Subscribe to Gizbot

ಕೃಷ್ಣ ಜನ್ಮಾಷ್ಟಮಿಗೆ ಮೊಬೈಲ್ ಗೇಮ್ ಬಿಡುಗಡೆ

Posted By: Varun
ಕೃಷ್ಣ ಜನ್ಮಾಷ್ಟಮಿಗೆ ಮೊಬೈಲ್ ಗೇಮ್ ಬಿಡುಗಡೆ

ವಿಷ್ಣುವಿನ 8 ನೆ ಅವತಾರವಾದ ಶ್ರೀ ಕೃಷ್ಣ ಹುಟ್ಟಿದ್ದು ಅಷ್ಟಮಿಯಂದು. ಹಾಗಾಗಿ ಶ್ರಾವಣ ಮಾಸದ ಅಷ್ಟಮಿಯಂದು ವಿಶ್ವರೂಪಿ ಕೃಷ್ಣನ ಹುಟ್ಟು ಹಬ್ಬವನ್ನು ದೇಶಾದ್ಯಂತ ಆಚರಿಸುತ್ತಾರೆ.

ಇಂಥ ಶುಭ ಸಂಧರ್ಭ ಇನ್ನೂ ವರ್ಣರಂಜಿತವಾಗಿ ಮಾಡಲು ರಿಲಯನ್ಸ್ ಅನಿಮೇಶನ್ ಹಾಗು ಮೊಬೈಲ್ ಗೇಮ್ ಡೆವಲಪರ್ ಆದ ಜಂಪ್ ಗೇಮ್ಸ್ ಸೇರಿಕೊಂಡು ಕೃಷ್ಣ ಹಾಗು ಕಂಸ ಹೆಸರಿನ ಮೊಬೈಲ್ ಗೇಮ್ ಒಂದನ್ನು ಸಿದ್ದಪಡಿಸಿದೆ.

ತನ್ನ ಸೋದರ ಮಾವ ತನಗೆ ವೈರಿಯಾದ ಕಥೆ ನಿಮಗೆ ಗೊತ್ತೇ ಇದ್ದು, ಕಂಸನನ್ನು ಹೇಗೆ ಶ್ರೀ ಕೃಷ್ಣ ಕೊಂದ ಎಂದು ಟಿವಿಯಲ್ಲಿ ಬಂದ ಧಾರಾವಾಹಿಯನ್ನು ನೋಡಿ ನೀವೇ ತಿಳಿದುಕೊಂಡಿರುತ್ತೀರ.

ಈಗ ಅದರ ಮೊಬೈಲ್ ಗೇಮ್ ಬಂದಿದ್ದು, ಆಂಡ್ರಾಯ್ಡ್, ಬ್ಲಾಕ್ ಬೆರಿ, ಸಿಮ್ಬಿಯನ್ ತಂತ್ರಾಂಶ ಆಧಾರಿತ ಮೊಬೈಲುಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

http://jumpgames.com ನಲ್ಲಿ ನೀವು ಕೃಷ್ಣ & ಕಂಸ ಗೇಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot