Home
ಸುದ್ದಿಜಾಲ

ಜಿಯೋಮಾರ್ಟ್ 'ಜಿಯೋ ಉತ್ಸವ' ಆರಂಭ: ಹಬ್ಬದ ಶಾಪಿಂಗ್‌ಗೆ ಬಂಪರ್ ಆಫರ್ಸ್!

ಭಾರತದಲ್ಲಿ ಹಬ್ಬದ ಸೀಸನ್ ಪ್ರಾರಂಭವಾಗಿದ್ದು, ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಜಿಯೋ ಮಾರ್ಟ್ "ಜಿಯೋ ಉತ್ಸವ"ದೊಂದಿಗೆ ಗ್ರಾಹಕರ ಮುಂದೆ ಬಂದಿದೆ. ಸೆಪ್ಟೆಂಬರ್ 22 ರಿಂದ ಆರಂಭವಾಗಿರುವ ಈ ವಿಶೇಷ ಮಾರಾಟವು ದೇಶಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಭಾರಿ ರಿಯಾಯಿತಿ ಮತ್ತು ಆಕರ್ಷಕ ಡೀಲ್‌ಗಳನ್ನು ತಂದಿದೆ. ಜಿಯೋ ಮಾರ್ಟ್‌ನ ಈ ಉತ್ಸವವು ಕೇವಲ ಡೀಲ್‌ಗಳಿಗೆ ಸೀಮಿತವಾಗದೆ, ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ (ಹಿಡನ್ ಚಾರ್ಜಸ್) ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ಗ್ರಾಹಕರ ಶಾಪಿಂಗ್ ಅನುಭವವನ್ನು ಸುಲಭ ಮತ್ತು ಒತ್ತಡರಹಿತವನ್ನಾಗಿಸಿದೆ ಎಂದು ಜಿಯೋ ಮಾರ್ಟ್ ಹೇಳಿದೆ.

ಎಲೆಕ್ಟ್ರಾನಿಕ್ಸ್ ಮೇಲೆ ಭರ್ಜರಿ ರಿಯಾಯಿತಿ
'ಜಿಯೋ ಉತ್ಸವ'ದಲ್ಲಿ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ಲಭ್ಯವಿದೆ. ಅತ್ಯಾಧುನಿಕ ತಂತ್ರಜ್ಞಾನದ ಉತ್ಪನ್ನಗಳನ್ನು ಕೊಳ್ಳಲು ಕಾಯುತ್ತಿದ್ದವರಿಗೆ ಇದು ಸುವರ್ಣಾವಕಾಶ. ಐಫೋನ್ 16 ಕೇವಲ ರೂ. 44,870 ಕ್ಕೆ ಮತ್ತು ಐಫೋನ್ 16 ಪ್ಲಸ್ ರೂ. 61,700 ರಿಂದ ಲಭ್ಯವಿದೆ. ಇದರ ಜೊತೆಗೆ, ಇತರ ಎಲೆಕ್ಟ್ರಾನಿಕ್ಸ್‌ಗಳ ಮೇಲೂ ಬ್ಲಾಕ್ ಬಸ್ಟರ್ ಡೀಲ್‌ಗಳು ಇವೆ.

ಕೆಲವು ಪ್ರಮುಖ ಆಫರ್‌ಗಳು ಇಲ್ಲಿವೆ:

  • ಇನ್ಫಿನಿಕ್ಸ್ ಜಿಟಿ 30 - ರೂ. 17,499 ರಿಂದ ಪ್ರಾರಂಭ.
  • ಮ್ಯಾಕ್ ಬುಕ್ - ಕೇವಲ ರೂ. 49,590 ರಿಂದ ಲಭ್ಯ.
  • ಸ್ಯಾಮ್‌ಸಂಗ್ 32 ಇಂಚಿನ ಟಿವಿ - ರೂ. 10,490 ರಿಂದ ಪ್ರಾರಂಭ.
  • ಸೆಮಿ-ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್‌ಗಳು - ರೂ. 5,990 ರಿಂದ.
  • ಎಸಿಗಳು - ರೂ. 22,990 ರಿಂದ.

ಇದಲ್ಲದೆ, ಅಡುಗೆಮನೆ ಮತ್ತು ಗೃಹೋಪಯೋಗಿ ವಸ್ತುಗಳು, ಆಡಿಯೋ ಉಪಕರಣಗಳು ಮತ್ತು ಇತರ ಆಕ್ಸೆಸರೀಸ್‌ಗಳ ಮೇಲೆ ಶೇ. 90ರ ವರೆಗೆ ರಿಯಾಯಿತಿ ಲಭ್ಯವಿದೆ.

