Home
ಸುದ್ದಿಜಾಲ

ಮೊಬೈಲ್ ಬಳಕೆಯಿಂದ ಆಗುತ್ತಿರುವ ವಿಪರೀತ ಕಿರಿಕ್‌ ಯಾವುವು?..ಸಮೀಕ್ಷೆ ಹೇಳುವುದೇನು?

By Bhaskar N J

'ತಂತ್ರಜ್ಞಾನಗಳ ಸಮಸ್ಯೆ'ಗಳಿಂದಾಗಿ ಪ್ರತಿದಿನವೂ ಅತಿ ಹೆಚ್ಚು ಕೋಪ, ಕಿರಿಕಿರಿ, ಉದ್ವೇಗ, ಗೊಣಗಲು ಕಾರಣವಾಗುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ. ಜೊತೆಗೆ ದಿನದಲ್ಲಿ ಅತಿ ಹೆಚ್ಚು ಕಿರಿಕಿರಿ ಯಾವ ತಂತ್ರಜ್ಞಾನದ ವಿಷಯದಿಂದ ಜನರು ಅನುಭವಿಸುತ್ತಾರೆ ಎಂಬ ಬಗ್ಗೆ ತಿಳಿದುಕೊಳ್ಳಲು ಈ ಸಮೀಕ್ಷೆ ನಡೆಸಲಾಗಿದ್ದು, ಶಾಕಿಂಗ್ ವರದಿ ಹೊರಬಿದ್ದಿದೆ.

ಹೌದು, ಈ ಸಮೀಕ್ಷೆಗಾಗಿ 2 ಸಾವಿರ ಮಂದಿಯನ್ನು ಸಂದರ್ಶಿಸಲಾಗಿದ್ದು, ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್‌ ಫೋನ್‌ ಮಿರ ಮಿರ ಮಿಂಚುತ್ತದೆ. ನಿಮಿಷಕ್ಕೆ ಹತ್ತಾರು ಬಾರಿ ಮೆಸೇಜ್‌ ಸದ್ದು ಮೊಳಗುತ್ತಿರುತ್ತದೆ. ಸ್ಮಾರ್ಟ್‌ಫೋನ್‌ ಗೀಳು ಹಚ್ಚಿಕೊಂಡು ಪದೇ ಪದೇ ಅದನ್ನು ನೋಡುತ್ತಿದ್ದರೆ, ಅವರ ಮೂಡ್ ಸಹ ಹಾಳಾಗುತ್ತೆ ಅಂತ ಈ ಸಮೀಕ್ಷೆ ವರದಿಯೊಂದನ್ನು ಪ್ರಕಟಿಸಿದೆ.

ಮೊಬೈಲ್ ಬಳಕೆಯಿಂದ ಆಗುತ್ತಿರುವ ವಿಪರೀತ ಕಿರಿಕ್‌ ಯಾವುವು?..ಸಮೀಕ್ಷೆ ಹೇಳುವುದೇನು?

ಮೊಬೈಲ್ ಬಳಕೆದಾರನು ಫೋನ್‌ ನೋಡುವ ಸಂದರ್ಭಗಳು, ಮನಸ್ಥಿತಿ, ವರ್ತನೆಗಳ ಬಗ್ಗೆ ಈ ಸಮೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ. ಆ ಪ್ರಕಾರ ದಿನಕ್ಕೆ ಶೇ.28ರಷ್ಟು ಮನಷ್ಯನೋರ್ವನ ಸಮಯವನ್ನು ಫೋನ್‌ಗಳು ತಿನ್ನುತ್ತವೆ ಎಂದು ಗೊತ್ತಾಗಿದೆ. ಹಾಗಾದರೆ, ದಿನದಲ್ಲಿ ಅತಿ ಹೆಚ್ಚು ಕಿರಿಕಿರಿ ಯಾವ ತಂತ್ರಜ್ಞಾನದ ವಿಷಯಗಳಿಂದಾಗುತ್ತಿದೆ ಎಂಬುದನ್ನು ಮುಂದೆ ತಿಳಿಯಿರಿ.

ಮನಸ್ಸಂತೋಷ ಹಾಳು!

ಮನಸ್ಸಂತೋಷ ಹಾಳು!

ಅತಿಯಾಗಿ ಫೋನ್‌ ನೋಡೋದ್ರಿಂದ ಮನಸ್ಸಂತೋಷ ಹಾಳಾಗುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಸಮೀಕ್ಷೆ ಪ್ರಕಾರ ಪದೇ ಪದೇ ಫೋನ್‌ ನೋಡುವುದರಿಂದ ವಿರಾಮದ ಸಮಯದಲ್ಲಿ ಕಾಲು ಭಾಗದಷ್ಟು ಸಮಯವನ್ನು ಅದೇ ತಿನ್ನುತ್ತದಂತೆ. ಪದೇ ಪದೇ ನಮ್ಮ ಗಮನವನ್ನು ಫೋನ್‌ ಸೆಳೆಯಯುದಂರಿಂದ ಸಂತೋಷದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

ಸಮಸ್ಯೆಗಳ ಮೇಲೆ ಸಮಸ್ಯೆ!

