕೈ ಜೋಡಿಸಿದ್ದು ಎಸ್ ಎಂ ಎಸ್ ಆರ್ಗನೈಸರ್ ಆಪ್ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶವನ್ನು ನೀಡಲಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಈ ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿರುತ್ತೆ. ಮೈಕ್ರೋಸಾಫ್ಟ್ ಮತ್ತು ಸಿಬಿಎಸ್ ಸಿ ಸಹಯೋಗದಿಂದಾಗಿ ಈ ವೈಶಿಷ್ಟ್ಯದಲ್ಲಿ 2016 ರಿಂದಲೂ ವಿದ್ಯಾರ್ಥಿಗಳ ಫಲಿತಾಂಶ ಇದರಲ್ಲಿ ದಾಖಲಾಗಿರುತ್ತೆ. ಹಾಗಾದ್ರೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ತಿಳಿದುಕೊಳ್ಳಲು ಏನು ಮಾಡಬೇಕು ಎಂಬ ಸರಳ ಹಂತಗಳು ಇಲ್ಲಿದೆ ನೋಡಿ..

ಹಂತ 1 – ಮೈಕ್ರೋಸಾಫ್ಟ್ ಎಸ್ ಎಂ ಎಸ್ ಆರ್ಗನೈಸರ್ ಆಪ್ ನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿ..

ಹಂತ 2 – ಎಸ್ ಎಂಎಸ್ ಆರ್ಗನೈಸರ್ ನಲ್ಲಿ ನೋಟಿಫಿಕೇಷನ್ ನ್ನು ಚೆಕ್ ಮಾಡಿ ಮತ್ತು ಸಿಬಿಎಸ್ ಇ ಫಲಿತಾಂಶಕ್ಕಾಗಿ ರಿಜಿಸ್ಟರ್ ಮಾಡಿ

ಹಂತ 3 – ನೋಟಿಫಿಕೇಷನ್ ನ್ನು ಕ್ಲಿಕ್ ಮಾಡಿ, ನಿಮ್ಮ ವಿವರದೊಂದಿಗೆ ಮೊದಲೇ ರಿಜಿಸ್ಟರ್ ಮಾಡಿ, ಉದಾಹರಣೆಗೆ ನಿಮ್ಮ ರೋಲ್ ನಂಬರ್ , ಶಾಲೆಯ ಕೋಡ್, ಹುಟ್ಟಿದ ದಿನಾಂಕವನ್ನು ಹಾಕಬೇಕಾಗುತ್ತದೆ.

ಹಂತ 4 – ಒಮ್ಮೆ ಫಲಿತಾಂಶ ಹೊರಬಿದ್ದಾಗ, ನೋಟಿಫಿಕೇಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಂಕಗಳನ್ನು ನೋಡಬಹುದು.

ಈಗಾಗಲೇ ತಿಳಿಸಿರುವಂತೆ ಮೈಕ್ರೋಸಾಫ್ಟ್ 2016 ರಿಂದ ಮಕ್ಕಳ ಫಲಿತಾಂಶವನ್ನು ಇಲ್ಲಿ ಪ್ರಕಟಿಸಲಿದೆ. ಈ ವರ್ಷವೂ ಈ ವೈಶಿಷ್ಟ್ಯ ಲಭ್ಯವಿರಲಿದೆ. ಫಲಿತಾಂಶದ ದಿನ, ವಿದ್ಯಾರ್ಥಿಗಳು bing.com ಗೆ ತೆರಳಿ ಅಲ್ಲಿ "CBSE 12th results"ಎಂದು ಹುಡುಕಾಡಿ ಪಿಯುಸಿ ಬೋರ್ಡ್ ಎಕ್ಸಾಂ ನ ಫಲಿತಾಂಶ ಪಡೆಯಬಹುದು ಮತ್ತು "CBSE X Results" ಎಂದು ಹುಡುಕಾಡಿ 10 ನೇ ತರಗತಿಯ ಫಲಿತಾಂಶದ ಅಂಕಪಟ್ಟಿ ಪಡೆಯಬಹುದು.ಇಲ್ಲಿ ವಿದ್ಯಾರ್ಥಿಗಳು ಸರಳವಾಗಿ, ತಮ್ಮ ರೋಲ್ ನಂಬರ್ ಮತ್ತು ಹುಟ್ಟಿದ ದಿನಾಂಕ ಹಾಕಿ ಸುಲಭವಾಗಿ ಅಂಕಪಟ್ಟಿಯನ್ನು ಪಡೆಯಬಹುದು.

ಮೈಕ್ರೋಸಾಫ್ಟ್ ನಂತೆ ಗೂಗಲ್ ಕೂಡ CBSE ಜೊತೆ ಪಾರ್ಟ್ನರ್ ಆಗಿದ್ದು, ಈ ಬಾರಿ 10 ಮತ್ತು 12 ತರಗತಿ ಫಲಿತಾಂಶವನ್ನು ಪಡೆಯಬಹುದಾಗಿದೆ. ಇದರ ವೈಶಿಷ್ಟ್ಯವೂ bing ನಂತೆಯೇ ಕಾರ್ಯ ನಿರ್ವಹಿಸಲಿದ್ದು, ರೋಲ್ ನಂಬರ್ ಮತ್ತು ಹುಟ್ಟಿದ ದಿನಾಂಕ ಹೊಡೆದು CBSE 12 result 2018 ಅಥವಾ CBSE 10 result 2018ನ್ನು ಸರ್ಚ್ ಬಾರ್ ಮೂಲಕ ಸೆಲೆಕ್ಟ್ ಮಾಡಿದರೆ ಫಲಿತಾಂಶ ಪಡೆಯಬಹುದು.

ಅಮೆಜಾನ್ ಅಲೆಕ್ಸಾ ಸ್ಮಾರ್ಟ್ ಸ್ಪೀಕರ್ ಮನೆಯಲ್ಲಿದೆಯೇ..! ಹಾಗಿದ್ರೆ ಎಚ್ಚರ..!ಅಮೆಜಾನ್ ಅಲೆಕ್ಸಾ ಸ್ಮಾರ್ಟ್ ಸ್ಪೀಕರ್ ಮನೆಯಲ್ಲಿದೆಯೇ..! ಹಾಗಿದ್ರೆ ಎಚ್ಚರ..!

Best Mobiles in India

Read more about:
English summary
CBSE exam results to be available on Microsoft SMS

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X