ಇಂದು ಭೂಮಿಗೆ ಅಪ್ಪಳಿಸಲಿದೆ ಸೌರ ಚಂಡಮಾರುತ! ಮೊಬೈಲ್‌, ಜಿಪಿಎಸ್‌ ಬಳಸುವವರು ಎಚ್ಚರ!

|

ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ವೈಪರಿತ್ಯ ವಿದ್ಯಮಾನಗಳು ಸಾಮಾನ್ಯ ಎನಿಸಿಬಿಟ್ಟಿವೆ. ಚಂಡಮಾರುತ, ಅತಿವೃಷ್ಟಿಯಂತಹ ಸನ್ನಿವೇಶಗಳು ಮಾನವ ಕುಲವನ್ನು ಕಂಗೆಡಿಸಿವೆ. ಸದ್ಯ ಇದೀಗ ಪ್ರಬಲ ಸೌರ ಚಂಡಮಾರುತವು 1.6 ದಶಲಕ್ಷ ಕಿಲೋಮೀಟರ್ ವೇಗದಲ್ಲಿ ಭೂಮಿಯನ್ನು ಸಮೀಪಿಸುತ್ತಿದೆ ಎನ್ನಲಾಗಿದೆ. ಈ ಪ್ರಬಲ ಸೌರ ಚಂಡಮಾರುತ ಇಂದು ಅಂದರೆ ಸೋಮವಾರ ಭೂಮಿಯನ್ನು ಅಪ್ಪಳಿಸುತ್ತದೆ ಎಂದು ವರದಿಯಾಗಿದೆ. ಚಂಡಮಾರುತವು ಸೂರ್ಯನ ವಾತಾವರಣದಿಂದ ಹುಟ್ಟಿಕೊಂಡಿದೆ ಎಂದು ಸ್ಪೇಸ್ವೆದರ್.ಕಾಮ್ ವರದಿ ಮಾಡಿದೆ.

ಬಿಸಿಗಾಳಿ

ಹೌದು, ಭೂಮಿಯ ಮೇಲೆ ಸೂರ್ಯನ ಬಿಸಿಗಾಳಿ ಇಂದು ಭೂಮಿಯನ್ನು ಸಮೀಪಿಸಲಿದೆ. ಈ ಸೌರ ಬಿರುಗಾಳಿ 1.6 ದಶಲಕ್ಷ ಕಿಲೋಮೀಟರ್ ವೇಗದಲ್ಲಿ ಭೂಮಿಗೆ ಅಪ್ಪಳಿಸಲಿದೆ. ಇದೇ ಕಾರಣಕ್ಕೆ ಭೂಮಿಯ ಕಾಂತಕ್ಷೇತ್ರದ ಪ್ರಾಬಲ್ಯವಿರುವ ಬಾಹ್ಯಾಕಾಶ ಪ್ರದೇಶದ ಮೇಲೆ ಸಾಕಷ್ಟು ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಆಂತಕ ವ್ಯಕ್ತ ಪಡಿಸಿದ್ದಾರೆ. ಅಷ್ಟಕ್ಕೂ ಈ ಸೌರ ಬಿರುಗಾಳಿಗೆ ಕಾರಣ ಏನು? ಇಂದರಿಂದಾಗುವ ಪರಿಣಾಮಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋಲಾರ್

ಸೋಲಾರ್ ವಿಂಡ್ ಇಂದು ಭೂಮಿಗೆ ಅಪ್ಪಳಿಸಲಿದೆ. ನಂತರ, ಹೆಚ್ಚಿನ ವೇಗದ ಸೌರ ಮಾರುತವು ಭೂಮಿಯ ಕಾಂತಕ್ಷೇತ್ರವನ್ನು ಅಪ್ಪಳಿಸುವ ನಿರೀಕ್ಷೆಯಿದೆ. ಸೂರ್ಯನ ವಾತಾವರಣದಲ್ಲಿನ ಸಮಭಾಜಕ ರಂಧ್ರದಿಂದ ಹರಿಯುವು ಈ ಬಿಸಿಗಾಳಿಯ ವೇಗವು ಸೆಕೆಂಡಿಗೆ 500 ಕಿ.ಮೀ. ಇರಲಿದೆ. ಪೂರ್ಣ ಪ್ರಮಾಣದ ಭೂಕಾಂತೀಯ ಬಿರುಗಾಳಿಗಳು ಅಸಂಭವವಾಗಿದೆ, ಆದರೆ ಕಡಿಮೆ ಭೂಕಾಂತೀಯ ಅಶಾಂತಿ ಹೆಚ್ಚಿನ ಅಕ್ಷಾಂಶ ಅರೋರಾಗಳನ್ನು ಹುಟ್ಟುಹಾಕುತ್ತದೆ ಎಂದು ವರದಿಯಾಗಿದೆ.

ಬಾಹ್ಯಾಕಾಶ

ಇನ್ನು ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಾರ, ಸೌರ ಚಂಡಮಾರುತದ ವೇಗವು ಗಂಟೆಗೆ ನಿರೀಕ್ಷಿತ 1.6 ದಶಲಕ್ಷ ಕಿಲೋಮೀಟರ್‌ಗಳನ್ನು ಮೀರಬಹುದು. ಸೌರ ಬಿರುಗಾಳಿಗಳಿಂದಾಗಿ ಭೂಮಿಯ ಹೊರಗಿನ ವಾತಾವರಣವನ್ನು ಬಿಸಿಮಾಡಬಹುದು. ಇದು ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರಬಹುದು ಎಂದು ಸ್ಪೇಸ್‌ವೆದರ್.ಕಾಮ್ ಹೇಳಿದೆ. ಇದು ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಸ್ಯಾಟಲೈಟ್ ಟಿವಿಯಲ್ಲಿ ಆಡಚಣೆಗೆ ಕಾರಣವಾಗಬಹುದು. ಅಲ್ಲದೆ ವಿದ್ಯುತ್ ಮಾರ್ಗಗಳಲ್ಲಿ ಏಕಾಏಕಿ ವಿದ್ಯುತ್‌ ಪ್ರವಾಹವು ಅಧಿಕವಾಗವಂತೆ ಮಾಡಬಹುದು, ಇದರಿದ ಟ್ರಾನ್ಸ್‌ಫಾರ್ಮರ್‌ಗಳು ಸಹ ಸ್ಫೋಟಿಸುವ ಸಾಧ್ಯತೆ ಇದೆ.

Best Mobiles in India

Read more about:
English summary
As per the US space agency, NASA, the speed of the solar storm could even go beyond the expected 1.6 million kilometres per hour.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X