ಸಮಸ್ಯೆಗಳ ಮೇಲೆ ಸಮಸ್ಯೆ!

ಮೊಬೈಲ್‌ ನೋಡಿದ್ರೆ ಸಾಕು, ಸರಿಯಾಗಿ ನೆಟ್‌ವರ್ಕ್ ಸಿಕ್ತಾ ಇಲ್ಲ. ಇಂಟರ್ನೆಟ್ ನೋಡೋಕೆ ಸರ್ವರ್‌ ಪ್ರಾಬ್ಲಂ. ಕಿವಿಗೆ ಎಂಪಿತ್ರೀ ಹಾಕಿ ಹಾಡು ಕೇಳ್ಳೋಣ ಅಂದ್ರೆ ಇಯರ್‌ಫೋನ್‌ನ ಒಂದು ಸ್ಪೀಕರ್ರೆ ವರ್ಕ್‌ ಆಗ್ತಾ ಇಲ್ಲ! ಹೀಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಮೊಬೈಲ್ ಬಳಕೆದಾರನ್ನು ಯಾವಾಗಲೂ ಕಾಡುತ್ತಿರುತ್ತವೆ ಎಂದು ಸಮೀಕ್ಷೆ ತಿಳಿಸಿದೆ.

ವಿಪರೀತ ಕಿರಿಕ್‌ ಯಾವುವು?

ವಿಪರೀತ ಕಿರಿಕ್‌ ಯಾವುವು?

ಸಮೀಕ್ಷೆಯಲ್ಲಿ ತಿಳಿಸಿರುವಂತೆ, ಶೇ.48.3 ರಷ್ಟು ಜನ ಫೋನ್‌ ಸಿಗ್ನಲ್‌ ಸರಿ ಇಲ್ಲದ್ದು ಕಿರಿಕ್‌ ಅಂದಿದ್ದರೆ, ಶೇ.40ರಷ್ಟು ಮಂದಿ ಮೊಬೈಲ್‌ ಬ್ಯಾಟರಿ ಡೌನ್‌, ಚಾರ್ಚರ್‌ ಕಾಣ್ತಿಲ್ಲ ಅನ್ನೋದು ತಲೆನೋವು ಎಂದಿದ್ದಾರೆ. ಶೇ.37ರಷ್ಟು ಮಂದಿ ವೈಫೈ, ಶೇ.19.8ರಷ್ಟು ಮಂದಿ ಕೆಲವರು ವಯರ್ ಸುರುಳಿ ಸುತ್ತಿಕೊಂಡಿರುವುದು ಕಿರಿಕ್‌ ಆಗಿದೆ ಎಂದಿದ್ದಾರೆ.

ಯುವಕರ ಕಿರಿಕ್  ಏನು!

ಯುವಕರ ಕಿರಿಕ್ ಏನು!

ಮೊಬೈಲ್‌ ರೇಂಜ್ ಇಲ್ಲ, ಬ್ಯಾಟರಿ ಡೌನ್‌, ಚಾರ್ಜರ್‌ ಕಾಣ್ತಿಲ್ಲ ಅನ್ನೋದು ಸಮೀಕ್ಷೆಯ ಒಟ್ಟಾರೆ ಫಲಿತಾಂಶದ ವಿಪರೀತ ಕಿರಿಕ್‌ ವಿಷಯಗಳು. ಆದರೆ, ಯುವಕರಿಗೆ ವೈಫೈ ಕನೆಕ್ಟ್ ಆಗ್ತಿಲ್ಲ, ಇಯರ್‌ಫೋನ್‌ ಕಾಣ್ತಿಲ್ಲ ಅನ್ನೋದು ಹೆಚ್ಚಿನ ಸಮಸ್ಯೆಯಾಗಿದೆಯಂತೆ. ಇತ್ತೀಚಿಗೆ ಫ್ರಿ ವೈಫೈ ಇಲ್ಲವಲ್ಲ ಎಂದು ಹಲವರು ಚಿಂತಿಸುತ್ತಾರಂತೆ.

ವರ್ತನೆಗಳು ಬದಲಾಗುತ್ತವೆ!

ವರ್ತನೆಗಳು ಬದಲಾಗುತ್ತವೆ!

ವ್ಯಕ್ತಿಯೊಬ್ಬನ ದಿನದ ಕಾಲು ಭಾಗವನ್ನು ತಿನ್ನುವ ಸ್ಮಾರ್ಟ್‌ಫೋನ್‌ ಅನ್ನು ಪದೇ ಪದೇ ನೋಡುವ ಚಟದಿಂದ ವ್ಯಕ್ತಿಯ ಮನಸ್ಥಿತಿ, ವರ್ತನೆಗಳು ಬದಲಾಗುತ್ತವೆಯಂತೆ. ದರಿಂದ ಖುಷಿಯಾಗಿರುವ ಸಂದರ್ಭಗಳಲ್ಲೂ ಫೋನ್‌ ಹಿಡಿವ ವ್ಯಕ್ತಿಗಳು ತಮ್ಮ ಸಂತೋಷವನ್ನು ತಾವೇ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

Best Mobiles in India

English summary
How many times a day do we look at our phones?. to know more visit to kannada.gizbot.com'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+