Home
ಸುದ್ದಿಜಾಲ

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಅಷ್ಟೇ ಅಲ್ಲ ಈ ಗ್ಯಾಜೆಟ್‌ಗಳ ಆಮದಿನ ಮೇಲೂ ನಿರ್ಬಂಧ? ಕೇಂದ್ರ ಸರ್ಕಾರದ ನಡೆಯೇನು?

ಭಾರತದಲ್ಲಿ ಕೆಲವು ದಿನಗಳ ಹಿಂದೆ ಘೋಷಣೆ ಮಾಡಲಾದ ವೈಯಕ್ತಿಕ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಆಮದಿನ ಮೇಲಿನ ನಿರ್ಬಂಧ ಭಾರೀ ಸದ್ದು ಮಾಡಿತ್ತು. ಈ ಸಂಬಂಧ ಚೀನಾ ಹಾಗೂ ಇತರೆ ರಾಷ್ಟ್ರಗಳಿಗೆ ದೊಡ್ಡ ತಲೆನೋವು ಉಂಟು ಮಾಡಿದೆ. ಇದೀಗ ಮತ್ತೆ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಈ ಮೂಲಕ ಇನ್ನೂ ಅನೇಕ ಗ್ಯಾಜೆಟ್‌ಗಳಿಗೆ ನಿರ್ಬಂಧ ಹೇರಲು ಸಜ್ಜಾಗಿದೆ.

ಹೌದು, ಕೆಲವು ವರದಿಗಳ ಪ್ರಕಾರ ಕ್ಯಾಮೆರಾಗಳು, ಪ್ರಿಂಟರ್‌ಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಟೆಲಿಫೋನಿಕ್ ಮತ್ತು ಟೆಲಿಗ್ರಾಫಿಕ್ ಡಿವೈಸ್‌ (Cameras, printers, hard disks ,telephonic,telegraphic devices) ಸೇರಿದಂತೆ ಅನೇಕ ಡಿವೈಸ್‌ಗಳ ಮೇಲೆ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಲು ಸರ್ಕಾರ ಮುಂದಾಗಿದೆಯಂತೆ. ಹಾಗಿದ್ರೆ, ಸರ್ಕಾರದ ನಡೆ ಏನು?, ಇವೆಲ್ಲವುಗಳ ಆಮದಿಗೆ ನಿರ್ಬಂಧ ಹಾಕಿದ್ರೆ ಮುಂದಿನ ದಿನಗಳಲ್ಲಿ ಭಾರತೀಯರಿಗೆ ಈ ಡಿವೈಸ್‌ಗಳನ್ನು ಪೂರೈಕೆ ಮಾಡುವುದು ಹೇಗೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಅಷ್ಟೇ ಅಲ್ಲ ಈ ಗ್ಯಾಜೆಟ್‌ಗಳ ಆಮದಿನ ಮೇಲೂ ನಿರ್ಬಂಧ?

ಇತರೆ ಗ್ಯಾಜೆಟ್‌ಗಳ ಆಮದು ನಿರ್ಬಂಧಕ್ಕೆ ಚಿಂತನೆ: ಇನ್ನು ದೇಶದಲ್ಲಿ ಈ ಉತ್ಪನ್ನಗಳ ಆಮದು FY23 ರಲ್ಲಿ $10.08 ಶತಕೋಟಿ ದಾಟಿದೆ ಎಂದು ತಿಳಿದುಬಂದಿದ್ದು, ಈ ಕಾರಣಕ್ಕಾಗಿಯೇ ದೇಶೀಯ ಉತ್ಪಾದನಾ ಅವಕಾಶಗಳನ್ನು ಹೆಚ್ಚಿಸಲು ಸರ್ಕಾರವು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ITA ಅಡಿಯಲ್ಲಿ ಸರ್ಕಾರವು ಆಮದುಗಳನ್ನು ಮೇಲ್ವಿಚಾರಣೆ ಮಾಡುವ ಕೆಲಸ ಮಾಡುತ್ತಿದೆ.

