ಕೂಲ್‌ಪ್ಯಾಡ್‌ನಿಂದ 'ಕೂಲ್‌ಪ್ಯಾಡ್ ಲೆಗಸಿ 5G' ಸ್ಮಾರ್ಟ್‌ಫೋನ್‌ ಲಾಂಚ್‌!

|

ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಗಳಲ್ಲಿ ಒಂದಾದ ಕೂಲ್‌ಪ್ಯಾಡ್‌ ತನ್ನ ಹೊಸ ಆವೃತ್ತಿಯ 5G ಸ್ಮಾರ್ಟ್‌ಫೋನ್‌ ಅನ್ನ ಲಾಸ್‌ವೇಗಸ್‌ನಲ್ಲಿ ನಡೆಯುತ್ತಿರುವ CES 2020ರಲ್ಲಿ ಲಾಂಚ್‌ ಮಾಡಿದೆ. ಇದೊಂದು ಮಧ್ಯಮ ಶ್ರೇಣಿಯ ಮೊಬೈಲ್ ಆಗಿದ್ದು ವಿಶೇಷ ಬಗೆಯ ಫೀಚರ್ಸ್‌ಗಳನ್ನೇ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಅನ್ನ ಕೂಲ್‌ಪ್ಯಾಡ್ ಲೆಗಸಿ 5G ಎಂದು ಹೆಸರಿಸಲಾಗಿದ್ದು, ಇದು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 765 SoC ಪ್ರೊಸೆಸರ್‌ ಹೊಂದಿದ್ದು, 5G ನೆಟ್‌ವರ್ಕ್‌ಗಾಗಿ ಸ್ನಾಪ್‌ಡ್ರಾಗನ್ X 52 ಮೋಡೆಮ್ ಪ್ಯಾಕಪ್‌ ಅನ್ನು ಹೊಂದಿದೆ.

ಹೌದು

ಹೌದು ಕೂಲ್‌ಪ್ಯಾಡ್‌ ಕಂಪೆನಿ ತನ್ನ ಹೊಸ ಕೂಲ್‌ಪ್ಯಾಡ್ ಲೆಗಸಿ 5G ಸ್ಮಾರ್ಟ್‌ಫೋನ್‌ ಅನ್ನ ಬಿಡುಗಡೆ ಮಾಡಿದೆ. ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ ವಿನ್ಯಾಸದಲ್ಲಿ ಆಕರ್ಷಕವಾಗಿದೆ. ಗ್ರಾಹಕ ಸ್ನೇಹಿಯ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಾಗಲಿದೆ ಎಂದು ಹೇಳಲಾಗ್ತಿದ್ದು, ಸದ್ಯಕ್ಕೆ ಯಾವ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿ ಹೇಳಿಕೊಂಡಿಲ್ಲ. ಹಾಗಾದ್ರೆ ಕೂಲ್‌ಪ್ಯಾಡ್‌ ಕೂಲ್‌ಪ್ಯಾಡ್ ಲೆಗಸಿ 5G ಸ್ಮಾರ್ಟ್‌ಫೋನ್‌ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಕೂಲ್‌ಪ್ಯಾಡ್ ಲೆಗಸಿ 5G ಸ್ಮಾರ್ಟ್‌ಫೋನ್‌ 6.53 ಇಂಚಿನ ಫುಲ್‌ ಎಚ್‌ಡಿ+ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನ ಹೊಂದಿದೆ. ಜೊತೆಗೆ ಹೆಚ್‌ಡಿಆರ್‌10 ಬೆಂಬಲಿಸುವ ವಾಟರ್‌ ಡ್ರಾಪ್‌ ನಾಚ್‌ ಶೈಲಿಯ ಡಿಸ್‌ಪ್ಲೇ ಇದಾಗಿದೆ. 165 x 77 x 9.5 ಮಿಮೀ ಬಾಡಿ ಅಳತೆಯನ್ನ ಹೊಂದಿದ್ದು, 195 ಗ್ರಾಂ ತೂಕವನ್ನು ಹೊಂದಿದೆ. ಡಿಸ್‌ಪ್ಲೇ ವಿನ್ಯಾಸ ಉತ್ತಮವಾಗಿರುವುದರಿಂದ ವಿಡಿಯೋ ವಿಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್‌ ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 765 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌10ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಕೂಲ್‌ಪ್ಯಾಡ್‌ ಲೆಗಸಿ 5G ಸ್ಮಾರ್ಟ್‌ಫೋನ್‌ 4GB RAM ಮತ್ತು 64GB ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 128GB ವರೆಗೆ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಈ 5G ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಅನ್ನು ಹೊಂದಿದ್ದು ಮುಖ್ಯ ಕ್ಯಾಮೆರಾ 48ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದ್ದು ಎರಡನೇ ಕ್ಯಾಮೆರಾ 8ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ. ಜೊತೆಗೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನ ಹೊಂದಿದೆ. ಕ್ಯಾಮೆರಾ ಫೊಕಸ್‌ ಚೆನ್ನಾಗಿದ್ದು ಬಳಕೆದಾರರಿಗೆ ಉತ್ತಮ ಫೋಟೋ ಅನುಭವವ ನೀಡಲಿದೆ.

ಬ್ಯಾಟರಿ ಮತ್ತು ಲಭ್ಯತೆ

ಬ್ಯಾಟರಿ ಮತ್ತು ಲಭ್ಯತೆ

ಈ ಸ್ಮಾರ್ಟ್‌ಫೋನ್‌ 4000mah ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, 18w ಪಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5g ನೆಟ್‌ವರ್ಕ ಅನ್ನ ಬೆಂಬಲಿಸಲಿದ್ದು, ಬ್ಲೂಟೂತ್‌, ವೈಫೈ ಆಯ್ಕೆಯನ್ನ ಬೆಂಬಲಿಸಲಿದೆ. ಸದ್ಯ ಕೂಲ್‌ಪ್ಯಾಡ್ ಲೆಗಸಿ 5G ಬೆಲೆ $ 400 (ಸುಮಾರು 29,000 ರೂ.) ಒಳಗೆ ಇರಲಿದೆ ಎಂದು ಹೇಳಲಾಗ್ತಿದೆ.

Most Read Articles
Best Mobiles in India

English summary
Coolpad has launched a new 5G smartphone – the Coolpad Legacy 5G - at CES 2020, and it might well be the cheapest 5G phone to debut in the Western market. The new Coolpad phone packs decent hardware for its promised sub-$400 (roughly Rs. 29,000) price tag. The Coolpad Legacy 5G features a 6.53-inch full-HD+ HDR10 display with a waterdrop notch. It is powered by Qualcomm's Snapdragon 765 SoC, which packs the Snapdragon X52 modem for 5G connectivity. The new Coolpad phone also sports a 48-megapixel camera at the back.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X