ಜಿಯೋಮಾರ್ಟ್ 'ಜಿಯೋ ಉತ್ಸವ' ಆರಂಭ: ಹಬ್ಬದ ಶಾಪಿಂಗ್‌ಗೆ ಬಂಪರ್ ಆಫರ್ಸ್!

ಬ್ಯಾಂಕ್ ಆಫರ್‌ಗಳ ಹೆಚ್ಚುವರಿ ಲಾಭ
ಗ್ರಾಹಕರ ಶಾಪಿಂಗ್ ಅನ್ನು ಮತ್ತಷ್ಟು ಲಾಭದಾಯಕವಾಗಿಸಲು, ಜಿಯೋ ಮಾರ್ಟ್ ಪ್ರಮುಖ ಬ್ಯಾಂಕ್‌ಗಳಾದ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಮತ್ತು ಆರ್‌ಬಿಎಲ್ ಬ್ಯಾಂಕ್‌ನೊಂದಿಗೆ ಸೇರಿ ಶೇ. 10ರ ತಕ್ಷಣದ ರಿಯಾಯಿತಿ (ಇನ್‌ಸ್ಟಂಟ್ ಡಿಸ್ಕೌಂಟ್) ನೀಡುತ್ತಿದೆ. ಇದು ಗ್ರಾಹಕರಿಗೆ ಉಳಿತಾಯದ ಮೇಲೆ ಹೆಚ್ಚುವರಿ ಉಳಿತಾಯದ ಅವಕಾಶವನ್ನು ನೀಡುತ್ತದೆ.

ಗ್ರಾಹಕರಿಗೆ ಹೆಚ್ಚು ಅನುಕೂಲ ಮತ್ತು ಆಯ್ಕೆ
ಜಿಯೋ ಮಾರ್ಟ್‌ನ ಈ 'ಜಿಯೋ ಉತ್ಸವ'ವು ಕೇವಲ ಎಲೆಕ್ಟ್ರಾನಿಕ್ಸ್‌ಗೆ ಮಾತ್ರ ಸೀಮಿತವಾಗಿಲ್ಲ. ದೈನಂದಿನ ಅಗತ್ಯ ವಸ್ತುಗಳು, ಹಬ್ಬದ ವಿಶೇಷ ದಿನಸಿ, ಇಡೀ ಕುಟುಂಬಕ್ಕೆ ಬೇಕಾದ ಫ್ಯಾಷನ್ ಉತ್ಪನ್ನಗಳು ಮತ್ತು ಉಡುಗೊರೆಗಳ ಮೇಲೆ ಕೂಡ ಭಾರಿ ಡೀಲ್‌ಗಳಿವೆ. ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳವರೆಗೂ ಎಲ್ಲೆಡೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ, ಸಕಾಲದಲ್ಲಿ ಸರಕುಗಳನ್ನು ತಲುಪಿಸುವ ಜಿಯೋಮಾರ್ಟ್‌ನ ಬದ್ಧತೆಯು ಈ ಹಬ್ಬದ ಶಾಪಿಂಗ್ ಅನ್ನು ಸರಳ ಮತ್ತು ಸುಗಮವಾಗಿಸಿದೆ.

ಭಾರತದ ಹಬ್ಬದ ಋತುಮಾನವೆಂದರೆ ಕೇವಲ ಶಾಪಿಂಗ್ ಮಾತ್ರವಲ್ಲ, ಪ್ರೀತಿಪಾತ್ರರೊಂದಿಗೆ ಕ್ಷಣಗಳನ್ನು ಹಂಚಿಕೊಳ್ಳುವುದು. ಜಿಯೋಮಾರ್ಟ್‌ನ 'ಜಿಯೋ ಉತ್ಸವ'ವು ಗ್ರಾಹಕರಿಗೆ ಹೆಚ್ಚಿನ ಆಯ್ಕೆ, ಹೆಚ್ಚಿನ ಅನುಕೂಲ ಮತ್ತು ಹೆಚ್ಚಿನ ಮೌಲ್ಯವನ್ನು ನೀಡುವುದರ ಮೂಲಕ ಈ ಹಬ್ಬದ ಆಚರಣೆಯನ್ನು ಇನ್ನಷ್ಟು ವಿಶೇಷವಾಗಿಸಲಿದೆ. ನಿಮ್ಮ ಹಬ್ಬದ ಶಾಪಿಂಗ್ ಅನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ ಎಂದು ಕಂಪೆನಿಯು ಹೇಳಿದೆ.

Best Mobiles in India

English summary
JioMart kicks off its grand "Jio Utsav" festive sale on September 22, 2025, offering incredible deals on electronics like the iPhone 16, along with home appliances, fashion, and daily essentials. Enjoy up to 90% off and additional instant bank discounts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+