ಮಾಹಿತಿ ತಂತ್ರಜ್ಞಾನ ಒಪ್ಪಂದ-1 (ITA-1) ಅಡಿಯಲ್ಲಿ ಆಮದು ಸುಂಕಗಳಿಂದ ವಿನಾಯಿತಿ ಪಡೆದಿರುವ 250 ಸರಕುಗಳ ಆಮದನ್ನು ಸರ್ಕಾರವು ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿದುಬಂದಿದ್ದು, ಈ ವಿಭಾಗದಲ್ಲಿ ದೇಶಕ್ಕೆ ಅಪಾಯವನ್ನುಂಟುಮಾಡುವ ಹೆಚ್ಚಿನ ಪ್ರಮಾಣದ ಉತ್ಪನ್ನಗಳ ಮೇಲೆ ನಿರ್ಬಂಧ ಹೇರುವ ಬಗ್ಗೆ ಕೇಂದ್ರೀಕರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಎಕನಾಮಿಕ್ ಟೈಮ್ಸ್‌ಗೆ ಮಾಹಿತಿ ನೀಡಿದ್ದಾರೆ.

ITA-1 ಅಡಿಯಲ್ಲಿ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು, ಕಂಪ್ಯೂಟರ್‌ಗಳು, ದೂರಸಂಪರ್ಕ ಉಪಕರಣಗಳು, ಸೆಮಿಕಂಡಕ್ಟರ್‌ಗಳು, ಸೆಮಿಕಂಡಕ್ಟರ್ ಉತ್ಪಾದನೆ, ಆಂಪ್ಲಿಫೈಯರ್‌ಗಳು ಮತ್ತು ಪರೀಕ್ಷಾ ಟೂಲ್ಸ್‌ಗಳು, ಸಾಫ್ಟ್‌ವೇರ್ ಮತ್ತು ವೈಜ್ಞಾನಿಕ ಉಪಕರಣಗಳಂತಹ ವಿವಿಧ ಹೈಟೆಕ್ ಉತ್ಪನ್ನಗಳಿದ್ದು, ಇದರಲ್ಲಿ ಅತ್ಯಂತ ದುಬಾರಿ ಉತ್ಪನ್ನಗಳೆಂದರೆ ಚಿಪ್ಸ್ ಮತ್ತು ಡಿಸ್‌ಪ್ಲೇಗಳಾಗಿವೆ. ಇವುಗಳ ತಯಾರಿಕೆಯನ್ನು ಉತ್ತೇಜಿಸುವುದು ಅವಶ್ಯಕವಾಗಿದ್ದು, ಇದರೊಂದಿಗೆ ಪ್ರಿಂಟರ್‌ಗಳು, ಕೀಬೋರ್ಡ್‌ಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಸ್ಕ್ಯಾನರ್‌ಗಳ ಸ್ಥಳೀಯ ತಯಾರಿಕೆಯ ಮೇಲೆ ಹೆಚ್ಚಿನ ಮಹತ್ವ ನೀಡಲು ಸರ್ಕಾರ ಸಜ್ಜಾಗಿದೆ.

ಇದಿಷ್ಟು ಮಾತ್ರವಲ್ಲದೆ ಯೂರಿಯಾ, ಆಂಟಿಬಯೋಟಿಕ್ಸ್‌, ಟರ್ಬೋ-ಜೆಟ್‌ಗಳು, ಲಿಥಿಯಂ-ಐಯಾನ್ ಅಕ್ಯುಮುಲೇಟರ್ಸ್‌(Urea, antibiotics, turbo-jets, lithium-ion accumulators), ಸಂಸ್ಕರಿಸಿದ ತಾಮ್ರ, ಯಂತ್ರಗಳು, ಸೌರ ಕೋಶಗಳು, ಅಲ್ಯೂಮಿನಿಯಂ ಸ್ಕ್ರ್ಯಾಪ್, ಸೂರ್ಯಕಾಂತಿ ಬೀಜದ ಎಣ್ಣೆ ಮತ್ತು ಗೋಡಂಬಿ ಸೇರಿದಂತೆ ಇತರ ಹೆಚ್ಚಿನ ಆಮದು ಉತ್ಪನ್ನಗಳ ಮೇಲೆ ಇದೇ ರೀತಿಯ ನಿರ್ಬಂಧಗಳನ್ನು ಹೇರಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ.

ಪಿಸಿ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಆಮದುಗಳ ಮೇಲೆ ನಿರ್ಬಂಧ: ಇನ್ನು ನವೆಂಬರ್ 1 ರಿಂದ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್ ಇನ್ ಒನ್ ಪಿಸಿಗಳು, ಅಲ್ಟ್ರಾ-ಸ್ಮಾಲ್ ಫ್ಯಾಕ್ಟರ್ ಪಿಸಿಗಳು ಮತ್ತು ಸರ್ವರ್‌ಗಳಿಗೆ (Laptops, tablets, all-in-one PCs, ultra-small factor PCs, servers) ಆಮದು ಪರವಾನಗಿಗಳ ಅಗತ್ಯವಿದೆ ಎಂದು ಕೇಂದ್ರ ಸರ್ಕಾರವು ಕಳೆದ ವಾರ ಘೋಷಣೆ ಮಾಡಿದೆ. ಅಲ್ಟ್ರಾ-ಸಣ್ಣ ಮತ್ತು ಟ್ಯಾಬ್ಲೆಟ್‌ಗಳು ಸೇರಿದಂತೆ ಎಲ್ಲಾ ರೀತಿಯ ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳಲು ಖರೀದಿದಾರರು ಪರವಾನಗಿ ಪಡೆದುಕೊಳ್ಳಬೇಕಿದೆ.

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಅಷ್ಟೇ ಅಲ್ಲ ಈ ಗ್ಯಾಜೆಟ್‌ಗಳ ಆಮದಿನ ಮೇಲೂ ನಿರ್ಬಂಧ?

ಕೆಲವು ಬಂಡವಾಳ ಸರಕುಗಳ ವರ್ಗದ ಪಿಸಿ ಗಳಿಗೆ ವಿನಾಯಿತಿ ನೀಡಲಾಗಿದ್ದು, ಸಂಶೋಧನೆ, ಪರೀಕ್ಷೆ, ಬೆಂಚ್‌ಮಾರ್ಕಿಂಗ್, ಮೌಲ್ಯಮಾಪನ, ರಿಪೇರಿ ಮತ್ತು ರಿಟರ್ನ್ ಮತ್ತು ಉತ್ಪನ್ನ ಅಭಿವೃದ್ಧಿಗಾಗಿ ಪ್ರತಿ ಸಾಗಣೆಗೆ 20 ಐಟಂಗಳವರೆಗೆ ಆಮದು ಪರವಾನಗಿಗೆ ವಿನಾಯಿತಿ ನೀಡಲು ಸರ್ಕಾರ ಸಿದ್ಧವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ, ಪಿಸಿ, ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಆಮದುಗಳು ಒಟ್ಟು $5.3 ಬಿಲಿಯನ್ ಆಗಿದ್ದರೆ, ವೈ-ಫೈ ಡಾಂಗಲ್‌ಗಳು, ಸ್ಮಾರ್ಟ್ ಕಾರ್ಡ್ ರೀಡರ್‌ಗಳು ಮತ್ತು ಆಂಡ್ರಾಯ್ಡ್ ಟಿವಿ ಬಾಕ್ಸ್‌ಗಳ ಸಾಗಣೆಯು $2.6 ಶತಕೋಟಿಯಷ್ಟಿದೆ.

Best Mobiles in India

English summary
According to some reports, the government is planning to impose similar restrictions on many devices including cameras, printers, hard disks and telephonic and telegraphic devices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+